ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಮಾರಿಗೆ ಬಲಿಯಾದರು ಎರಡು ಸಾವಿರ ಚೀನಿಯರು

|
Google Oneindia Kannada News

ಬಿಜಿಂಗ್, ಫೆಬ್ರವರಿ 19: ಚೀನಾದಲ್ಲಿ ತೀವ್ರ ತಲ್ಲಣ ಸೃಷ್ಠಿಸಿರುವ ಕೊರೊನಾದಿಂದ (ಕೋವಿದ್19) ಮೃತಪಟ್ಟವರ ಸಂಖ್ಯೆ ಶನಿವಾರದ ಅಂತ್ಯಕ್ಕೆ 2000 ಗಡಿ ದಾಟಿದೆ. ಸುಮಾರು 78,185 ಜನರಲ್ಲಿ ಕೊರೊನಾ ಕಾಣಿಸಿಕೊಂಡಿದ್ದು ಅವರಿಗೆ ಚಿಕಿತ್ಸೆ ಮುಂದುವರೆದಿದೆ ಎಂದು ಚೀನಾ ಸರ್ಕಾರದ ಅಧಿಕೃತ ಪ್ರಕಟಣೆ ತಿಳಿಸಿದೆ.

ಮಂಗಳವಾರ ಅಂತ್ಯಕ್ಕೆ 138 ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಹೇಳಲಾಗಿದೆ. ಅವರಲ್ಲಿ ಹಲವರ ಸ್ಥಿತಿ ಗಂಭೀರವಾಗಿದ್ದು, ಸಾವುನೋವಿನ ಸಂಖ್ಯೆಗಳು ಹೆಚ್ಚಾಗುವ ಸಂಭವವಿದೆ ಎಂದು ಚೀನಾ ಸರ್ಕಾರದ ರಾಷ್ಟ್ರೀಯ ಆರೋಗ್ಯ ಸಮಿತಿ ಹೇಳಿದೆ.

ಕೊರೊನಾದಿಂದ ಮುಕ್ತಿ ಪಡೆದ ವಿದ್ಯಾರ್ಥಿನಿ; ಇದು ಭಾರತದಲ್ಲಿ ಮೊದಲು!ಕೊರೊನಾದಿಂದ ಮುಕ್ತಿ ಪಡೆದ ವಿದ್ಯಾರ್ಥಿನಿ; ಇದು ಭಾರತದಲ್ಲಿ ಮೊದಲು!

ಚೀನಾದಲ್ಲಿ ಕೊರೊನಾದಿಂದ ಮೃತಪಟ್ಟರ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಕಳವಳ ವ್ಯಕ್ತಪಡಿಸಿದ್ದು, ಚೀನಾ ಸೇರಿದಂತೆ ಜಗತ್ತಿನ ಯಾವುದೇ ದೇಶಗಳು ಆತಂಕ ಪಡಬೇಕಾದ ಅವಶ್ಯಕತೆ ಇಲ್ಲ. ಕೊರೊನಾದ ತೀವ್ರಗತಿಯ ಏರಿಕೆ ಸಾಂಕ್ರಾಮಿಕ ರೋಗಗಳ ದೊಡ್ಡ ಬದಲಾವಣೆಯನ್ನು ಪ್ರತಿನಿಧಿಸುವುದಿಲ್ಲ ಎಂದು ಡಬ್ಲೂ ಎಚ್ ಓ ಹೇಳಿದೆ.

Deadly Coronavirus Deaths Crossed 2000

ಕೊರೊನಾ ಹರಡದಂತೆ ತಡೆಯುವಲ್ಲಿ ಚೀನಾ ಸರ್ಕಾರ ಚಿಂತಾಕ್ರಾಂತವಾಗಿದೆ ಎಂದು ಕೆಲ ವರದಿಗಳು ಹೇಳಿವೆ. ವುಹಾನ್ ನಗರದಲ್ಲಿ ಸಾವಿನ ಸಂಖ್ಯೆ ಐನೂರರ ಗಡಿ ದಾಟುತ್ತೆ ಎಂದು ತಿಳಿದು ಬಂದಿದೆ. ಈ ಭಯಾನಕ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಗಟ್ಟಲು ಎಲ್ಲ ಅಗತ್ಯ ಕ್ರಮಗಳನ್ನೂ ಚೀನಾ ಸರ್ಕಾರ ಸಾದ್ಯ ಇರುವ ಎಲ್ಲ ಅಗತ್ಯಗಳನ್ನೂ ಪರಿಶೀಲಿಸುತ್ತಿದೆ ಎಂದು ವರದಿಗಳು ಹೇಳಿವೆ.

English summary
Deadly Coronavirus Deaths Crossed 2000. China National Health Council Confirms it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X