ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಸ್ಟ್ರೇಲಿಯಾದಲ್ಲಿ ಡೆಲ್ಟಾ ರೂಪಾಂತರದಿಂದ ಸಾಲು ಸಾಲು ಲಾಕ್‌ಡೌನ್!

|
Google Oneindia Kannada News

ಸಿಡ್ನಿ, ಆಗಸ್ಟ್ 11: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಜಗತ್ತಿನ ಬಹುಪಾಲು ರಾಷ್ಟ್ರಗಳನ್ನು ದಿಗ್ಬಂಧನದಲ್ಲಿ ಇಟ್ಟಿದೆ. ಡೆಲ್ಟಾ ರೂಪಾಂತರ ವೈರಸ್ ಇದೀಗ ಆಸ್ಟ್ರೇಲಿಯಾದಲ್ಲಿ ಮತ್ತೊಂದು ಸುತ್ತಿನ ಲಾಕ್‌ಡೌನ್‌ ಭೀತಿಯನ್ನು ಸೃಷ್ಟಿಸಿದೆ.

ರಾಜಧಾನಿ ಸಿಡ್ನಿಯಿಂದ ಸೌತ್ ವೇಲ್ಸ್ ಪ್ರದೇಶಕ್ಕೆ ಡೆಲ್ಟಾ ರೂಪಾಂತರ ವೈರಸ್ ವ್ಯಾಪಿಸಿದ್ದು, ಬುಧವಾರ ಒಂದೇ ದಿನ 344 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಇದರಿಂದ ಆಸ್ಟ್ರೇಲಿಯಾದ ಮತ್ತೊಂದು ನಗರದಲ್ಲಿ ಲಾಕ್‌ಡೌನ್‌ ಜಾರಿಗೊಳಿಸಲಾಗಿದೆ.

ಡೆಲ್ಟಾ ಪ್ರಕರಣ ಹೆಚ್ಚಳ:ಸಿಡ್ನಿಯಲ್ಲಿ 1 ತಿಂಗಳ ಕಾಲ ಲಾಕ್‌ಡೌನ್ ವಿಸ್ತರಣೆಡೆಲ್ಟಾ ಪ್ರಕರಣ ಹೆಚ್ಚಳ:ಸಿಡ್ನಿಯಲ್ಲಿ 1 ತಿಂಗಳ ಕಾಲ ಲಾಕ್‌ಡೌನ್ ವಿಸ್ತರಣೆ

ಸಿಡ್ನಿಯಿಂದ 240 ಮೈಲಿ ದೂರದ ಕನಿಷ್ಠ 50,000 ಜನಸಂಖ್ಯೆಯನ್ನು ಹೊಂದಿರುವ ದುಬ್ಬೊ ನಗರದಲ್ಲಿ ಇತ್ತೀಚಿಗೆ ಎರಡು ಕೊವಿಡ್-19 ಸೋಂಕಿತ ಪ್ರಕರಣಗಳು ವರದಿಯಾಗಿದೆ. ಸೋಂಕಿತರಲ್ಲಿ ಡೆಲ್ಟಾ ರೂಪಾಂತರ ವೈರಸ್ ಪತ್ತೆಯಾಗಿದ್ದು, ಸಾರ್ವಜನಿಕರು ಅನಗತ್ಯವಾಗಿ ಮನೆಗಳಿಂದ ಹೊರ ಬಾರದಂತೆ ಆದೇಶಹೊರಡಿಸಲಾಗಿದೆ. ಇನ್ನೊಂದು ಕಡೆಯಲ್ಲಿ ಆಸ್ಟ್ರೇಲಿಯಾದ ಎರಡನೇ ಅತಿದೊಡ್ಡ ನಗರ ಎನಿಸಿರುವ ಮೆಲ್ಬರ್ನ್ ಸಿಟಿಯಲ್ಲಿ ಮತ್ತೊಂದು ವಾರ ಲಾಕ್‌ಡೌನ್‌ ವಿಸ್ತರಿಸಲಾಗಿದೆ. ಕಾಂಗರೂ ನೆಲದಲ್ಲಿ ಕೊರೊನಾವೈರಸ್ ಸೃಷ್ಟಿಸಿದ ಪರಿಸ್ಥಿತಿ ಹೇಗಿದೆ ಎಂಬುದರ ಕುರಿತು ವಿಸ್ತೃತ ವರದಿಗಾಗಿ ಮುಂದೆ ಓದಿ.

ಡೆಲ್ಟಾ ರೂಪಾಂತರ ವೈರಸ್ ದಾಳಿಗೆ ಬೆದರಿದ ದುಬ್ಬೊ

ಡೆಲ್ಟಾ ರೂಪಾಂತರ ವೈರಸ್ ದಾಳಿಗೆ ಬೆದರಿದ ದುಬ್ಬೊ

ಕಳೆದ ಎರಡು ದಿನಗಳಿಂದ ದುಬ್ಬೊ ನಗರದಲ್ಲಿ ಅತಿಹೆಚ್ಚು ಕೊವಿಡ್-19 ರೂಪಾಂತರ ವೈರಸ್ ಪ್ರಕರಣಗಳು ವರದಿಯಾಗುತ್ತಿದೆ. ಈ ಸೋಂಕಿತ ಪ್ರಕರಣಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಅಪಾಯವಿದೆ ಎಂದು ಬೆರೆಜಿಕ್ಲಿಯಾನ್ ಹೇಳಿದ್ದಾರೆ. ಸೌತ್ ವೇಲ್ಸ್ ರಾಜ್ಯದಲ್ಲಿ 356 ಡೆಲ್ಟಾ ರೂಪಾಂತರ ವೈರಸ್ ಪ್ರಕರಣಗಳು ಪತ್ತೆಯಾಗಿರುವುದರ ನಡುವೆ ಇಬ್ಬರು ಮಹಾಮಾರಿಗೆ ಬಲಿಯಾಗಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ 17 ರೂಪಾಂತರ ವೈರಸ್ ಪ್ರಕರಣಗಳು ವರದಿಯಾಗಿವೆ.

ರಾಷ್ಟ್ರ ರಾಜಧಾನಿ ಜೊತೆ ದುಬ್ಬೊ ನಂಟು

ರಾಷ್ಟ್ರ ರಾಜಧಾನಿ ಜೊತೆ ದುಬ್ಬೊ ನಂಟು

ಆಸ್ಟ್ರೇಲಿಯಾದ ಅತಿದೊಡ್ಡ ನಗರ ಎನಿಸಿರುವ ಸಿಡ್ನಿಯಲ್ಲಿ 60 ಲಕ್ಷಕ್ಕೂ ಅಧಿಕ ಜನರು ವಾಸವಿದ್ದಾರೆ. ಇಂಥ ನಗರವೇ ಆರು ವಾರಕ್ಕಿಂತ ಹೆಚ್ಚು ದಿನಗಳ ಕಾಲ ಗೃಹ ದಿಗ್ಬಂಧನವನ್ನು ಯಶಸ್ವಿಯಾಗಿ ಜಾರಿಗೊಳಿಸುವಲ್ಲಿ ಮತ್ತು ಕೊವಿಡ್-19 ಹರಡುವಿಕೆ ನಿಯಂತ್ರಿಸುವಲ್ಲಿ ವಿಫಲವಾಗಿದೆ. ಕೆಳದ ವಾರವಷ್ಟೇ ನ್ಯೂ-ಕ್ಯಾಸ್ಟಲ್, ಬೈರೊನ್ ಬೈ ಮತ್ತು ಟಾಮ್ ವರ್ತ್ ನಗರಗಳಲ್ಲೂ ಡೆಲ್ಟಾ ರೂಪಾಂತರ ವೈರಸ್ ಪ್ರಕರಣಗಳು ವರದಿಯಾದ ಹಿನ್ನೆಲೆ ಲಾಕ್ ಡೌನ್ ಜಾರಿಗೊಳಿಸಲಾಯಿತು.

ಮೆಲ್ಬರ್ನ್ ನಗರದಲ್ಲಿ ಬುಧುವಾರವೊಂದೇ ದಿನ 20 ಕೊವಿಡ್-19 ಪ್ರಕರಣಗಳು ವರದಿಯಾಗಿದೆ. ಇದರ ಬೆನ್ನಲ್ಲೇ ಗುರುವಾರದಿಂದ ಮುಂದಿನ ಒಂದು ವಾರಗಳವರೆಗೂ ಲಾಕ್‌ಡೌನ್‌ ವಿಸ್ತರಿಸಲಾಗಿದ್ದು, ಸಾರ್ವಜನಿಕರು ಅನಗತ್ಯವಾಗಿ ಮನೆಗಳಿಂದ ಹೊರಗೆ ಸಂಚರಿಸದಂತೆ ಎಚ್ಚರಿಕೆ ನೀಡಲಾಗಿದೆ. ಸಾಂಕ್ರಾಮಿಕ ಪಿಡುಗು ಆರಂಭವದಾಗಿನಿಂದ ಈವರೆಗೂ ಮೆಲ್ಬರ್ನ್ ನಗರದಲ್ಲಿ ಆರು ಬಾರಿ ಲಾಕ್‌ಡೌನ್‌ ಘೋಷಿಸಲಾಗಿದೆ.

ಕಾಂಗರೂ ನೆಲದಲ್ಲಿ ಭಯ ಹುಟ್ಟಿಸಿದ ಕೊರೊನಾವೈರಸ್

ಕಾಂಗರೂ ನೆಲದಲ್ಲಿ ಭಯ ಹುಟ್ಟಿಸಿದ ಕೊರೊನಾವೈರಸ್

ಆಸ್ಟ್ರೇಲಿಯಾದ ಎರಡು ಪ್ರಮುಖ ನಗರದಲ್ಲಿ ಈಗಾಗಲೇ ಲಾಕ್‌ಡೌನ್‌ ಜಾರಿಗೊಳಿಸಲಾಗಿದೆ. ನಗರಗಳಿಂದ ಗ್ರಾಮೀಣ ಪ್ರದೇಶಗಳಲ್ಲೂ ಕೊರೊನಾವೈರಸ್ ಮತ್ತು ರೂಪಾಂತರ ತಳಿಯ ಹರಡುವಿಕೆಯ ಭೀತಿ ಹೆಚ್ಚಾಗುತ್ತಿದೆ. ಕೊವಿಡ್-19 ಸೋಂಕಿತ ಪ್ರಕರಣಗಳ ಏರಿಕೆ ಮತ್ತು ಲಾಕ್‌ಡೌನ್‌ ಘೋಷಣೆ ದೇಶದ ಆರ್ಥಿಕತೆಗೂ ಪೆಟ್ಟು ನೀಡಿದೆ. ಒಟ್ಟು ದೇಶೀಯ ಉತ್ಪಾದನೆ ಪ್ರಮಾಣ ಇಳಿಮುಖವಾಗಿದೆ.

ಡೆಲ್ಟಾ ರೂಪಾಂತರ ತಳಿಯ ಅಪಾಯ ಹೆಚ್ಚಾಗುವುದರ ಮಧ್ಯೆ ದೇಶದಲ್ಲಿ ಶಿಸ್ತುಬದ್ಧ ಮತ್ತು ಕಟ್ಟುನಿಟ್ಟಿನ ಗಡಿ ನಿಯಂತ್ರಣ ನಿಯಮವನ್ನು ಜಾರಿಗೊಳಿಸಲಾಗಿದೆ. ಗಡಿ ಪ್ರದೇಶಗಳಲ್ಲಿ ಸೋಂಕಿನ ತಪಾಸಣೆ ಮತ್ತು ಸಾಮಾಜಿಕ ಅಂತರದ ಮೇಲೆ ಹೆಚ್ಚಿನ ಲಕ್ಷ್ಯ ವಹಿಸಲಾಗುತ್ತಿದೆ.

ಆಸ್ಟ್ರೇಲಿಯಾದಲ್ಲೂ ಲಸಿಕೆ ವಿತರಣೆ ವಿಳಂಬ

ಆಸ್ಟ್ರೇಲಿಯಾದಲ್ಲೂ ಲಸಿಕೆ ವಿತರಣೆ ವಿಳಂಬ

ಕೊವಿಡ್-19 ಲಸಿಕೆ ವಿತರಣೆಯಲ್ಲಿನ ವಿಳಂಬದಿಂದ ಪ್ರಧಾನಮಂತ್ರಿ ಸ್ಕಾಟ್ ಮಾರಿಸನ್ ಮುಂದಿನ ವರ್ಷದ ವೇಳೆಗೆ ಅಂತಾರಾಷ್ಟ್ರೀಯ ಗಡಿಗಳಲ್ಲಿ ಸಂಚಾರ ಪುನಾರಂಭಿಸುವ ಪ್ರಯತ್ನದಲ್ಲಿದ್ದಾರೆ. ಬ್ಲೂಮ್ ಬರ್ಕ್ ಲಸಿಕೆ ಟ್ರ್ಯಾಕರ್ ಪ್ರಕಾರ, ದೇಶದಲ್ಲಿ ಕೇವಲ ಶೇ.18ರಷ್ಟು ಜನರು ಮಾತ್ರ ಎರಡು ಡೋಸ್ ಲಸಿಕೆಯನ್ನು ನೀಡಲಾಗಿದೆ. ಸಿಡ್ನಿ ಮತ್ತು ಬೆರೆಜಿಕ್ಲಿಯಾನ್ ನಗರದಲ್ಲಿ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಲಾಗಿದ್ದು, ಲಸಿಕೆ ವಿತರಣೆ ವೇಗ ಹೆಚ್ಚಿಸುವುದಕ್ಕೆ ಸಹಕಾರಿಯಾಗಲಿದೆ. ಈ ತಿಂಗಳಾಂತ್ಯದ ವೇಳೆಗೆ ವಯಸ್ಕರಿಗೆ ಲಸಿಕೆ ನೀಡುವುದಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಎರಡು ನಗರಗಳಲ್ಲಿ ಶೇ.70ರಷ್ಟು ವಯಸ್ಕರಿಗೆ ಕೊವಿಡ್-19 ಲಸಿಕೆ ನೀಡುವ ಗುರಿಯನ್ನು ಹೊಂದಿರುವುದರ ಜೊತೆಗೆ ಸೋಂಕಿತ ಪ್ರಕರಣಗಳ ಸಂಖ್ಯೆಯನ್ನು ನಿಯಂತ್ರಿಸುವ ಗುರಿಯನ್ನು ಹೊಂದಲಾಗಿದೆ. ದೇಶದಲ್ಲಿ ಶೇ.70ರಷ್ಟು ಪ್ರಜೆಗಳಿಗೆ ಲಸಿಕೆ ವಿತರಿಸುವಲ್ಲಿ ನಾವೊಂದು ವೇಳೆ ವಿಫಲರಾದರೆ ಮುಂದಿನ ಸಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಿನಲ್ಲಿ ಅತಿಹೆಚ್ಚು ಅಪಾಯವನ್ನು ಎದುರಿಸಬೇಕಾಗುತ್ತದೆ ಎಂದು ಹೇಳಲಾಗುತ್ತಿದೆ.

English summary
Delta's Spread From Sydney; Australia Another city Also imposed Lockdown.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X