ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುಟುಕು ಸುದ್ದಿ: ಹೈದರಾಬಾದಿನಲ್ಲಿ ಅಮಿತ್ ಶಾ ರೋಡ್ ಶೋ

|
Google Oneindia Kannada News

ಬೆಂಗಳೂರು, ನ. 29: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ಅಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.

11:30-ನಿವಾರ್ ಚಂಡಮಾರುತದ ಆರ್ಭಟ ನಂತರ ಮತ್ತೊಮ್ಮೆ ವಾಯುಭಾರ ಕುಸಿತದಿಂದ ತಮಿಳು ನಾಡಿನಲ್ಲಿ ಮತ್ತೆ ಮಳೆ ಆರಂಭವಾಗಿದೆ.

2:45: ಸಿಕಂದರಾಬಾದಿನ ವಾರಸಿಗುಡದಲ್ಲಿ ರೋಡ್ ಶೋ ನಡೆಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ. ಬಿಜೆಪಿ ಪರ ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಗಾಗಿ ಪ್ರಚಾರ ನಿರತರಾಗಿದ್ದಾರೆ.

2:00- ಸುಮಾರು 204 ಕೋಟಿ ರು ಮೌಲ್ಯದ ಪ್ರಧಾನ ಮಂತ್ರಿ ಗ್ರಾಮ ರಸ್ತೆ ಯೋಜನೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್.

1:30- ಸಿಡ್ನಿಯಲ್ಲಿ ನಡೆದಿರುವ 2ನೇ ಏಕದಿನ ಪಂದ್ಯದಲ್ಲಿ ಭಾರತ ವಿರುದ್ಧ 289/4 ಬೃಹತ್ ಮೊತ್ತ ಕಲೆ ಹಾಕಿದ ಆಸ್ಟ್ರೇಲಿಯಾ.

1:00-ನವೆಂಬರ್ 30ರಂದು ವಾರಣಾಸಿಯ ರಾಜ್ ಘಾಟ್ ಗೆ ತೆರಳಿರುವ ಪ್ರಧಾನಿ ಮೋದಿ. ಗಂಗಾನದಿಗೆ ಬೋಟ್ ಗಳು ಇಳಿಸದಂತೆ ಸೂಚನೆ. ಬಿಗಿ ಬಂದೋಬಸ್ತ್, ಎಲ್ಲೆಡೆ ಸುರಕ್ಷತೆ, ಸಿದ್ಧತೆ.

12:30: ಹೈದರಾಬಾದ್ ಹಳೆ ಪ್ರದೇಶದಲ್ಲಿರುವ ಭಾಗ್ಯಲಕ್ಷ್ಮಿ ದೇಗುಲಕ್ಕೆ ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ.

10:30- ವೈಕುಂಠ ಏಕಾದಶಿಯ ನಿಮಿತ್ತ ಡಿಸೆಂಬರ್ 25 ರಿಂದ ಜನವರಿ 3 ರ ತನಕ ತಿರುಮಲ ದೇಗುಲದ ವೈಕುಂಠದ ಬಾಗಿಲು ತೆರೆಯಲು ನಿರ್ಧರಿಸಲಾಗಿದೆ ಎಂದ ಟಿಟಿಡಿ ಮುಖ್ಯಸ್ಥ ವೈ. ವಿ ಸುಬ್ಬಾರೆಡ್ಡಿ.

10:00: ದೆಹಲಿ ಸರ್ಕಾರವು ಹೊಸ ಮಾರ್ಗಸೂಚಿ ಹೊರಡಿಸಿದ್ದು, ಅಗತ್ಯ ಸೇವೆಯಲ್ಲಿದ್ದ ಉದ್ಯೋಗಿಗಳಿಗೆ ಶೇ 50ರಷ್ಟು ಮಂದಿ ವರ್ಕ್ ಫ್ರಂ ಹೋಂ ಆಯ್ಕೆ ಮಾಡಿಕೊಳ್ಳಲು ಸೂಚಿಸಲಾಗಿದೆ.

9:45: ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ಮೊಘಲ್ ರಸ್ತೆಯಲ್ಲಿ ಹಿಮಚ್ಛಾದಿತ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಲು ಯತ್ನ, ಹಿಮರಾಶಿಯನ್ನು ಸರಿಯುವ ಯತ್ನ ನಡೆದಿದೆ.

9:30-ಕೊವಿಡ್ 19 ಟಾಸ್ಕ್ ಫೋರ್ಸ್ ಗೆ ಮತ್ತೆ ಮೂವರ ಸೇರ್ಪಡೆ.ಜಿಲ್ ಜಿಮ್, ಡೇವಿಡ್ ಮೈಕಲ್, ಜೇನ್ ಹಾಪ್ಕಿನ್ಸ್ ಅವರ ಸೇರ್ಪಡೆ ಬಗ್ಗೆ ಜೋ ಬೈಡನ್ ವಕ್ತಾರರಿಂದ ಮಾಹಿತಿ.

9:20: ಕ್ರೊಯೇಷಿಯಾದ ಪ್ರಧಾನಿ ಆಂಡ್ರೆ ಪ್ಲೆಂಕೊವಿಚ್ ಅವರಿಗೆ ಕೊವಿಡ್ 19 ಸೋಂಕು ತಗುಲಿದ್ದು, ಐಸೋಲೇಷನ್ ನಲ್ಲಿರಲು ಸೂಚಿಸಲಾಗಿದೆ ಎಂದು ವಕ್ತಾರರಿಗೆ ಹೇಳಿಕೆ.

9:15-ಛತ್ತೀಸ್ ಗಢದಲ್ಲಿ ಐಇಡಿ ಸ್ಫೋಟದಲ್ಲಿ ಐವರು ಸಿಆರ್ ಪಿಎಫ್ ಕೋಬ್ರಾ ಘಟಕದ ಯೋಧರಿಗೆ ಗಾಯಗಳಾಗಿವೆ.

Daily Roundup 29 November- Latest News And Updates On State, National and International

9:00-ಪ್ರಧಾನಿ ನರೇಂದ್ರ ಮೋದಿ ಅವರ ತಿಂಗಳ ರೇಡಿಯೋ ಕಾರ್ಯಕ್ರಮ ಮನ್ ಕೀ ಬಾತ್ ನ 71ನೇ ಆವೃತ್ತಿ ಇಂದು ಪ್ರಸಾರವಾಗಲಿದೆ.

English summary
Daily Roundup 29 November: We are covering the top news and updates about political, national, international, cinema, sports, business and covid-19. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X