ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೀಜಿಂಗ್ ಅನಿಲ ಟ್ಯಾಂಕರ್ ಸ್ಫೋಟ, ಸಾವಿನ ಸಂಖ್ಯೆ 19ಕ್ಕೇರಿಕೆ

|
Google Oneindia Kannada News

ಬೀಜಿಂಗ್, ಜೂನ್ 14: ಚೀನಾದ ಪೂರ್ವ ಭಾಗದಲ್ಲಿ ಭೀಕರ ಅನಿಲ ಟ್ಯಾಂಕರ್ ಸ್ಫೋಟ ಸಂಭವಿಸಿದೆ. ಈ ದುರಂತದಲ್ಲಿ ಮೃತರಾದವರ ಸಂಖ್ಯೆ 19ಕ್ಕೇರಿದೆ. ಒಟ್ಟಾರೆ ಸುಮಾರು 170ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೆನ್ಲಿಂಗ್ ನಗರದ ಆಡಳಿತಾಧಿಕಾರಿಗಳು ಹೇಳಿದ್ದಾರೆ.

ಶೆನ್ಯಾಂಗ್ -ಹೈಕೊ ಎಕ್ಸ್ ಪ್ರೆಸ್ ವೇ ಗ್ರಾಮದಲ್ಲಿ ಶನಿವಾರದಂದು ಅನಿಲ ಟ್ಯಾಂಕರ್ ಸ್ಫೋಟಗೊಂಡಿತ್ತು. ಟ್ಯಾಂಕರ್ ನಲ್ಲಿ ಮತ್ತೊಮ್ಮೆ ಸ್ಫೋಟ ಸಂಭವಿಸಿದ್ದು, ಸ್ಫೋಟಗೊಂಡ ಟ್ರಕ್ ಸಮೀಪದ ವರ್ಕ್ ಶಾಪ್ ಬಳಿ ಬಿದ್ದಿದೆ. ಸ್ಫೋಟದ ಪರಿಣಾಮ ಭೀಕರವಾಗಿದ್ದು, ಹತ್ತಿರದಲ್ಲಿದ್ದ ಮನೆ, ಕಾರ್ಖಾನೆ , ವರ್ಕ್ ಶಾಪ್ ಗಳು ಪಾರ್ಕ್ ಮಾಡಿದ್ದ ಕಾರುಗಳು ಧ್ವಂಸವಾಗಿವೆ.

Death toll in Chinas oil tanker explosion rises to 19

ನೂರಾರು ಅಗ್ನಿ ಶಾಮಕ ದಳ ತಂಡಗಳು ರಕ್ಷಣಾ ಕಾರ್ಯದಲ್ಲಿ ತೊಡಗಿವೆ ಎಂದು ಸರ್ಕಾರಿ ಸ್ವಾಮ್ಯದ ಮಾಧ್ಯಮ ಸಂಸ್ಥೆ ಕ್ಸಿನೋವಾ ವರದಿ ಮಾಡಿದೆ. ಸರ್ಕಾರಿ ಮಾಧ್ಯಮ ಸಿಜಿಟಿಎನ್ ಟಿವಿಯಲ್ಲಿ ಸ್ಫೋಟದ ವಿಡಿಯೋ ಪ್ರಸಾರ ಮಾಡಿದೆ.

ಅನಿಲ ಟ್ಯಾಂಕರ್ ಸ್ಫೋಟದಿಂದ ಸುತ್ತ ಮುತ್ತಲಿನ ಪರಿಸರಕ್ಕೆ ತಕ್ಷಣಕ್ಕೆ ಹಾನಿ ಸಂಭವಿಸಿರುವ ವರದಿಗಳು ಬಂದಿಲ್ಲ. ಘಟನೆ ಬಗ್ಗೆ ಸಮಗ್ರ ತನಿಖೆ ನಡೆಸಿ, ವರದಿ ಸಲ್ಲಿಸುವಂತೆ ಝೆಜಿಯಾಂಗ್ ಪ್ರಾಂತ್ಯದ ಆಡಳಿತಾಧಿಕಾರಿಗಳಿಗೆ ಚೀನಾ ಸರ್ಕಾರ ಆದೇಶ ನೀಡಿದೆ.

English summary
The death toll in the oil tanker explosion in east China's Zhejiang Province has risen to 19, the local authorities said on Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X