ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೇಪಾಳದಲ್ಲಿ ಕೊರೋನಾ ವೈರಸ್ ಪತ್ತೆ, ಭಾರತದಲ್ಲಿ ಕಟ್ಟೆಚ್ಚರ

|
Google Oneindia Kannada News

ಕಠ್ಮಂಡು, ಜನವರಿ 24: ನೇಪಾಳದಲ್ಲಿ ಅಪಾಯಕಾರಿ ಕರೋನಾ ವೈರಸ್ ಪತ್ತೆ ಆಗಿದೆ. ವ್ಯಕ್ತಿಯೊಬ್ಬರು ಕರೋನಾ ವೈರಸ್‌ನಿಂದ ಬಾಧಿತರಾಗಿರುವುದನ್ನು ಅಧಿಕಾರಿಗಳು ಖಚಿತಪಡಿಸಿದ್ದಾರೆ.

32 ವಯಸ್ಸಿನ ವ್ಯಕ್ತಿಯೊಬ್ಬರು ಇತ್ತೀಚೆಗೆ ಚೀನಾಕ್ಕೆ ಭೇಟಿ ನೀಡಿದ್ದರು, ಅವರು ನೇಪಾಳಕ್ಕೆ ವಾಪಸ್ಸಾಗಿದ್ದು, ಅವರ ದೇಹದಲ್ಲಿ ಕರೋನಾ ವೈರಸ್ ಇರುವುದು ಪತ್ತೆಯಾಗಿದೆ. ನೇಪಾಳದ ಆರೋಗ್ಯ ಮತ್ತು ಜನಸಂಖ್ಯೆ ನಿರ್ವಹಣೆ ಇಲಾಖೆಯು ಸುದ್ದಿಗೋಷ್ಠಿ ನಡೆಸಿ ಮಾಹಿತಿಯನ್ನು ಖಚಿತಪಡಿಸಿದೆ.

ನೆರೆಯ ರಾಷ್ಟ್ರದಲ್ಲಿ ಅಪಾಯಕಾರಿ ಕರೋನಾ ವೈರಸ್‌ ಪತ್ತೆ ಆಗಿರುವ ಕಾರಣ ಭಾರತದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

Dangerous Coronavirus Found In Nepal, Alert In India

ಚೀನಾ, ಜಪಾನ್, ದಕ್ಷಿಣ ಕೊರಿಯಾ, ಅಮೆರಿಕ, ದಕ್ಷಿಣ ಏಷ್ಯಾದ ಇನ್ನೂ ಕೆಲವು ನಗರಗಳಲ್ಲಿ ಪತ್ತೆಯಾಗಿದೆ. ಈ ಪಟ್ಟಿಗೆ ಈ ನೇಪಾಳವೂ ಸೇರಿಕೊಂಡಿದೆ.

ಅಪಾಯಕಾರಿ ವೈರಸ್‌ ಚೀನಾದಲ್ಲಿ ಈಗಾಗಲೇ 24 ಮಂದಿಯನ್ನು ಬಲಿ ತೆಗೆದುಕೊಂಡಿದೆ. 830 ಮಂದಿ ಕರೋನಾ ವೈರಸ್‌ಗೆ ಬಾಧಿತರಾಗಿರುವುದು ಗೊತ್ತಾಗಿದ್ದು, ಚಿಕಿತ್ಸೆ ಮುಂದುವರೆದಿದೆ.

English summary
Dangerous Coronavirus found in Nepal. A 32 year old guy who came back from China had Coronavirus. Alert issued in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X