ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮನುಕುಲಕ್ಕೆ ಮಾರಕ ಮಹಾಮಾರಿ 'ಕಿಸ್ಸಿಂಗ್ ಬಗ್'

|
Google Oneindia Kannada News

ಮೆಕ್ಸಿಕೋ, ನವೆಂಬರ್, 25: ಹಂದಿ ಜ್ವರ, ಕೋಳಿ ಜ್ವರ ಹೆಸರುಗಳು ಪ್ರಪಂಚವನ್ನು ಅಲ್ಲಾಡಿಸಿ ಈಗ ಮರೆಗೆ ಸರಿದಿವೆ. ಆದರೆ ಮತ್ತೊಂದು ಮಹಾಮಾರಿ ಅಮೆರಿಕಾ ರಾಜ್ಯಗಳಲ್ಲಿ ಕಂಡು ಬಂದಿದ್ದು ಭಯ ಹುಟ್ಟಿಸಿದೆ.

ಇಂಗ್ಲಿಷ್ ನಲ್ಲಿ ರೋಗಕ್ಕೆ 'ಕಿಸ್ಸಿಂಗ್ ಬಗ್ ' ಎಂದು ಹೆಸರು ನೀಡಲಾಗಿದೆ. ರೋಗ ಹೊತ್ತು ತರುವ ಕೀಟದ ಹೆಸರನ್ನೇ ಇಡಲಾಗಿದೆ. ದಕ್ಷಿಣ ಅಮೆರಿಕಾ, ಮಧ್ಯ ಅಮೆರಿಕಾ ಮತ್ತು ಮೆಕ್ಸಿಕೋದ ಜನರು ಕಾಯಿಲೆಗೆ ತುತ್ತಾಗುತ್ತಿದ್ದಾರೆ.[ಹಂದಿ ಜ್ವರ: ಏನು ಮಾಡಬೇಕು? ಏನು ಮಾಡಬಾರದು?]

ಅಮೆರಿಕದ ಸುಮಾರು 3 ಲಕ್ಷಕ್ಕೂ ಅಧಿಕ ಜನ ಈ ರೋಗ ಲಕ್ಷಣದಿಂದ ಬಳಲುತ್ತಿದ್ದಾರೆ. ರೋಗದ ಲಕ್ಷಣಗಳು, ಹರಡುವ ಬಗೆ ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ವಿಶ್ವಸಂಸ್ಥೆಯ ಆರೋಗ್ಯ ಮಂಡಳಿ ತಿಳಿಸಿದೆ.

ರೋಗ ಲಕ್ಷಣಗಳು ಯಾವವು?
ಪರಾವಲಂಬಿ ಕೀಟ (ಕಿಸ್ಸಿಂಗ್ ಬಗ್) ತಾನು ಕಚ್ಚುವ ವೇಳೆ ರೋಗಕಾರಕ ಅಂಶಗಳನ್ನು ವ್ಯಕ್ತಿಯ ದೇಹದೊಳಕ್ಕೆ ಸೇರಿಸುತ್ತದೆ. ಜ್ವರ, ತಲೆನೋವು, ವಿಸ್ತರಿಸಿದ ದುಗ್ಧರಸ ಗ್ರಂಥಿಗಳು, ಬಿಳಚಿಕೊಳ್ಳುವಿಕೆ, ಸ್ನಾಯು ನೋವು, ಉಸಿರಾಟದ ತೊಂದರೆ, ಊತ ಮತ್ತು ಹೊಟ್ಟೆ ಅಥವಾ ಎದೆ ನೋವು ಈ ರೋಗದ ಲಕ್ಷಣಗಳು.

ಕಚ್ಚಿದಾಗ ಏನಾಗುತ್ತದೆ?
ಕೀಟ ಕಚ್ಚಿದರೆ ವ್ಯಕ್ತಿ ಸಣ್ಣ ಪ್ರಮಾಣದ ಊತ ಅನುಭವಿಸುತ್ತಾನೆ. ಇದು ಕಚ್ಚಿದಾಗ ವ್ಯಕ್ತಿಯ ಕಣ್ಣುಗಳಲ್ಲಿ ನೋವು ಕಾಣಿಸಿಕೊಳ್ಳಬಹುದು. ಮೊದಲಿಗೆ ಜ್ವರದಿಂದ ಆರಂಭವಾದ ರೋಗ ಲಕ್ಷಣಗಳು ನಂತರ ವಿಸ್ತರಿಸಿಕೊಳ್ಳುತ್ತಾ ಸಾಗುತ್ತವೆ.[ಬೆಂಗಳೂರಲ್ಲಿ ಹಂದಿಜ್ವರಕ್ಕೆ ಔಷಧ ಲಭ್ಯವಿರುವ ಆಸ್ಪತ್ರೆಗಳ ಪಟ್ಟಿ]

ಕಾಯಿಲೆ ಉಲ್ಬಣಿಸಿದರೆ ಮಾರಣಾಂತಿಕ
ರೋಗ ಪತ್ತೆಯಾಗದೆ ಅಥವಾ ಚಿಕಿತ್ಸೆ ಸಿಗದೇ ಇದ್ದರೆ ವ್ಯಕ್ತಿ ಸಾಯಬಹುದು. ಹೃದಯದ ಮೇಲೆ, ಪಚನ ಇಂದ್ರಿಯಗಳ ಮೇಲೆ ಪರಿಣಾಮ ಬೀರುತ್ತದೆ. ಸ್ನಾಯುಗಳು ಶಕ್ತಿ ಕಳೆದುಕೊಂಡು ಜೀರ್ಣಕ್ರಿಯೆ ಸಂಪೂರ್ಣ ಸ್ಥಗಿತವಾಗುತ್ತದೆ.

ಸೋಂಕು ಹರಡುವ ಬಗೆ
ಸೋಂಕು ತಾಗಿದ ವ್ಯಕ್ತಿಯ ಮಲದ ಮೇಲೆ ಕುಳಿತುಕೊಳ್ಳುವ ಕೀಟಗಳು ರೋಗಾಣುಗಳನ್ನು ಪಡೆದುಕೊಲ್ಳುತ್ತವೆ. ಗರ್ಭದಲ್ಲಿರುವ ಮಗುವಿಗೂ ಈ ರೋಗ ತಗಲುವ ಸಾಧ್ಯತೆ ಇದೆ.

ಕೀಟಗಳು ಎಲ್ಲಿ ವಾಸಿಸುತ್ತವೆ
ಕಿಟಕಿ, ಗೋಡೆಯ ಬಿರುಕು, ಮನೆಯ ಮೇಲ್ಛಾವಣಿ ಮತ್ತು ಉದ್ಯಾನದಲ್ಲಿ ಕಂಡುಬರುವ ಚಿಕ್ಕ ರಂಧ್ರಗಳೇ ಈ ಮಾರಣಾಂತಿಕ ಕೀಟದ ವಾಸಸ್ಥಾನ.ಸಾಕು ಪ್ರಾಣಿಗಳ ಮೈಗೆ ಹತ್ತಿಕೊಳ್ಳುವ ಕೀಟಗಳು ಮಾನವನಿಗೆ ಮಾರಕವಾಗಿ ಪರಿಣಮಿಸಬಲ್ಲವು.

ಕಂಡುಬಂದರೆ ಏನು ಮಾಡಬೇಕು?
ಈ ಬಗೆಯ ಕೀಟಗಳು ಕಂಡುಬಂದರೆ ಯಾವ ಕಾರಣಕ್ಕೂ ಮುಟ್ಟಲು ಹೋಗಬೇಡಿ. ಪಾತ್ರೆಯೊಂದರಲ್ಲಿ ಅದನ್ನು ಬಂಧಿಸಲು ಪ್ರಯತ್ನ ಮಾಡಬೇಕು. ಸೆರೆಸಿಕ್ಕ ಕೀಟಗಳನ್ನು ನಿಮ್ಮ ಹತ್ತಿರದ ಪ್ರಯೋಗಾಲಯಕ್ಕೆ ಒಯ್ಯಬೇಕು.

English summary
One of the deadly disease found in southern America states also known as American trypanosomiasis, often doesn't have overt symptoms. Less than half of those infected or bitten by a triatomine bug will see a visible skin lesion or a swelling in one of their eyelids. According to the World Health Organization.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X