ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಫ್ಘಾನಿಸ್ತಾನ ಪೊಲೀಸ್ ತರಬೇತಿ ಕಾಲೇಜಿನಲ್ಲಿ ಸ್ಪೋಟಕ್ಕೆ 20 ಬಲಿ

By Sachhidananda Acharya
|
Google Oneindia Kannada News

ಕಾಬೂಲ್, ಅಕ್ಟೋಬರ್ 17: ಅಫ್ಘಾನಿಸ್ತಾನದ ಪಾಕ್ಟಿಯಾ ಪ್ರಾಂತ್ಯದ ಗಾರ್ಡೆಜ್ ನಗರದಲ್ಲಿ ಪೊಲೀಸ್ ತರಬೇತಿ ಕಾಲೇಜಿನಲ್ಲಿ ಸಂಭವಿಸಿದ ಭೀಕರ ಆತ್ಮಾಹುತಿ ಬಾಂಬ್ ಸ್ಫೋಟಕ್ಕೆ ಉನ್ನತ ಪೊಲೀಸ್ ಅಧಿಕಾರಿ ಸೇರಿ 20 ಜನರು ಬಲಿಯಾಗಿದ್ದಾರೆ.

ಮಂಗಳವಾರ ಮುಂಜಾನೆ 9.30ಕ್ಕೆ ಸಂಭವಿಸಿದ ಸ್ಪೋಟದಲ್ಲಿ ಪಾಕ್ಟಿಯಾ ಪ್ರಾಂತ್ಯದ ಪೊಲೀಸ್ ಮುಖ್ಯಸ್ಥ ತೊರ್ಯಾಲಾಯ್ ಅಬ್ದ್ಯಾನಿ ಕೂಡಾ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 20 ಜನ ಸಾವನ್ನಪ್ಪಿದ್ದು 70 ಜನರು ಗಾಯಗೊಂಡಿದ್ದಾರೆ.

Deadly bomb blast in Afghanistan kills Higher police officer and at least 20 people

ಎರಡು ವಾಹನಗಳನ್ನು ಪೊಲೀಸ್ ತರಬೇತಿ ಶಾಲೆಗೆ ಗುದ್ದಿ ಸ್ಪೋಟಿಸಲಾಗಿದೆ. ಬೆನ್ನಿಗೆ ಉಗ್ರರು ಕಾಲೇಜಿನೊಳಗೆ ನುಗ್ಗಲು ಯತ್ನಿಸಿದ್ದು ಇನ್ನೂ ಗುಂಡಿನ ಚಕಮಕಿ ನಡೆಯುತ್ತಿದೆ.

ಅಫ್ಘಾನಿಸ್ತಾನ್ ತಾಲಿಬಾನ್ ಘಟನೆಯ ಹೊಣೆ ಹೊತ್ತಿದೆ. ಸ್ಥಳದಲ್ಲಿ ಇನ್ನೂ ಸಂಘರ್ಷ ಏರ್ಪಟ್ಟಿದ್ದು ಸಾವಿನ ಸಂಖ್ಯೆ ಹೆಚ್ಚಾಗುವ ಎಲ್ಲಾ ಸಾಧ್ಯತೆ ಇದೆ.

English summary
Toryalai Abdyani, the police chief for Paktia province, was killed in Tuesday morning's deadly suicide bombing in Gardez City. In addition more than 20 people have been killed and over 70 wounded.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X