ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡೆಂಗ್ಯೂ ಜ್ವರವು ಕೊವಿಡ್ 19 ವಿರುದ್ಧ ಹೋರಾಡುವ ಶಕ್ತಿ ನೀಡುತ್ತೆ

|
Google Oneindia Kannada News

ಬ್ರೆಜಿಲ್, ಸೆಪ್ಟೆಂಬರ್ 22: ಡೆಂಗ್ಯೂ ಜ್ವರವು ಕೊವಿಡ್ 19 ರೋಗದ ವಿರುದ್ಧ ಹೋರಾಡುವ ಶಕ್ತಿಯನ್ನು ನೀಡುತ್ತದೆ ಎಂದು ಹೊಸ ಅಧ್ಯಯನದಿಂದ ಸಾಬೀತಾಗಿದೆ. ಡೆಂಗ್ಯೂ ಜ್ವರದಿಂದ ಕೊರೊನಾ ಸೋಂಕಿನ ವಿರುದ್ಧ ಹೋರಾಡುವ ರೋಗನಿರೋಧಕ ಶಕ್ತಿ ಹೆಚ್ಚಾಗಲಿದೆ.

ಬ್ರೆಜಿಲ್‌ನಲ್ಲಿ ಕೊರೊನಾ ವೈರಸ್ ಕುರಿತು ಸಂಶೋಧಕರು ವಿಶ್ಲೇಷಣೆ ನಡೆಸಿದಾಗ ಈ ವಿಷಯ ಬೆಳಕಿಗೆ ಬಂದಿದೆ.ಡೆಂಗ್ಯೂ ಬಂದರೆ ಕೊರೊನಾ ಸೋಂಕಿನಿಂ ದೂರವಿರಬಹುದು ಎಂದು ತಿಳಿದುಬಂದಿದೆ. ಡ್ಯೂಕ್ ವಿಶ್ವವಿದ್ಯಾಲಯ ಈ ಅಧ್ಯಯನ ನಡೆಸಿದೆ. ಆದರೆ ಈ ಮಾಹಿತಿಯನ್ನು ಇನ್ನೂ ಬಹಿರಂಗಗೊಳಿಸಿಲ್ಲ, ರಾಯ್ಟರ್ಸ್‌ನೊಂದಿಗೆ ಮಾತ್ರ ಹಂಚಿಕೊಂಡಿದೆ.

ಒಂದೇ ವ್ಯಕ್ತಿಗೆ ಡೆಂಗ್ಯೂ, ಕೊರೊನಾ ಸೋಂಕು: ವೈದ್ಯಲೋಕಕ್ಕೆ ದೊಡ್ಡ ಸವಾಲುಒಂದೇ ವ್ಯಕ್ತಿಗೆ ಡೆಂಗ್ಯೂ, ಕೊರೊನಾ ಸೋಂಕು: ವೈದ್ಯಲೋಕಕ್ಕೆ ದೊಡ್ಡ ಸವಾಲು

ಕಡಿಮೆ ಕೊರೊನಾ ಪ್ರಕರಣಗಳನ್ನು ಹೊಂದಿರುವ ಪ್ರದೇಶಗಳನ್ನು ಗಮನಿಸಿದಾಗ ಆ ಪ್ರದೇಶದಲ್ಲಿ ಈ ವರ್ಷ ತೀವ್ರ ಡೆಂಗ್ಯೂ ಜ್ವರವನ್ನು ಅನುಭವಿಸಿರುವುದಾಗಿ ತಿಳಿಸಿದ್ದಾರೆ. ಇದು ಸತ್ಯ ಎಂದು ಸಾಬೀತಾದರೆ ಡೆಂಗ್ಯೂಗೆ ನೀಡಲಾಗುತ್ತಿದ್ದ ಔಷಧವನ್ನು ಕೊರೊನಾ ಸೋಂಕಿತರಿಗೂ ಕೂಡ ನೀಡಬಹುದಾಗಿದೆ. ಅದು ಸ್ವಲ್ಪ ಮಟ್ಟಿಗೆ ರಕ್ಷಣೆಯನ್ನು ಉಂಟು ಮಾಡಬಹುದು ಎಂದು ಅಂದಾಜಿಸಲಾಗಿದೆ.

Dengue Fever May Provide Some Immunity Against COVID-19

ಕೊರೊನಾ ಸೋಂಕಿಗೆ ಒಳಗಾಗದಿದ್ದರೂ ಕೂಡ ರಕ್ತದಲ್ಲಿ ಡೆಂಗ್ಯೂ ಪ್ರತಿಕಾಯಗಳನ್ನು ಹೊಂದಿರುವ ಜನರಿಗೆ ಕೊರೊನಾ ಪಾಸಿಟಿವ್ ವರದಿ ಬರುತ್ತಿದೆ. ಆರೂ ನಿರೀಕ್ಷಿಸಿದ ಈ ಎರಡು ವೈರಸ್‌ಗಳ ನಡುವೆ ರೋಗನಿರೋಧಕ ಸಂವಹನವಿದೆ. ಯಾಕೆಂದರೆ ಎರಡೂ ವೈರಸ್‌ಗಳು ಸಂಪೂರ್ಣವಾಗಿ ವಿಭಿನ್ನ ಕುಟುಂಬಗಳಿಂದ ಬಂದವು ಎಂದು ನಿಕೋಲೆಲಿಸ್ ಹೇಳಿದ್ದಾರೆ.

Recommended Video

ಮೊದಲನೇ ಮ್ಯಾಚ್ ಬಗೆ RCB ಆರಂಭಿಕ ಬ್ಯಾಟ್ಸ್ ಮನ್ Finch ಹೇಳಿದ್ದೇನು | Oneindia Kannda

ಈ ಸಂಪರ್ಕವನ್ನು ಸಾಬೀತುಪಡಿಸಲು ಹಲವು ಸಂಶೋಧನೆಗಳ ಅಗತ್ಯವಿದೆ. ಬ್ರೆಜಿಲ್‌ನಲ್ಲಿ 4.4 ಮಿಲಿಯನ್ ಕೊರೊನಾ ಸೋಂಕಿತರಿದ್ದಾರೆ. ಜಗತ್ತಿನಲ್ಲೇ ಕೊರೊನಾ ಸೋಂಕಿತರನ್ನು ಹೊಂದಿರುವ ಮೂರನೇ ರಾಷ್ಟ್ರವೆನಿಸಿಕೊಂಡಿದೆ. ತಂಡವು ಡೆಂಗ್ಯೂ ಹಾಗೂ ಡೆಂಗ್ಯೂ ಪೀಡಿತ ಪ್ರದೇಶಗಳಲ್ಲಿ ಕೊರೊನಾ ಸೋಂಕಿನ ಪ್ರಭಾವ ಕಡಿಮೆ ಇರುವುದನ್ನು ಅರಿತುಕೊಂಡಿದ್ದಾರೆ.

English summary
A new study that analyzed the coronavirus outbreak in Brazil has found a link between the spread of the virus and past outbreaks of dengue fever that suggests exposure to the mosquito-transmitted illness may provide some level of immunity against COVID-19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X