• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

Explained: ಇಡೀ ಜಗತ್ತಿಗೆ ಮಾರಕವಾಗುತ್ತಿರುವುದು ಹೇಗೆ ಡೆಲ್ಟಾ ರೂಪಾಂತರ!?

|
Google Oneindia Kannada News

ಬೀಜಿಂಗ್, ಆಗಸ್ಟ್ 2: ಜಗತ್ತಿಗೆ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗನ್ನು ಪರಿಚಯಿಸಿದ ಚೀನಾ ಇದೀಗ ಡೆಲ್ಟಾ ರೂಪಾಂತರಿಂದ ದಂಗಾಗಿದೆ. ಜನವರಿ ನಂತರದಲ್ಲಿ ಮೊದಲ ಬಾರಿಗೆ ಚೀನಾದಲ್ಲಿ ಅತಿಹೆಚ್ಚು ಸೋಂಕಿತ ಪ್ರಕರಣಗಳ ವರದಿಯಾಗಿವೆ. ಮೊದಲ ಅಲೆಗಿಂತ ಅಪಾಯಕಾರಿ ಎನಿಸಿರುವ ಡೆಲ್ಟಾ ರೂಪಾಂತರದ ಹರಡುವಿಕೆ ನಿಯಂತ್ರಸಲು ಅಂತಾರಾಷ್ಟ್ರೀಯ ವಿಮಾನ ಸಂಚಾರಕ್ಕೆ ಬ್ರೇಕ್ ಹಾಕಲಾಗಿದ್ದು, ತಪಾಸಣೆ ಪ್ರಮಾಣವನ್ನು ಸಮರೋಪಾದಿಯಲ್ಲಿ ಹೆಚ್ಚಿಸಲಾಗಿದೆ.

2019ರಲ್ಲಿ ಚೀನಾದ ಹುಬೈ ಪ್ರದೇಶದ ವುಹಾನ್ ನಗರದಲ್ಲಿ ಮೊದಲ ಬಾರಿಗೆ ಕೊರೊನಾವೈರಸ್ ಸೋಂಕಿತ ಪ್ರಕರಣ ವರದಿಯಾಗಿತ್ತು. ಅಂದಿನಿಂದ ಇತ್ತೀಚಿನ ದಿನಗಳವರೆಗೂ ಚೀನಾದ ಕೊವಿಡ್-19 ಸೋಂಕು ಹರಡುವಿಕೆ ಮೇಲೆ ನಿಯಂತ್ರಣವನ್ನು ಸಾಧಿಸಿತ್ತು. ವಿದೇಶಗಳಿಂದ ದೇಶಕ್ಕೆ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿತ್ತು. ಅದಾಗ್ಯೂ, ಕಳೆದ ಬುಧವಾರ ಒಂದೇ ದಿನ 96 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ದೇಶದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 93,289ಕ್ಕೆ ಏರಿಕೆಯಾಗಿದ್ದು, 4636 ಜನರು ಮಹಾಮಾರಿಗೆ ಬಲಿಯಾಗಿದ್ದಾರೆ.

 ವುಹಾನ್‌ನಲ್ಲಿ ಪ್ರತಿಯೊಬ್ಬರಿಗೂ ಕೊರೊನಾ ಪರೀಕ್ಷೆ ಮಾಡುವಂತೆ ಚೀನಾ ಆದೇಶ ವುಹಾನ್‌ನಲ್ಲಿ ಪ್ರತಿಯೊಬ್ಬರಿಗೂ ಕೊರೊನಾ ಪರೀಕ್ಷೆ ಮಾಡುವಂತೆ ಚೀನಾ ಆದೇಶ

ವಿಶ್ವದಾದ್ಯಂತ ಕೊರೊನಾವೈರಸ್ ರೂಪಾಂತರ ಅಲೆಗಳ ಆಟ ಜೋರಾಗುತ್ತಿದೆ. ಡೆಲ್ಟಾ ವೈರಸ್ ರೂಪಾಂತರ ಎಷ್ಟರ ಮಟ್ಟಿಗೆ ಅಪಾಯಕಾರಿ ಎನ್ನುವುದಕ್ಕೆ ಜಗತ್ತಿನ ಎದುರು ಭಾರತ ಸಾಕ್ಷಿಯಾಗಿ ನಿಲ್ಲುತ್ತದೆ. ದೇಶದಲ್ಲಿ ಸಾವಿರಾರು ಜನರ ಉಸಿರು ಕಿತ್ತುಕೊಂಡ ಅದೇ ಡೆಲ್ಟಾ ವೈರಸ್ ಇದೀಗ ಚೀನಾಗೆ ಲಗ್ಗೆ ಇಟ್ಟಿದೆ.

ಜಗತ್ತು ಕಂಡ ಮೋಸ್ಟ್ ಡೇಂಜರಸ್ ರೂಪಾಂತರದ ವಿರುದ್ಧ ಚೀನಾದ ಹೋರಾಟ ಹೇಗಿರಲಿದೆ?, ಚೀನಾದ ಹೊರತಾಗಿ ಇತರೆ ರಾಷ್ಟ್ರಗಳಲ್ಲಿ ಕೊವಿಡ್-19 ನಿಯಂತ್ರಣ ಕ್ರಮಗಳು ಹೇಗಿವೆ?, ಲಸಿಕೆ ಪಡೆದಾಕ್ಷಣಕ್ಕೆ ಮಾಸ್ಕ್ ತೊರೆದು ಓಡಾಡಿದ ರಾಷ್ಟ್ರಗಳಲ್ಲಿ ಪರಿಸ್ಥಿತಿ ಹೇಗೆ ಮತ್ತೊಮ್ಮೆ ವಿಕೋಪಕ್ಕೆ ಹೋಗಿದೆ?, ಲಸಿಕೆ ಪಡೆದವರನ್ನೂ ಬಿಡದ ಡೆಲ್ಟಾ ವೈರಸ್ ವಿರುದ್ಧ ನಾವು ಹೇಗೆ ಸುರಕ್ಷಿತವಾಗಿರಬೇಕು ಎನ್ನುವುದರ ಕುರಿತು ಒಂದು ವಿಶ್ಲೇಷಣಾತ್ಮಕ ವರದಿಗಾಗಿ ಮುಂದೆ ಓದಿ.

ಸಂಪೂರ್ಣ ಮಾಹಿತಿ: ಭಾರತದಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆ ಶುರುವಾಗಿ 200 ದಿನಸಂಪೂರ್ಣ ಮಾಹಿತಿ: ಭಾರತದಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆ ಶುರುವಾಗಿ 200 ದಿನ

ಚೀನಾದಲ್ಲಿ ಹೆಚ್ಚಿದ ಡೆಲ್ಟಾ ವೈರಸ್ ಅಪಾಯ

ಚೀನಾದಲ್ಲಿ ಹೆಚ್ಚಿದ ಡೆಲ್ಟಾ ವೈರಸ್ ಅಪಾಯ

ಬೀಜಿಂಗ್ ಸೇರಿದಂತೆ 18 ಪ್ರದೇಶಗಳಲ್ಲಿ ಕೊರೊನಾವೈರಸ್ ಡೆಲ್ಟಾ ರೂಪಾಂತರ ತಳಿಯ ಹೊಸ ಪ್ರಕರಣಗಳು ವೈದ್ಯಕೀಯ ತಪಾಸಣೆ ವೇಳೆ ದೃಢಪಟ್ಟಿವೆ. ಕಳೆದ ಎರಡು ವಾರಗಳಲ್ಲಿ 500ಕ್ಕೂ ಹೆಚ್ಚು ಡೆಲ್ಟಾ ರೂಪಾಂತರ ವೈರಸ್ ಸೋಂಕಿತ ಪ್ರಕರಣಗಳು ವರದಿಯಾಗಿವೆ. ಚೀನಾದ ಬೀಜಿಂಗ್, ಜಿಯಾಂಗ್ಸು, ಸಿಚುವಾನ್ ಸೇರಿದಂತೆ 27 ನಗರಗಳ 18 ಪ್ರದೇಶಗಳಲ್ಲಿ 500ಕ್ಕೂ ಹೆಚ್ಚು ಡೆಲ್ಟಾ ರೂಪಾಂತರ ಕೊರೊನಾವೈರಸ್ ಹೊಸ ಪ್ರಕರಣಗಳು ಪತ್ತೆಯಾಗಿವೆ ಎಂದು ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ. ಮಧ್ಯಮ ಮತ್ತು ಅತಿಹೆಚ್ಚು ಅಪಾಯವನ್ನು ಎದುರಿಸುತ್ತಿರುವ ಪ್ರದೇಶಗಳ ಸಂಖ್ಯೆ 95ಕ್ಕೆ ಏರಿಕೆಯಾಗಿದೆ. ಈ ಪೈಕಿ 91 ಪ್ರದೇಶಗಳು ಮಧ್ಯಮ ಪ್ರಮಾಣದ ಅಪಾಯದಲ್ಲಿದ್ದು, ನಾಲ್ಕು ಪ್ರದೇಶಗಳು ಅತಿಹೆಚ್ಚು ಅಪಾಯ ಎದುರಿಸುತ್ತಿವೆ. ದೆಹಾಂಗ್, ಯುನ್ನಾನ್, ಜಿಯಾಂಗ್ಸುದ ನಂಜಿಂಗ್ ಮತ್ತು ಹೆನಾನ್ ಪ್ರದೇಶವೂ ಸೇರಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಕೊರೊನಾವೈರಸ್ ಭಯದ ನಡುವೆ ಆರ್ಥಿಕ ಚಟುವಟಿಕೆ

ಕೊರೊನಾವೈರಸ್ ಭಯದ ನಡುವೆ ಆರ್ಥಿಕ ಚಟುವಟಿಕೆ

ಡೆಲ್ಟಾ ರೂಪಾಂತರ ವೈರಸ್ ಎನ್ನುವುದು ಕೊರೊನಾವೈರಸ್ ರೂಪಾಂತರಗಳ ಪೈಕಿ ಅಸಾಧಾರಣ ಮತ್ತು ಅಪಾಯಕಾರಿ ಎನ್ನಲಾಗಿದೆ. ಕೊವಿಡ್-19 ಸೋಂಕಿತ ಪ್ರಕರಣಗಳು ಇಳಮುಖವಾದ ಬೆನ್ನಲ್ಲೇ ಜಗತ್ತಿನಾದ್ಯಂತ ಆರ್ಥಿಕ ಚಟುವಟಿಕೆಗಳನ್ನು ಪ್ರಾರಂಭಿಸಲಾಗಿತ್ತು. ಈ ಹಂತದಲ್ಲಿ ಡೆಲ್ಟಾ ರೂಪಾಂತರ ವೈರಸ್ ಸೋಂಕು ದೇಶ-ವಿದೇಶಗಳಿಗೆ ಹರಡಿತು. ಇದರ ಮಧ್ಯೆ ಕೊರೊನಾವೈರಸ್ ಲಸಿಕೆಯು ಸೋಂಕಿನ ತೀವ್ರತೆ ಮತ್ತು ಸಾವಿನ ಪ್ರಮಾಣವನ್ನು ತಗ್ಗಿಸಿ ಸುರಕ್ಷತೆ ನೀಡುವುದರಲ್ಲಿ ಸ್ವಲ್ಪ ಮಟ್ಟಿಗೆ ಯಶಸ್ವಿಯಾಗಿದೆ. ಆದರೆ ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ವಿಶ್ವದ ಬಹುಪಾಲು ಜನರು ಈವರೆಗೂ ಸಂಪೂರ್ಣವಾಗಿ ಲಸಿಕೆಯನ್ನು ಪಡೆದುಕೊಂಡಿಲ್ಲ. ಲಸಿಕೆಯನ್ನೇ ಹಾಕಿಸಿಕೊಳ್ಳದವರಿಗೆ ಕೊವಿಡ್-19 ಅಪಾಯ ಇನ್ನೂ ತಪ್ಪಿದ್ದಲ್ಲ ಎಂದು ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಎಚ್ಚರಿಕೆ ನೀಡಿದ್ದಾರೆ.

ಕೊರೊನಾವೈರಸ್ ಲಸಿಕೆ ಉತ್ಪಾದನೆಯಲ್ಲಿ ಭಾರತದ ಜೊತೆ ನಾವಿದ್ದೇವೆ ಎಂದ ಬೈಡನ್!ಕೊರೊನಾವೈರಸ್ ಲಸಿಕೆ ಉತ್ಪಾದನೆಯಲ್ಲಿ ಭಾರತದ ಜೊತೆ ನಾವಿದ್ದೇವೆ ಎಂದ ಬೈಡನ್!

ರೂಪಾಂತರಗಳಿಂದ ಲಸಿಕೆ ನೀಡುವ ಸುರಕ್ಷತೆಗೂ ಅಪಾಯ

ರೂಪಾಂತರಗಳಿಂದ ಲಸಿಕೆ ನೀಡುವ ಸುರಕ್ಷತೆಗೂ ಅಪಾಯ

ಕೊರೊನಾವೈರಸ್ ರೋಗಾಣುಗಳ ರೂಪಾಂತರವು ಒಂದು ನಿರಂತರ ಪ್ರಕ್ರಿಯೆ ಆಗಿದೆ. ರೂಪಾಂತರಗಳಲ್ಲಿ ಹೆಚ್ಚಿನ ಬದಲಾವಣೆಗಳೇನೂ ಇರುವುದಿಲ್ಲ. ಆದರೆ ಇಂಥ ರೂಪಾಂತರಗಳ ಹರಡುವಿಕೆಯ ಪ್ರಮಾಣ ಹೆಚ್ಚಾದಲ್ಲಿ ಅಪಾಯ ತಪ್ಪಿದ್ದಲ್ಲ. ಸೋಂಕಿನ ಹರಡುವಿಕೆ ಪ್ರಮಾಣ ಹೆಚ್ಚಾದಲ್ಲಿ ಅನಾರೋಗ್ಯದ ಉಂಟಾಗುತ್ತದೆ. ಅಲ್ಲದೇ ರೂಪಾಂತರ ರೋಗಾಣುಗಳಲ್ಲಿ ಈಗಾಗಲೇ ಪಡೆದಿರುವ ಕೊರೊನಾವೈರಸ್ ಲಸಿಕೆಯ ಸಾಮರ್ಥ್ಯವನ್ನು ತಗ್ಗಿಸುವ ಶಕ್ತಿಯೂ ಇರುತ್ತದೆ. ಹೀಗಾಗಿ ರೂಪಾಂತರಗಳ ಹೆಚ್ಚಿನ ಹರಡುವಿಕೆಯಿಂದಾಗಿ ಲಸಿಕೆ ಪಡೆದವರಲ್ಲೂ ಸೋಂಕು ಹರಡುವ ಅಪಾಯ ಹೆಚ್ಚಾಗಿರುತ್ತದೆ.

ಡೆಲ್ಟಾ ರೂಪಾಂತರ ವೈರಸ್ ದಾಳಿಗೆ ಬೆಚ್ಚಿದ ಯುಎಸ್

ಡೆಲ್ಟಾ ರೂಪಾಂತರ ವೈರಸ್ ದಾಳಿಗೆ ಬೆಚ್ಚಿದ ಯುಎಸ್

ಕೊರೊನಾವೈರಸ್ ಸೋಂಕಿನ ಡೆಲ್ಟಾ ರೂಪಾಂತರ ತಳಿಯು ಅಮೆರಿಕಾದಲ್ಲಿ ಅಪಾಯವನ್ನು ಹೆಚ್ಚಿಸಿದೆ. ಜುಲೈ ತಿಂಗಳ ಎರಡು ವಾರಗಳಲ್ಲಿ ಅತಿಹೆಚ್ಚು ಸೋಂಕಿತ ಪ್ರಕರಣಗಳು ವರದಿಯಾಗಿವೆ. ಈ ಸೋಂಕಿನ ತಪಾಸಣೆಯಲ್ಲಿ ಡೆಲ್ಟಾ ರೂಪಾಂತರಗಳ ಸಂಖ್ಯೆಯೇ ಹೆಚ್ಚಾಗಿದೆ. ಒಟ್ಟು ಸೋಂಕಿತ ಪ್ರಕರಣಗಳ ಪೈಕಿ ಶೇ.93.40ರಷ್ಟು ಡೆಲ್ಟಾ ರೂಪಾಂತರವೈರಸ್ ಇರುವುದು ಗೊತ್ತಾಗಿದೆ ಎಂದು ಯುಎಸ್ ರೋಗ ನಿಯಂತ್ರಣ ಕೇಂದ್ರವು ತಿಳಿಸಿದೆ.

ಡೆಲ್ಟಾ ವೈರಸ್ ಒಂದು ಅಪಾಯಕಾರಿ ರೂಪಾಂತರ

ಡೆಲ್ಟಾ ವೈರಸ್ ಒಂದು ಅಪಾಯಕಾರಿ ರೂಪಾಂತರ

ಭಾರತದಲ್ಲಿ ಮೊದಲ ಕಾಣಿಸಿಕೊಂಡ ಡೆಲ್ಟಾ ರೂಪಾಂತರ ವೈರಸ್ ಎನ್ನುವುದು ಇತರೆ ರೂಪಾಂತರ ತಳಿಗಿಂತ ಹೆಚ್ಚು ಅಪಾಯಕಾರಿಯಾಗಿದೆ. ಈ ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ಅತ್ಯಂತ ಸುಲಭವಾಗಿ ಹರಡುವ ಸಾಮರ್ಥ್ಯವನ್ನು ಹೊಂದಿದೆ. ಡೆಲ್ಟಾ ಸೋಂಕು ಅಂಟಿಕೊಂಡ ವ್ಯಕ್ತಿಯಲ್ಲಿ ತೀವ್ರ ಉಸಿರಾಟ ಸಮಸ್ಯೆ ಮತ್ತು ಅಸ್ವಸ್ಥತೆ ಕಾಣಿಸಿಕೊಳ್ಳುತ್ತದೆ. ಸೋಂಕು ತಗುಲಿದ ವ್ಯಕ್ತಿಗಳಲ್ಲಿ ಬಹುಪಾಲು ಜನರು ಆಸ್ಪತ್ರೆಗಳಿಗೆ ದಾಖಲಾಗುತ್ತಾರೆ ಎನ್ನುವುದು ಸ್ಪಷ್ಟವಾಗಿದೆ. ಕೊವಿಡ್-19 ಎರಡು ಡೋಸ್ ಲಸಿಕೆಯನ್ನು ಪಡೆದ ವ್ಯಕ್ತಿಗಳಲ್ಲೂ ಡೆಲ್ಟಾ ವೈರಸ್ ಅಂಟಿಕೊಳ್ಳುವುದರ ಜೊತೆಗೆ ಅವರ ಮೂಲಕ ಬೇರೆಯವರಿಗೂ ಸೋಂಕು ಹರಡುವ ಸಾಮರ್ಥ್ಯವನ್ನು ಹೊಂದಿದೆ.

ಕೊರೊನಾವೈರಸ್ ಪರಿಚಯಿಸಿದ ಚೀನಾದಲ್ಲಿ ಹೇಗಿದೆ ಡೆಲ್ಟಾ ಹಾವಳಿ!?ಕೊರೊನಾವೈರಸ್ ಪರಿಚಯಿಸಿದ ಚೀನಾದಲ್ಲಿ ಹೇಗಿದೆ ಡೆಲ್ಟಾ ಹಾವಳಿ!?

ಡೆಲ್ಟಾ ರೂಪಾಂತರ ವೇಗವಾಗಿ ಹರಡಬಲ್ಲ ಶಕ್ತಿಶಾಲಿ ವೈರಸ್

ಡೆಲ್ಟಾ ರೂಪಾಂತರ ವೇಗವಾಗಿ ಹರಡಬಲ್ಲ ಶಕ್ತಿಶಾಲಿ ವೈರಸ್

"ಜಗತ್ತಿನ ಎದುರಿಗೆ ನಿಂತಿರುವ ದೊಡ್ಡ ಅಪಾಯವೆಂದರೆ ಅದು ಡೆಲ್ಟಾ ರೂಪಾಂತರ ವೈರಸ್," ಎಂದು ಬ್ರಿಟನ್ ಸೂಕ್ಷ್ಮಜೀವಶಾಸ್ತ್ರಜ್ಞ ಶಾರೋನ್ ಪೀಕಾಕ್ ಹೇಳಿದ್ದಾರೆ. ಡೆಲ್ಟಾ ವೈರಸ್ ಎನ್ನುವುದು ಇತರೆ ರೂಪಾಂತರಗಳಿಗೆ ಹೋಲಿಸಿದರೆ ಹೆಚ್ಚು ವೇಗವಾಗಿ ಹರಡಬಲ್ಲ ಶಕ್ತಿಶಾಲಿ ಹಾಗೂ ಅಪಾಯಕಾರಿ ವೈರಸ್ ಎಂದಿದ್ದಾರೆ. ನಿರಂತರವಾಗಿ ಇರುವ ರೂಪಾಂತರ ಪ್ರಕ್ರಿಯೆಯು ಹಲವು ರೀತಿಯ ಅಪಾಯವನ್ನು ತಂದೊಡ್ಡುತ್ತವೆ. ಒಂದೊಂದು ಬಾರಿ ಮೂಲ ರೋಗಾಣುವಿಗಿಂತ ರೂಪಾಂತರ ತಳಿಗಳು ಹೆಚ್ಚು ಅಪಾಯಕಾರಿ ಆಗಿರುತ್ತವೆ.

ಎಚ್ಚರಿಕೆ ತಪ್ಪಿದ್ದಲ್ಲಿ ಲಸಿಕೆಯಿಂದಲೂ ಏನೂ ಆಗುವುದಿಲ್ಲ!

ಎಚ್ಚರಿಕೆ ತಪ್ಪಿದ್ದಲ್ಲಿ ಲಸಿಕೆಯಿಂದಲೂ ಏನೂ ಆಗುವುದಿಲ್ಲ!

ಕೊರೊನಾವೈರಸ್ ಲಸಿಕೆಯೂ ರೋಗದ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡಬಲ್ಲ ಅಸ್ತ್ರವಾಗಿದೆ. ಹಾಗೆಂದ ಮಾತ್ರಕ್ಕೆ ಶಿಸ್ತು ಪಾಲನೆಯಲ್ಲಿ ದೋಷವಾದರೆ ಅಪಾಯ ಕಟ್ಟಿಟ್ಟ ಬುತ್ತಿ. ಲಸಿಕೆ ಹಾಕಿಸಿಕೊಂಡ ಜನರು ಸಾಮಾಜಿಕ ಅಂತರವನ್ನು ತೊರೆದು, ಮಾಸ್ಕ್ ಧರಿಸದೇ ಓಡಾಡಿದರೆ ಅಪಾಯ ಅವರಿಗಷ್ಟೇ ಅಲ್ಲದೇ ಇತರರಿಗೂ ಹೆಚ್ಚಾಗುತ್ತದೆ ಎಂದು ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಎಚ್ಚರಿಕೆ ನೀಡಿದ್ದಾರೆ.

* ಬ್ರಿಟನ್: ಕೊರೊನಾವೈರಸ್ ಸೋಂಕು ತಗುಲಿಕೆಯಿಂದ ಆಸ್ಪತ್ರೆಗೆ ದಾಖಲಾದ 3692 ಜನರಲ್ಲಿ ಡೆಲ್ಟಾ ರೂಪಾಂತರ ವೈರಸ್ ಪತ್ತೆಯಾಗಿದೆ. ಹೀಗೆ ಸೋಂಕು ಅಂಟಿಕೊಂಡವರಲ್ಲಿ ಶೇ.58.30ರಷ್ಟು ಜನರು ಲಸಿಕೆ ಪಡೆದುಕೊಂಡಿಲ್ಲ, ಶೇ.22.80ರಷ್ಟು ಜನರು ಲಸಿಕೆ ಹಾಕಿಸಿಕೊಂಡ ಹೊರತಾಗಿದೂ ಸೋಂಕು ತಗುಲಿದೆ ಎಂದು ಇಂಗ್ಲೆಂಡ್ ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.

* ಸಿಂಗಾಪುರ: ಸಿಂಗಾಪುರದಲ್ಲಿ ಡೆಲ್ಟಾ ವೈರಸ್ ಅತ್ಯಂತ ಸಾಮಾನ್ಯ ರೂಪಾಂತರವಾಗಿದೆ. ಕೊರೊನಾವೈರಸ್ ಪ್ರಕರಣಗಳಲ್ಲಿ ಮುಕ್ಕಾಲು ಭಾಗ ಲಸಿಕೆ ಹಾಕಿದ ವ್ಯಕ್ತಿಗಳೇ ಇದ್ದಾರೆ. ಆದರೆ ಯಾರೂ ತೀವ್ರ ಅನಾರೋಗ್ಯಕ್ಕೆ ಒಳಗಾಗಲಿಲ್ಲ ಎಂದು ಅಧಿಕಾರಿಗಳು ವರದಿ ನೀಡಿದ್ದಾರೆ.

* ಇಸ್ರೇಲ್: ಪ್ರಸ್ತುತ ಕೊರೊನಾವೈರಸ್ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿರುವ ಜನರಲ್ಲಿ ಶೇಕಡಾ 60ರಷ್ಟು ಮಂದಿ ಲಸಿಕೆ ಹಾಕಿಸಿಕೊಂಡವರೇ ಇದ್ದಾರೆ. ಈ ಪೈಕಿ ಹೆಚ್ಚಿನವರು 60 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರು ಮತ್ತು ಸಾಮಾನ್ಯವಾಗಿ ಆರೋಗ್ಯ ಸಮಸ್ಯೆಗಳನ್ನು ಹೊಂದಿದ್ದಾರೆ ಎಂದು ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ.

* ಯುನೈಟೆಡ್ ಸ್ಟೇಟ್ಸ್: ಜಗತ್ತಿನಲ್ಲೇ ಅತಿಹೆಚ್ಚು ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಮತ್ತು ಸಾವಿನ ಪ್ರಕರಣಗಳನ್ನು ವರದಿ ಮಾಡಿರುವ ರಾಷ್ಟ್ರದಲ್ಲೂ ಡೆಲ್ಟಾ ರೂಪಾಂತರದಿಂದ ಅಪಾಯ ಹೆಚ್ಚಾಗಿದೆ. ಇತ್ತೀಚಿನ ಹೊಸ ಪ್ರಕರಣಗಳಲ್ಲಿ ಶೇ.83ರಷ್ಟು ಡೆಲ್ಟಾ ರೂಪಾಂತರ ವೈರಸ್ ಪತ್ತೆಯಾಗಿದ್ದು, ಅದರಲ್ಲಿ ಶೇ.97ರಷ್ಟು ಜನರು ಲಸಿಕೆ ಪಡೆದುಕೊಳ್ಳದವರೇ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಪ್ರದೇಶಗಳಲ್ಲಿ ಪ್ರತಿಯೊಬ್ಬರು ಮಾಸ್ಕ್ ಧರಿಸುವುದಕ್ಕೆ ಕಡ್ಡಾಯಗೊಳಿಸಿದೆ.

ಎಲ್ಲರಿಗೂ ಹೊಸ ಪಾಠ

ಎಲ್ಲರಿಗೂ ಹೊಸ ಪಾಠ

"ನಮ್ಮ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವ ಮ್ಯಾಜಿಕ್ ಬುಲೆಟ್ ಇದೆ ಎಂಬ ಭ್ರಮೆ ಯಾವಾಗಲೂ ಇರುತ್ತದೆ. ಕೊರೊನಾವೈರಸ್ ನಮಗೆ ಪಾಠ ಕಲಿಸುತ್ತಿದೆ "ಎಂದು ಬೆನ್ ಗುರಿಯನ್ ವಿಶ್ವವಿದ್ಯಾಲಯದ ಸಾರ್ವಜನಿಕ ಆರೋಗ್ಯ ಶಾಲೆಯ ಇಸ್ರೇಲ್‌ನ ನಿರ್ದೇಶಕ ನಾದವ್ ಡೇವಿಡೋವಿಚ್ ಹೇಳಿದ್ದಾರೆ. ಕೊವಿಡ್-19 ವಿರುದ್ಧ ಬಯೋ-ಎನ್-ಟೆಕ್ ಲಸಿಕೆ ಮತ್ತು ಫೈಜರ್ ಲಸಿಕೆಗಳು ಅತಿಹೆಚ್ಚು ಪರಿಣಾಮಕಾರಿ ಎಂದು ನಂಬಲಾಗಿದೆ. ಆದರೆ ಇಸ್ರೇಲಿ ಸರ್ಕಾರದ ಅಂಕಿ-ಅಂಶಗಳ ಪ್ರಕಾರ, ಡೆಲ್ಟಾ ರೂಪಾಂತರವು ಹರಡಿರುವುದರಿಂದ ಕಳೆದ ತಿಂಗಳಲ್ಲಿ ಇಸ್ರೇಲ್‌ನಲ್ಲಿ ಸೋಂಕನ್ನು ತಡೆಯುವಲ್ಲಿ ಕೇವಲ ಶೇ.41ರಷ್ಟು ಮಾತ್ರ ಪರಿಣಾಮಕಾರಿಯಾಗಿದೆ. "ತಮ್ಮನ್ನು ತಾವು ರಕ್ಷಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ, ಆದರೆ ಇತರರಿಗೆ ಸೋಂಕು ತಗುಲುವುದನ್ನು ರಕ್ಷಿಸುವವರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದ ಇಳಿಕೆ ಕಂಡು ಬಂದಿದೆ," ಎಂದು ನಾದವ್ ಡೇವಿಡೋವಿಚ್ ಹೇಳಿದ್ದಾರೆ.

ಕೊವಿಡ್-19 ಮೂಲ ರೋಗಾಣುವಿಗಿಂತ ಡೆಲ್ಟಾ ವೈರಸ್ ಅಪಾಯ

ಕೊವಿಡ್-19 ಮೂಲ ರೋಗಾಣುವಿಗಿಂತ ಡೆಲ್ಟಾ ವೈರಸ್ ಅಪಾಯ

* "2019ರಲ್ಲಿ ಮೊದಲ ಬಾರಿಗೆ ಚೀನಾದ ವುಹಾನ್ ನಗರದಲ್ಲಿ ಪತ್ತೆಯಾದ ಕೊರೊನಾವೈರಸ್ ಸೋಂಕಿನ ಮೂಲ ರೋಗಾಣುವಿಗಿಂತಲೂ ಡೆಲ್ಟಾ ರೂಪಾಂತರ ವೈರಸ್ 1000 ಪಟ್ಟು ಅಪಾಯಕಾರಿ ಆಗಿರುತ್ತದೆ. ಮೂಲ ಸೋಂಕಿತನಿಗೆ ಹೋಲಿಸಿದರೆ ಡೆಲ್ಟಾ ಸೋಂಕಿತರ ಮೂಗಿನಲ್ಲಿ ರೋಗಾಣುವಿನ ಸಂಖ್ಯೆ 1000 ಪಾಲು ಹೆಚ್ಚಾಗಿರುವುದು ಕಂಡು ಬಂದಿದೆ. ರೋಗಾಣುವಿನ ಸಂಖ್ಯೆ ಹೆಚ್ಚಾದ ಸಂದರ್ಭದಲ್ಲಿ ಅವುಗಳ ಹರಡುವಿಕೆ ಪ್ರಮಾಣವು ಸರ್ವೇ ಸಾಮಾನ್ಯವಾಗಿ ಹೆಚ್ಚಾಗಿರುತ್ತದೆ," ಸೂಕ್ಷ್ಮಜೀವಶಾಸ್ತ್ರಜ್ಞ ಶಾರೋನ್ ಪೀಕಾಕ್ ಹೇಳಿದ್ದಾರೆ.

* "ಯುನೈಟೆಡ್ ಕಿಂಗ್ ಡಮ್ ನಲ್ಲಿ ಮೊದಲು ಪತ್ತೆಯಾದ ಆಲ್ಫಾ ರೂಪಾಂತರಕ್ಕೆ ಹೋಲಿಸಿದರೆ ಡೆಲ್ಟಾ ರೂಪಾಂತರವು ಶೇ.50ರಷ್ಟು ಹೆಚ್ಚು ಹರಡುವಿಕೆ ಸಾಮರ್ಥ್ಯವನ್ನು ಹೊಂದಿದೆ," ಎಂದು ಸ್ಯಾನ್ ಡಿಯಾಗೋದಲ್ಲಿ ಲಾ ಜೊಲ್ಲಾ ಇನ್ಸ್ಟಿಟ್ಯೂಟ್ ಫಾರ್ ಇಮ್ಯುನಾಲಜಿಯ ಸೂಕ್ಷ್ಮರೋಗಾಣು ಶಾಸ್ತ್ರಜ್ಞ ಶೇನ್ ಕ್ರಾಟಿ ಹೇಳಿದ್ದಾರೆ. ಇತರೆ ಎಲ್ಲ ರೂಪಾಂತರ ತಳಿಗಳಿಗಿಂತಲೂ ಡೆಲ್ಟಾ ಹೆಚ್ಚು ಪರಿಣಾಮಕಾರಿ ಆಗಿ ಹರಡುತ್ತದೆ ಎಂದಿದ್ದಾರೆ.

* ಡೆಲ್ಟಾ ರೂಪಾಂತರವು ಕಡಿಮೆ ತಾಪದ ಅವಧಿ ಮತ್ತು ಹೆಚ್ಚು ಸೋಂಕು ಹರಡುವಿಕೆ ಪ್ರಮಾಣವನ್ನು ಹೊಂದಿರುತ್ತದೆ. ಆದ್ದರಿಂದಲೇ ಈ ರೂಪಾಂತರವು ಲಸಿಕೆಗಳಿಗೂ ದೊಡ್ಡ ಸವಾಲಾಗಿದ್ದು, ಲಸಿಕೆ ಹಾಕಿಸಿಕೊಂಡವರೂ ಕೂಡ ಜಾಗೃತರಾಗಿರಬೇಕು. ಇದು ಬಹಳ ಕಷ್ಟಸಾಧ್ಯವಾದ ಸಂಗತಿಯಾಗಿದೆ. ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದಲ್ಲಿ ಲಸಿಕೆ ಪಡೆದವರೂ ಕೂಡ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ನಿಯಮಗಳನ್ನು ಜಾರಿಗೊಳಿಸಲಾಗಿದೆ. ರೂಪಾಂತರ ವೈರಸ್ ಸೋಂಕಿನ ಪ್ರಮಾಣವು ತೀರಾ ವಿರಳವಾಗಿದೆ ಎನ್ನುವಂತಾ ಹಂತದಲ್ಲಿ ಮಾತ್ರ ನಾವು ನಿರ್ಬಂಧಗಳನ್ನು ಸಡಿಲಗೊಳಿಸಬೇಕಿದೆ," ಎಂದು ಕ್ಯಾಲಿಪೋರ್ನಿಯಾದ ಲಾ ಜೊಲ್ಲಾದಲ್ಲಿರುವ ಸ್ಕಿಪ್ಪಸ್ ರಿಸರ್ಚ್ ಟ್ರಾನ್ಸ್ ಲೇಷನಲ್ ಇನ್ಸ್ ಟಿಟ್ಯೂಟ್ ನಿರ್ದೇಶಕ ಹಾಗೂ ಜೆನೋಮಿಕ್ಸ್ ತಜ್ಞ ಎರಿಕ್ ತೊಪೊಲ್ ಹೇಳಿದ್ದಾರೆ.

ಕೊವಿಡ್-19 ಸೋಂಕಿನ ಮರುಪರಿಶೀಲನೆ

ಕೊವಿಡ್-19 ಸೋಂಕಿನ ಮರುಪರಿಶೀಲನೆ

ಒಂದು ಬಾರಿ ಕೊರೊನಾವೈರಸ್ ಲಸಿಕೆ ಹಾಕಿಸಿಕೊಂಡರೆ ಮುಗಿಯುತು, ನಾವು ಸುರಕ್ಷಿತವಾಗಿದ್ದೇವೆ ಎಂದುಕೊಂಡಿದ್ದವರ ಎದೆಯಲ್ಲಿ ಚಿಕ್ಕದಾಗಿ ನಡುಕ ಹುಟ್ಟಿಕೊಳ್ಳುತ್ತಿದೆ. ಮೊದಲ ಬಾರಿಗೆ ಕೊವಿಡ್-19 ಲಸಿಕೆಯನ್ನು ಪರಿಚಯಿಸಿದ ಸಂದರ್ಭದಲ್ಲಿ ಈ ಲಸಿಕೆಯಿಂದ ನಾವು ಸುರಕ್ಷಿತವಾಗಿರುತ್ತೇವೆ ಎಂದು ಯಾರೊಬ್ಬರೂ ಅಂದುಕೊಂಡಿರಲಿಲ್ಲ. ಆದರೆ ಲಸಿಕೆಯ ಉದ್ದೇಶ ಸೋಂಕು ಹರಡುವಿಕೆಯನ್ನು ತಗ್ಗಿಸುವುದು ಹಾಗೂ ಸಾವಿನ ಪ್ರಮಾಣವನ್ನು ಇಳಿಮುಖಗೊಳಿಸುವದಾಗಿದೆ, ಎಂದು ಅಟ್ಲಾಂಟಾದ ಎಮೋರಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಕಾರ್ಲಸ್ ದೆಲ್ ರಿಯೋ ಹೇಳಿದ್ದಾರೆ. ಕೊವಿಡ್-19 ಲಸಿಕೆಗಳು ಹೆಚ್ಚು ಪರಿಣಾಮಕಾರಿಯಾಗಿದ್ದು, ಮೂಲ ರೋಗಾಣುವಿನ ಹರಡುವಿಕೆಯನ್ನು ಸಮರ್ಥವಾಗಿ ನಿಯಂತ್ರಿಸಲು ಲಕ್ಷಣಗಳು ಗೋಚರಿಸುತ್ತಿವೆ.

ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಿದ ಚೀನಾ

ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಿದ ಚೀನಾ

ಚೀನಾ ರಾಜಧಾನಿ ಬೀಜಿಂಗ್ ನಲ್ಲಿ ಭಾನುವಾರ ಎರಡು ಕೊರೊನಾವೈರಸ್ ಪ್ರಕರಣಗಳು ವರದಿಯಾಗಿದ್ದು, ಯಾವುದೇ ಲಕ್ಷಣಗಳು ಇಲ್ಲದ ಒಬ್ಬರಿಗೆ ಸೋಂಕು ತಗುಲಿರುವುದರ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಲಾಗಿದೆ. ಈ ಮೂರು ಸೋಂಕಿತ ವ್ಯಕ್ತಿಗಳು ಮತ್ತು ಅವರ ಕುಟುಂಬ ಸದಸ್ಯರು ದಕ್ಷಿಣ ಚೀನಾದ ಹೆನಾನ್ ಪ್ರದೇಶದಲ್ಲಿ ಝಾಂಗ್ ಝಿಯಾಜಿ ಪ್ರವಾಸಿ ತಾಣದಿಂದ ವಾಪಸ್ಸಾಗಿದ್ದರು ಎಂದು ತಿಳಿದು ಬಂದಿದೆ. ಮೊದಲ ಬಾರಿ ಕೊವಿಡ್-19 ಸೋಂಕಿನಿಂದ ರಕ್ಷಿಸಿಕೊಂಡ ಚೀನಾ, ಇದೀಗ ಮತ್ತೊಮ್ಮೆ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿದೆ. ಚೀನಾದಲ್ಲಿ ಕೊವಿಡ್-19 ಪರಿಸ್ಥಿತಿ ಮತ್ತು ನಿಯಂತ್ರಣಕ್ಕೆ ಸರ್ಕಾರ ತೆಗೆದುಕೊಂಡಿರುವ ಶಿಸ್ತು ಕ್ರಮಗಳನ್ನು ಒಂದೊಂದಾಗಿ ಓದಿ.

ಚೀನಾದಲ್ಲಿ ಕೊರೊನಾವೈರಸ್ ಮತ್ತು ಕಟ್ಟುನಿಟ್ಟಿನ ಕ್ರಮಗಳು:

* ಕೊರೊನಾವೈರಸ್ ಸೋಂಕಿತ ಪ್ರಕರಣಗಳು ವರದಿಯಾದ ಪ್ರದೇಶದಿಂದ ಯಾವುದೇ ಪ್ರಯಾಣಿಕರು, ವಾಹನಗಳು, ವಿಮಾನ ಮತ್ತು ರೈಲುಗಳು ರಾಜಧಾನಿ ಬೀಜಿಂಗ್ ಅನ್ನು ಪ್ರವೇಶಿಸುವಂತಿಲ್ಲ ಎಂದು ಮುನಿಸಿಪಲ್ ಗೌವರ್ನಮೆಂಟ್ ತಿಳಿಸಿದೆ.

* ಚೀನಾದ ಸಾಂಕ್ರಾಮಿಕ ರೋಗ ನಿಯಂತ್ರಣ ಕೇಂದ್ರವು ನಂಜಿಂಗ್ ಪ್ರದೇಶದಲ್ಲಿ ಪತ್ತೆಯಾದ ಕೊರೊನಾವೈರಸ್ ಸೋಂಕಿತ ಪ್ರಕರಣದ ಮಾದರಿಯಲ್ಲೇ ಸೋಂಕು ಹರಡುವಿಕೆಯ ಸರಪಳಿ ಬೆಳೆಯುತ್ತಿದೆ ಎಂಬುದನ್ನು ಹೋಲಿಕೆ ಮಾಡಿ ನೋಡಿದೆ.

* ಕೊರೊನಾವೈರಸ್ ಸೋಂಕಿನ ಅಲೆಯು ಈ ಬಾರಿ ನಂಜಿಂಗ್ಸ್ ಲುಕೋವಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಬ್ಬಂದಿಯಬ್ಬರಿಗೆ ಮೊದಲು ಸೋಂಕು ಪತ್ತೆಯಾಗಿತ್ತು. ನಂತರದಲ್ಲಿ ಕೆಲವು ಸ್ಥಳೀಯರಿಗೆ ಮತ್ತು ದಕ್ಷಿಣ ಚೀನಾದ ಹೆನಾನ್ ಪ್ರದೇಶದಲ್ಲಿ ಝಾಂಗ್ ಝಿಯಾಜಿ ಪ್ರದೇಶಕ್ಕೆ ಪ್ರಯಾಣಿಸಿದ ಹಲವರಿಗೆ ಸೋಂಕು ತಗುಲಿರುವುದು ಖಾತ್ರಿಯಾಗಿದೆ.

* ಶನಿವಾರವೊಂದೇ ದಿನ ದಕ್ಷಿಣ ಚೀನಾದ ಹೆನಾನ್ ಪ್ರದೇಶದಲ್ಲಿ ಝಾಂಗ್ ಝಿಯಾಜಿ ಪ್ರವಾಸಿ ತಾಣದಲ್ಲಿ 11,000ಕ್ಕೂ ಹೆಚ್ಚು ಮಂದಿ ಪ್ರವಾಸಿಗರು ಸೇರಿದ್ದರು. ಕೊವಿಡ್-19 ಸೋಂಕು ಪತ್ತೆಯಾಗಿರುವ ಹಿನ್ನೆಲೆ ಎಲ್ಲ ಪ್ರವಾಸಿ ತಾಣಗಳನ್ನು ಬಂದ್ ಮಾಡಲಾಗಿದೆ. ಅಲ್ಲದೇ ಪ್ರತಿಯೊಬ್ಬ ಪ್ರವಾಸಿಗರು ಆ ಸ್ಥಳವನ್ನು ತೊರೆಯುವುದಕ್ಕೂ ಮೊದಲು ಕೊವಿಡ್-19 ಸೋಂಕು ತಪಾಸಣೆಗೆ ಒಳಗಾಗುವಂತೆ ಸೂಚನೆ ನೀಡಲಾಗಿದೆ.

* ಝಾಂಗ್ ಝಿಯಾಜಿ ಪ್ರದೇಶದಲ್ಲಿ ಇತ್ತೀಚಿಗೆ ಸ್ಫೋಟಗೊಂಡ ಕೊರೊನಾವೈರಸ್ ಸೋಂಕಿನ ಬಗ್ಗೆ ಚೀನಾದ ಹಿರಿಯ ಶ್ವಾಸಕೋಶಶಾಸ್ತ್ರಜ್ಞ ಝೊಂಗ್ ನಾಂಶಾನ್ ಆತಂಕ ವ್ಯಕ್ತಪಡಿಸಿದ್ದಾರೆ. ದೊಡ್ಡ ನಗರ ಎನಿಸಿರುವ ನಾಂಜಿಂಗ್ ನಗರದಲ್ಲಿ ಕೊವಿಡ್-19 ನಿಯಂತ್ರಣವನ್ನು ಉತ್ತಮವಾಗಿ ನಿರ್ವಹಿಸಲಾಗಿದೆ, ಆದರೆ ಝಾಂಗ್ ಝಿಯಾಜಿ ಪ್ರದೇಶದಿಂದ ಸಾಂಕ್ರಾಮಿಕ ಪಿಡುಗು ಬೇರೆ ಬೇರೆ ನಗರಗಳಿಗೆ ಮತ್ತು ಸಣ್ಣ ಸಣ್ಣ ಪ್ರದೇಶಗಳಿಗೂ ವ್ಯಾಪಿಸುತ್ತಿದೆ ಎಂದಿದ್ದಾರೆ.

* ದೇಶದಲ್ಲಿ ಪತ್ತೆಯಾದ ಹಲವು ಕೊರೊನಾವೈರಸ್ ಸೋಂಕಿನ ಪ್ರಕರಣಗಳಿಗೆ ಝಾಂಗ್ ಝಿಯಾಜಿಯ ಮೀಲಿ ಕ್ಸಿಯಾಂಗ್ಸಿ ಗ್ರ್ಯಾಂಡ್ ಥಿಯೇಟರ್ ನಂಟು ಇರುವುದು ಸ್ಪಷ್ಟವಾಗಿದೆ. ಈ ಥಿಯೇಟರ್ ನಲ್ಲಿ ನಡೆದ ಒಂದೇ ಒಂದು ಪ್ರದರ್ಶನದಲ್ಲಿ 2000ಕ್ಕೂ ಹೆಚ್ಚು ಮಂದಿ ಪ್ರೇಕ್ಷಕರು ಭಾಗವಹಿಸಿದ್ದರು ಎಂದು ತಿಳಿದು ಬಂದಿದೆ. "ಒಂದೇ ಒಂದು ಪ್ರದರ್ಶನದಲ್ಲಿ 2000ಕ್ಕೂ ಹೆಚ್ಚು ಪ್ರೇಕ್ಷಕರು ಭಾಗವಹಿಸಿದ್ದಾರೆ ಎಂದರೆ ಅಲ್ಲಿ ಪರಸ್ಪರ ಸಾಮಾಜಿಕ ಅಂತರ ಕಳೆದು ಹೋಗಿರುತ್ತದೆ. ಇಂಥ ಪರಿಸ್ಥಿತಿಯಲ್ಲಿ ಪ್ರಾಥಮಿಕ ಸಂಪರ್ಕ ಹೊಂದಿರುವವರು ಮತ್ತು ಅವರ ಕುಟುಂಬ ಸದಸ್ಯರನ್ನು ಪತ್ತೆ ಮಾಡಬೇಕಿದೆ", ಎಂದು ಚೀನಾದ ಹಿರಿಯ ಶ್ವಾಸಕೋಶಶಾಸ್ತ್ರಜ್ಞ ಝೊಂಗ್ ನಾಂಶಾನ್ ಸಲಹೆ ನೀಡಿದ್ದಾರೆ.

* ನಾಂಜಿಂಗ್ ಮೂರು ಸುತ್ತುಗಳಲ್ಲಿ ನಡೆಸಿದ ನ್ಯೂಕ್ಸಿಕ್ ಆಸಿಡ್ ಟೆಸ್ಟಿಂಗ್ ವೇಳೆ 204 ಕೊರೊನಾವೈರಸ್ ಪ್ರಕರಣಗಳು ಪತ್ತೆಯಾಗಿವೆ. ಬಹುಶಃ ಈ ಎಲ್ಲ ಪ್ರಕರಣಗಳು ಲುಕಾವೋ ವಿಮಾನ ನಿಲ್ದಾಣ ಮತ್ತು ಸುತ್ತಮುತ್ತಲಿನ ಪ್ರದೇಶಗಳೊಂದಿಗೆ ನಂಟು ಹೊಂದಿವೆ. ರಷ್ಯಾದಿಂದ ಆಗಮಿಸಿದ ವಿಮಾನದಲ್ಲಿ ಈ ಸೋಂಕಿನ ಮೊದಲ ಪ್ರಕರಣ ವರದಿಯಾಗಿದೆ ಎಂದು ನಾಂಜಿಂಗ್ ಪ್ರಾಧಿಕಾರ ಸ್ಪಷ್ಟಪಡಿಸಿದೆ.

* ಮುಂದಿನ 10 ದಿನಗಳಲ್ಲಿ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುವ ಸಿಬ್ಬಂದಿಯ ವಸತಿ ಸೇರಿದಂತೆ ಸಂಪೂರ್ಣವಾಗಿ ಸೋಂಕುರಹಿತಗೊಳಿಸಲಾಗುವುದು ಎಂದು ಬಂದ್ ಆಗಿರುವ ಲುಕಾವೋ ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

* ನಾಂಜಿಂಗ್ ಮತ್ತು ಝಾಂಗ್ ಝಿಯಾಜಿ ಪ್ರದೇಶಗಳ ಹೊರತಾಗಿ ಇತರೆ ನಗರಗಳಲ್ಲೂ ಕೊರೊನಾವೈರಸ್ ಸೋಂಕು ನಿಯಂತ್ರಿಸುವುದಕ್ಕೆ ಅಗತ್ಯ ಕ್ರಮಗಳನ್ನು ಜಾರಿಗೊಳಿಸಲಾಗಿದೆ.

* ಚೀನಾದಲ್ಲಿ ಭಾನುವಾರದ ಅಂಕಿ-ಅಂಶಗಳ ಪ್ರಕಾರ, 93,005 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಈ ಪೈಕಿ 1022 ಸಕ್ರಿಯ ಪ್ರಕರಣಗಳಿವೆ. ಈವರೆಗೂ 4636 ಜನರು ಕೊವಿಡ್-19 ಸೋಂಕಿನಿಂದ ಪ್ರಾಣ ಬಿಟ್ಟಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ದೇಶದಲ್ಲೂ ಭಿನ್ನವಾಗಿಲ್ಲ ಕೊವಿಡ್-19 ಸ್ಥಿತಿಗತಿಗಳು

ದೇಶದಲ್ಲೂ ಭಿನ್ನವಾಗಿಲ್ಲ ಕೊವಿಡ್-19 ಸ್ಥಿತಿಗತಿಗಳು

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆಗೆ ತತ್ತರಿಸಿದ ಭಾರತದಲ್ಲಿ ಎರಡನೇ ಅಲೆ ಮುಗಿಯಿತೋ ಇಲ್ಲವೋ ಎನ್ನುವುದು ಸ್ಪಷ್ಟವಾಗುವುದರ ಮೊದಲೇ ಮೂರನೇ ಅಲೆಯ ಆತಂಕ ಸೃಷ್ಟಿಯಾಗಿದೆ. ಎರಡು ವಾರಗಳ ಹಿಂದೆ ದೇಶದಲ್ಲಿದ್ದ ಚಿತ್ರಣ ಈಗಿಲ್ಲ. ಪ್ರತಿನಿತ್ಯ ಸೋಂಕಿತ ಪ್ರಕರಣಗಳ ಸಂಖ್ಯೆ 40,000ದ ಗಡಿ ದಾಟುತ್ತಿದೆ. ಕಳೆದ ಒಂದೇ ದಿನ 42,982 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. 24 ಗಂಟೆಗಳಲ್ಲಿ 41,726 ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದು, ಇದೇ ಅವಧಿಯಲ್ಲಿ 533 ಜನರು ಮಹಾಮಾರಿಗೆ ಬಲಿಯಾಗಿದ್ದು, ಸಾವಿನ ಸಂಖ್ಯೆ 4,26,290ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. ಗುರುವಾರದ ಅಂಕಿ-ಅಂಶಗಳ ಪ್ರಕಾರ, ಭಾರತದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 3,18,12,114ಕ್ಕೆ ಏರಿಕೆಯಾಗಿದೆ. ಈವರೆಗೂ 3,09,74,748 ಸೋಂಕಿತರು ಗುಣಮುಖರಾಗಿದ್ದಾರೆ. ಇದರ ಹೊರತಾಗಿ 4,11,076 ಸಕ್ರಿಯ ಪ್ರಕರಣಗಳಿವೆ.

ಕೊವಿಡ್-19 ನಿಯಂತ್ರಿಸಲು ಲಸಿಕೆಯ ಮೊರೆ

ಕೊವಿಡ್-19 ನಿಯಂತ್ರಿಸಲು ಲಸಿಕೆಯ ಮೊರೆ

ದೇಶದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನಿಂದ ಸಾರ್ವಜನಿಕರಿಗೆ ರಕ್ಷಣ ಒದಗಿಸುವುದಕ್ಕೆ ಸರ್ಕಾರಗಳು ಲಸಿಕೆಯ ಮೊರೆ ಹೋಗಿವೆ. 2021ರ ಡಿಸೆಂಬರ್ ವೇಳೆಗೆ ದೇಶದ 94 ಕೋಟಿ ಅರ್ಹ ಫಲಾನುಭವಿಗಳಿಗೆ ಲಸಿಕೆ ನೀಡುವುದಕ್ಕೆ ಸರ್ಕಾರವು ಯೋಜನೆ ರೂಪಿಸಿಕೊಂಡಿದೆ. ಈ ನಿಟ್ಟಿನಲ್ಲಿ ಕೊವಿಡ್-19 ಲಸಿಕೆ ವಿತರಣೆ ಅಭಿಯಾನ ಆರಂಭಿಸಿ 201 ದಿನಗಳಲ್ಲಿ 48.93 ಕೋಟಿಗೂ ಅಧಿಕ ಜನರಿಗೆ ಲಸಿಕೆ ವಿತರಿಸಲಾಗಿದೆ. ಕಳೆದ 24 ಗಂಟೆಗಳಲ್ಲಿ 33,50,612 ಫಲಾನುಭವಿಗಳಿಗೆ ಕೊರೊನಾವೈರಸ್ ಲಸಿಕೆ ನೀಡಲಾಗಿದೆ. ದೇಶದಲ್ಲಿ ಈವರೆಗೂ 48,93,42,295 ಫಲಾನುಭವಿಗಳಿಗೆ ಕೊವಿಡ್-19 ಲಸಿಕೆಯನ್ನು ವಿತರಿಸಲಾಗಿದೆ. ಕೊವಿಡ್-19 ಲಸಿಕೆ ಕೊರತೆಯ ಬಗ್ಗೆ ಕೂಗು ಕೇಳಿ ಬಂದಿರುವ ಹಿನ್ನೆಲೆ ಕೇಂದ್ರ ಸರ್ಕಾರವೇ ಲಸಿಕೆ ಪೂರೈಕೆ, ವಿತರಣೆ ಮತ್ತು ಲಭ್ಯತೆ ಕುರಿತು ಮಾಹಿತಿಯನ್ನು ಬಹಿರಂಗ ಪಡಿಸುತ್ತದೆ.

ಭಾರತದಲ್ಲಿ ಕೊರೊನಾವೈರಸ್ ಲಸಿಕೆಯ ಲಭ್ಯತೆ:

2021ರ ಆಗಸ್ಟ್ 05ರ ಅಂಕಿ-ಅಂಶಗಳ ಪ್ರಕಾರ, 51,01,88,510 ಡೋಸ್ ಕೊರೊನಾವೈರಸ್ ಲಸಿಕೆ ಪೂರೈಕೆ ಮಾಡಲಾಗಿದೆ. ಈ ಪೈಕಿ ಎಷ್ಟು ಡೋಸ್ ಲಸಿಕೆ ಬಳಕೆಯಾಗಿದೆ, ಇನ್ನೆಷ್ಟು ಲಸಿಕೆ ಬರಬೇಕಿದೆ. ಬಾಕಿ ಉಳಿದಿರುವ ಲಸಿಕೆ ಪ್ರಮಾಣ ಎಷ್ಟು ಎಂಬುದನ್ನು ಪಟ್ಟಿಯಲ್ಲಿ ನೋಡಿರಿ.

ಕೊರೊನಾವೈರಸ್ ಲಸಿಕೆ ಪೂರೈಕೆ ಮತ್ತು ಲಭ್ಯತೆ ಪಟ್ಟಿ:

* ಪೂರೈಕೆಯಾದ ಲಸಿಕೆ ಪ್ರಮಾಣ - 51,01,88,510

* ಸದ್ಯ ಬರಬೇಕಾಗಿರುವ ಲಸಿಕೆ ಪ್ರಮಾಣ - 7,53,620

* ಬಳಕೆ ಆಗಿರುವ ಲಸಿಕೆ ಪ್ರಮಾಣ - 48,60,15,232

* ಕೊವಿಡ್-19 ಲಸಿಕೆಯ ಲಭ್ಯತೆ - 2,69,06,624

English summary
Delta Variant in China: Here we explain How China and Other Countries Prepared to Tackle the spread of covid delta variant. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X