ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

60 ವರ್ಷ ಮೇಲ್ಪಟ್ಟವರಲ್ಲಿ ಕೊವಿಶೀಲ್ಡ್ ಪರಿಣಾಮ ಎಷ್ಟು ವಾರ ಇರುತ್ತೆ!?

|
Google Oneindia Kannada News

ನವದೆಹಲಿ, ಜುಲೈ 29: ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಹಾಗೂ ಆಸ್ಟ್ರಾಜೆನಿಕಾ ಸಂಸ್ಥೆಗಳು ಸಂಶೋಧಿಸಿರುವ ಕೊವಿಶೀಲ್ಡ್ ಮೊದಲ ಡೋಸ್ ಲಸಿಕೆಯು 60 ವರ್ಷ ಮೇಲ್ಪಟ್ಟವರಿಗಿಂತ ಯುವಕರಲ್ಲಿ ಹಾಗೂ ಮಧ್ಯಮ ವಯಸ್ಕರಲ್ಲಿ ಹೆಚ್ಚು ಪರಿಣಾಮಕಾರಿಗಿದೆ ಎಂದು ಗೊತ್ತಾಗಿದೆ.
ಕೊವಿಶೀಲ್ಡ್ ಮೊದಲ ಡೋಸ್ ಲಸಿಕೆ ಪಡೆದ 60 ವರ್ಷ ಮೇಲ್ಪಟ್ಟವರಲ್ಲಿ 16 ವಾರ ಆಗುತ್ತಿದ್ದಂತೆ ಅದರ ಪರಿಣಾಮ ಕಡಿಮೆಯಾಗುತ್ತದೆ. ಇದೇ ಅವಧಿಯಲ್ಲಿ ಶೇ.93ರಷ್ಟು ಯವಕರಲ್ಲಿ ಲಸಿಕೆಯು ಉತ್ತರ ಹಾಗೂ ಪರಿಣಾಮಕಾರಿಯಾಗಿ ಕೆಲಸ ಮಾಡಿರುವುದು ವಿಶ್ವವಿದ್ಯಾಲಯ ನಡೆಸಿರುವ ಸಂಶೋಧನೆಯಲ್ಲಿ ಬಹಿರಂಗವಾಗಿದೆ.

ಮೊದಲು ಓದಿ: ಕರ್ನಾಟಕದಲ್ಲಿ ಕೊರೊನಾವೈರಸ್ 2ನೇ ಡೋಸ್ ಲಸಿಕೆ ಸಿಗುವುದು ಸುಲಭವೇ?ಮೊದಲು ಓದಿ: ಕರ್ನಾಟಕದಲ್ಲಿ ಕೊರೊನಾವೈರಸ್ 2ನೇ ಡೋಸ್ ಲಸಿಕೆ ಸಿಗುವುದು ಸುಲಭವೇ?

ಅಮೆರಿಕಾದ ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಮತ್ತು ಆಸ್ಟ್ರಾಜೆನಿಕಾ ಸಂಶೋಧಿಸಿರುವ ಕೊವಿಶೀಲ್ಡ್ ಲಸಿಕೆಯನ್ನು ಭಾರತದ ವೈದ್ಯಕೀಯ ವಲಯದ ದೈತ್ಯ ಕಂಪನಿ ಎನಿಸಿರುವ ಪುಣೆಯ ಸೀರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆಯು ಉತ್ಪಾದಿಸುತ್ತಿದೆ.

Covishield first dose Effect on above 60 years of aged people after 16 Weeks

1 ಡೋಸ್ ಲಸಿಕೆಗೆ 16 ವಾರ ವ್ಯಾಲಿಡಿಟಿ?:
"ಕೊವಿಶೀಲ್ಡ್ ಲಸಿಕೆಯಿಂದ ಸೃಷ್ಟಿಯಾದ ರೋಗ ನಿರೋಧಕ ಶಕ್ತಿಯ ಪರಿಣಾಮವು 16 ವಾರಗಳ ನಂತರ 60 ವರ್ಷ ಮೇಲ್ಪಟ್ಟವರಲ್ಲಿ ಕ್ಷೀಣಿಸುತ್ತದೆ. ಆದರೆ 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ಶೇ.93ರಷ್ಟು ಜನರಲ್ಲಿ ಕೊವಿಶೀಲ್ಡ್ ಲಸಿಕೆಯನ್ನು ಪಡೆದ 16 ವಾರಗಳ ನಂತರವೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರತಿಕಾಯ ವ್ಯವಸ್ಥೆಯು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ರೋಗ ನಿರೋಧಕ ಶಕ್ತಿಯು ವೃದ್ಧಿಯಾಗಿದೆ," ಎಂದು ಜಯವರ್ಧನೆಪುರ ವಿಶ್ವವಿದ್ಯಾಲಯದ ರೋಗ ನಿರೋಧಕ ಮತ್ತು ಆಣ್ವಿಕ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ನೀಲಿಕಾ ಮಲಾವಿಜ್ ಟ್ವೀಟ್ ಮೂಲಕ ತಿಳಿಸಿದ್ದಾರೆ.

ಕೊವಿಶೀಲ್ಡ್ ಲಸಿಕೆ ಮೊದಲ ಡೋಸ್ ಪ್ರತಿಕ್ರಿಯೆ:
"ಭಾರತದ ಕೊವಿಶೀಲ್ಡ್ ಲಸಿಕೆಯ ಮೊದಲ ಡೋಸ್ ಪರಿಣಾಮದ ಬಗ್ಗೆ ನಮ್ಮ ಪತ್ರಿಕೆಯಲ್ಲಿ ಉಲ್ಲೇಖಿಸಲಾಗಿದೆ. ಮೊದಲ ಡೋಸ್ ಲಸಿಕೆಯಿಂದಾಗಿ ಶೇ.93.4ರಷ್ಟು ಜನರಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಯಾಗಿರುತ್ತದೆ. ಶೇ.97.1ರಷ್ಟು ಜನರಲ್ಲಿ ರೋಗಾಣುವನ್ನು ತಟಸ್ಥಗೊಳಿಸುವ ಪ್ರತಿಕಾಯ ವ್ಯವಸ್ಥೆ ಬೆಳವಣಿಗೆಯಾಗಿರುವುದು ಗೊತ್ತಾಗಿದೆ. ಈ ಅಧ್ಯಯನಕ್ಕಾಗಿ UKinSriLanka, WHOSriLanka ಮತ್ತು ಚೀನಾ ಅಕಾಡೆಮಿ ಆಫ್ ಸೈನ್ಸಸ್ ಅನುದಾನವನ್ನು ಒದಗಿಸಿದೆ," ಎಂದು ಟ್ವೀಟ್ ಮಾಡಿದ್ದಾರೆ.
ಜನವರಿಯಲ್ಲಿ ಕೊವಿಶೀಲ್ಡ್ ಲಸಿಕೆ ವಿತರಣೆ:
ಶ್ರೀಲಂಕಾದಲ್ಲಿ ಜನವರಿ ತಿಂಗಳ ಆರಂಭದಲ್ಲಿ ಭಾರತವು ಉಡುಗೊರೆಯಾಗಿ ನೀಡಿದ 5 ಲಕ್ಷ ಡೋಸ್ ಕೊವಿಶೀಲ್ಡ್ ಲಸಿಕೆಯ ಮೂಲಕ ಲಸಿಕೆ ವಿತರಣೆ ಅಭಿಯಾನವನ್ನು ಶುರು ಮಾಡಿತು. ಇದೀಗ ಎರಡನೇ ಡೋಸ್ ಲಸಿಕೆ ವಿತರಿಸುವುದಕ್ಕಾಗಿ 5 ಲಕ್ಷ ಡೋಸ್ ಕೊವಿಶೀಲ್ಡ್ ಲಸಿಕೆಯ ನಿರೀಕ್ಷೆಯಲ್ಲಿ ಶ್ರೀಲಂಕಾ ಎದುರು ನೋಡುತ್ತಿದೆ. ದ್ವೀಪರಾಷ್ಟ್ರದಲ್ಲಿ ಈವರೆಗೂ 8.7 ದಶಲಕ್ಷ ಫಲಾನುಭವಿಗಳಿಗೆ ಮೊದಲ ಡೋಸ್ ಹಾಗೂ 1.9 ದಶಲಕ್ಷ ಜನರಿಗೆ ಎರಡನೇ ಡೋಸ್ ಲಸಿಕೆ ವಿತರಿಸಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

English summary
Covishield first dose Effect on above 60 years of aged people after 16 Weeks.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X