ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ದಿನ ಈ ಕ್ಷಣ: ದೇಶ, ವಿದೇಶಗಳ ಚುಟುಕು ಸುದ್ದಿ ಕ್ವಿಕ್ ಲುಕ್

|
Google Oneindia Kannada News

ಬೆಂಗಳೂರು, ನ. 24: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ಅಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.


10: 30:
ಆಫ್ಘಾನಿಸ್ತಾನ ಕೇಂದ್ರ ಭಾಗದಲ್ಲಿರುವ ಬಾಮಿಯಾನ್ ಪ್ರಾಂತ್ಯದಲ್ಲಿಂದು ಎರಡು ಭೀಕರ ಬಾಂಬ್ ಸ್ಫೋಟ ಸಂಭವಿಸಿದ್ದು, 17ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು, 45ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

10:15: ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಸಮಿತಿಯ ಉಪಾಧ್ಯಕ್ಷ ಮೌಲಾನಾ ಕಲ್ಬೆ ಸಾದಿಕ್ ನಿಧನ

9:00: ಚೆನ್ನೈನಲ್ಲಿ ಮಳೆ ಅಬ್ಬರ ಆರಂಭಗೊಂಡಿದೆ. ಬೆಳಗ್ಗೆ 8.30ರಿಂದ ಸಂಜೆ 5.30ರ ಅವಧಿಯಲ್ಲಿ ನುಂಗಬಾಕ್ಕಂನಲ್ಲಿ 96 ಮಿ.ಮೀ ಹಾಗೂ ಮೀನಬಾಕ್ಕಂನಲ್ಲಿ 86 ಮಿ.ಮೀ ಮಳೆ ಸುರಿದಿದೆ.

8:30: ಆಯೋಧ್ಯಾ ವಿಮಾನ ನಿಲ್ದಾಣದ ಹೆಸರನ್ನು ಮರ್ಯಾದ ಪುರುಷೋತ್ತಮ ಶ್ರೀರಾಮ ವಿಮಾನ ನಿಲ್ದಾಣ ಎಂದು ಬದಲಾಯಿಸಲು ಉತ್ತರಪ್ರದೇಶ ಕ್ಯಾಬಿನೆಟ್ ನಲ್ಲಿ ನಿರ್ಧಾರ.

8:15: ಕರ್ನಾಟಕದಲ್ಲಿ ಹೊಸದಾಗಿ 1870 ಕೊರೊನಾ ಸೋಂಕಿತರು ಪತ್ತೆ; ಒಂದೇ ದಿನದಲ್ಲಿ 1949 ಮಂದಿ ಆಸ್ಪತ್ರೆಯಿಂದ ಬಿಡುಗಡೆ, ಸಕ್ರಿಯ ಪ್ರಕರಣಗಳು 24612, 24 ಗಂಟೆಯಲ್ಲಿ 17 ಮಂದಿ ಸಾವು; ಒಟ್ಟು ಪ್ರಕರಣಗಳು 876425.
8:00-
ಚೆನ್ನೈ ಮೆಟ್ರೋ ರೈಲು ಸೇವೆ ಬೆಳಗ್ಗೆ 7 ರಿಂದ ರಾತ್ರಿ 10 ರ ತನಕ ಪ್ರತಿ 10 ನಿಮಿಷಕ್ಕೊಮ್ಮೆ ಸಂಚರಿಸಲಿದೆ

6:30-ಅಂಡಮಾನ್ ಹಾಗೂ ನಿಕೋಬಾರ್ ದ್ವೀಪದಲ್ಲಿ ಭೂಮಿಯಿಂದ ದಾಳೀ ನಡೆಸಬಲ್ಲ ಸೂಪರ್ ಸಾನಿಕ್ ಕ್ಷಿಪಣಿ ಬ್ರಹ್ಮೋಸ್ ಯಶಸ್ವಿ ಪ್ರಯೋಗ.

6:00-
ಸಿಂಧುದುರ್ಗ್ ಜಿಲ್ಲೆಯಲ್ಲಿ 100 ಸೀಟುಗಳ ಮೆಡಿಕಲ್ ಕಾಲೇಜ್ ಸ್ಥಾಪಿಸಲು ನಿರ್ಧರಿಸಿದ ಮಹಾರಾಷ್ಟ್ರ ಸಚಿವ ಸಂಪುಟ.

5:30:
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ನವೆಂಬರ್ 25ರಂದು ಗುಜರಾತಿನ ಕೇವಾಡಿಯಾಕ್ಕೆ ತೆರಳಿ 80ನೇ ಅಖಿಲ ಭಾರತ ಅಧಿಕಾರಿಗಳ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ.

5:00: ರಷ್ಯಾದ ಸ್ಪುಟ್ನಿಕ್ ಲಸಿಕೆ ಪ್ರತಿ ವ್ಯಕ್ತಿಗೆ ಎರಡು ಡೋಸ್ ಗಳಿಗೆ 20 ಡಾಲರ್ ನಷ್ಟು ತಗುಲಲಿದೆ.

Recommended Video

ಪಬ್ ಜಿ ಆಟಗಾರರಿಗೆ 6 ಕೋಟಿ ಬಹುಮಾನ!! | Oneindia Kannada

4: 30: ವಿವಾದಿತ ಕೇರಳ ಪೊಲೀಸ್ ಕಾಯ್ದೆ ಸೆಕ್ಷನ್ 118ಎ ಹಿಂಪಡೆಯಲು ಕೇರಳ ಸಚಿವ ಸಂಪುಟದಿಂದ ನಿರ್ಧಾರ

4:00-ಡಿಸೆಂಬರ್ 3ರಂದು ಮತ್ತೊಂದು ಸುತ್ತಿನ ಮಾತುಕತೆ ನಡೆಸಲು ಹರ್ಯಾಣ, ಪಂಜಾಬ್ ರೈತ ಒಕ್ಕೂಟಗಳಿಗೆ ಆಹ್ವಾನ ನೀಡಿದ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮಾರ್.

3:30: ನಟಿ ಕಂಗನಾ ರಣಾವತ್ ಹಾಗೂ ಅವರ ತಂಗಿ ರಂಗೋಲಿ ಅವರಿಗೆ ಜನವರಿ 8ರಂದು ಪೊಲೀಸರ ಮುಂದೆ ಹಾಜರಾಗುವಂತೆ ಬಾಂಬೆ ಹೈಕೋರ್ಟ್ ಸೂಚನೆ.

3.15: ಆರಾಮ್ಕೋ ಜೆಡ್ಡಾ ಘಟಕದ ಮೇಲೆ ಯೆಮೆನ್ ಹೌತಿ ಸಂಘಟನೆಯ ದಾಳಿಯಿಂದ ತೈಲ ಪೂರೈಕೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ ಎಂದು ಸೌದಿ ಅರಾಮ್ಕೋ ಹೇಳಿದೆ.

3:00- ತಿರುವನಂತಪುರಂ ವಿಮಾನ ನಿಲ್ದಾಣವನ್ನು ಅದಾನಿ ಸಂಸ್ಥೆಗೆ ನೀಡಿರುವುದನ್ನು ಖಂಡಿಸಿ, ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂಕೋರ್ಟ್ ಗೆ ಅರ್ಜಿ ಹಾಕಿದ ಕೇರಳ ಸರ್ಕಾರ

2.45: ನಿವಾರ್ ಚಂಡಮಾರುತ ಎದುರಿಸಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(NDRF)ಯ 30 ತಂಡಗಳು ಸಜ್ಜು. ಆಂಧ್ರಪ್ರದೇಶ, ತಮಿಳುನಾಡು, ಪುದುಚೇರಿಯಲ್ಲಿ ಹೈ ಅಲರ್ಟ್.

2.30:
ನ್ಯೂಯಾರ್ಕ್ ನಗರದ ಮೊದಲ ಆಫ್ರಿಕಾನ್ -ಅಮೆರಿಕನ್ ಮೇಯರ್ ಡೇವಿಡ್ ಡಿಂಕಿನ್ಸ್ ನಿಧನ

2:10: ದೇಶಾದ್ಯಂತ ಕೊರೊನಾವೈರಸ್ ಲಸಿಕೆಯನ್ನು ಕ್ಷಿಪ್ರಗತಿಯಲ್ಲಿ ತಲುಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರದ ಜೊತೆಗೂಡಿ ಕೆಲಸ ಮಾಡುವುದಕ್ಕೆ ನಾವೂ ಕೂಡಾ ಬದ್ಧರಾಗಿದ್ದೇವೆ ಎಂದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ.

1.21: ದೇಶಾದ್ಯಂತ ಕೊವಿಡ್-19 ಸೋಂಕು ತಪಾಸಣೆದೆ 400 ರೂಪಾಯಿ ದರ ನಿಗದಿಗೊಳಿಸುವಂತೆ ಸುಪ್ರೀಂಕೋರ್ಟ್ ಗೆ ವಕೀಲರಿಂದ ಅರ್ಜಿ ಸಲ್ಲಿಕೆ. ಕೇಂದ್ರ ಸರ್ಕಾರದಿಂದ ಪ್ರತಿಕ್ರಿಯೆ ಕೋರಿದ ಸರ್ವೋಚ್ಛ ನ್ಯಾಯಾಲಯ.

1.15: ನಮ್ಮ ರಾಜ್ಯಕ್ಕೆ ಬರಬೇಕಿರುವ ಜಿಎಸ್ಟಿ ಬಾಕಿ ನೀಡಿ, ಕೊರೊನಾ ನಿಯಂತ್ರಣಕ್ಕೆ ಹಣಕಾಸು ನೆರವು ಅಗತ್ಯ ಎಂದು ಪ್ರಧಾನಿ ಮೋದಿ ಜೊತೆಗಿನ ಸಭೆಯಲ್ಲಿ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಪ್ರತಿಪಾದನೆ.

1.09: ಯುರೋಪ್, ಅಮೆರಿಕಾದಲ್ಲಿ ಕೊರೊನಾವೈರಸ್ ಎರಡನೇ ಅಲೆ ಆರಂಭವಾಗಿದೆ. ಭಾರತದಲ್ಲಿ ಕೊವಿಡ್-19 2ನೇ ಅಲೆ ಬಗ್ಗೆ ಎಚ್ಚರಿಕೆಯಿಂದಿರಿ ಎಂದು ಸೂಚನೆ ನೀಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ.

12:45: ಪೆಟ್ರೋಲ್, ಡೀಸೆಲ್ ಬೆಲೆ ತುಸು ಏರಿಕೆ. ದೆಹಲಿಯಲ್ಲಿ 0.06 ಪೈಸೆ ಏರಿಕೆಯಾಗಿ 81.59 ರು ಪ್ರತಿ ಲೀಟರ್ ಹಾಗೂ ಡೀಸೆಲ್ ಬೆಲೆ 0.16 ಪೈಸೆ ಏರಿಕೆಯಾಗಿ 71.41 ರು ಪ್ರತಿ ಲೀಟರ್ ನಷ್ಟಿದೆ.

12: 30: ಪ್ರಧಾನಿ ನರೇಂದ್ರ ಮೋದಿ ಅವರು ಕೋವಿಡ್ 19 ನಿರ್ವಹಣೆ ಕುರಿತಂತೆ ಮುಖ್ಯಮಂತ್ರಿಗಳ ಜೊತೆ ನಡೆಸಿದ ವಿಡಿಯೋ ಕಾನ್ಫರನ್ಸ್ ನಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಭಾಗವಹಿಸಿದರು. ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್. ಅಶೋಕ, ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ. ಎಂ. ವಿಜಯಭಾಸ್ಕರ್ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

BSY-Modi covid 19 meeting



12:15:
ಲವ್ ಜಿಹಾದ್ ಅಥವಾ ಬಲವಂತದ ಮತಾಂತರ ಮದುವೆ ವಿರುದ್ಧ ಕಾನೂನು ರೂಪಿಸುವ ಬಗ್ಗೆ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯ ನಾಥ್ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಸಲಾಗುತ್ತಿದೆ.

12:05: 'ನಿವಾರ್ ಸೈಕ್ಲೋನ್‌ನ ಹಿನ್ನೆಲೆಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಇ ಪಳನಿಸ್ವಾಮಿ ಮತ್ತು ಪುದುಚೆರಿ ಮುಖ್ಯಮಂತ್ರಿ ವಿ. ನಾರಾಯಣಸ್ವಾಮಿ ಅವರೊಂದಿಗೆ ಪರಿಸ್ಥಿತಿಯ ಕುರಿತು ಮಾತುಕತೆ ನಡೆಸಿದ್ದೇನೆ. ಕೇಂದ್ರದಿಂದ ಎಲ್ಲ ಸಾಧ್ಯ ನೆರವುಗಳನ್ನು ನೀಡುವ ಭರವಸೆ ಕೊಟ್ಟಿದ್ದೇನೆ. ಹಾನಿಗೊಳಗಾಗುವ ಪ್ರದೇಶದಲ್ಲಿ ವಾಸಿಸುತ್ತಿರುವ ಜನರ ಸುರಕ್ಷತೆ ಮತ್ತು ಒಳಿತಿಗಾಗಿ ಪ್ರಾರ್ಥಿಸುತ್ತೇನೆ' ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

12:00: ಪ್ರಿಯಾಂಕಾ ಹಾಗೂ ಅನ್ಸಾರಿ ಇಬ್ಬರೂ ಹಿಂದು -ಮುಸ್ಲಿಂರಂತೆ ಕಾಣಲು ಸಾಧ್ಯವಿಲ್ಲ, ಮದುವೆ ವಯಕ್ತಿಕ ಆಯ್ಕೆಗೆ ಸಂಬಂಧಿಸಿದ್ದು, ಅನುಚ್ಛೇದ 21ರಂತೆ ಸ್ವಾತಂತ್ರವಾಗಿ ಸಂಗಾತಿ ಆಯ್ಕೆ, ಘನತೆಯಿಂದ ಬದುಕುವ ಹಕ್ಕು ಎಲ್ಲರಿಗೂ ಇದೆ -ಅಲಹಾಬಾದ್ ಕೋರ್ಟ್.

11:45: ಬಿಹಾರ ವಿಧಾನಸಭೆ ಸಭಾಪತಿ ಸ್ಥಾನಕ್ಕೆ ಬಿಜೆಪಿ ಶಾಸಕ ವಿನಯ್ ಸಿನ್ಹಾ ನಾಮಪತ್ರ ಸಲ್ಲಿಸಿದ್ದಾರೆ. ಎನ್ ಡಿಎ ಮೈತ್ರಿಕೂಟದ ಸೂಚನೆಯಂತೆ ನಾನು ಸ್ಪೀಕರ್ ಚುನಾವಣೆಗೆ ಸ್ಪರ್ಧಿಸುತ್ತಿದ್ದು, ಬಿಹಾರದ ಅಭಿವೃದ್ಧಿಗೆ ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸೋಣ ಎಂದು ಶಾಸಕ ವಿನಯ್ ಸಿನ್ಹಾ ಹೇಳಿದ್ದಾರೆ. - ಚುಟುಕು ಸುದ್ದಿ

11: 30: ಮೊದಲ ಹಂತದಲ್ಲಿ ದೆಹಲಿ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಕೇರಳ, ಗುಜರಾತ್, ಹರ್ಯಾಣ, ರಾಜಸ್ಥಾನ ಹಾಗೂ ಛತ್ತೀಸ್ ಗಢ ಸಿಎಂಗಳ ಜೊತೆ ಮೋದಿ ಮಾತುಕತೆ

11: 00: ಕೊವಿಡ್ 19 ಕುರಿತಂತೆ ಮುಖ್ಯಮಂತ್ರಿಗಳ ಜೊತೆ ಪ್ರಧಾನಿ ಮೋದಿ ಮಹತ್ವದ ವಿಡಿಯೋ ಕಾನ್ಫರೆನ್ಸ್ ಸಭೆ.

10:30- ಮನಿ ಲಾಂಡ್ರಿಂಗ್ ಕೇಸ್ : ಶಿವಸೇನಾ ಶಾಸಕ ಪ್ರತಾಪ್ ಸರ್ ನಾಯ್ಕ್ ಮನೆ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳಿಂದ ದಾಳಿ.

10:10- ವಾಯುಭಾರ ಕುಸಿತದಿಂದ ಚೆನ್ನೈ ನಗರದಲ್ಲಿ ಮಂಗಳವಾರ ಬೆಳಗ್ಗೆಯಿಂದಲೇ ಮಳೆ ಆರಂಭ.

9: 55: ಬಂಗಾಳಕೊಲ್ಲಿಯಲ್ಲಿನ ವಾಯುಭಾರ ಕುಸಿತದಿಂದ ಇಂದು ನಿವಾರ್ ಚಂಡಮಾರುತದ ಅಬ್ಬರ ಎದುರಿಸಲು ತಮಿಳುನಾಡು ಹಾಗೂ ಪುದುಚೇರಿ ರಾಜ್ಯಗಳು ಸಜ್ಜು.

9-45: ಭಾರತದಲ್ಲಿ ಒಂದೇ ದಿನ 37,975 ಮಂದಿಗೆ ಕೊರೊನಾವೈರಸ್ ಕೇಸ್ ಪತ್ತೆ, ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 91,77,841ಕ್ಕೆ ಏರಿಕೆ, ಒಟ್ಟು ಸಾವಿನ ಸಂಖ್ಯೆ 1,34,218ಕ್ಕೆ ಏರಿಕೆ, ಈವರೆಗೂ 86,04,955 ಸೋಂಕಿತರು ಗುಣಮುಖ.

Daily Roundup 24 November- Latest News And Updates On State, National and International

9:40: ದೆಹಲಿ ಕ್ರೈಂ ವೆಬ್ ಸರಣಿಗೆ ಪ್ರತಿಷ್ಠಿತ ಅಂತಾರಾಷ್ಟ್ರೀಯ ಎಮ್ಮಿ(Emmy) ಪ್ರಶಸ್ತಿ.

9:30-ಕಾರ್ವಿ ಸಂಸ್ಥೆ ಸ್ಟಾಕ್ ಬ್ರೋಕಿಂಗ್ ನಿಂದ ಹೊರಕ್ಕೆ, ದಿವಾಳಿ ಎಂದು ಘೋಷಿಸಿದ ಎನ್ ಎಸ್ ಇ.

9:20-ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಿ, ಕೊವಿಡ್ 19 ಪರಿಸ್ಥಿತಿ, ಲಸಿಕೆ ವಿತರಣೆ ಬಗ್ಗೆ ಚರ್ಚಿಸಲಿದ್ದಾರೆ.

9:10: ಸ್ಪೇನಿನ ರಾಜ ಫಿಲಿಪೆ ಅವರು ಕೊರೊನಾ ಸೋಂಕಿತರ ಸಂಪರ್ಕಕ್ಕೆ ಬಂದಿದ್ದರಿಂದ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ.

9:00-ಅಮೆರಿಕದ ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರಿಗೆ ಮತ್ತೆ ಆಘಾತ, ಮಿಚಿಗನ್ ರಾಜ್ಯ ಕೂಡಾ ಡೆಮಾಕ್ರಾಟಿಕ್ ಅಭ್ಯರ್ಥಿ ಜೋ ಬೈಡನ್ ಪಾಲು.

English summary
Daily Roundup 24 November: We are covering the top news and updates about political, national, international, cinema, sports, business and covid-19. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X