ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೂಯೆಜ್ ಕಾಲುವೆಯಲ್ಲಿ ಸಿಲುಕಿರುವ ಹಡಗಿನ ಸಿಬ್ಬಂದಿ ಎಲ್ಲರೂ ಭಾರತೀಯರು

|
Google Oneindia Kannada News

ಕೈರೊ, ಮಾರ್ಚ್ 25: ಈಜಿಪ್ಟ್‌ನ ಸೂಯೆಜ್ ಕಾಲುವೆಯಲ್ಲಿ ಸಿಲುಕಿಕೊಂಡಿರುವ ಬೃಹತ್ ಕಂಟೇನರ್ ಹಡಗು ಎವರ್ ಗ್ರೀನ್‌ನಲ್ಲಿರುವ ಸಿಬ್ಬಂದಿಯೆಲ್ಲಾ ಭಾರತದವರಾಗಿದ್ದು, ಅವರೆಲ್ಲರೂ ಸುರಕ್ಷಿತವಾಗಿರುವುದಾಗಿ ಹಡಗು ನಿರ್ವಹಣಾ ಕಂಪನಿ ಮಾಹಿತಿ ನೀಡಿದೆ.

ಈ ಹಡಗಿನಲ್ಲಿರುವ 25 ಸಿಬ್ಬಂದಿ ಸುರಕ್ಷಿತವಾಗಿದ್ದು, ಅವರ ಕುರಿತು ಎಲ್ಲಾ ಮಾಹಿತಿ ಸಂಗ್ರಹಿಸಲಾಗಿದೆ ಎಂದು ಎವರ್ ಗ್ರೀನ್‌ ಹಡಗು ನಿರ್ವಹಿಸುವ ಬರ್ನಾರ್ಡ್ ಶಲ್ಟ್ ಶಿಪ್ ಮ್ಯಾನೇಜ್ಮೆಂಟ್ ಕಂಪನಿ ವರದಿ ನೀಡಿದೆ. ಭಾರತೀಯ ಸಿಬ್ಬಂದಿ ಹೊರತಾಗಿ, ಈ ಹಡಗಿನಲ್ಲಿ ಈಜಿಪ್ಟ್‌ನ ಇಬ್ಬರು ಪೈಲಟ್‌ಗಳಿದ್ದಾರೆ ಎಂದು ತಿಳಿದುಬಂದಿದೆ.

ಸೂಯೆಜ್ ಕಾಲುವೆಯಲ್ಲಿ ಅಡ್ಡಲಾಗಿ ನಿಂತ ಬೃಹತ್ ಹಡಗು: ಭಾರಿ ಸಂಚಾರ ದಟ್ಟಣೆಸೂಯೆಜ್ ಕಾಲುವೆಯಲ್ಲಿ ಅಡ್ಡಲಾಗಿ ನಿಂತ ಬೃಹತ್ ಹಡಗು: ಭಾರಿ ಸಂಚಾರ ದಟ್ಟಣೆ

"ಹಡಗಿನ ಎಲ್ಲಾ ಸಿಬ್ಬಂದಿ ಭಾರತದಿಂದ ಬಂದವರಾಗಿದ್ದಾರೆ. ಈ ಪರಿಸ್ಥಿತಿಯನ್ನು ತ್ವರಿತವಾಗಿ ನಿರ್ವಹಿಸಲು ಕಂಪನಿ ಪ್ರಯತ್ನಪಡುತ್ತಿದೆ. ಆದರೆ ಸದ್ಯಕ್ಕೆ ಕಠಿಣವೆನಿಸಿದೆ. ಇದಕ್ಕೆ ಕೆಲವು ಸಮಯ ಬೇಕಾಗುತ್ತದೆ. ಆದರೆ ಸಿಬ್ಬಂದಿ ಸುರಕ್ಷತೆಗೆ ಗಮನ ಹರಿಸಿದ್ದೇವೆ" ಎಂದು ಕಂಪನಿಯ ಮುಖ್ಯಸ್ಥ ಶೋ ಕಿಸೆನ್ ಕೈಶಾ ತಿಳಿಸಿದ್ದಾರೆ.

Crew Of Ever Green Container Ship Blocked In Suez Canal Are All Indians

ಮಂಗಳವಾರ ಬೆಳಿಗ್ಗೆ ಭಾರೀ ಗಾಳಿಯಿಂದಾಗಿ ಎವರ್ ಗ್ರೀನ್‌ ಬೃಹತ್ ಕಂಟೇನರ್ ಹಡಗು ಸೂಜೆಯ್ ಕಾಲುವೆಯಲ್ಲಿ ಸಿಲುಕಿಕೊಂಡಿದೆ. ಹಡಗನ್ನು ತೆರವುಗೊಳಿಸುವ ಪ್ರಯತ್ನಗಳು ಸಫಲವಾಗದೇ ಭಾರೀ ಸಂಚಾರ ದಟ್ಟಣೆ ಉಂಟಾಗಿದೆ. ಬಿಬಿಸಿ ವರದಿ ಪ್ರಕಾರ, ಸಂಚಾರ ದಟ್ಟಣೆಯಿಂದಾಗಿ ಈ ಕಾಲುವೆ ದಾಟಲು ಸುಮಾರು 150 ಹಡಗುಗಳು ಕಾದು ನಿಂತಿವೆ.

ಜಗತ್ತಿನ ಅತ್ಯಂತ ಮುಖ್ಯ ಜಲಮಾರ್ಗ ಎಂದು ಕರೆಯುವ ಸೂಯೆಜ್ ಕಾಲುವೆಯಲ್ಲಿ ಹಡುಗುಗಳ ಸಂಚಾರ ಹಿಂದಿನಂತೆ ಸುಗಮವಾಗಲು ಹಲವು ದಿನಗಳೇ ಬೇಕಾಗಬಹುದು ಎನ್ನಲಾಗಿದೆ. ಇದರಿಂದ ಪ್ರತಿ ಗಂಟೆಗೆ ಸುಮಾರು 400 ಮಿಲಿಯನ್ ಡಾಲರ್ ವೆಚ್ಚವಾಗುತ್ತಿದೆ. ಜಾಗತಿಕ ವ್ಯಾಪಾರದ ಶೇ 12ರಷ್ಟು ಉತ್ಪನ್ನಗಳು ಇಲ್ಲಿಂದಲೇ ಸಾಗಾಟವಾಗುತ್ತವೆ. ಮಂಗಳವಾರದಿಂದ ಹಡಗು ಇಲ್ಲಿಯೇ ಸಿಲುಕಿಕೊಂಡಿದೆ.

English summary
Entire crew of ever green container ship which blocked in suez canal are indians and safe informed ship company,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X