ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೈಂಗಿಕ ಹಗರಣದಲ್ಲಿ ಸಿಲುಕಿ ಹುದ್ದೆ ತೊರೆದ ಸಂಸದ

By Mahesh
|
Google Oneindia Kannada News

ಲಂಡನ್, ಅ.12: ಬ್ರಿಟಿಷ್ ಪ್ರಧಾನಿ ಡೇವಿಡ್ ಕ್ಯಾಮರೂನ್ ಕ್ಯಾಬಿನೆಟ್ ನ ಸಚಿವರೊಬ್ಬರು ಇಂಟರ್ನೆಟ್ ಸೆಕ್ಸ್ ಹಗರಣದಲ್ಲಿ ಸಿಲುಕಿದ ಹೊಸದೇನಲ್ಲ. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಬ್ರೂಕ್ಸ್ ನ್ಯೂಮಾರ್ಕ್ ಅವರು ಭಾನುವಾರ ಸಂಸದ ಸ್ಥಾನವನ್ನು ತೊರೆದಿದ್ದಾರೆ. ಮುಂಬರುವ ಸಂಸದೀಯ ಚುನಾವಣೆಯಲ್ಲೂ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದಾರೆ.

ಇಂಟರ್ನೆಟ್ ಸೆಕ್ಸ್ ಹಗರಣದಲ್ಲಿ ಆರೋಪಿಯಾದ ಮೇಲೆ ಸೆ.28ರಂದು ಬ್ರೂಕ್ಸ್ ಅವರು ಡೇವಿಡ್ ಕ್ಯಾಮರೂನ್ ಅವರ ಸಂಪುಟದಿಂದ ಹೊರನಡೆದಿದ್ದರು. 56ವರ್ಷ ವಯಸ್ಸಿನ ಐದು ಮಕ್ಕಳ ತಂದೆ ಬ್ರೂಕ್ಸ್ ಅವರು ಕುಚೋದ್ಯಕ್ಕೋ, ತಮಾಷೆಗೂ ಅಥವಾ ಗೊತ್ತಿದ್ದು ಗೊತ್ತಿದ್ದು ಮಾಡಿದ ಕೃತ್ಯಕ್ಕೋ ಬೆಲೆ ತೆತ್ತಿದ್ದಾರೆ.

ಪಕ್ಷದ ಕಾರ್ಯಕರ್ತೆ ಸೋಗಿನಲ್ಲಿ ಬಳಿ ಬಂದ ಫ್ರೀಲ್ಯಾನ್ಸ್ ಜನರ್ಲಿಸ್ಟ್ ವೊಬ್ಬಳ ಜೊತೆ ಅಸಭ್ಯ ಭಂಗಿಯಲ್ಲಿರುವ ಚಿತ್ರವನ್ನು ಹಂಚಿದ್ದಾರೆ. ಅದರೆ, ಮಹಿಳೆಗೆ ಎಂದು ಬ್ರೂಕ್ಸ್ ಹಂಚಿದ ಚಿತ್ರ ಬಲೆ ಹೆಣೆದಂತೆ ರಿಪೋರ್ಟರ್ ಕೈ ಸೇರಿದೆ. ಈ ಟ್ರ್ಯಾಪ್ ಬಗ್ಗೆ ಸಂಡೇ ಮಿರರ್ ವರದಿ ಮಾಡಿತ್ತು.

Cyber-sex scandal MP Brooks Newmark quits British parliament

ಅಮೆರಿಕ ಸಂಜಾತ ಬ್ರೂಕ್ಸ್ ಅವರು 2005ರಿಂದ ಲಂಡನ್ನಿನ ಪೂರ್ವ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದರು. ರಾಜಕೀಯದಲ್ಲಿ ಮಹಿಳೆಯರಿಗೆ ಹೆಚ್ಚಿನ ಸ್ಥಾನ ಸಿಗಬೇಕು ಎಂದು ಆಗ್ರಹಿಸಿ Women2Win ಎಂಬ ಅಭಿಯಾನವನ್ನು ನ್ಯೂಮಾರ್ಕ್ ಆರಂಭಿಸಿದ್ದರು. ಈಗ ಈ ರೀತಿ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಮುಂಬರುವ ಚುನಾವಣೆಯನ್ನು ಎದುರಿಸುವುದಿಲ್ಲ ಎಂದು ಡೇವಿಡ್ ಕ್ಯಾಮರೂನ್ ಅವರಿಗೆ ಪತ್ರ ಬರೆದು ತಿಳಿಸಿದ್ದಾರೆ.

ಹನಿಟ್ರ್ಯಾಪ್ ಸ್ಟಿಂಗ್ ಆಪರೇಷನ್ ನಡೆಸುತ್ತಿದ್ದ ಸಂಡೇ ಮಿರರ್ ತಂಡಕ್ಕೆ ಸಂಸದ ಬ್ರೂಕ್ಸ್ ಈ ರೀತಿ ಸಿಕ್ಕಿ ಬಿದ್ದಿದ್ದಾರೆ.ಈ ನಡುವೆ ಸಂಸದರ ಬಣ್ಣಬಯಲಿಗೆಳೆಯಲು ಸ್ವೀಡನ್ ಮೂಲದ ರೂಪದರ್ಶಿಯ ಚಿತ್ರವನ್ನು ಬಳಸಿಕೊಂಡಿದ್ದಕ್ಕಾಗಿ ಸಂಡೇ ಮಿರರ್ ಕ್ಷಮೆಯಾಚಿಸಿದೆ.

English summary
A British lawmaker who quit Prime Minister David Cameron's government over an Internet sex scandal said he will stand down from parliament at the May general election.Brooks Newmark quit his post as minister for civil society and also quits as MP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X