ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಛಲಬಿಡದೆ ಹಿಮದ ಬೆಟ್ಟವೇರಿದ ಕರಡಿಮರಿ ಸಾಹಸದ ಹಿಂದಿನ ದುಃಖದ ಕಥೆ

|
Google Oneindia Kannada News

ನವದೆಹಲಿ, ಡಿಸೆಂಬರ್ 10: 'ಯಶಸ್ಸು ಅಷ್ಟು ಸುಲಭಕ್ಕೆ ದಕ್ಕುವುದಿಲ್ಲ. ಮತ್ತೆ ಮತ್ತೆ ಪ್ರಯತ್ನಿಸಬೇಕು' ಹೀಗೊಂದು ಚೆಂದದ ಮತ್ತು ಉತ್ತೇಜನ ಮೂಡಿಸುವ ನಾಣ್ಣುಡಿಯೊಂದಿದೆ. ಈ ನುಡಿ ಇತ್ತೀಚೆಗೆ ವ್ಯಾಪಕವಾಗಿ ಚಾಲ್ತಿಗೆ ಬಂದಿತ್ತು.

ಬಹುತೇಕರ ವಾಟ್ಸಾಪ್, ಫೇಸ್ ಬುಕ್, ಟ್ವಿಟ್ಟರ್ ಗೋಡೆಗಳಲ್ಲಿ ಈ ನುಡಿಯನ್ನು ಹೊತ್ತುಕೊಂಡ ಮುದ್ದಾದ ವಿಡಿಯೋವೊಂದು ಹರಿದಾಡುತ್ತಿತ್ತು.

ಗಿರ್‌ ಅರಣ್ಯದ 21 ಸಿಂಹಗಳ ಸಾವಿನ ಹಿಂದಿನ ರಹಸ್ಯ ಬಯಲಾಯ್ತುಗಿರ್‌ ಅರಣ್ಯದ 21 ಸಿಂಹಗಳ ಸಾವಿನ ಹಿಂದಿನ ರಹಸ್ಯ ಬಯಲಾಯ್ತು

ಪುಟ್ಟ ಕರಡಿಮರಿಯೊಂದು ಅಮ್ಮನೊಂದಿಗೆ ಹಿಮಾವೃತ ಬೆಟ್ಟವನ್ನು ಏರಲು ಹರಸಾಹಸ ಪಡುವುದು, ಇನ್ನೇನು ತುದಿಗೆ ತಲುಪಿತು ಎನ್ನುವಾಗ ತಾಯಿ ಕರಡಿ ಹೆದರಿಸಿ ಮರಿ ಕರಡಿ ಮತ್ತೆ ಜಾರಿ ಹೋಗುವುದು. ಆದರೂ ಪಟ್ಟುಬಿಡದೆ ಮತ್ತೆ ಹಿಮದೊಳಗೆ ಸಾಗಿ ಅಮ್ಮನನ್ನು ಸೇರುವುದು...

ಈ ವಿಡಿಯೋವನ್ನು ಅದೆಷ್ಟೋ ಲಕ್ಷ ಮಂದಿ ಹಂಚಿಕೊಂಡಿದ್ದಾರೆ. ಸೋಲು ಎದುರಾದರೂ ಎದೆಗುಂದದೆ ಮತ್ತೆ ಪ್ರಯತ್ನಿಸಬೇಕು ಎಂದು ಬರೆದುಕೊಂಡಿದ್ದಾರೆ. ಅದನ್ನು ಸೆರೆಹಿಡಿದ ಡ್ರೋನ್ ಕ್ಯಾಮೆರಾದ ಚಾಣಾಕ್ಷತೆಯನ್ನೂ ಹಾಡಿ ಹೊಗಳಿದ್ದಾರೆ.

ಆದರೆ ಆ ಕರಡಿಗಳು ಭಯಗೊಳ್ಳಲು, ಮರಿ ಕರಡಿ ಜಾರಿ ಬೀಳಲು ಕಾರಣ ಬೇರೆಯದೇ ಇದೆ. ಅದಕ್ಕೆ ಮನುಷ್ಯರೇ ಕಾರಣ ಎನ್ನುವುದು ಖೇದ ಸಂಗತಿ.

'ವಿಲನ್' ಯಶಸ್ವಿಗೆ ಕೋಣ ಬಲಿಕೊಟ್ಟ ಹುಚ್ಚು ಅಭಿಮಾನಿಗಳು: ಆಕ್ರೋಶ ಹೊರಹಾಕಿದ ಹಿಂದೂ ಸಂಘಟನೆಗಳು'ವಿಲನ್' ಯಶಸ್ವಿಗೆ ಕೋಣ ಬಲಿಕೊಟ್ಟ ಹುಚ್ಚು ಅಭಿಮಾನಿಗಳು: ಆಕ್ರೋಶ ಹೊರಹಾಕಿದ ಹಿಂದೂ ಸಂಘಟನೆಗಳು

ರಷ್ಯಾದ ಪೂರ್ವ ಭಾಗದಲ್ಲಿ ಈ ವಿಡಿಯೋವನ್ನು ಡ್ರೋನ್ ಸೆರೆಹಿಡಿದಿತ್ತು. ಹಿಮಾಚ್ಛಾದಿತ ಇಳಿಜಾರಿನಲ್ಲಿ ತಾಯಿಯನ್ನು ಹಿಂಬಾಲಿಸುವ ಮರಿಕರಡಿಯ ವಿಡಿಯೋ ವೈರಲ್ ಆಗಿತ್ತು.

ವೈರಲ್ ಹಾಂಗ್ ಚಾನೆಲ್ ಈ ವಿಡಿಯೋವನ್ನು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿತ್ತು. ಇದನ್ನು ಕೆನಡಾದ ಪತ್ರಕರ್ತೆ ಜಿಯಾ ಟೊಂಗ್ ಟ್ವಿಟ್ಟರ್‌ನಲ್ಲಿ ಹಂಚಿಕೊಳ್ಳುತ್ತಿದ್ದಂತೆಯೇ ವೈರಲ್ ಆಗತೊಡಗಿತು. ಈಗಾಗಲೇ ಈ ವಿಡಿಯೋ 1,87,000 ಬಾರಿ ರೀಟ್ವೀಟ್ ಆಗಿದೆ. 5,32,000 ಬಾರಿ ಹಂಚಿಕೆಯಾಗಿದೆ.

ಎಲ್ಲರೂ ಇದು ಸ್ಫೂರ್ತಿದಾಯಕ ವಿಡಿಯೋ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ, ಈ ವೈರಲ್ ವಿಡಿಯೋ ಒಂದು ಕರಾಳ ಸತ್ಯದ ಮುಖವನ್ನೂ ಹೊಂದಿದೆ. ಅಲ್ ಜಜೀರಾ ಸುದ್ದಿ ವಾಹಿನಿ ಘಟನೆಯ ಹಿಂದಿನ ಬೇಸರದ ಸಂಗತಿಯನ್ನು ಪ್ರಸಾರ ಮಾಡಿದೆ.

ಡ್ರೋನ್ ಹೆದರಿಸಲು ಪ್ರಯತ್ನ

ಕರಡಿಗಳು ತಮ್ಮ ಜಗತ್ತಿನಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಿದ್ದವು. ತಾಯಿಯ ಹಿಂದೆಯೇ ಮರಿ ಕರಡಿ ಕಷ್ಟಪಟ್ಟು ಬೆಟ್ಟವನ್ನೇರುತ್ತಿತ್ತು. ಅದನ್ನು ತುಸು ದೂರದಿಂದ ಸೆರೆಹಿಡಿಯುತ್ತಿದ್ದ ಡ್ರೋನ್, ಮರಿ ಕರಡಿ ತುದಿ ತಲುಪುವ ವೇಳೆ ಅವುಗಳ ಸಮೀಪ ಸಾಗಿತು. ಇದು ಕರಡಿಗಳಲ್ಲಿ ಗಾಬರಿ ಮೂಡಿಸಿತು. ಡ್ರೋನ್ ತನ್ನ ಮರಿಯನ್ನು ಹಿಡಿದುಕೊಳ್ಳುತ್ತದೆ ಎಂಬ ಭಯದಿಂದ ತಾಯಿ ಕರಡಿ ಡ್ರೋನ್‌ಗೆ ಹೆದರಿಸಲು ತನ್ನ ಕಾಲನ್ನು ಬೀಸಿತು. ಆದರೆ, ಇನ್ನಷ್ಟು ಭಯಗೊಂಡ ಮರಿಕರಡಿ ಅಲ್ಲಿಂದ ಜಾರಿ ಹೋಯಿತು.

ಜಾಲತಾಣಗಳಲ್ಲಿ ಚರ್ಚೆ

ಕ್ರಿಕೆಟಿಗ ಕೇದಾರ್ ಜಾಧವ್, ಉದ್ಯಮಿ ಆನಂದ್ ಮಹೀಂದ್ರಾ ಸೇರಿದಂತೆ ಅನೇಕರು ಈ ವಿಡಿಯೋವನ್ನು ಪ್ರೇರಣಾದಾಯಕ ಎಂದು ಹಂಚಿಕೊಂಡಿದ್ದಾರೆ.

ಈ ವಿಡಿಯೋ ಬಗ್ಗೆ ಆರಂಭದಲ್ಲಿ ಮೆಚ್ಚುಗೆ ವ್ಯಕ್ತವಾಗಿದ್ದರೂ, ಡ್ರೋನ್‌ನಿಂದ ಪ್ರಾಣಿಗಳ ಮೇಲೆ ಉಂಟಾಗುವ ಪರಿಣಾಮದ ಕುರಿತು ಬಳಿಕ ವ್ಯಾಪಕ ಚರ್ಚೆಗಳು ಆರಂಭವಾಗಿವೆ.

ಪರಿಸರ ಪ್ರೇಮಿಗಳು ಮತ್ತು ವನ್ಯಜೀವಿ ತಜ್ಞರು ಈ ವಿಡಿಯೋ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಡ್ರೋನ್ ಕರಡಿಗಳ ಜೀವಕ್ಕೆ ಬೆದರಿಕೆಯೊಡ್ಡಿತ್ತು ಮತ್ತು ಅವರಿಗೆ ಕಿರುಕುಳ ನೀಡಿತ್ತು ಎಂದು ಆರೋಪಿಸಿದ್ದಾರೆ.

ಅಪಾಯಕಾರಿ ಕೃತ್ಯ

'ಕರಡಿಮರಿಯೊಂದು ಹಿಮಾಚ್ಛಾದಿತ ಇಳಿಜಾರಿನಲ್ಲಿ ಛಲಬಿಡದೆ ಹತ್ತಿ ಅಮ್ಮನ ಬಳಿ ಸೇರಿಕೊಳ್ಳುವುದು ಹೋರಾಟದ ಮನೋಭಾವಕ್ಕೆ ಉಪಮೆಯಂತಿದೆ ಎಂದು ಬಣ್ಣಿಸಲಾಗುತ್ತಿದೆ. ಆದರೆ, ಅದು ಸತ್ಯವಲ್ಲ. ಒಬ್ಬ ಬೇಜವಾಬ್ದಾರಿಯುತ ಡ್ರೋನ್ ಚಾಲಕನ ಅಪಾಯಕಾರಿ ಕೃತ್ಯವಿದು' ಎಂದು ಅಮೆರಿಕದ ಪ್ರೊಫೆಸರ್ ಡಾ. ಜಾಕ್ವೆಲಿನ್ ಗಿಲ್ ಟ್ವೀಟ್ ಮಾಡಿದ್ದಾರೆ.

ಫೋಟೊ, ವಿಡಿಯೋ ಮಾಡಬೇಡಿ

ಫೋಟೊ, ವಿಡಿಯೋ ಮಾಡಬೇಡಿ

ಛಾಯಾಚಿತ್ರ, ಸೆಲ್ಫಿ ಅಥವಾ ವಿಡಿಯೋಕ್ಕಾಗಿ ಪ್ರಾಣಿಗಳಿಗೆ ಕಿರುಕುಳ ನೀಡುವುದು ಸರಿಯಲ್ಲ. ಪ್ರಾಣಿಗಳಿಗೆ ಬದುಕಲು ಅವುಗಳ ಜಾಗದಲ್ಲಿ ಅವಕಾಶ ನೀಡುವ ಮೂಲಕ ಗೌರವ ನೀಡಿ. ವಿಡಿಯೋ ವೈರಲ್ ಆಗಬೇಕು ಎಂದು ಯಾರೋ ಬಯಸಿದ ಕಾರಣಕ್ಕೆ ಪ್ರಾಣಿಗಳು ಗಾಬರಿಯಿಂದ ಅಥವಾ ಅಪಾಯದಲ್ಲಿ ಇರುವ ವಿಡಿಯೋಗಳನ್ನು ಹಂಚಿಕೊಳ್ಳಬೇಡಿ ಎಂದು ಜಾಕ್ವೆಲಿನ್ ಸಲಹೆ ನೀಡಿದ್ದಾರೆ.

English summary
A video of a bear and its cub trying to clim a snow covered slope in eastern Russia went viral on social media. Some described it as motivational, but wildlife experts said using drone is very harmfull to animals.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X