ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀಲಂಕಾಕ್ಕೆ ನಿಂತಿಲ್ಲ ಬಾಂಬ್ ದಾಳಿ ಭೀತಿ: ಮತ್ತೆ ದಾಳಿಯ ಎಚ್ಚರಿಕೆ

|
Google Oneindia Kannada News

ಕೊಲಂಬೊ, ಏಪ್ರಿಲ್ 29: ಕಳೆದ ಭಾನುವಾರವಷ್ಟೆ (ಏಪ್ರಿಲ್ 21) ಸರಣಿ ಬಾಂಬ್ ದಾಳಿಗೆ ಸಿಕ್ಕು ನಲುಗಿ ಹೋದ ಶ್ರೀಲಂಕಾಕ್ಕೆ ಇನ್ನೂ ಬಾಂಬ್ ದಾಳಿಯ ಆತಂಕ ದೂರವಾಗಿಲ್ಲ.

ಮತ್ತೆ ಆ ದ್ವೀಪ ರಾಷ್ಟ್ರದಲ್ಲಿ ಬಾಂಬ್ ದಾಳಿಗಳು ಸಂಭವಿಸಬಹುದೆಂಬ ಗುಮಾನಿ ಇದ್ದು, ಈ ಬಗ್ಗೆ ರಕ್ಷಣಾ ಇಲಾಖೆಯು ಎಚ್ಚರಿಕೆ ನೀಡಿದೆ.

ಭಾರತದಲ್ಲಿ ಲಂಕಾ ಮಾದರಿ ದಾಳಿಗೆ ಸಂಚು: ಐಸಿಸ್ ಶಂಕಿತ ಉಗ್ರ ಬಂಧನಭಾರತದಲ್ಲಿ ಲಂಕಾ ಮಾದರಿ ದಾಳಿಗೆ ಸಂಚು: ಐಸಿಸ್ ಶಂಕಿತ ಉಗ್ರ ಬಂಧನ

ಅಷ್ಟೆ ಅಲ್ಲ ಭಾರಿ ಆತಂಕಕಾರಿ ಮಾಹಿತಿಯನ್ನು ಲಂಕಾದ ರಕ್ಷಣಾ ಇಲಾಖೆ ಹೊರಗೆಡವಿದ್ದು, ಮಿಲಿಟರಿ ವಸ್ತ್ರ ಧರಿಸಿ ಭಯೋತ್ಪಾದಕರು ದಾಳಿ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

Days after deadly bombings, Sri Lanka warns of more attacks

ರಕ್ಷಣಾ ಇಲಾಖೆಯು ಎಚ್ಚರಿಕೆ ನೀಡಿದ ಬೆನ್ನಲ್ಲೆ ಶ್ರೀಲಂಕಾದಲ್ಲಿ ಭಾರಿ ಬಿಗಿ ಭದ್ರತೆ ಆಯೋಜಿಸಲಾಗಿದೆ. ಅಲ್ಲದೆ ಭದ್ರತಾ ಸಿಬ್ಬಂದಿಗಳ ಮೇಲೆ ಸಹ ಕಣ್ಣಿಡಲಾಗಿದ್ದು, ಅವರನ್ನೂ ತಪಾಸಣೆಗೆ ಒಳಪಡಿಸಲಾಗುತ್ತಿದೆ.

ಸಾಕಿದ ನಾಯಿಗಳನ್ನೇ ಉಗ್ರರ ವಿರುದ್ಧದ ಹೋರಾಟಕ್ಕೆ ಕಾಣಿಕೆ ನೀಡಿದ ಮಹಿಳೆ ಸಾಕಿದ ನಾಯಿಗಳನ್ನೇ ಉಗ್ರರ ವಿರುದ್ಧದ ಹೋರಾಟಕ್ಕೆ ಕಾಣಿಕೆ ನೀಡಿದ ಮಹಿಳೆ

ಉಗ್ರವಾದಿಗಳ ಬಾಂಬ್ ದಾಳಿಯ ನಂತರ ಶ್ರೀಲಂಕಾದಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಮುಖ ಮುಚ್ಚಿಕೊಳ್ಳುವಂತಹಾ ವಸ್ತ್ರಗಳನ್ನು ಧರಿಸುವುದನ್ನು ನಿಷೇಧಿಸಲಾಗಿದೆ. ಶ್ರೀಲಂಕಾದಲ್ಲಿ ಬುರ್ಖಾ ಸಹ ಧರಿಸುವಂತಿಲ್ಲ.

ಲಂಕಾದಲ್ಲಿ ಅನೇಕರ ಜೀವ ಉಳಿಸಿ, ಪ್ರಾಣತ್ಯಾಗ ಮಾಡಿದ ರಮೇಶ್ಲಂಕಾದಲ್ಲಿ ಅನೇಕರ ಜೀವ ಉಳಿಸಿ, ಪ್ರಾಣತ್ಯಾಗ ಮಾಡಿದ ರಮೇಶ್

ಕಳೆದ ಭಾನುವಾರವಷ್ಟೆ (ಏಪ್ರಿಲ್ 21) ರಂದು ಶ್ರೀಲಂಕಾದಲ್ಲಿ ಸರಣಿ ಬಾಂಬ್ ದಾಳಿ ನಡೆದಿತ್ತು, ಪುಟ್ಟ ದ್ವೀಪ ರಾಷ್ಟ್ರದಲ್ಲಿ ಬರೋಬ್ಬರಿ 359 ಮಂದಿ ಹತರಾಗಿದ್ದರು 500 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಭಾನುವಾರದ ದಾಳಿಯ ನಂತರವೂ ಅಲ್ಲಲ್ಲಿ ಮತ್ತೆ ಬಾಂಬ್ ದಾಳಿಗಳು ನಡೆದವು, ಈ ಬಾಂಬ್ ದಾಳಿಯ ಹೊಣೆಯನ್ನು ಐಸಿಸ್ ಉಗ್ರ ಸಂಘಟನೆ ಹೊತ್ತುಕೊಂಡಿದೆ.

English summary
Barely a week after suicide bombers struck Sri Lanka, the authorities have warned of more attacks. The warning issued by the ministerial security division has said that there could be more attacks and hence security must be at the highest alert levels.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X