ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿರಿಯಾ ಸಂಘರ್ಷ: 10 ವರ್ಷಗಳಲ್ಲಿ 5 ಲಕ್ಷ ಮಂದಿ ಬಲಿ

|
Google Oneindia Kannada News

ಬೈರೂತ್, ಜೂನ್ 01: ಸಿರಿಯಾದಲ್ಲಿ 10 ವರ್ಷಗಳ ಕಾಲ ನಡೆದ ಯುದ್ಧದಲ್ಲಿ 5 ಲಕ್ಷ ಮಂದಿ ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಮಾರ್ಚ್‌ನಲ್ಲಿ ಬಿಡುಗಡೆ ಮಾಡಿದ್ದ ಮಾಹಿತಿ ಪ್ರಕಾರ ಸಾವಿನ ಸಂಖ್ಯೆಯು 388,000 ಆಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಲಭ್ಯವಾದ ಮಾಹಿತಿ ಪ್ರಕಾರ, ಪತ್ರಗಳನ್ನು ಅಧ್ಯಯನ ಮಾಡಿರುವ ಸಂಸ್ಥೆಯು 1,05,015 ಸಾವುಗಳನ್ನು ಖಚಿತಪಡಿಸಿದೆ. ಒಟ್ಟು ಸಾವಿನ ಸಂಖ್ಯೆ ಹೆಚ್ಚಿ ಕಡಿಮೆ 5 ಲಕ್ಷದ ಹತ್ತಿರವಿದೆ.

ಟರ್ಕಿಯಿಂದ ಡ್ರೋಣ್ ದಾಳಿ; 19 ಸಿರಿಯಾ ಸೈನಿಕರು ಬಲಿಟರ್ಕಿಯಿಂದ ಡ್ರೋಣ್ ದಾಳಿ; 19 ಸಿರಿಯಾ ಸೈನಿಕರು ಬಲಿ

ಈ ಸಾವುಗಳಲ್ಲಿ ಹೆಚ್ಚಿನವು 2012ರ ಅಂತ್ಯದಿಂದ 2015ರ ನಡುವೆ ಸಂಭವಿಸಿದೆ ಎಂದು ಸಂಸ್ಥೆ ಮುಖ್ಯಸ್ಥ ರಾಮಿ ಅಬ್ದುಲ್ ರೆಹಮಾನ್ ಸುದ್ದು ಸಂಸ್ಥೆ ಎಎಫ್‌ಪಿಗೆ ತಿಳಿಸಿದೆ.

Decade Of Syria War Killed Nearly 500,000 People

ಮಾನವ ಹಕ್ಕುಗಳ ಮೇಲೆ ನಿಗಾವಹಿಸುವ ಬ್ರಿಟನ್ ಮೂಲದ, ಸಿರಿಯಾ ಪ್ರಾಂತೀಯ ವೀಕ್ಷಕ ಸಂಸ್ಥೆಯು ಜೀವ ನಷ್ಟದ ಲೆಕ್ಕ ಹಾಕಿದೆ. 2011ರಲ್ಲಿ ಸರ್ಕಾರದ ವಿರುದ್ಧ ಬಂಟೆದ್ದವರ ಕ್ರೂರ ದಬ್ಬಾಳಿಕೆಯಿಂದಾಗಿ ಈವರೆಗೆ 494,438 ಮಂದಿ ಸಾವಿಗೀಡಾಗಿದ್ದಾರೆ ಎಂದು ಸಂಸ್ಥೆ ಹೇಳಿದೆ.

ಕಳೆದ ಕೆಲವು ತಿಂಗಳುಗಳಲ್ಲೇ 1 ಲಕ್ಷಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ, ಬಸ್‌ಗಳ ಮೇಲೆ ಉಗ್ರರ ದಾಳಿ, ಅಮೆರಿಕದಿಂದ ವೈಮಾನಿಕ ದಾಳಿ, ಬಾಂಬ್ ದಾಳಿ ಸೇರಿದಂತೆ ಹಲವು ಸಂಘರ್ಷಗಳಲ್ಲಿ ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.

English summary
A decade of war in Syria has left nearly half a million people dead, a war monitor said Tuesday, in a new toll that includes 100,000 recently confirmed deaths.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X