ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

5 ದೇಶಗಳಲ್ಲಿ ತೀವ್ರಗೊಳ್ಳುತ್ತಿದೆ ಡೆಲ್ಟಾ ಪ್ಲಸ್ ವೈರಸ್

|
Google Oneindia Kannada News

ಅಮೆರಿಕದಲ್ಲಿ ಕೊರೊನಾವೈರಸ್ ಪ್ರಕರಣಗಳು ಹಾಗೂ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ಕಳೆದ ಆರು ತಿಂಗಳಲ್ಲಿ ಹೆಚ್ಚಾಗಿದೆ. ಲಸಿಕೆ ವಿತರಣೆ ಪ್ರಮಾಣ ಕಡಿಮೆಯಾಗುತ್ತಿದ್ದು, ಡೆಲ್ಟಾ ರೂಪಾಂತರಿ ಪ್ರಕರಣ ಹೆಚ್ಚಾಗುತ್ತಿದೆ.

ಅಮೆರಿಕದ ಸ್ಯಾನ್ ಡಿಯೋಗೊದಲ್ಲಿರುವ ಲಾ ಜೊಲ್ಲಾ ಇನ್‌ಸ್ಟಿಟ್ಯೂಟ್ ಫಾರ್ ಇಮ್ಯುನಾಲಜಿ ನೀಡಿರುವ ಮಾಹಿತಿ ಪ್ರಕಾರ ಚೀನಾದಲ್ಲಿ ಡೆಲ್ಟಾ ಪ್ಲಸ್ ಸೋಂಕಿಗೆ ಒಳಗಾದ ಜನರು ತಮ್ಮ ಮೂಗುಗಳಲ್ಲಿ 1260 ಪಟ್ಟು ಹೆಚ್ಚು ವೈರಸ್‌ಗಳನ್ನು ಹೊಂದಿರುವುದು ತಿಳಿದುಬಂದಿದೆ.

ಡೆಲ್ಟಾ ಉಲ್ಬಣ: ಅಮೆರಿಕದಲ್ಲಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯಲ್ಲಿ ಏರಿಕೆಡೆಲ್ಟಾ ಉಲ್ಬಣ: ಅಮೆರಿಕದಲ್ಲಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯಲ್ಲಿ ಏರಿಕೆ

ಸಾಮಾನ್ಯವಾಗಿ ಒರಿಜಿನಲ್ ಕೊರೊನಾ ಸೋಂಕು ತಗುಲಿ ಅದರ ಲಕ್ಷಣಗಳು ಕಾಣಿಸಿಕೊಳ್ಳಲು ಕನಿಷ್ಠ ಒಂದು ವಾರ ಬೇಕು ಆದರೆ ಡೆಲ್ಟಾ ಪ್ಲಸ್ ತಗುಲಿ ಒಂದೆರೆಡು ದಿನಗಳಲ್ಲೇ ಸೋಂಕಿನ ತೀವ್ರತೆ, ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಎಂಬ ಮಾಹಿತಿ ಲಭ್ಯವಾಗಿದೆ.

ಡೆಲ್ಟಾ ಪ್ಲಸ್ 35 ದೇಶಗಳಿಗೆ ದಾಳಿ ಇಟ್ಟಿದ್ದು, ಅದರ ಪೈಕಿ 5 ದೇಶಗಳಲ್ಲಿ ಅತಿಯಾಗಿ ಹರಡುತ್ತಿದೆ. ಕಳೆದ ಮೂರು ದಿನಗಳಿಂದ ಅಮೆರಿಕದಲ್ಲಿ ಸರಾಸರಿ ಒಂದು ಲಕ್ಷ ಕೋವಿಡ್ ಪ್ರಕರಣಗಳು ವರದಿಯಾಗುತ್ತಿವೆ. ಇದರೊಂದಿಗೆ ಹೊಸ ಪ್ರಕರಣಗಳ ಪ್ರಮಾಣದಲ್ಲಿ ಶೇ.35ರಷ್ಟು ಏರಿಕೆಯಾಗಿದೆ. ಲೂಯಿಸಿಯಾನ, ಫ್ಲೋರಿಡಾ, ಅರ್ಕಾನ್ಸಾಸ್‌ಗಳಲ್ಲಿ ಅತಿ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ.

ಕೊರೊನಾ ವೈರಾಣುವಿನ ಹೊಸ ರೂಪಾಂತರದ ವಿರುದ್ಧ ಹೋರಾಟಕ್ಕೆ ಭಾರತ ಸಜ್ಜಾಗುತ್ತಿದೆ. ಯಾವುದೇ ಕಾರಣಕ್ಕೂ ಜನರು ಇನ್ನಷ್ಟು ದಿನ ಗುಂಪುಗೂಡದೆ ಕಾರ್ಯನಿರ್ವಹಿಸಬೇಕು. ಕೊರೊನಾ ವೈರಸ್‌ನ ನಿಯಂತ್ರಣ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲೇ ಬೇಕು.

ಪ್ರದೇಶಗಳನ್ನು ಕ್ಲಸ್ಟರ್‌ಗಳ ರೂಪದಲ್ಲಿ ವಿಂಗಡಿಸಿ ಜನರ ಚಟುವಟಿಕೆ ಮೇಲೆ ನಿಗಾ ವಹಿಸಬೇಕು. ಪರೀಕ್ಷೆಯ ಪ್ರಮಾಣ ಹೆಚ್ಚಾಗಬೇಕು. ಆದಷ್ಟು ಬೇಗ ಲಸಿಕಾ ಅಭಿಯಾನ ಪೂರ್ಣಗೊಳ್ಳಬೇಕಿದೆ.

ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರ ಪ್ರಕಾರ, ಭಾರತದಲ್ಲಿ ಲಭ್ಯವಿರುವ ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಎರಡೂ ಲಸಿಕೆಗಳೂ ಡೆಲ್ಟಾ ಪ್ಲಸ್‌ ವಿರುದ್ಧ ಪರಿಣಾಮಕಾರಿ. ಆದ್ರೆ ಎಷ್ಟರಮಟ್ಟಿಗೆ ಪರಿಣಾಮಕಾರಿ? ದೇಹದ ರೋಗ ನಿರೋಧಕ ಶಕ್ತಿಯನ್ನು ವೈರಸ್ ಭೇದಿಸುವಾಗ ತಡೆಯುತ್ತದೆಯೇ..? ಈ ಕುರಿತಾಗಿ ಇನ್ನಷ್ಟು ಅಧ್ಯಯನಗಳು ನಡೆಯಬೇಕಿದೆ.

 ಯಾವ್ಯಾವ ದೇಶಗಳಲ್ಲಿ ಡೆಲ್ಟಾ ರೂಪಾಂತರಿ ಇದೆ

ಯಾವ್ಯಾವ ದೇಶಗಳಲ್ಲಿ ಡೆಲ್ಟಾ ರೂಪಾಂತರಿ ಇದೆ

ಭಾರತ, ಅಮೆರಿಕ, ಚೀನಾ, ಆಸ್ಟ್ರೇಲಿಯಾ, ಫ್ರಾನ್ಸ್‌ನಲ್ಲಿ ಡೆಲ್ಟಾ ಪ್ಲಸ್ ಸೋಂಕಿನ ಪ್ರಮಾಣ ಹೆಚ್ಚಾಗಿದೆ. ಇಂಗ್ಲೆಂಡ್‌ನಲ್ಲಿ ಈ ವೈರಾಣು ಮೊದಲು ಪತ್ತೆಯಾಗಿದೆಯಾದ್ರೂ, ತಜ್ಞರ ಪ್ರಕಾರ ಈ ವೈರಾಣುವಿನ 6 ವಂಶವಾಹಿಗಳು ಜೂನ್ 7ರಂದೇ ಭಾರತದಲ್ಲಿ ಪತ್ತೆಯಾಗಿದೆ. ಆದ್ರೆ, ಭಾರತದ ಆರೋಗ್ಯ ಇಲಾಖೆ ಮೂಲಗಳ ಪ್ರಕಾರ, ಇಂಗ್ಲೆಂಡ್‌ನಿಂದ ಎಚ್ಚರಿಕೆ ಬಂದ ಬಳಿಕವಷ್ಟೇ ಭಾರತದಲ್ಲಿ ಮಾದರಿಗಳ ಪರೀಕ್ಷೆ ನಡೆಸಿ ವೈರಸ್ ಪತ್ತೆ ಹಚ್ಚಲಾಗಿದೆ. ಏಪ್ರಿಲ್ 5ರಂದು ಸಂಗ್ರಹಿಸಲಾಗಿದ್ದ ಮಾದರಿಯಲ್ಲಿ ಡೆಲ್ಟಾ ಪ್ಲಸ್ ವೈರಸ್ ಪತ್ತೆಯಾಗಿದೆ ಎಂದು ಭಾರತ ಸರ್ಕಾರದ ಆರೋಗ್ಯ ಇಲಾಖೆ ತಿಳಿಸಿದೆ.

ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, ಭಾರತದಲ್ಲಿ ಆರಂಭದಲ್ಲಿ 40 ಡೆಲ್ಟಾ ಪ್ಲಸ್ ಕೇಸ್‌ಗಳು ಪತ್ತೆಯಾದವು. ಮಹಾರಾಷ್ಟ್ರ, ಕೇರಳ, ಮಧ್ಯ ಪ್ರದೇಶಗಳಲ್ಲಿ ಡೆಲ್ಟಾ ಪ್ಲಸ್ ವೈರಾಣು ಮೊದಲಿಗೆ ಪತ್ತೆಯಾಗಿದೆ. ನಂತರದ ದಿನಗಳಲ್ಲಿ ಪಂಜಾಬ್, ತಮಿಳುನಾಡು, ಆಂಧ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಪತ್ತೆಯಾದವು.

ಭಾರತ ಮಾತ್ರವಲ್ಲ, ಅಮೆರಿಕ, ಇಂಗ್ಲೆಂಡ್, ಪೋರ್ಚುಗಲ್, ಸ್ವಿಟ್ಜರ್‌ಲೆಂಡ್, ಜಪಾನ್, ಪೋಲೆಂಡ್, ನೇಪಾಳ, ಚೀನಾ ಹಾಗೂ ರಷ್ಯಾದಲ್ಲೂ ಡೆಲ್ಟಾ ಪ್ಲಸ್‌ ಪತ್ತೆಯಾಗಿದೆ. ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣವೂ ಶೇ.40ರಷ್ಟು ಹೆಚ್ಚಾಗಿದೆ.

ಕಳೆದ ವಾರಕ್ಕೆ ಹೋಲಿಸಿದರೆ ಇದು ಶೇ.18ರಷ್ಟು ಹೆಚ್ಚಾಗಿದೆ. ಕೊರೊನಾ ವೈರಸ್ ಸೋಂಕಿನ ಡೆಲ್ಟಾ ಪ್ರಭೇದ ವೈರಸ್‌ ಕುರಿತು ಈವರೆಗೂ ತಿಳಿದಿರುವ ಲಕ್ಷಣಗಳಿಗಿಂತಲೂ ಹೆಚ್ಚು ಗಂಭೀರ ಕಾಯಿಲೆಗೆ ಕಾರಣವಾಗಬಹುದು ಮತ್ತು ಚಿಕನ್‌ಪಾಕ್ಸ್‌ನಂತೆ ಬಹಳ ಸುಲಭವಾಗಿ ಹರಡಬಹುದು ಎಂದು ಅಮೆರಿಕ ಆರೋಗ್ಯ ಪ್ರಾಧಿಕಾರದ ಆಂತರಿಕ ದಾಖಲೆಗಳನ್ನು ಉಲ್ಲೇಖಿಸಿ ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ.

ಕಾಯಿಲೆ ನಿಯಂತ್ರಣ ಮತ್ತು ತಡೆ ಕೇಂದ್ರ (ಸಿಡಿಸಿ) ನೀಡಿರುವ ದಾಖಲೆಗಳ ಪ್ರಕಾರ, ಸಂಪೂರ್ಣವಾಗಿ ಲಸಿಕೆ ಡೋಸ್ ಪಡೆದುಕೊಂಡಿರುವ ವ್ಯಕ್ತಿಗಳು, ಲಸಿಕೆ ಪಡೆದುಕೊಳ್ಳದ ಜನರಷ್ಟೇ ಪ್ರಮಾಣದಲ್ಲಿ ಡೆಲ್ಟಾ ಪ್ರಭೇದದ ವೈರಸ್ ಹರಡುತ್ತಾರೆ ಎಂದು ವರದಿ ತಿಳಿಸಿದೆ.

 ಡೆಲ್ಟಾ ಪ್ಲಸ್ ಎಷ್ಟು ಅಪಾಯಕಾರಿಯಾದ ರೂಪಾಂತರಿ

ಡೆಲ್ಟಾ ಪ್ಲಸ್ ಎಷ್ಟು ಅಪಾಯಕಾರಿಯಾದ ರೂಪಾಂತರಿ

ಅತಿ ವೇಗವಾಗಿ ಪ್ರಸರಣವಾಗಬಲ್ಲ ಶಕ್ತಿ ಇರುವ ಕಾರಣ, ಡೆಲ್ಟಾ ಪ್ಲಸ್ ವೈರಾಣುವನ್ನು ಆತಂಕಕಾರಿ ಎಂದೇ ಬಣ್ಣಿಸಲಾಗಿದೆ. ದೇಹದ ರೋಗ ನಿರೋಧಕ ಶಕ್ತಿಯನ್ನು ಕುಗ್ಗಿಸುವ ಈ ವೈರಾಣು, ಲಸಿಕೆಯ ಕ್ಷಮತೆಯನ್ನು ಕುಗ್ಗಿಸುವ ಸಾರಮರ್ಥ್ಯ ಹೊಂದಿರಬಹುದು ಎನ್ನಲಾಗ್ತಿದೆ.

ವಿಶ್ವ ಆರೋಗ್ಯ ಸಂಸ್ಥೆ ಕೂಡಾ ಈ ವೈರಾಣುವಿನ ಪ್ರಸರಣದ ಮೇಲೆ ನಿಗಾ ಇರಿಸಿದೆ. ಅಚ್ಚರಿಯ ವಿಷಯವೆಂದರೆ, ಈ ವೈರಾಣುವಿನ ವರ್ತನೆ ಸಾಮಾನ್ಯ ವೈರಾಣುವಿನಂತೆ ಕಂಡು ಬರ್ತಿಲ್ಲ. ಹೀಗಾಗಿ, ಸಾರ್ವಜನಿಕ ಆರೋಗ್ಯದ ಮೇಲೆ ಗಮನಾರ್ಹ ಪರಿಣಾಮ ಬೀರಬಹುದು ಎಂದೇ ಆತಂಕ ವ್ಯಕ್ತವಾಗಿದೆ.

 ಡೆಲ್ಟಾ ಪ್ಲಸ್ ಕುರಿತು ಮಾಹಿತಿ

ಡೆಲ್ಟಾ ಪ್ಲಸ್ ಕುರಿತು ಮಾಹಿತಿ

ಡೆಲ್ಟಾ ಎನ್ನಲಾದ ಕೊರೊನಾ ವೈರಸ್‌ಗೆ ವೈದ್ಯಕೀಯ ರಂಗದಲ್ಲಿ ಬಿ.1.617.2 ರೂಪಾಂತರ ಎಂದು ಹೆಸರು ಕೊಡಲಾಗಿದೆ. ಇದೀಗ ಈ ರೂಪಾಂತರ ಮತ್ತೊಮ್ಮೆ ರೂಪಾಂತರಗೊಂಡಿದೆ. ಹೊಸ ರೂಪಾಂತರವನ್ನು ಎ.ವೈ.1 ಎಂದು ಗುರ್ತಿಸಲಾಗಿದೆ. ಆಡುಭಾಷೆಯಲ್ಲಿ ಜನಸಾಮಾನ್ಯರಿಗೆ ಅರ್ಥವಾಗುವಂತೆ ಡೆಲ್ಟಾ ಪ್ಲಸ್‌ ಎನ್ನಲಾಗುತ್ತಿದೆ.

ಡೆಲ್ಟಾ ವೈರಸ್‌ನಲ್ಲಿದ್ದ ಪ್ರೊಟೀನ್ ರೂಪಾಂತರಗೊಂಡಿರುವ ಪರಿಣಾಮ, ಡೆಲ್ಟಾ ಪ್ಲಸ್‌ ವೈರಾಣು ಉಂಟಾಗಿದೆ. ಈ ವೈರಾಣು ಮಾನವನ ಜೀವಕೋಶಗಳಲ್ಲಿ ಸಲೀಸಾಗಿ ನುಗ್ಗಿ ಸೋಂಕಿನ ತೀವ್ರತೆ ಹೆಚ್ಚಿಸುವ ಗುಣ ಹೊಂದಿದೆ. ತಜ್ಞರ ಪ್ರಕಾರ, ಈ ಹೊಸ ವೈರಾಣು ಮೊದಲಿಗಿಂತಲೂ ಹೆಚ್ಚಿನ ತೀವ್ರತೆಯಲ್ಲಿ ಹರಡುವ ಭೀತಿ ಇದೆ. ಆದ್ರೆ ಎಷ್ಟರಮಟ್ಟಿಗೆ ಈ ವೈರಾಣುವಿನ ತೀವ್ರತೆ ಇದೆ ಎಂಬುದರ ಅಂದಾಜು ಇನ್ನೂ ಲಭ್ಯವಾಗಿಲ್ಲ.

Recommended Video

ಕ್ರಿಕೆಟ್ ಕಾಶಿ ಎಂದು ಕರೆಸಿಕೊಳ್ಳುವ Lord's ಸ್ಟೇಡಿಯಂ | The Home of Cricket | Oneindia Kannada
 ಸೋಂಕು ಮೊದಲು ಪತ್ತೆಯಾಗಿದ್ದು ಎಲ್ಲಿ?

ಸೋಂಕು ಮೊದಲು ಪತ್ತೆಯಾಗಿದ್ದು ಎಲ್ಲಿ?

ಈ ಹೊಸ ವೈರಾಣುವಿನ ರೂಪಾಂತರ ಮೊದಲು ಪತ್ತೆಯಾಗಿದ್ದು, ಯುರೋಪ್‌ನಲ್ಲಿ. ಮಾರ್ಚ್‌ ತಿಂಗಳಲ್ಲೇ ಈ ವೈರಾಣುವಿನ ರೂಪಾಂತರ ಪತ್ತೆ ಆಗಿತ್ತಾದ್ರೂ, ಅದರ ಮೇಲೆ ನಿಗಾ ಇಡಲಾಗಿತ್ತು. ಸಾರ್ವಜನಿಕವಾಗಿ ಈ ವೈರಾಣುವಿನ ಮಾಹಿತಿ ಸಿಕ್ಕಿದ್ದು, ಜೂನ್‌ ತಿಂಗಳಲ್ಲಿ. ಇಂಗ್ಲೆಂಡ್‌ನ ಸಾರ್ವಜನಿಕ ಆರೋಗ್ಯ ವರದಿ ಜೂನ್ 7ರಲ್ಲಿ ಪ್ರಕಟವಾಯ್ತು. ಈ ವರದಿಯಲ್ಲಿ ಡೆಲ್ಟಾ ಪ್ಲಸ್‌ ವೈರಾಣುವಿನ ಉಲ್ಲೇಖವಿತ್ತು.

ಪ್ರಯೋಗಾಲಗಳಲ್ಲಿ ಡೆಲ್ಟಾ ಪ್ಲಸ್‌ ವೈರಾಣುವಿನ 63 ವಂಶವಾಹಿಗಳನ್ನು ಪತ್ತೆ ಮಾಡಲಾಗಿದೆ. ಇದರ ಬೆನ್ನಲ್ಲೇ ಇಂಗ್ಲೆಂಡ್ ಒಂದರಲ್ಲೇ ಡೆಲ್ಟಾ ಪ್ಲಸ್‌ನ 36 ಹೊಸ ಕೇಸ್‌ಗಳು ಪತ್ತೆಯಾದವು. ಇದೇ ವೈರಾಣು ನೇಪಾಳದಲ್ಲೂ ಪತ್ತೆಯಾಯ್ತು.

English summary
Coronavirus cases and hospitalisations in the United States are at a six-month high, fueled by the rapid spread of the Delta variant across swathes of the country grappling with low vaccination rates.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X