ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಗ್ಲೆಂಡ್ ನಲ್ಲಿ ದಾವೂದ್ ಆಸ್ತಿ ವಶ: ಸ್ವಾಗತಿಸಿದ ಟ್ವಿಟ್ಟಿಗರು

|
Google Oneindia Kannada News

ಲಂಡನ್,ಸೆಪ್ಟೆಂಬರ್ 13: ಇಂಗ್ಲೆಂಡ್ ಸರ್ಕಾರ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಆಸ್ತಿಯನ್ನು ವಶಕ್ಕೆ ಪಡೆಯುತ್ತಿದ್ದಂತೆಯೇ ಇದು ಭಾರತದ ರಾಜತಾಂತ್ರಿಕ ಗೆಲುವು ಎಂದು ಟ್ವಿಟ್ಟರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರವನ್ನು ಶ್ಲಾಘಿಸಲಾಗುತ್ತಿದೆ.

ಭಾರತದಲ್ಲಿ ನಡೆದ ಭಯೋತ್ಪಾದಕ ಕೃತ್ಯಗಳಲ್ಲಿ ಬಹುಪಾಲು ಕೃತ್ಯಗಳ ಹೊಣೆಹೊತ್ತ ಮೋಸ್ಟ್ ವಾಂಟೆಡ್ ಭಯೋತ್ಪಾದಕ ದಾವೂದ್ ಪಾಕಿಸ್ತಾನದಲ್ಲೇ ಇದ್ದಾನೆ ಎಂದು ಇಡೀ ವಿಶ್ವವೂ ಹೇಳುತ್ತಿದ್ದರೂ ಪಾಕಿಸ್ತಾನ ಮಾತ್ರ ಈ ಸುದ್ದಿಯನ್ನು ಅಲ್ಲಗಳೆಯುತ್ತಲೇ ಇದೆ.

ದಾವೂದ್ ನ ಆಸ್ತಿ ಯುಕೆ ಸರಕಾರದ ವಶ, ಭಾರತಕ್ಕೆ ರಾಜತಾಂತ್ರಿಕ ಗೆಲುವುದಾವೂದ್ ನ ಆಸ್ತಿ ಯುಕೆ ಸರಕಾರದ ವಶ, ಭಾರತಕ್ಕೆ ರಾಜತಾಂತ್ರಿಕ ಗೆಲುವು

ಇದೀಗ ಇಂಗ್ಲೆಂಡಿನಲ್ಲಿ ದಾವೂದ್ ಆಸ್ತಿಯನ್ನು ಸರ್ಕಾರ್ ವಶಕ್ಕೆ ಪಡೆಯುತ್ತಿರುವುದು, ಪರೋಕ್ಷವಾಗಿ ದಾವೂದ್ ನಂಥ ಭಯೋತ್ಪಾದಕರಿಗೆ ಬೆಂಬಲ ನೀಡುತ್ತಿರುವ ಪಾಕಿಸ್ತಾನಕ್ಕೆ ಭಾರೀ ಪೆಟ್ಟು ಕೊಟ್ಟಂತಾಗಿದೆ. ಟ್ವಿಟ್ಟರ್ ನಲ್ಲಿ ದಾವೂದ್ ಇಬ್ರಾಹಿಂ ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಆಗಿದ್ದು, ಇಂಗ್ಲೆಂಡ್ ಸರ್ಕಾರದ ಈ ಗೆಲುವನ್ನು ಭಾರತದ ರಾಜತಾಂತ್ರಿಕ ಗೆಲುವು ಎಂದೇ ಬಣ್ಣಿಸಲಾಗುತ್ತಿದೆ.

ರಾಜತಾಂತ್ರಿಕ ಗೆಲುವು

ದಾವೂದ್ ಇಬ್ರಾಹಿಂನ 45,000 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಇಂಗ್ಲೆಂಡಿನಲ್ಲಿ ವಶಕ್ಕೆ ಪಡೆಯಲಾಗಿದೆ. ಇದು ಭಾರತಕ್ಕೆ ಸಂದ ಅತ್ಯಂತ ದೊಡ್ಡ ರಾಜತಾಂತ್ರಿಕ ಗೆಲುವು ಎಂದು ಅನಿತ್ ಘೋಷ್ ಎನ್ನುವವರು ಟ್ವೀಟ್ ಮಾಡಿದ್ದಾರೆ.

ಕಾಂಗ್ರೆಸ್ ಕಾಲಾವಧಿಯಲ್ಲಿ ಯಾಕಾಗಲಿಲ್ಲ?

ಮೋದಿಯವರ 56 ಇಂಚಿನ ಎದೆಯ ಬಗ್ಗೆ ಮಾತನಾಡುವವರಿಗೆ ಇಂದು ಉತ್ತರ ಸಿಕ್ಕಿರಬೇಕು! ಇದು ಕಾಂಗ್ರೆಸ್ ಕಾಲಾವಧಿಯಲ್ಲಿ ಯಾಕಾಗಲಿಲ್ಲ?! ಎಂದು ರಾಹುಲ್ ಎನ್ನುವವರು ಟ್ವೀಟ್ ಮಾಡಿದ್ದಾರೆ.

ಅಸಹಿಷ್ಣುತೆಗೆ ಜಾಗ!

ದಾವೂದ್ ಇಬ್ರಾಹಿಂನಿಂದ ಹಣ ಸ್ವೀಕರಿಸುತ್ತಿದ್ದ ಹಲವರಿಗೆ ಇದೊಂದು ಕೆಟ್ಟ ಸುದ್ದಿ! ಭಾರತದಲ್ಲಿ ಅಸಹಿಷ್ಣುತೆಯ ಗುಲ್ಲೆಬ್ಬಿಸಲು ಇದೊಂದು ಹೊಸ ಕಾರಣಎಂದು ಪಂಕಜ್ ಸಿಂಗ್ ಎನ್ನುವವರು ಟ್ವೀಟ್ ಮಾಡಿದ್ದಾರೆ.

ಕಮಲಿಕಾ ಬಸು

ಹೌದು, ಆಸ್ತಿ ವಶಕ್ಕೆ ಪಡೆದಿದ್ದು ನಿಜ. ಆದರೆ ಯಾರಾದರೂ ಅವರನ್ನು ಬಂಧಿಸುವ ಧೈರ್ಯ ತೋರುತ್ತಾರಾ? ಜಗತ್ತು ನಡೆಯುವುದೇ ಹೀಗೆ ಎಂದು ಕಮಲಿಕಾ ಬಸು ಎನ್ನುವವರು ಟ್ವೀಟ್ ಮಾಡಿದ್ದಾರೆ.

English summary
After Dawood Ibrahim's assets seized in UK, Many Twitterians says it is a diplomatic victory for India in Prime minister Narendra Modi regime.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X