ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೊಮ್ಮೆ ಮೋದಿ, ದಾವೂದ್ ಇಬ್ರಾಹಿಂ ಎದೆಯಲ್ಲಿ ಢವಢವ!

|
Google Oneindia Kannada News

ಇಸ್ಲಾಮಾಬಾದ್, ಮೇ 25: ಭಾರತದಲ್ಲಿ ಲೋಕಸಭೆ ಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಎದೆಯಲ್ಲಿ ಢವಢವ ಆರಂಭವಾಗಿದ್ದು, ಈಗಾಘಲೇ ಅವರು ಪಾಕಿಸ್ತಾನದ ಗುಪ್ತಚರ ಇಲಾಖೆ ಐಎಸ್ ಐ (ಇಂಟರ್ ಸರ್ವಿಸ್ ಇಂಟಲಿಜನ್ಸ್) ಜೊತೆ ಸಭೆ ನಡೆಸಿದ್ದಾರೆ ಎಂದು ಕೆಲವು ವರದಿಗಳು ತಿಳಿಸಿವೆ.

ಸಾಯುವುದಕ್ಕೂ ಮುನ್ನ ಶಕೀಲ್ ಹೇಗಿದ್ದ, ಇಲ್ಲಿದೆ ಫೋಟೋ!ಸಾಯುವುದಕ್ಕೂ ಮುನ್ನ ಶಕೀಲ್ ಹೇಗಿದ್ದ, ಇಲ್ಲಿದೆ ಫೋಟೋ!

ಈಗಾಗಲೇ ಪಾಕಿಸ್ತಾನದ ಕೆಲವು ಹಿರಿಯ ಅಧಿಕಾರಿಗಳ ಬಳಿಯೂ ದಾವೂದ್ ಮಾತುಕತೆ ನಡೆಸಿದ್ದು, ತಮ್ಮ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗದಂತೆ ಎಚ್ಚರಿಕೆ ವಹಿಸುವಂತೆ ಮನವಿ ಮಾಡಿದ್ದಾನೆ ಎನ್ನಲಾಗಿದೆ. ದಾವೂದ್ ತನ್ನ ಬಳಿ ಇಲ್ಲ ಎಂದು ಪಾಕಿಸ್ತಾನ ಎಷ್ಟೇ ಸುಳ್ಳು ಹೇಳಿದರೂ, ಆತನಿಗೆ ಪಾಕಿಸ್ತಾನವೇ ನೆಲೆ ನೀಡಿದೆ ಎಂಬುದು ಇಡೀ ವಿಶ್ವಕ್ಕೂ ಗೊತ್ತಿರುವ ಸಂಗತಿ.

ಛೋಟಾ ಶಕೀಲ್ ಕತೆ ಮುಗೀತು, ಐಎಸ್ಐ ವಶದಲ್ಲಿ ಡಿ ಗ್ಯಾಂಗ್ ಆಸ್ತಿ! ಛೋಟಾ ಶಕೀಲ್ ಕತೆ ಮುಗೀತು, ಐಎಸ್ಐ ವಶದಲ್ಲಿ ಡಿ ಗ್ಯಾಂಗ್ ಆಸ್ತಿ!

ಮೋದಿ ತಮ್ಮ ಅಧಿಕಾರಾವಧಿಯ ಮೊದಲ ಐದು ವರ್ಷದಲ್ಲೇ ವಿಶ್ವದ ಹಲವು ರಾಷ್ಟ್ರಗಳೊಂದಿಗೆ ಸೌಹಾರ್ದ ಸಂಬಂಧವನ್ನು ನೆಲೆಗೊಳಿಸಿದ್ದಾರೆ. ಭಾರತ ಅಮೆರಿಕ ಮತ್ತು ಇಸ್ರೇಲ್ ನಡುವೆ ಉತ್ತಮ ಬಾಂಧವ್ಯ ಏರ್ಪಟ್ಟಿದ್ದು, ದಾವೂದ್ ಇಬ್ರಾಹಿಂ ಗೆ ಇದು ಭಾರೀ ಆಘಾತವನ್ನುಂಟು ಮಾಡಿದೆ.

Dawood Ibrahim afraid of Narendra Modis 2nd time victory

ಪುಲ್ವಾಮಾ ದಾಳಿಯ ನಂತರ ಇಡೀ ವಿಶ್ವವೂ ಭಾರತದ ಬೆಂಬಲಕ್ಕೆ ನಿಂತು ಪಾಕಿಸ್ತಾನಕ್ಕೆ ಈಗಾಗಲೇ ಮುಖಭಂಗವಾಗಿದೆ. ದಾವೂದ್ ಇಬ್ರಾಹಿಂನನ್ನು ಭಾರತಕ್ಕೆ ಹಸ್ತಾಂತರಿಸುವ ಬಗ್ಗೆಯೂ ಮೋದಿ ಅವರ ಮುಂದಿನ ಅಧಿಕಾರಾವಧಿಯಲ್ಲಿ ಭಾರತ ಅಂತಾರಾಷ್ಟ್ರೀಯ ಮಟ್ಟದಿಂದ ಒತ್ತಡ ಹೇರಿದ್ದೇ ಆದರೆ ಪಾಕಿಸ್ತಾನಕ್ಕೆ ದಾವೂದ್ ನನ್ನು ಹಸ್ತಾಂತರಿಸದೆ ಬೇರೆ ದಾರಿ ಇಲ್ಲದಂತಾಗುತ್ತದೆ. ದಾವೂದ್ ಗೂ ಅದು ಗೊತ್ತಿರುವ ಸಂಗತಿಯಾಗಿರುವುದರಿಂದ ಆತನಿಗೂ ಆತಂಕ ಶುರುವಾಗಿದೆ.

English summary
After PM Narendra Modi comes to power for the second time, Sources said, Underworld Dawood Ibrahim, who is hiding in Pakistan for over two decades now, is very afraid
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X