ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಳದ ಅಂಗಳದಲ್ಲಿ ಹಳೆ ಸರೋವರ ಪತ್ತೆ ಹಚ್ಚಿದ ಕ್ಯೂರಿಯಾಸಿಟಿ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 08: ಅಮೆರಿಕದ ನಾಸಾದ ಕ್ಯುರಿಯಾಸಿಟಿ ರೋವರ್ ಮಂಗಳದ ಅಂಗಳದಲ್ಲಿ 'ಓಯಸಿಸ್' ಪತ್ತೆ ಹಚ್ಚಿದೆ.​ 2012ರಲ್ಲಿ ಮಂಗಳನ ಅಂಗಳದಲ್ಲಿ ಬೆಟ್ಟ ಗುಡ್ಡಗಳ ನಡುವೆ ಲವಣಾಂಶವಿರುವ ಕೆಸರಿನ ಕಣಗಳುಳ್ಳ ಸರೋವರವನ್ನು ಪತ್ತೆ ಹಚ್ಚಿದೆ.

ಒಣ ಪ್ರಾಚೀನ ಸರೋವರ ಗಾಲೆ ಕ್ರೇಟರ್ ಅನ್ವೇಷಣೆಯಲ್ಲಿ ಹೊಸ ಮೈಲಿಗಲ್ಲು ಇದಾಗಿದೆ. ಸಲ್ಫೇಟ್​ ಲವಣಾಂಶವಿರುವ ಕೆಸರಿನ ಕಣಗಳನ್ನು ರೋವರ್​ ಪತ್ತೆಹಚ್ಚಿದ್ದು, ಹಿಂದೊಮ್ಮೆ ಉಪ್ಪಿನ ಸರೋವರವನ್ನು ಹೊಂದಿತ್ತು ಎಂದು ಅಂದಾಜಿಸಲಾಗಿದೆ.

ನಾಸಾದ ಕ್ಯೂರಿಯಾಸಿಟಿ ಕ್ಲಿಕ್ಕಿಸಿಕೊಂಡ ಮನೋಹರ 'ಪನೋರಮಾ ಸೆಲ್ಫಿ'ನಾಸಾದ ಕ್ಯೂರಿಯಾಸಿಟಿ ಕ್ಲಿಕ್ಕಿಸಿಕೊಂಡ ಮನೋಹರ 'ಪನೋರಮಾ ಸೆಲ್ಫಿ'

ಮಂಗಳನ ವಿವಿಧ ಪ್ರದೇಶಗಳಲ್ಲಿ ರೋವರ್ ಪತ್ತೆ ಹಚ್ಚಿದ ಉಪ್ಪಿನ ಶ್ರೇಣಿಯನ್ನು ಪ್ರಾಚೀನ ಕಾಲದ ಉಪ್ಪು ನೀರಿನ ಸರೋವರದ ಕುರುಹು ಎಂದು ಸಂಶೋಧಕರು ಅರ್ಥೈಸಿದ್ದಾರೆ. ಮಂಗಳನ ಮೇಲ್ಮೈನಲ್ಲಿ ಉಪ್ಪು ನೀರಿನ ರಚನೆ ಅಧಿಕವಾಗಿ ಕಂಡುಬಂದಿದ್ದು, ಈ ಗ್ರಹವು 3.5 ಬಿಲಿಯನ್​ ವರ್ಷಗಳ ಹಿಂದೆ ಶುಷ್ಕ(arid) ಹವಾಮಾನಕ್ಕೆ ಬದಲಾಗಿದೆ ಎನ್ನಲಾಗಿದೆ.

Curiosity rover finds evidence of Mars ancient salty lakes

ಇದೀಗ ಪತ್ತೆಯಾಗಿರುವ ಸಲ್ಫೇಟ್​ ಲವಣವು 3.3 ಮತ್ತು 3.7 ಬಿಲಿಯನ್​ ವರ್ಷಗಳ ಹಿಂದಿನ ಸೆಡಿಮೆಂಟರಿ ಬಂಡೆಗಳ ಮೇಲೆ ಕಂಡುಬಂದಿದೆ. ಮಂಗಳ ಗ್ರಹದ ಶುಷ್ಕ ಪರಿಸರದಿಂದಾಗಿ ಕ್ರೇಟರ್​ ಲೇಕ್​ ಆವಿಯಾಗಿದೆ ಎಂಬುದನ್ನು ಈಗ ಸಿಕ್ಕಿರುವ ಉಪ್ಪಿನಾಂಶ ಸಾಬೀತುಪಡಿಸಿದೆ. ಈ ಬಂಡೆಗಳು ಉಪ್ಪಿನಾಂಶದ ಅಧ್ಯಯನ ನಡೆಸಿದರೆ ಮಂಗಳದ ಮೇಲ್ಮೈ ಹೇಗೆ ಒಣಗಿತು ಎಂಬುದನ್ನು ಸ್ಪಷ್ಟವಾಗಿ ಹೇಳಬಹುದು ಎಂದು ನಾಸಾ ಹೇಳಿದೆ.

English summary
Curiosity is currently exploring each layer of the Gale Crater and Mount Sharp to uncover the history of Mars.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X