ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರ್ಥಿಕ ಕುಸಿತ: ಮಂಗಳವಾರದಿಂದ ಗ್ರೀಸ್ ದಿವಾಳಿ ರಾಷ್ಟ್ರ?

|
Google Oneindia Kannada News

ಅಥೆನ್ಸ್, ಜೂ. 29 : ಗ್ರೀಸ್ ಪಡೆದುಕೊಂಡಿರುವ ಸಾಲದ ಮರುಪಾವತಿ ಅವಧಿ ಜೂನ್ 30 ಕ್ಕೆ ಕೊನೆಯಾಗಲಿದ್ದು ನಂತರ ಯುರೋ ರಾಷ್ಟ್ರಗಳು ಗ್ರೀಸ್ ನ್ನು ದಿವಾಳಿ ದೇಶ ಎಂದು ಘೋಷಿಸುವ ಸಾಧ್ಯತೆ ಇದೆ.

ಆರ್ಥಿಕ ಪತನಕ್ಕೆ ಸಿಲುಕಿರುವ ಗ್ರೀಸ್ ನಲ್ಲಿ ಒಂದು ವಾರಗಳ ಕಾಲ ಬ್ಯಾಂಕ್ ಬಂದ ಮಾಡಲಾಗಿತ್ತದೆ. ಅಲ್ಲದೇ ಎಟಿಎಂನಿಂದ ಹಣ ತೆಗೆಯುವುದಕ್ಕೂ ನಿರ್ಬಂಧ ಹೇರಲಾಗಿದೆ. ಪರಿಣಾಮ ಜನರು ಒಮ್ಮೆಲೇ ಎಟಿಎಂಗಳ ಮೇಲೆ ಮುಗಿಬಿದ್ದಿದ್ದಾರೆ. ಕೆಲ ಎಟಿಎಂಗಳು ಮಾತ್ರ ಕಾರ್ಯನಿರ್ವಹಣೆ ಮಾಡುತ್ತಿದ್ದು ಮಂಗಳವಾರದಿಂದ ಎಲ್ಲವೂ ಬಂದ್ ಆಗಲಿದೆ.[ಗ್ರೀಸ್ ಸುಳಿಗೆ ಸಿಕ್ಕ ಷೇರು ಮಾರುಕಟ್ಟೆ ಪಾತಾಳಕ್ಕೆ]

greece

ಜುಲೈ 6ರವರೆಗೆ ಬ್ಯಾಂಕ್‌ಗಳು ಬಾಗಿಲು ತೆರೆಯಲ್ಲ. ವಿದೇಶಿ ಪ್ರವಾಸಿಗರು, ಗ್ರೀಕ್‌ ಆರ್ಥಿಕತೆಯ ಪ್ರಮುಖ ಸಂಸ್ಥೆಗಳಿಗೆ ವಿನಾಯಿತಿ ನೀಡಲಾಗಿದೆ ಎಂದು ಗ್ರೀಸ್ ಸರ್ಕಾರದ ಪ್ರಕಟಣೆ ತಿಳಿಸಿದೆ.

ಗ್ರೀಕ್ ಪ್ರಧಾನ ಮಂತ್ರಿ ಅಲೆಕ್ಸಿಸ್ ಸಿಪ್ರಸ್, ಬ್ಯಾಂಕಿನಲ್ಲಿ ಹಣ ಇಟ್ಟವರು ಯಾವುದೇ ಆತಂಕಕ್ಕೀಡಾಗಬೇಕಿಲ್ಲ ಎಂದು ಜನತೆಗೆ ಅಭಯ ನೀಡಿದ್ದಾರೆ. ಈ ಪರಿಸ್ಥಿತಿಯನ್ನು ತಾಳ್ಮೆಯಿಂದ ಎದುರಿಸುವಂತೆ ಕೋರಿದ್ದಾರೆ.

ಯಾಕೆ ಹೀಗಾಯಿತು?
ಪ್ರಪಂಚದಾದ್ಯಂತ 1930ರ ಆರ್ಥಿಕ ಕುಸಿತ ಪರಿಸ್ಥಿತಿ ಎದಿರಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಯುರೊ ಕರೆನ್ಸಿ ವಲಯದ ಸದಸ್ಯ ರಾಷ್ಟ್ರಗಳು ಗ್ರೀಸ್‌ಗೆ ನೀಡಿದ್ದ ಸಾಲ ಮರುಪಾವತಿ ಗಡುವು ಮಂಗಳವಾರಕ್ಕೆ ಮುಕ್ತಾಯವಾಗಲಿದ್ದು ದಿವಾಳಿ ರಾಷ್ಟ್ರ ಎಂದು ಘೋಷಣೆ ಮಾಡುವ ಸಾಧ್ಯೆತೆ ಇದೆ. ಮತ್ತೆ ಸಾಲ ನೀಡಬೇಕಾದರೆ ಮಿತವ್ಯಯ ಮಾರ್ಗಗಳನ್ನು ಅನುಸಾರ ಮಾಡಬೇಕಾಗುತ್ತದೆ ಎಂದು ಸಾಲ ನೀಡಿದ ರಾಷ್ಟ್ರಗಳು ಈಗಾಗಲೇ ತಿಳಿಸಿವೆ.

ಆರ್ಥಿಕ ಪತನ ಭಾರತದ ಷೇರು ಮಾರುಕಟ್ಟೆ ಸೇರಿದಂತೆ ಏಷ್ಯಾ ಮಾರುಕಟ್ಟೆ ಮೇಲೆ ಪ್ರಭಾವ ಬೀರಿದೆ. ಸೋಮವಾರ ಬೆಳಗ್ಗೆಯಿಂದಲೇ ಮಾರುಕಟ್ಟೆಯಲ್ಲಿ ತೀವ್ರ ಕುಸಿತ ಉಂಟಾಗಿತ್ತು.

English summary
Greek Prime Minister Alexis Tsipras in a televised statement on Sunday evening announced a bank holiday and capital controls under the recommendation of the Central Bank of Greece. In a parallel bid to break the dangerous deadlock, the Greek leader also renewed the request to international creditors for an extension of the bailout for a few days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X