ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕ್‌: ಪೊಲೀಸರನ್ನೇ ಒತ್ತೆಯಾಳಾಗಿಸಿದ ಇಸ್ಲಾಂ ಮೂಲಭೂತವಾದಿಗಳು

|
Google Oneindia Kannada News

ಲಾಹೋರ್, ಏಪ್ರಿಲ್ 19: ಪಾಕಿಸ್ತಾನದ ಇಸ್ಲಾಂ ಮೂಲಭೂತವಾದಿಗಳು ಪೊಲೀಸರನ್ನೇ ಒತ್ತೆಯಾಳಾಗಿರಿಸಿಕೊಂಡ ಘಟನೆ ನಡೆದಿದೆ.

ಇಸ್ಲಾಂ ಮೂಲಭೂತವಾದಿಗಳ ಪಕ್ಷ 'ತೆಹ್ರೀಕ್‌-ಇ-ಲಬಾಯಿಕ್‌' (ಟಿಎಲ್‌ಪಿ) ಕಾರ್ಯಕರ್ತರು ಮತ್ತು ಬೆಂಬಲಿಗರು ಹಿಂಸಾಚಾರ ನಡೆಸುತ್ತಿದ್ದಾರೆ.

ಒಂದು ವಾರದ ಹಿಂದೆ ಪಾಕಿಸ್ತಾನ ಸರ್ಕಾರ ಟಿಎಲ್‌ಪಿ ಮೇಲೆ ನಿರ್ಬಂಧ ವಿಧಿಸಿದೆ. ಅದರ ಸದಸ್ಯರ ಯಾವುದೇ ಕೃತ್ಯಗಳನ್ನು ಪ್ರಸಾರ ಮಾಡದಂತೆ ಕೂಡ ಸ್ಥಳೀಯ ಮಾಧ್ಯಮಗಳಿಗೆ ಸೂಚಿಸಲಾಗಿದೆ.

Pakistan

ಹಿಂಸಾಚಾರ ಹತ್ತಿಕ್ಕಲು ಮತ್ತು ವಶದಲ್ಲಿರುವ ಪೊಲೀಸ್‌ ಸಿಬ್ಬಂದಿಯನ್ನು ಬಿಡುಗಡೆಗೊಳಿಸಲು ಯತ್ನಿಸುತ್ತಿರುವ ಲಾಹೋರ್‌ ಪೊಲೀಸ್‌ ಇಲಾಖೆ ಟಿಎಲ್‌ಪಿಯ ಕೇಂದ್ರ ಕಚೇರಿ ಇರುವ ಲಾಹೋರ್‌ ಚೌಕ್‌ ಯಾತೀಮ್‌ಕಹಾನ್‌ ಪ್ರದೇಶದಲ್ಲಿಮೊಬೈಲ್‌, ಇಂಟರ್‌ನೆಟ್‌ ಸೇವೆ ಸ್ಥಗಿತಗೊಳಿಸಿದೆ. ಜತೆಗೆ ನಿಷೇಧಾಜ್ಞೆಯನ್ನು ಹೇರಿದೆ.

ತಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೂ ಪೊಲೀಸರನ್ನು ಬಿಡುಗಡೆ ಮಾಡುವುದಿಲ್ಲ ಎಂದು ಉಗ್ರರಂತೆ ಸರ್ಕಾರಕ್ಕೆ ಸವಾಲು ಹಾಕಿತ್ತಿದ್ದಾರೆ. ಟಿಎಲ್‌ಪಿ ಮುಖ್ಯಸ್ಥ ಸಾದ್‌ ರಿಜ್ವಿಯ ಬಂಧನದ ಹಿನ್ನೆಲೆಯಲ್ಲಿ ಸ್ಫೋಟಗೊಂಡಿರುವ ಈ ಹಿಂಸಾಚಾರ ಹತ್ತಿಕ್ಕಲು ಅರೆಸೈನಿಕ ಪಡೆಯನ್ನು ಪೊಲೀಸರೊಂದಿಗೆ ನಿಯೋಜಿಸಲಾಗಿತ್ತು.

ಎರಡು ಇಂಧನ ಟ್ಯಾಂಕರ್‌ಗಳನ್ನು ಕೂಡ ವಶಕ್ಕೆ ಪಡೆದಿರುವ ಟಿಎಲ್‌ಪಿ ಸದಸ್ಯರು ಕಂಡಕಂಡಲ್ಲಿ ಪೆಟ್ರೋಲ್‌ ಬಾಂಬ್‌ಗಳನ್ನು ಎಸೆಯುತ್ತಿದ್ದಾರೆ. ಪೊಲೀಸರ ಮೇಲೆ ತೀವ್ರ ಕಲ್ಲುತೂರಾಟ ನಡೆಸಿ, ಗುಂಡುಗಳನ್ನು ಹಾರಿಸಿದ್ದಾರೆ.

ನಾಲ್ವರು ಸ್ಥಳೀಯರು ಹಿಂಸಾಚಾರದಲ್ಲಿ ಮೃತಪಟ್ಟಿದ್ದು 15ಕ್ಕೂ ಅಧಿಕ ಪೊಲೀಸ್‌ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಲಾಹೋರ್‌ ಪೊಲೀಸ್‌ ವಕ್ತಾರ ಆರಿಫ್‌ ರಾಣಾ ತಿಳಿಸಿದ್ದಾರೆ.

ಈ ಕುರಿತು ಟಿಎಲ್‌ಪಿ ಬೆಂಬಲಿಗರು ಹೋರಾಟದ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದಾರೆ.

English summary
Police in Pakistan said a hardline Islamist group had taken six security personnel hostage at its headquarters in Lahore on Sunday after a week of violent clashes following the arrest of the group's leader
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X