ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಬೂಲ್: ಹಜಾರಾ ಶಿಯಾರಿರುವ ಪ್ರದೇಶದಲ್ಲಿ ಭಾರಿ ಬಾಂಬ್ ಸ್ಫೋಟ

|
Google Oneindia Kannada News

ಕಾಬೂಲ್, ನವೆಂಬರ್ 17: ಹಜಾರಾ ಶಿಯಾ ಅಲ್ಪಸಂಖ್ಯಾತರೇ ಹೆಚ್ಚಿನ ಜನಸಂಖ್ಯೆ ಹೊಂದಿರುವ ಕಾಬೂಲ್‌ನ ನೆರೆಹೊರೆಯಲ್ಲಿ ಇಂದು ಬಾಂಬ್ ಸ್ಫೋಟ ಸಂಭವಿಸಿದೆ. ಈ ಭಾರಿ ಸ್ಫೋಟದಲ್ಲಿ ಕನಿಷ್ಠ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ತಾಲಿಬಾನ್ ಸರ್ಕಾರ ದೃಢಪಡಿಸಿದೆ.

ದಸ್ತ್-ಎ-ಬರ್ಚಿ ಜಿಲ್ಲೆಯಲ್ಲಿ ಸ್ಫೋಟ ಸಂಭವಿಸಿದ್ದು, ಓರ್ವ ನಾಗರಿಕ ಸಾವನ್ನಪ್ಪಿದ್ದು, ಆರು ಮಂದಿ ಗಾಯಗೊಂಡಿದ್ದಾರೆ ಎಂದು ಆಂತರಿಕ ಸಚಿವಾಲಯದ ವಕ್ತಾರ ಖಾರಿ ಸಯೀದ್ ಖೋಸ್ಟಿ ಟ್ವಿಟ್ಟರ್‌ನಲ್ಲಿ ತಿಳಿಸಿದ್ದಾರೆ. ಆದರೆ, ಇತರ ಸಾಕ್ಷಿಗಳು ಹೆಚ್ಚಿನ ಸಾವುನೋವುಗಳು ಸಂಭವಿಸಿದೆ ವರದಿ ಮಾಡಿದ್ದಾರೆ.

"ನಮ್ಮ ಪ್ರಾಥಮಿಕ ಮಾಹಿತಿ ಪ್ರಕಾರ ಬಾಂಬ್ ಅನ್ನು ಮಿನಿಬಸ್‌ಗೆ ಜೋಡಿಸಲಾಗಿದೆ ಎಂದು ತೋರಿಸುತ್ತದೆ. ನಾವು ತನಿಖೆಯನ್ನು ಪ್ರಾರಂಭಿಸಿದ್ದೇವೆ" ಎಂದು ತಾಲಿಬಾನ್ ಅಧಿಕಾರಿಯೊಬ್ಬರು AFP ಸುದ್ದಿ ಸಂಸ್ಥೆಗೆ ತಿಳಿಸಿದರು.

"ನಾನು ದೊಡ್ಡ ಸ್ಫೋಟವನ್ನು ಕೇಳಿಸಿಕೊಂಡೆ... ನಾನು ಸುತ್ತಲೂ ನೋಡಿದಾಗ ಮಿನಿಬಸ್ ಮತ್ತು ಟ್ಯಾಕ್ಸಿ ಬೆಂಕಿಯಲ್ಲಿ ಹೊತ್ತು ಉರಿಯುತ್ತಿತ್ತು" ಎಂದು ಅಧಿಕಾರಿ ಹೇಳಿದ್ದಾರೆ.

ಸುಟ್ಟು ಕರಕಲಾದ ವಾಹನಗಳ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ದಾಳಿ ಹಿಂದೆ ಯಾರಿದ್ದಾರೆ?

ನಗರದ ಇನ್ನೊಂದು ಭಾಗದಲ್ಲಿ ಎರಡನೇ ಸ್ಫೋಟವೂ ವರದಿಯಾಗಿದೆ, ಆದರೆ ತಾಲಿಬಾನ್ ಅಧಿಕಾರಿಗಳು ಇನ್ನೂ ಸುದ್ದಿಯನ್ನು ಖಚಿತಪಡಿಸಿಲ್ಲ, ಈ ಕುರಿತಂತೆ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

Both the Taliban and IS have targeted the Hazara Shiite minority, claiming that they are heretics

ಇತ್ತೀಚಿನ ದಿನಗಳಲ್ಲಿ ಕಾಬೂಲ್ ಸರಣಿ ಸ್ಫೋಟಗಳಿಂದ ತತ್ತರಿಸಿದೆ, ನಗರದ ಶಿಯಾ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ಆಗಾಗ್ಗೆ ದಾಳಿ ನಡೆಸಲಾಗುತ್ತಿದೆ.

ಇಂದು ಬಾಂಬ್ ಸ್ಫೋಟ ಸಂಭವಿಸಿದ ಇದೇ ಪ್ರದೇಶದಲ್ಲಿ ಕಳೆದ ವಾರ ಕೂಡಾ ಮಿನಿಬಸ್ ಅನ್ನು ಧ್ವಂಸಗೊಳಿಸಲಾಗಿತ್ತು, ಪತ್ರಕರ್ತನನ್ನು ಕೊಲ್ಲಲಾಯಿತು ಮತ್ತು ಹಲವಾರು ಮಂದಿ ಗಾಯಗೊಂಡಿದ್ದರು. "ಇಸ್ಲಾಮಿಕ್ ಸ್ಟೇಟ್-ಖೋರಾಸನ್" (ISK) ಉಗ್ರಗಾಮಿ ಗುಂಪು ದಾಳಿಯ ಹೊಣೆಯನ್ನು ಹೊತ್ತುಕೊಂಡಿತ್ತು ಮತ್ತು "20 ಶಿಯಾ ಧರ್ಮಭ್ರಷ್ಟರನ್ನು" ಕೊಂದಿರುವುದು ಎಂದು ಹೆಮ್ಮೆಯ ವಿಷಯ ಎಂದು ಘೋಷಿಸಿಕೊಂಡಿದ್ದರು.

ತಾಲಿಬಾನ್ ಆಡಳಿತವನ್ನು IS-K ವಿರೋಧಿಸುತ್ತದೆ ಮತ್ತು ಆಗಸ್ಟ್‌ನಲ್ಲಿ ಹೊಸ ಸರ್ಕಾರ ಅಧಿಕಾರ ವಹಿಸಿಕೊಂಡ ನಂತರ ದೇಶದಲ್ಲಿ ತನ್ನ ದಾಳಿಯನ್ನು ಹೆಚ್ಚಿಸಿದೆ.

ಬುಧವಾರದ ದಾಳಿಯ ಹೊಣೆಯನ್ನು ಯಾವುದೇ ವ್ಯಕ್ತಿ ಅಥವಾ ಗುಂಪು ಇನ್ನೂ ಹೊತ್ತುಕೊಂಡಿಲ್ಲ.

ಇತ್ತೀಚಿನ ದಾಳಿಗಳು:
ಅಫ್ಘಾನಿಸ್ತಾನದ ಕಂದಹಾರ್ ನಗರದ ಶಿಯಾ ಮಸೀದಿಯಲ್ಲಿ ಅಕ್ಟೋಬರ್ 15ರಂದು ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಕನಿಷ್ಠ 7 ಮಂದಿ ಪ್ರಾಣ ಬಿಟ್ಟಿದ್ದು, 15 ಜನರು ಗಾಯಗೊಂಡಿದ್ದಾರೆ ಎಂದು ಗೊತ್ತಾಗಿದೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರದಲ್ಲಿ ಮಸೀದಿ ಮೇಲೆ ನಡೆದ ಎರಡನೇ ದಾಳಿಯಿದೆ ಎಂದು ವೈದ್ಯರೊಬ್ಬರು ಎಎಫ್‌ಪಿಗೆ ತಿಳಿಸಿದ್ದಾರೆ ಎಂದು ವರದಿ ಬಂದಿದೆ.

ಶಿಯಾ ಮಸೀದಿಯಲ್ಲಿ ಸಂಭವಿಸಿರುವ ಸ್ಫೋಟದ ಬಗ್ಗೆ ಪತ್ತೆ ಮಾಡಲಾಗುವುದು ಎಂದು ತಾಲಿಬಾನ್ ವಕ್ತಾರರು ಹೇಳಿದ್ದರು. ಅಧಿಕಾರಿಗಳು ಸ್ಫೋಟದ ವಿವರಗಳನ್ನು ಸಂಗ್ರಹಿಸುತ್ತಿದ್ದಾರೆ ಎಂದು ಕರಿ ಸಯೀದ್ ಖೋಸ್ತಿ ಹೇಳಿದರು. ಈ ಮಧ್ಯೆ ಇಮಾಮ್ ಬರ್ಗಾ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಸಂಭವಿಸಿದ ಸ್ಫೋಟದಲ್ಲಿ ಭಾರಿ ಸಂಖ್ಯೆಯ ಸಾವು-ನೋವು ಆಗಿದ್ದು, ಅಂಕಿ ಸಂಖ್ಯೆ ಬಗ್ಗೆ ಈಗಲೇ ದೃಢವಾಗಿ ಹೇಳುವುದಕ್ಕೆ ಸಾಧ್ಯವಿಲ್ಲ ಎಂದು ಪ್ರಾಂತೀಯ ಮಂಡಳಿಯ ಮಾಜಿ ಸದಸ್ಯ ನೆಮತುಲ್ಲಾ ವಫಾ ಹೇಳಿದ್ದಾರೆ.

Recommended Video

Americaದಿಂದ ಪರಭಕ್ಷಕ Drones ಖರೀದಿಸಲು ಮುಂದಾದ India | Oneindia Kannada

ಈ ಹಿಂದೆ ಅಕ್ಟೋಬರ್ 8 ರಂದು, ಉತ್ತರ ಅಫ್ಘಾನಿಸ್ತಾನದಲ್ಲಿ ಮಸೀದಿ ಸ್ಫೋಟದಲ್ಲಿ ಕನಿಷ್ಠ 100 ಜನರು ಸಾವನ್ನಪ್ಪಿದರು ಮತ್ತು ಹಲವರು ಗಾಯಗೊಂಡಿದ್ದರು. ಶಿಯಾ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಸ್ಫೋಟ ನಡೆಸಲಾಗಿದೆ ಎಂದ ಶಂಕೆ ವ್ಯಕ್ತವಾಗಿತ್ತು. ಆತ್ಮಹತ್ಯಾ ಬಾಂಬರ್ ಅನ್ನು ಬಳಸಿಕೊಂಡು ಈ ದಾಳಿ ನಡೆಸಿರುವ ಬಗ್ಗೆಯೂ ಶಂಕೆ ವ್ಯಕ್ತವಾಗಿತ್ತು. (ರಾಯಿಟರ್ಸ್, AFP)

English summary
At least one person has been killed in an explosion in Kabul. The largely Shiite neighborhood has previously been targeted by "Islamic State-Khorasan" attacks.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X