ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡೆಂಗ್ಯೂ ಜ್ವರ ಬಂದು ಹೋಗಿದ್ದರೆ ಕೊರೊನಾ ಬರೋದು ಡೌಟು: ಅಧ್ಯಯನ

|
Google Oneindia Kannada News

ಚೀನಾದಲ್ಲಿ ಉತ್ಪತ್ತಿಯಾದ ಕೊರೊನಾ ಸೋಂಕು ಇಡೀ ವಿಶ್ವವನ್ನೇ ಆವರಿಸಿದೆ. ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಕಳೆದ ಮೂರು ದಿನಗಳಿಂದ ಕೊರೊನಾ ಸೋಂಕಿನಿಂದ ಗುಣಮುಖರಾಗುತ್ತಿರುವವ ಸಂಖ್ಯೆಯೂ ಕೂಡ ಗಣನೀಯವಾಗಿ ಏರಿಕೆ ಕಂಡಿದೆ.

ಕೊರೊನಾ ಸೋಂಕಿಗೆ ವಿಶ್ವದಾದ್ಯಂತ ಲಸಿಕೆ ಕಂಡು ಹಿಡಿಯುವ ಪ್ರಯತ್ನ ನಡೆಯುತ್ತಿದೆ. ಈ ಎಲ್ಲದರ ಮಧ್ಯೆ ಕೊರೊನಾ ಬಗ್ಗೆ ವಿಜ್ಞಾನಿಗಳು ಕೊಂಚ ನೆಮ್ಮದಿಯ ಸುದ್ದಿಯನ್ನು ನೀಡಿದ್ದಾರೆ.

ಚೇತರಿಕೆ ಬಳಿಕವೂ ದೀರ್ಘಕಾಲ ಉಳಿಯುವ ಡೆಂಗ್ಯೂವಿನ 4 ಅಡ್ಡಪರಿಣಾಮಗಳು ಚೇತರಿಕೆ ಬಳಿಕವೂ ದೀರ್ಘಕಾಲ ಉಳಿಯುವ ಡೆಂಗ್ಯೂವಿನ 4 ಅಡ್ಡಪರಿಣಾಮಗಳು

ವಿಜ್ಞಾನಿಗಳ ಪ್ರಕಾರ ಒಮ್ಮೆ ಡೆಂಗ್ಯೂ ಆಗಿದ್ದವರಿಗೆ ಕೊರೊನಾ ಸೋಂಕು ಕಾಡಲ್ಲವಂತೆ, ಡೆಂಗ್ಯೂ ಜ್ವರದಿಂದ ಚೇತರಿಸಿಕೊಂಡವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿರುತ್ತದೆ. ಹಾಗಾಗಿ ಕೊರೊನಾ ಅವರಲ್ಲಿ ಕಾಡುವುದಿಲ್ಲವೆಂದು ಹೇಳಿದ್ದಾರೆ.

ಅಧ್ಯಯನದಲ್ಲಿ ಬ್ರೆಜಿಲ್ ಉದಾಹರಣೆಯಾಗಿ ನೀಡಲಾಗಿದೆ. ಹಿಂದಿನ ವರ್ಷ ಬ್ರೆಜಿಲ್ ನಲ್ಲಿ ಡೆಂಗ್ಯೂ ಅನೇಕರನ್ನು ಕಾಡಿತ್ತು.

ವೈರಸ್‌ ತಡೆಗಟ್ಟಲು ನಾನಾ ಪ್ರಯತ್ನ

ವೈರಸ್‌ ತಡೆಗಟ್ಟಲು ನಾನಾ ಪ್ರಯತ್ನ

ಕೊರೊನಾ ತಡೆಗಟ್ಟಲು ಜಾಗತಿಕವಾಗಿ ನಾನಾ ಪಯತ್ನಗಳು ನಡೆಯುತ್ತಿವೆ. ಔಷಧಿ ಕಂಡುಹಿಡಿಯುವಲ್ಲಿ ನಿರತರಾಗಿದ್ದು, ಆಶಾದಾಯಕ ಬೆಳವಣಿಗೆಗಳು ಕಂಡುಬಂದಿದೆ. ಅನೇಕ ಅಧ್ಯಯನಗಳು ಕೂಡ ಕೊರೊನಾ ಕುರಿತಾಗಿ ಬಂದಿದ್ದು, ನೂತನ ಅಧ್ಯಯನವೊಂದರ ಪ್ರಕಾರ ಈಗಾಗಲೇ ಡೆಂಗ್ಯೂ ಜ್ವರದಿಂದ ಬಳಲಿ ಚೇತರಿಸಿಕೊಂಡವರಿಗೆ ಕೊರೊನಾದಿಂದ ಯಾವುದೇ ಅಪಾಯವಿಲ್ಲ ಎಂದು ಹೇಳಿದೆ.

ಡ್ಯೂಕ್ ವಿಶ್ವವಿದ್ಯಾಲಯ ಏನು ಹೇಳುತ್ತೆ?

ಡ್ಯೂಕ್ ವಿಶ್ವವಿದ್ಯಾಲಯ ಏನು ಹೇಳುತ್ತೆ?

ಡ್ಯೂಕ್​ ಯೂನಿವರ್ಸಿಟಿಯ ಸಂಶೋಧಕರು ತಮ್ಮ ಸಂಶೋಧನಾ ಫಲಿತಾಂಶವನ್ನು ಸುದ್ದಿ ಸಂಸ್ಥೆ ರಾಯಿಟರ್ಸ್​ ಜತೆ ಹಂಚಿಕೊಂಡಿದ್ದಾರೆ. ಬ್ರೆಜಿಲ್​ನ ಸ್ಪೋಟಗೊಂಡ ಕೊರೊನಾ ವೈರಸ್​ಗೂ ಮತ್ತು ಸೊಳ್ಳೆಗಳಿಂದ ಹರಡಿದ ಅನಾರೋಗ್ಯದ ನಡುವೆ ಇರುವ ಸಂಬಂಧವನ್ನು ಪತ್ತೆಹಚ್ಚಲಾಗಿದೆ.

ಡೆಂಗ್ಯೂ ಕೊರೊನಾ ಬೇರೆ ಕುಟುಂಬಕ್ಕೆ ಸೇರಿದ್ದು

ಡೆಂಗ್ಯೂ ಕೊರೊನಾ ಬೇರೆ ಕುಟುಂಬಕ್ಕೆ ಸೇರಿದ್ದು

ಡೆಂಗ್ಯೂ ಮತ್ತು ಕೊರೊನಾ ವೈರಸ್​ಗಳು ಬೇರೆ ಬೇರೆ ಕುಟುಂಬಕ್ಕೆ ಸೇರಿದ್ದಾಗಿದ್ದರೂ, ಯಾರೂ ನಿರೀಕ್ಷಿಸದ ಈ ಎರಡು ವೈರಸ್‌ಗಳ ನಡುವೆ ರೋಗನಿರೋಧಕ ಸಂವಹನ ಇದೆ ಎಂಬುದನ್ನು ಇದು ಸೂಚಿಸುತ್ತದೆ. ಆದರೂ ಈ ಬಗ್ಗೆ ನಿಖರ ಮಾಹಿತಿಗಾಗಿ ಹೆಚ್ಚಿನ ತನಿಖೆಯಲ್ಲಿ ತೊಡಗಿಕೊಂಡಿರುವುದಾಗಿ ನಿಕೊಲಿಸ್​ ಮಾಹಿತಿ ನೀಡಿದ್ದಾರೆ.

ಡೆಂಗ್ಯೂನಿಂದ ಬಳಲಿದ ಪ್ರದೇಶದಲ್ಲಿ ಕೊರೊನಾ ಸಂಖ್ಯೆ ಕಡಿಮೆ

ಡೆಂಗ್ಯೂನಿಂದ ಬಳಲಿದ ಪ್ರದೇಶದಲ್ಲಿ ಕೊರೊನಾ ಸಂಖ್ಯೆ ಕಡಿಮೆ

ಮೇಲಿನ ವರ್ಷದಲ್ಲಿ ಡೆಂಗ್ಯೂ ಹರಡುವಿಕೆಯಿಂದ ತುಂಬಾ ಬಳಲಿದ ಏರಿಯಾದಲ್ಲಿ ಕೊರೊನಾ ಸೋಂಕಿತ ಪ್ರಕರಣಗಳು ತುಂಬಾ ಕಡಿಮೆ ಇವೆ ಎಂದು ತಿಳಿದುಬಂದಿದ್ದು, ಡೆಂಗ್ಯೂ ಜ್ವರ ರೋಗನಿರೋಧಕ ಶಕ್ತಿಯು ಕೊರೊನಾವನ್ನು ತಡೆಯುತ್ತದೆ ಮತ್ತು ತಟಸ್ಥಗೊಳಿಸುವ ಸಾಧ್ಯತೆ ಹೆಚ್ಚಿದೆ ಎಂದು ಸಂಶೋಧಕರು ಹೇಳಿದ್ದಾರೆ.

ಮುಂದುವರಿದು ಮಾತನಾಡಿರುವ ನಿಕೊಲಿಸ್​, ಈ ಫಲಿತಾಂಶ ನಿಜಕ್ಕೂ ಆಸಕ್ತಿದಾಯಕವಾಗಿದೆ. ತಮ್ಮ ರಕ್ತದಲ್ಲಿ ಡೆಂಗ್ಯೂ ನಿರೋಧಕ ಶಕ್ತಿಯನ್ನು ಹೊಂದಿದ ಜನರು ಕೋವಿಡ್​ ಪರೀಕ್ಷೆಯಲ್ಲಿ ನೆಗೆಟಿವ್​ ಬಂದಿರುವು ಈ ಹಿಂದಿನ ಅಧ್ಯಯನಗಳಲ್ಲಿ ನಾವು ಕಂಡಿದ್ದೇವೆಂದು ತಿಳಿಸಿದರು.

ಡೆಂಗ್ಯೂ ರೋಗದ ಲಕ್ಷಣಗಳು

ಡೆಂಗ್ಯೂ ರೋಗದ ಲಕ್ಷಣಗಳು

ಡೆಂಗ್ಯೂ ಜ್ವರ ಉಂಟಾದ ತಕ್ಷಣದಲ್ಲಿ ಮಕ್ಕಳು ಅಥವಾ ದೊಡ್ಡವರು ಯಾವುದೇ ರೋಗ ಲಕ್ಷಣಗಳನ್ನು ಹೊಂದಿರುವುದಿಲ್ಲ. ರೋಗ ಲಕ್ಷಣಗಳು ದಿನ ಕಳೆದಂತೆ ಅಂದರೆ ನಾಲ್ಕರಿಂದ ಏಳು ದಿನಗಳ ನಂತರ ಕಾಣಿಸಿಕೊಳ್ಳಲು ಮತ್ತು ಉಲ್ಬಣಗೊಳ್ಳಲು ಪ್ರಾರಂಭವಾಗುತ್ತವೆ. ಸಾಮಾನ್ಯವಾಗಿ ಡೆಂಗ್ಯೂ ಜ್ವರ ಹೊಂದಿದ ಒಬ್ಬ ಮನುಷ್ಯನ ದೇಹದ ತಾಪಮಾನ 104F ಇದ್ದು, ಆತ ಈ ಕೆಳಗಿನ ರೋಗ ಲಕ್ಷಣಗಳನ್ನು ಹೊಂದಿರುತ್ತಾನೆ.

-ತಲೆನೋವ
-ಮೈಕೈ ನೋವು
-ಕೀಲುನೋವು
-ವಾಕರಿಕೆ
-ವಾಂತಿ
-ಕಣ್ಣುಗಳ ಹಿಂಭಾಗದಲ್ಲಿ ನೋವು
-ಊದಿಕೊಂಡ ಗ್ರಂಥಿಗಳು
-ದೇಹದ ಮೇಲೆ ಅಲ್ಲಲ್ಲಿ ಕಲೆಗಳು

Recommended Video

ನರೇಂದ್ರ ಮೋದಿ ಸರ್ಕಾರದ ವಿರುದ್ಧ ಆಕ್ರೋಶ | Oneindia Kannada
ಸ್ವಲ್ಪ ಎಚ್ಚರ ತಪ್ಪಿದರೂ ಜೀವಕ್ಕೆ ಮಾರಕ

ಸ್ವಲ್ಪ ಎಚ್ಚರ ತಪ್ಪಿದರೂ ಜೀವಕ್ಕೆ ಮಾರಕ

ತಮ್ಮ ದೇಹದ ರೋಗ ನಿರೋಧಕ ವ್ಯವಸ್ಥೆ ಬಲವಾಗಿರುವವರು ಕೇವಲ ಒಂದು ಅಥವಾ ಎರಡು ವಾರಗಳಲ್ಲಿ ಈ ಸಮಸ್ಯೆಯಿಂದ ಪಾರಾಗುತ್ತಾರೆ. ಆದರೆ ಕೆಲವರಿಗೆ ಈ ಮೇಲ್ಕಂಡ ರೋಗ ಲಕ್ಷಣಗಳು ವಿಪರೀತವಾಗಿ ಅವರ ಜೀವಕ್ಕೆ ಮಾರಕವಾಗಿ ಪರಿಣಮಿಸುತ್ತವೆ.

ಹೆಚ್ಚಾಗಿ ಇಂತಹ ರೋಗಿಗಳಲ್ಲಿ ರಕ್ತ ನಾಳಗಳು ಒಡೆದುಕೊಂಡಂತಾಗಿ ರಕ್ತಸ್ರಾವವಾಗುತ್ತದೆ. ಇದಕ್ಕೆ ಕಾರಣ ಅವರ ದೇಹದಲ್ಲಿ ಪ್ಲೇಟ್ಲೆಟ್ ಗಳ ಸಂಖ್ಯೆ ಅದಾಗಲೇ ಕ್ಷೀಣಿಸಿರುತ್ತದೆ. ಇದನ್ನು ವೈದ್ಯರು " ಡೆಂಗ್ಯೂ ಶಾಕ್ ಸಿಂಡ್ರೋಮ್ " ಎಂದು ಕರೆಯುತ್ತಾರೆ.

English summary
Study Says That mosquito-transmitted illness may provide some level of immunity against COVID-19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X