ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾದಲ್ಲಿ ಠೇವಣಿದಾರರಿಂದ ಬ್ಯಾಂಕ್‌ಗೆ ಮುತ್ತಿಗೆ

|
Google Oneindia Kannada News

ಚೀನಾ, ಜುಲೈ, 21: ಚೀನಾದಲ್ಲಿ ಬುಧವಾರ ಹೆನಾನ್ ಬ್ಯಾಂಕ್ ಠೇವಣಿದಾರರು ಉಳಿತಾಯದ ಹಣವನ್ನು ಬಿಡುಗಡೆ ಮಾಡಿಲ್ಲ ಎಂದು ಬ್ಯಾಂಕ್ ಮುಂದೆ ಪ್ರತಿಭಟನೆ ಮಾಡಿದರು. ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರು ಹರಸಾಹಸವನ್ನೇ ಪಟ್ಟರು.

ಚೀನೀ ಪೀಪಲ್ಸ್ ಲಿಬರೇಶನ್ ಆರ್ಮಿ ಯುದ್ಧ ಟ್ಯಾಂಕರ್‌ಗಳು ಬ್ಯಾಂಕ್‌ ರಕ್ಷಿಸಲು ಆಗಮಿಸಿದವು. ರಿಝಾವೋ, ಶಾನ್‌ಡಾಂಗ್ ಪ್ರಾಂತ್ಯದಲ್ಲಿ ಠೇವಣಿದಾರರು ಪ್ರತಿಭಟನೆ ನಡೆಸಿದ್ದು, ಬ್ಯಾಂಕ್‌ ಮುತ್ತಿಗೆ ಹಾಕಲು ಮುಂದಾಗಿದ್ದರು.

 India China border- ಅತಿಕ್ರಮಿತ ಪ್ರದೇಶದಲ್ಲಿ ಚೀನೀ ನಿರ್ಮಿತ ಸೇತುವೆಗಳು: ಭಾರತ ಸ್ಪಷ್ಟನೆ India China border- ಅತಿಕ್ರಮಿತ ಪ್ರದೇಶದಲ್ಲಿ ಚೀನೀ ನಿರ್ಮಿತ ಸೇತುವೆಗಳು: ಭಾರತ ಸ್ಪಷ್ಟನೆ

ಬ್ಯಾಂಕ್ ಆಫ್ ಚೀನಾದ ಹೆನಾನ್ ಶಾಖೆಯು ಉಳಿತಾಯದ ಹಣ, ಹೂಡಿಕೆ ಹಣವನ್ನು ಹಿಂಪಡೆಯಲು ಸಾಧ್ಯವಿಲ್ಲ ಎಂದು ಘೋಷಿಸಿತ್ತು. ಈ ಹಿನ್ನೆಲೆಯಲ್ಲಿ ಬ್ಯಾಂಕ್‌ಗೆ ಮುತ್ತಿಗೆ ಹಾಕಿ ಸಿಬ್ಬಂದಿಗಳ ವಿರುದ್ಧ ಘೋಷಣೆ ಕೂಗೂತ್ತಾ ಜನರು ಆಕ್ರೋಶ ಹೊರಹಾಕಿದರು. ಪ್ರತಿಭಟನಾಕಾರರು ರಸ್ತೆಯ ಬದಿಯಲ್ಲಿ ನಿಂತು ಸೈನಿಕರ ಟ್ಯಾಂಕರ್‌ಗಳನ್ನು ಬಿಡದೇ ನೆಲಕ್ಕೆ ಉರುಳಿಸಿದ್ದಾರೆ.

ಇದು ಜೂನ್ 4, 1989ರಲ್ಲಿ ಸಂಭವಿಸಿದ ಭಯಾನಕ ದೃಶ್ಯವೊಂದನ್ನು ಕಣ್ಣಮುಂದೆ ತಂದಿತು. ಚೀನಾದ ನಾಯಕರು ಬೀಜಿಂಗ್‌ನ ಟಿಯಾನನ್‌ಮೆನ್ ಸ್ಕ್ವೇರ್ ಅನ್ನು ತೆರವುಗೊಳಿಸಲು ಟ್ಯಾಂಕರ್‌ಗಳು ಮತ್ತು ಭಾರಿ ಶಸ್ತ್ರಸಜ್ಜಿತ ಪಡೆಗಳನ್ನು ಕಳುಹಿಸಿದ್ದರು.

Depositors Protest In Front Of The Bank In China

ನಮಗೆ ಪ್ರಜಾಪ್ರಭುತ್ವ ಮತ್ತು ಹೆಚ್ಚಿನ ಸ್ವಾತಂತ್ರ್ಯ ನೀಡುವಂತೆ ಒತ್ತಾಯಿಸಿ ವಿದ್ಯಾರ್ಥಿಗಳು ಬೀದಿಗಿಳಿದು ವಾರಗಟ್ಟಲೇ ಪ್ರತಿಭಟನೆಯ ಕಿಚ್ಚನ್ನು ಹೊತ್ತಿಸಿದ್ದರು. ಪ್ರತಿಭಟನೆ ನಿಯಂತ್ರಸಲು ಸೈನಿಕರು ನೂರಾರು ಯುದ್ಧ ಟ್ಯಾಂಕರ್‌ಗಳನ್ನ ತಂದಿದ್ದರು. ಇಂತಹ ಘಟನೆಯೇ ಬುಧವಾರ ನಡೆಯಿತು.

ಇದೀಗ ಚೀನಾದ ಹೆನಾನ್ ಹಳ್ಳಿಗಳಲ್ಲಿನ ಠೇವಣಿದಾರರ ಉಳಿತಾಯದ ಹಣವನ್ನು ಜುಲೈ 15ರಂದು ಕೊಡುವುದಾಗಿ ಬ್ಯಾಂಕ್‌ ಭರವಸೆ ನೀಡಿತ್ತು. ಅದರಂತೆಯೇ ಬೆರಳೆಣಿಕೆಯಷ್ಟು ಠೇವಣಿದಾರರು ಮಾತ್ರ ಪಾವತಿ ಮಾಡಿದ ಹಣವನ್ನು ಹಿಂಪಡೆದಿದ್ದಾರೆ. ಅದಕ್ಕಾಗಿ ಹೆನಾನ್ ಪ್ರಾಂತ್ಯದಲ್ಲಿ ಪಾವತಿ ಹಣ ಬಿಡುಗಡೆಗೆ ಸಂಬಂಧಿಸಿದಂತೆ ಬ್ಯಾಂಕ್ ಠೇವಣಿದಾರರು ದೊಡ್ಡ ಮಟ್ಟದ ಪ್ರತಿಭಟನೆಯನ್ನು ಮಾಡಿದರು.

ಈ ಸಂದರ್ಭದಲ್ಲಿ ಚೀನಾದ ಪೀಪಲ್ಸ್ ಆರ್ಮಿ ಪೊಲೀಸ್ ಫೋರ್ಸ್ ಪ್ರತಿಭಟನೆಗಳನ್ನು ನಿಂಯತ್ರಿಸಲು ಮುಂದಾಗಿದ್ದರು. ಹೆನಾನ್‌ನ ರಾಜಧಾನಿಯಾದ ಝೆಂಗ್‌ಝೌ ನಗರದಲ್ಲಿ ನೂರಾರು ಠೇವಣಿದಾರರು ಇಟ್ಟ ಬೇಡಿಕೆಗಳನ್ನು ಅಧಿಕಾರಿಗಳು ನಿರ್ಲಕ್ಷಿಸುತ್ತಿದ್ದಾರೆ ಎನ್ನುವ ಮಾಹಿತಿಯೂ ಇದೆ.

ಜುಲೈ 10ರಂದು 1,000ಕ್ಕೂ ಹೆಚ್ಚು ಠೇವಣಿದಾರರು ದೇಶದ ಸೆಂಟ್ರಲ್ ಬ್ಯಾಂಕ್, ಪೀಪಲ್ಸ್ ಬ್ಯಾಂಕ್ ಆಫ್ ಚೀನಾದ ಝೆಂಗ್ಝೌ ಶಾಖೆಯ ಹೊರಗೆ ಪ್ರತಿಭಟನೆಯನ್ನು ಪ್ರಾರಂಭಿಸಿದ್ದರು. ಇನ್ನು ಪ್ರತಿಭಟನೆಗಳು ನಿಲ್ಲದೇ ತೀವ್ರ ಸ್ವರೂಪವನ್ನು ಪಡೆದುಕೊಂಡಿದೆ. ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಮಧ್ಯಪ್ರವೇಶಿಸದಿದ್ದರೆ ಈ ಪ್ರತಿಭಟನದೆ ಮತ್ತಷ್ಟು ತೀವ್ರ ಸ್ವರೂಪ ಪಡೆಯುವ ಸಾಧ್ಯತೆಯಿದೆ.

Recommended Video

ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸ್ತಿದೆ ವಿರಾಟ್ ಕೊಹ್ಲಿಯ ಡಾನ್ಸ್ ವಿತ್ ವರ್ಕೌಟ್ ವಿಡಿಯೋ | *Cricket | OneIndia

English summary
In China depositors staged a protest in front of the Henan Bank after not releasing their savings. The Chinese Communist police are scrambling to stop the protesters, Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X