• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಏರ್ ಫ್ರಾನ್ಸ್ ವಿಮಾನದಲ್ಲಿ ಭಾರತೀಯನ ಕಿರಿಕ್: ಬಲ್ಗೇರಿಯಾದಲ್ಲಿ ತುರ್ತು ಭೂಸ್ಪರ್ಶ

|

ಸೋಫಿಯಾ, ಮಾರ್ಚ್ 6: ಪ್ಯಾರಿಸ್‌ನಿಂದ ನವದೆಹಲಿಗೆ ಬರುತ್ತಿದ್ದ ಏರ್ ಫ್ರಾನ್ಸ್ ವಿಮಾನವನ್ನು ಶುಕ್ರವಾರ ಸಂಜೆ 5 ಗಂಟೆ ಸುಮಾರಿಗೆ ಬಲ್ಗೇರಿಯಾದ ಸೋಫಿಯಾ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲಾದ ಘಟನೆ ಬೆಳಕಿಗೆ ಬಂದಿದೆ. ಭಾರತೀಯ ಪ್ರಯಾಣಿಕರೊಬ್ಬರ ಕಿರಿಕ್‌ನಿಂದಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಬಲ್ಗೇರಿಯಾದ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.

ಭಾರತೀಯ ಪ್ರಜೆಯಾಗಿರುವ ಪ್ರಯಾಣಿಕರೊಬ್ಬರು ವಿಮಾನ ಟೇಕಾಫ್ ಆಗುತ್ತಿದ್ದಂತೆಯೇ ರಗಳೆ ಶುರುಮಾಡಿದರು, ಸಹ ಪ್ರಯಾಣಿಕರ ಜತೆ ಜಗಳವಾಡಿದರು. ವಿಮಾನದ ಸಹಾಯಕರೊಬ್ಬರ ಮೇಲೆ ಹಲ್ಲೆ ನಡೆಸಿದ್ದಲ್ಲದೆ, ಕಾಕ್‌ಪಿಟ್‌ನ ಬಾಗಿಲನ್ನು ಪದೇ ಪದೇ ಗುದ್ದಿ ಗದ್ದಲ ಎಬ್ಬಿಸಿದ್ದರು ಎಂದು ರಾಷ್ಟ್ರೀಯ ತನಿಖಾ ಸಂಸ್ಥೆಯ ಅಧಿಕಾರಿ ಇವಾಲಿಯೊ ಆಂಗೆಲೊವ್ ಹೇಳಿದ್ದಾರೆ.

ಟೇಕ್‌ ಆಫ್ ಆಗಬೇಕಿದ್ದ ವಿಮಾನ ವಾಪಸ್‌ ಬರಲು ಕಾರಣವಾಯ್ತು ಕೊರೊನಾಟೇಕ್‌ ಆಫ್ ಆಗಬೇಕಿದ್ದ ವಿಮಾನ ವಾಪಸ್‌ ಬರಲು ಕಾರಣವಾಯ್ತು ಕೊರೊನಾ

ಪ್ರಯಾಣಿಕರ ವರ್ತನೆಯಿಂದ ಕಂಗಾಲಾದ ವಿಮಾನದ ಕಮಾಂಡರ್, ಸೋಫಿಯಾದಲ್ಲಿ ತುರ್ತು ಭೂಸ್ಪರ್ಶಕ್ಕೆ ಅಧಿಕಾರಿಗಳಿಂದ ಅನುಮತಿ ಕೋರಿದರು. ವಿಮಾನ ಇಳಿಸಿದ ಬಳಿಕ ಆ ವ್ಯಕ್ತಿಯನ್ನು ವಿಮಾನದಿಂದ ಹೊರಗೆ ಕರೆದೊಯ್ಯಲಾಯಿತು. ಅವರ ಮೇಲೆ ವಿಮಾನ ಸುರಕ್ಷತೆಗೆ ಅಪಾಯ ಉಂಟುಮಾಡಿದ ಪ್ರಕರಣ ದಾಖಲಿಸಲಾಗಿದೆ. ಶಿಕ್ಷೆ ಜಾರಿಯಾದರೆ ಅವರು 10 ವರ್ಷದವರೆಗು ಜೈಲು ವಾಸ ಅನುಭವಿಸಬೇಕಾಗಬಹುದು. ಪ್ರಯಾಣಿಕನ ಹೆಸರನ್ನು ಅಧಿಕಾರಿಗಳು ಬಹಿರಂಗಪಡಿಸಿಲ್ಲ.

ಪ್ರಯಾಣಿಕನನ್ನು ಅಲ್ಲಿನ ಅಲ್ಲಿನ ಅಧಿಕಾರಿಗಳಿಗೆ ಒಪ್ಪಿಸಿದ ಬಳಿಕ ಏರ್ ಫ್ರಾನ್ಸ್ ವಿಮಾನವು ನವದೆಹಲಿಗೆ ತನ್ನ ಪ್ರಯಾಣ ಆರಂಭಿಸಿತು. 'ಅವರ ವರ್ತನೆ ಹಾಗೂ ಉದ್ದೇಶ ಎರಡರ ಬಗ್ಗೆಯೂ ನಾವು ತನಿಖೆ ನಡೆಸುತ್ತಿದ್ದೇವೆ. ಅವರ ಈ ನಡವಳಿಕೆಗೆ ಸೂಕ್ತ ಕಾರಣ ಗೊತ್ತಾಗಿಲ್ಲ' ಎಂದು ಅಧಿಕಾರಿಗಳು ತಿಳಿಸಿದ್ದಾರೆ.

English summary
An Air France flight from Paris to New Delhi made an emergency landing at Sofia Airport in Bulgaria due to disruptive Indian Passenger.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X