ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕಾದ ಪತ್ರಕರ್ತನ ಕೊಂದವರಿಗೆ ಪಾಕ್ ನಲ್ಲಿ ಬಿಡುಗಡೆ ಭಾಗ್ಯ!

|
Google Oneindia Kannada News

ಕರಾಚಿ, ಜನವರಿ.28: ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ಪತ್ರಕರ್ತ ಡೇನಿಯಲ್ ಪರ್ಲ್ ಅವರ ಅಪಹರಣ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಓಮರ್ ಸಯೀದ್ ಶೇಖ್ ಬಿಡುಗಡೆ ಹಾದಿ ಸುಗಮವಾಗಿದೆ.

ಆರೋಪಿ ಓಮರ್ ಸಯೀದ್ ಶೇಖ್ ಬಿಡುಗಡೆಗೆ ಪಾಕಿಸ್ತಾನದ ಕೆಳಹಂತದ ನ್ಯಾಯಾಲಯ ನೀಡಿದ ಆದೇಶವನ್ನು ಪ್ರಶ್ನಿಸಿ ಪರ್ಲ್ ಸಂಬಂಧಿಕರು ಸಲ್ಲಿಸಿದ ಮೇಲ್ಮನವಿ ಅರ್ಜಿಯನ್ನು ಪಾಕಿಸ್ತಾನದ ಸುಪ್ರೀಂಕೋರ್ಟ್ ತಿರಸ್ಕರಿಸಿದೆ.

ಡೇನಿಯಲ್ ಪರ್ಲ್ ಹತ್ಯೆ: ಆರೋಪಿ ಒಮರ್ ತಕ್ಷಣ ಬಿಡುಗಡೆಗೆ ಪಾಕ್ ಕೋರ್ಟ್ ಆದೇಶಡೇನಿಯಲ್ ಪರ್ಲ್ ಹತ್ಯೆ: ಆರೋಪಿ ಒಮರ್ ತಕ್ಷಣ ಬಿಡುಗಡೆಗೆ ಪಾಕ್ ಕೋರ್ಟ್ ಆದೇಶ

ಕಳೆದ ಡಿಸೆಂಬರ್‌ನಲ್ಲಿ ಸಿಂಧ್ ಹೈಕೋರ್ಟ್‌ನ ದ್ವಿಸದಸ್ಯ ಪೀಠವು ಅರ್ಜಿ ವಿಚಾರಣೆ ನಡೆಸಿತು. ಆರೋಪಿ ಶೇಖ್ ಮತ್ತು ಇತರ ಆರೋಪಿಗಳನ್ನು "ಯಾವುದೇ ರೀತಿಯ ಬಂಧನಕ್ಕೆ ಒಳಪಡಿಸದಂತೆ" ಭದ್ರತಾ ಸಂಸ್ಥೆಗಳಿಗೆ ನಿರ್ದೇಶಿಸಿತ್ತು. ಅಲ್ಲದೇ, ಆರೋಪಿಗಳ ಬಂಧನಕ್ಕೆ ಸಂಬಂಧಿಸಿದ ಸಿಂಧ್ ಸರ್ಕಾರದ ಎಲ್ಲಾ ಅಧಿಸೂಚನೆಗಳನ್ನು ಅನೂರ್ಜಿತ ಎಂದು ಘೋಷಿಸಿತ್ತು.

ಶನಿವಾರ ನಾಲ್ವರು ಆರೋಪಿಗಳ ಬಿಡುಗಡೆ ಸಾಧ್ಯತೆ

ಶನಿವಾರ ನಾಲ್ವರು ಆರೋಪಿಗಳ ಬಿಡುಗಡೆ ಸಾಧ್ಯತೆ

ಸದ್ಯಕ್ಕೆ ಓಮರ್ ಸಯೀದ್ ಶೇಖ್ ಸೇರಿದಂತೆ ನಾಲ್ವರು ಆರೋಪಿಗಳನ್ನು ಕರಾಚಿಯ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದೆ. ಸಿಂಧ್ ಹೈಕೋರ್ಟ್‌ ನೀಡಿದ ಬಿಡುಗಡೆ ಆದೇಶದ ಪ್ರತಿಯನ್ನು ಪಡೆಯುವುದು ತಡವಾದ ಹಿನ್ನೆಲೆ ಗುರುವಾರವೇ ಆರೋಪಿಗಳನ್ನು ಬಿಡುಗಡೆಗೊಳಿಸುವುದಕ್ಕೆ ಆಗುವುದಿಲ್ಲ ಎಂದು ಜೈಲು ಅಧೀಕ್ಷಕರು ತಿಳಿಸಿದ್ದಾರೆ. ಶುಕ್ರವಾರ ಸರ್ಕಾರಿ ರಜೆ ಇರುವ ಹಿನ್ನೆಲೆ ನಾಲ್ವರು ಆರೋಪಿಗಳನ್ನು ಶನಿವಾರ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ.

ಆರೋಪಿಗಳ ಬಿಡುಗಡೆ ಆದೇಶಕ್ಕೆ ಅಮೆರಿಕಾ ಕಳವಳ

ಆರೋಪಿಗಳ ಬಿಡುಗಡೆ ಆದೇಶಕ್ಕೆ ಅಮೆರಿಕಾ ಕಳವಳ

"ಪತ್ರಕರ್ತ ಡೇನಿಯಲ್ ಪರ್ಲ್ ಅಪಹರಣ ಮತ್ತು ಹತ್ಯೆಗೆ ಕಾರಣವಾದ ಭಯೋತ್ಪಾದಕರನ್ನು ಬಿಡುಗಡೆ ಮಾಡುವಂತೆ ಕಳೆದ ಡಿಸೆಂಬರ್.24ರಂದು ಸಿಂಧ್ ಹೈಕೋರ್ಟ್ ತೀರ್ಪು ನೀಡಿರುವ ಕುರಿತಾದ ವರದಿಗಳಿಂದ ನಾವು ತೀವ್ರ ಕಳವಳಗೊಂಡಿದ್ದೇವೆ. ಈ ಸಮಯದಲ್ಲಿ ಆರೋಪಿಗಳನ್ನು ಬಿಡುಗಡೆ ಮಾಡಿರದ ಬಗ್ಗೆ ನಮಗೆ ಭರವಸೆ ನೀಡಲಾಗಿದೆ" ಎಂದು ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ಟ್ವೀಟ್ ಮಾಡಿದೆ.

ಅಮೆರಿಕಾದ ಪತ್ರಕರ್ತ ಪರ್ಲ್ ಕುಟುಂಬಕ್ಕೆ ಬೆಂಬಲ

ಅಮೆರಿಕಾದ ಪತ್ರಕರ್ತ ಪರ್ಲ್ ಕುಟುಂಬಕ್ಕೆ ಬೆಂಬಲ

ಪತ್ರಕರ್ತ ಡೇನಿಯಲ್ ಪರ್ಲ್ ಹತ್ಯೆ ಪ್ರಕರಣದಲ್ಲಿ ನಡೆಯುವ ಎಲ್ಲ ಬೆಳವಣಿಗೆಗಳ ಬಗ್ಗೆ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ಮೇಲ್ವಿಚಾರಣೆ ನಡೆಸುತ್ತದೆ. ಧೈರ್ಯಶಾಲಿ ಪತ್ರಕರ್ತರಾಗಿ ಸೇವೆ ಸಲ್ಲಿಸಿದ ಅವರನ್ನು ಗೌರವಿಸುವುದರ ಜೊತೆಗೆ ಅವರ ಕುಟುಂಬಕ್ಕೆ ಬೆಂಬಲವಾಗಿ ನಿಲ್ಲುತ್ತೇವೆ. ಪರ್ಲ್ ಸಾವಿಗೆ ನ್ಯಾಯ ಕೊಡುವಂತೆ ಪಾಕಿಸ್ತಾನದ ಮೇಲೆ ಒತ್ತಡ ಹೇರುವುದಾಗಿ ಅಮೆರಿಕಾ ಹೇಳಿಕೊಂಡಿದೆ.

ಆರೋಪಿ ಶಿಕ್ಷೆ ಪ್ರಮಾಣ ಏಳು ವರ್ಷಕ್ಕೆ ಇಳಿಸಿದ ಕೋರ್ಟ್

ಆರೋಪಿ ಶಿಕ್ಷೆ ಪ್ರಮಾಣ ಏಳು ವರ್ಷಕ್ಕೆ ಇಳಿಸಿದ ಕೋರ್ಟ್

ಕಳೆದ ಏಪ್ರಿಲ್ ತಿಂಗಳಿನಲ್ಲಿ ಪ್ರಕರಣದ ವಿಚಾರಣೆ ನಡೆಸಿದ ಸಿಂಧ್ ಹೈಕೋರ್ಟ್ ಆರೋಪಿ ಓಮರ್ ಸಯೀದ್ ಶೇಖ್ ಅವರಿಗೆ ಮೊದಲು ನೀಡಿದ್ದ ಮರಣ ದಂಡನೆ ಬದಲಿಗೆ ಏಳು ವರ್ಷ ಜೈಲುಶಿಕ್ಷೆಗೆ ಗುರಿಪಡಿಸುವಂತೆ ಆದೇಶಿಸಿತು. ಇದರ ಜೊತೆಗೆ ಸುಮಾರು ಎರಡು ದಶಕಗಳ ನಂತರ ಅದೇ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಫಹಾದ್ ನಸೀಮ್, ಶೇಖ್ ಆದಿಲ್ ಮತ್ತು ಸಲ್ಮಾನ್ ಸಾಕಿಬ್ ಎಂಬ ಮೂವರು ಸಹಾಯಕರನ್ನು ಜೈಲುಶಿಕ್ಷೆಯಿಂದ ಖುಲಾಸೆಗೊಳಿಸಿ ತಕ್ಷಣ ಬಿಡುಗಡೆಗೊಳಿಸುವಂತೆ ಆದೇಶಿಸಿತು.

ಡೇನಿಯಲ್ ಪರ್ಲ್ ಹತ್ಯೆ ಪ್ರಕರಣದ ಹಿನ್ನೆಲೆ

ಡೇನಿಯಲ್ ಪರ್ಲ್ ಹತ್ಯೆ ಪ್ರಕರಣದ ಹಿನ್ನೆಲೆ

ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ವಾಲ್ ಸ್ಟ್ರೀಟ್ ಜರ್ನಲ್ ಪತ್ರಿಕೆಯಲ್ಲಿ ಡೇನಿಯಲ್ ಪರ್ಲ್ ಅವರು ದಕ್ಷಿಣ ಏಷ್ಯಾ ಬ್ಯೂರೋ ಮುಖ್ಯಸ್ಥರಾಗಿದ್ದರು. ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಹಾಗೂ ಅಲ್ ಖೈದಾ ಸಂಘಟನೆ ನಡುವಿನ ಸಂಬಂಧದ ಕುರಿತು ತನಿಖಾ ವರದಿ ಮಾಡುವುದಕ್ಕಾಗಿ 2002ರಲ್ಲಿ ಪಾಕಿಸ್ತಾನಕ್ಕೆ ತೆರಳಿದ್ದರು. ಈ ವೇಳೆಯಲ್ಲಿ ಪತ್ರಕರ್ತನನ್ನು ಅಪಹರಿಸಿ ಹತ್ಯೆ ಮಾಡಲಾಗಿತ್ತು.

English summary
Daniel Pearl’s Murder Case: Pak Supreme Court Refused To Stay Lower Court Order, Family Loses Appeal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X