ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ನೂ ಬುದ್ದಿ ಕಲಿಯದ ಚೀನಾ:ವಿವಾದಾತ್ಮಕ ಡಾಗ್ ಮೀಟ್ ಫೆಸ್ಟಿವಲ್‌ಗೆ ಚಾಲನೆ

|
Google Oneindia Kannada News

ಬೀಜಿಂಗ್, ಜೂನ್ 23: ಚೀನಿಯರು ಮಾಡಿರುವ ತಪ್ಪಿಗೆ ಸದ್ಯಕ್ಕೆ ಬುದ್ದಿ ಕಲಿಯುವ ಹಾಗೆ ಕಾಣುತ್ತಿಲ್ಲ. ಇದಕ್ಕೆ ದೊಡ್ಡ ಉದಾಹರಣೆ, ಕೋವಿಡ್-19 ಸಂದರ್ಭದಲ್ಲೂ ಸಾವಿರಾರು ನಾಯಿಗಳನ್ನು ಹೊಡೆದು ಸಾಯಿಸುವ ವಿವಾದಾತ್ಮಕ ಯುಲಿನ್ ಡಾಗ್ ಮೀಟ್ ಫೆಸ್ಟಿವಲ್ಗೆ (ನಾಯಿ ಮಾಂಸದ ಹಬ್ಬ) ಚಾಲನೆ ನೀಡಲಾಗಿದೆ. ಚೀನಾದಲ್ಲಿ ಪ್ರಾಣಿ ಹಕ್ಕುಗಳ ಕಾರ್ಯಕರ್ತರ ಪ್ರತಿಭಟನೆಯ ಹೊರತಾಗಿಯೂ ಪ್ರಾರಂಭವಾಗಿದೆ.

Recommended Video

ಸುಶಾಂತ್ ಸಿಂಗ್ ರಾಜಪೂತ್ : ಮಧ್ಯಮ ವರ್ಗದ ಹುಡಗ , ಬಾಲಿವುಡ್ ಸ್ಟಾರ್ ಆಗಿದ್ದು ಹೇಗೆ | Sushanth Singh Rajput

ಜೂನ್ 21ನೇ ತಾರೀಖಿನಂದೇ ಈ ಡಾಗ್ ಮೀಟ್ ಫೆಸ್ಟಿವಲ್‌ಗೆ ಚಾಲನೆಯನ್ನು ನೀಡಲಾಗಿದ್ದು, ಜೂನ್ 30ರ ತನಕ ಈ ಮೇಳವು ನಡೆಯಲಿದೆ.

ಭಾರತದೊಂದಿಗೆ ಬಡಿದಾಟ: ಚೀನಾ ಬಣ್ಣ ಬಯಲು ಮಾಡುತ್ತೆ ಈ ವರದಿ!ಭಾರತದೊಂದಿಗೆ ಬಡಿದಾಟ: ಚೀನಾ ಬಣ್ಣ ಬಯಲು ಮಾಡುತ್ತೆ ಈ ವರದಿ!

10 ದಿನಗಳ ಕಾಲ ನಡೆಯುವ ಡಾಗ್ ಮೀಟ್ ಫೆಸ್ಟಿವಲ್

10 ದಿನಗಳ ಕಾಲ ನಡೆಯುವ ಡಾಗ್ ಮೀಟ್ ಫೆಸ್ಟಿವಲ್

ರಾಯಿಟರ್ಸ್ ವರದಿಯ ಪ್ರಕಾರ, ನೈರುತ್ಯ ನಗರ ಯುಲಿನ್‌ನಲ್ಲಿ ನಡೆಯುವ ವಾರ್ಷಿಕ 10 ದಿನಗಳ ಉತ್ಸವವು ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುತ್ತದೆ, ಅವರಲ್ಲಿ ಹಲವರು ಇಕ್ಕಟ್ಟಾದ ಪಂಜರಗಳಿಂದ ನಾಯಿಗಳನ್ನು ಖರೀದಿಸುತ್ತಾರೆ ಮತ್ತು ಅದರ ಮಾಂಸದಿಂದ ತಯಾರಿಸಿದ ಭಕ್ಷ್ಯಗಳನ್ನು ತಿನ್ನುತ್ತಾರೆ.

ಆದಾಗ್ಯೂ, ಈ ವರ್ಷ, ಗ್ರಾಹಕರ ಸಂಖ್ಯೆ ಕಡಿಮೆಯಾಗಿದೆ ಮತ್ತು ಕಾರ್ಯಕರ್ತರು ಇನ್ನಷ್ಟು ಕಡಿಮೆಯಾಗಬಹುದು ಎಂದು ಆಶಿಸಿದ್ದಾರೆ.

ಕೊರೊನಾ ನಡುವೆಯು ನಿರ್ಧಾರ ಬದಲಿಸದ ಚೀನಾ ಸರ್ಕಾರ

ಕೊರೊನಾ ನಡುವೆಯು ನಿರ್ಧಾರ ಬದಲಿಸದ ಚೀನಾ ಸರ್ಕಾರ

ಹೌದು, ಚೀನಾ ಸರ್ಕಾರವು ವಿಶ್ವದಾದ್ಯಂತ ಕೋವಿಡ್-19 ಸಾಂಕ್ರಾಮಿಕ ರೋಗದ ನಡುವೆಯು ಈ ಕೆಟ್ಟ ನಿರ್ಧಾರವನ್ನು ತೆಗೆದುಕೊಂಡಿದೆ.

''ಯುಲಿನ್ ಪ್ರಾಣಿಗಳ ಸಲುವಾಗಿ ಮಾತ್ರವಲ್ಲದೆ ಅದರ ಜನರ ಆರೋಗ್ಯ ಮತ್ತು ಸುರಕ್ಷತೆಗೂ ಬದಲಾಗುತ್ತದೆ ಎಂದು ನಾನು ಭಾವಿಸುತ್ತೇನೆ. ಹಬ್ಬದ ಹೆಸರಿನಲ್ಲಿ ಜನಸಂದಣಿಯ ಮಾರುಕಟ್ಟೆಗಳಲ್ಲಿ ಮತ್ತು ರೆಸ್ಟೋರೆಂಟ್‌ಗಳಲ್ಲಿ ವ್ಯಾಪಾರ ಮಾಡಲು ಮತ್ತು ನಾಯಿ ಮಾಂಸವನ್ನು ಸೇವಿಸಲು ಸಾಮೂಹಿಕ ಕೂಟಗಳಿಗೆ ಅವಕಾಶ ನೀಡುವುದು ಸಾರ್ವಜನಿಕ ಆರೋಗ್ಯಕ್ಕೆ ಗಮನಾರ್ಹ ಅಪಾಯವನ್ನುಂಟುಮಾಡುತ್ತದೆ "ಎಂದು ಪ್ರಾಣಿ ಹಕ್ಕುಗಳ ಗುಂಪಿನ ಹ್ಯೂಮ್ಯಾನ್ ಸೊಸೈಟಿ ಇಂಟರ್‌ನ್ಯಾಷನಲ್‌ನ ಚೀನಾ ನೀತಿ ತಜ್ಞ ಪೀಟರ್ ಲಿ ಉಲ್ಲೇಖಿಸಿದ್ದಾರೆ.

ಇಲ್ಲಿದೆ ಸಾಕ್ಷ್ಯ; ಗಾಲ್ವಾನ್ ಗಡಿಯಲ್ಲಿ ಬುಲ್ಡೋಜರ್ ನಿಲ್ಲಿಸಿದ ಚೀನಾ!ಇಲ್ಲಿದೆ ಸಾಕ್ಷ್ಯ; ಗಾಲ್ವಾನ್ ಗಡಿಯಲ್ಲಿ ಬುಲ್ಡೋಜರ್ ನಿಲ್ಲಿಸಿದ ಚೀನಾ!

ವರ್ಷಕ್ಕೆ 10 ಮಿಲಿಯನ್ ನಾಯಿಗಳ ಬಲಿ

ವರ್ಷಕ್ಕೆ 10 ಮಿಲಿಯನ್ ನಾಯಿಗಳ ಬಲಿ

ಹ್ಯೂಮ್ಯಾನ್ ಸೊಸೈಟಿ ಇಂಟರ್‌ನ್ಯಾಷನಲ್ ಪ್ರಕಾರ, ಚೀನಾದಲ್ಲಿ ವಾರ್ಷಿಕವಾಗಿ ಸುಮಾರು 10 ಮಿಲಿಯನ್ ನಾಯಿಗಳನ್ನು ಕೊಲ್ಲಲಾಗುತ್ತದೆ. ಅನೇಕರು ಯುಲಿನ್ ಹಬ್ಬಕ್ಕಾಗಿ ಬೀದಿಯಲ್ಲಿರುವ ಮತ್ತು ಅಕ್ಕ-ಪಕ್ಕದ ಮನೆಗಳಿಂದ ನಾಯಿಗಳನ್ನು ಅಪಹರಿಸುತ್ತಾರೆ.

ಚೀನಾ ನಿರ್ಧಾರಕ್ಕೆ ಸ್ಥಳೀಯ ಸಂಘಟನೆಗಳ ವಿರೋಧ

ಚೀನಾ ನಿರ್ಧಾರಕ್ಕೆ ಸ್ಥಳೀಯ ಸಂಘಟನೆಗಳ ವಿರೋಧ

ಡಾಗ್ ಮೀಟ್ ಫೆಸ್ಟಿವಲ್‌ಗೆ ಅವಕಾಶ ನೀಡಿರುವ ಚೀನಾ ಸರ್ಕಾರದ ನಿರ್ಧಾರಕ್ಕೆ ಸ್ಥಳೀಯ ಜನರು ಮತ್ತು ಸಂಘಟನೆಗಳ ವಿರೋಧವಿದೆ. ಸಾಮಾಜಿಕ ಜಾಲತಾಣ ಮತ್ತು ಟ್ವಿಟರ್‌ಗಳ ಮೂಲಕ ಫೋಟೊಗಳನ್ನು ಅಪ್‌ಲೋಡ್ ಮಾಡಿ ಸ್ಥಳೀಯರು ನಾಯಿ ಹತ್ಯೆಗೆ ಮತ್ತು ಮೇಳಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಕೊವಿಡ್ 19: ಒಂದು ನಾಯಿ ಗಂಟೆಗೆ ಎಷ್ಟು ಮಂದಿಯನ್ನು ಪರೀಕ್ಷಿಸಬಲ್ಲದು?ಕೊವಿಡ್ 19: ಒಂದು ನಾಯಿ ಗಂಟೆಗೆ ಎಷ್ಟು ಮಂದಿಯನ್ನು ಪರೀಕ್ಷಿಸಬಲ್ಲದು?

English summary
Chinese don’t like to learn from their mistakes! That’s why the controversial Yulin Dog Meat Festival, where thousands of dogs are beaten and killed, has kicked off in China
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X