ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಲ ದಿನ ಕಾಯಿರಿ: ಬ್ಯಾರಲ್ ತೈಲಕ್ಕೆ 20 ಡಾಲರ್ ಕೊಟ್ರೆ ಸಾಕು!

|
Google Oneindia Kannada News

ನವದೆಹಲಿ, ಡಿಸೆಂಬರ್, 22: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲದರ ಪ್ರತಿದಿನ ಇಳಿಕೆಯ ಹಾದಿಯಲ್ಲಿದೆ. 2004ರ ನಂತರ ಇದೇ ಮೊದಲ ಬಾರಿಗೆ 30 ಡಾಲರ್ ಮಟ್ಟಕ್ಕೆ ಕುಸಿದಿದೆ.

ಬ್ರೆಂಟ್ ಆಯಿಲ್ ಬೆಲೆ 71 ಸೆಂಟ್ ಕುಸಿತ ಕಂಡು ಬ್ಯಾರೆಲ್‌ಗೆ 36.17 ಡಾಲರ್ ಆಗಿದ್ದರೆ, ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೆಟ್ ತೈಲವು ಶೇ.1ರಷ್ಟು ಕುಸಿದು ಬ್ಯಾರೆಲ್‌ಗೆ 34.41 ಡಾಲರ್ ಆಗಿದೆ. ಮುಂದಿನ ಕೆಲ ತಿಂಗಳುಗಳಲ್ಲಿ 20 ಡಾಲರ್‌ಗೆ ಕುಸಿಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಜಾಗತಿಕ ಅಭಿವೃದ್ಧಿಯಲ್ಲಿನ ಕುಸಿತ ಹಾಗೂ ತೈಲ ಉತ್ಪಾದನೆಯಲ್ಲಿನ ಹೆಚ್ಚಳವೇ ಬೆಲೆ ಕುಸಿತಕ್ಕೆ ಕಾರಣ ಎನ್ನಲಾಗಿದೆ. ಕಳೆದ ಒಂದು ವರ್ಷದಿಂದ ತೈಲ ಬೆಲೆ ಶೇ.70ರಷ್ಟು ಇಳಿಕೆ ಕಂಡಿದೆ.[ತೈಲದ ಮೇಲಿನ ಅಬಕಾರಿ ಸುಂಕ ಹೆಚ್ಚಳ ಮಾಡಿದ್ದು ಯಾಕೆ?]

Crude oil prices plunge to fresh 7-year lows

ಅರಬ್ ರಾಷ್ಟ್ರ ಒಕ್ಕೂಟದಲ್ಲೂ ತೈಲ ಉತ್ಪಾದನೆ ಹೆಚ್ಚಾಗಿದೆ. ರಾಜಕೀಯ ಮತ್ತು ಆರ್ಥಿಕ ಗೊಂದಲಗಳು ತೈಲ ಉತ್ಪಾದನೆ ಮೇಲೆ ಪರಿಣಾಮ ಬೀರಿಲ್ಲ. ಅಮೆರಿಕದ ಫೆಡರಲ್ ಬ್ಯಾಂಕ್ ಬಡ್ಡಿ ದರ ಪರಿಷ್ಕರಣೆ ಮಾಡಿರುವುದರಿಂದ ಡಾಲರ್ ಲೆಕ್ಕದಲ್ಲಿ ಖರೀದಿ ಮಾಡುವವರು ಪರ್ಯಾಯ ಮಾರ್ಗಗಳತ್ತ ಆಲೋಚನೆ ಮಾಡುತ್ತಿದ್ದಾರೆ. ಇದರಿಂದ ಸಹಜವಾಗಿ ಬೇಡಿಕೆ ಕುಸಿಯಲಿದೆ.[ಲೀಟರ್ ಪೆಟ್ರೋಲ್ ಗೆ ನಿಜವಾಗಿ ಭಾರತದಲ್ಲಿ ಎಷ್ಟಾಗುತ್ತದೆ? ಈ ಲೆಕ್ಕ ನೋಡಿ]

ಕೇಂದ್ರ ಸರ್ಕಾರ ತೈಲದ ಮೇಲಿನ ಅಬಕಾರಿ ಸುಂಕವನ್ನು ನಿರಂತರವಾಗಿ ಹೆಚ್ಚಳ ಮಾಡಿಕೊಳ್ಳುತ್ತಾ ಬಂದಿದೆ. ಜಾಗತಿಕ ಮಾರುಕಟ್ಟೆಯಲ್ಲಿ ತೈಲ ದರ ನಿರಂತರ ಇಳಿಕೆಯಾಗುತ್ತಿದ್ದರೂ ಅದರ ಲಾಭ ಭಾರತದ ಗ್ರಾಹಕನಿಗೆ ಇನ್ನು ಸಿಕ್ಕಿಲ್ಲ. ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕೊಂಚ ಮಾತ್ರ ತಗ್ಗಿಸಲಾಗಿದೆ.

ಡಾಲರ್ ಮತ್ತು ರುಪಾಯಿ ಲೆಕ್ಕ ಹಾಕಿ
ಮಂಗಳವಾರ ಒಂದು ಡಾಲರ್ ಗೆ 66.33 ರು. ಇತ್ತು. ಇದೆ ದರ ಕಾಯ್ದುಕೊಂಡಲ್ಲಿ 20 ಡಾಲರ್ ಎಂದರೆ ಬ್ಯಾರಲ್ ಕಚ್ಚಾ ತೈಲಕ್ಕೆ ಭಾರತ 1,326 ರು. ನೀಡಬೇಕಾಗುತ್ತದೆ. ಕರೆನ್ಸಿ ಬದಲಾವಣೆಗಾಗಿ ಇಲ್ಲಿ ಕ್ಲಿಕ್ ಮಾಡಬಹುದು.

English summary
Crude oil prices hit fresh seven-year low. It seems to be hit 20 dollar per barrel oil
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X