ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Covid Toes: ಇಟಲಿ, ಅಮೆರಿಕದಲ್ಲಿ ಕೊರೊನಾದ ಹೊಸ ರೋಗ ಲಕ್ಷಣ

|
Google Oneindia Kannada News

ನವ ದೆಹಲಿ, ಏಪ್ರಿಲ್ 25: ಜ್ವರ, ಶೀತ, ಕೆಮ್ಮು ಕೊರೊನಾ ರೋಗ ಲಕ್ಷಣಗಳಾಗಿವೆ. ಆದರೆ, ಅದರೊಂದಿಗೆ, ಹೊಸದೊಂದು ರೋಗ ಲಕ್ಷಣದ ಮೂಲಕ ಕೋವಿಡ್ ಸೋಂಕಿತರನ್ನು ಪತ್ತೆ ಮಾಡಬಹುದಾಗಿದೆ ಎಂದು ಇಟಲಿ ಹಾಗೂ ಅಮೆರಿಕದಲ್ಲಿ ಚರ್ಚೆ ನಡೆಯುತ್ತಿದೆ.

ಇಟಲಿಯಲ್ಲಿ ಮಕ್ಕಳಿಗೆ ಕಾಲು ಉರಿಯೂತ ಹಾಗೂ ಕಾಲು ಬೆರಳುಗಳ ಬಣ್ಣ ಬದಲಾಗುವುದು ಹೆಚ್ಚಾಗಿತ್ತು. ಈಗ ಇದು ಅಮೆರಿಕದಲ್ಲಿಯೂ ಕಂಡು ಬಂದಿದೆ. ಕೊರೊನಾ ಸೋಂಕು ಹೆಚ್ಚು ಇರುವ ಪ್ರದೇಶಗಳಲ್ಲಿ ಮಕ್ಕಳಿಗೆ ಈ ರೀತಿಯಾಗಿ ಕಾಲು ಬೆರಳುಗಳಲ್ಲಿ ಉರಿಯೂತ, ಕಾಲು ಬೆರಳುಗಳ ಬಣ್ಣ ಬದಲಾಗುವುದು ಕಂಡು ಬರುತ್ತಿದೆ.

7 ರಾಜ್ಯಗಳು, 28 ಜಿಲ್ಲೆಗಳು ಡೇಂಜರ್: IIT ದೆಹಲಿ ವರದಿ 7 ರಾಜ್ಯಗಳು, 28 ಜಿಲ್ಲೆಗಳು ಡೇಂಜರ್: IIT ದೆಹಲಿ ವರದಿ

ಹೀಗಾಗಿ, ಇಟಲಿ ಹಾಗೂ ಅಮೆರಿಕದ ವೈದ್ಯರು, ಚರ್ಮರೋಗ ತಜ್ಞರು ಈ ರೋಗ ಲಕ್ಷಣದ ಬಗ್ಗೆ ಚರ್ಚೆ ಮಾಡಿದ್ದಾರೆ. ಈ ರೀತಿ ರೋಗ ಲಕ್ಷಣ ಕಂಡು ಬಂದ ಮಕ್ಕಳಿಗೆ ಕೊರೊನಾ ಪರೀಕ್ಷೆ ಮಾಡಲಾಗುತ್ತಿದೆ. ಹೀಗಾಗಿ, ಕಾಲು ಉರಿಯೂತ, ಕಾಲು ಬೆರಳುಗಳ ಬಣ್ಣ ಬದಲಾಗುವುದು ಸಹ ಕೊರೊನಾಗೆ ರೋಗ ಲಕ್ಷಣವಾಗಿದೆ ಎನ್ನುವ ಶಂಕೆ ವ್ಯಕ್ತವಾಗಿದೆ.

Covid Toes a New symptom of novel coronavirus infection among kids

ಇಟಲಿಯ ವೈದ್ಯರು ಈ ರೀತಿಯ ಉರಿಯೂತ, ಕಾಲು ಬೆರಳುಗಳ ಬಣ್ಣ ಬದಲಾಗುವುದಕ್ಕೆ 'Covid Toes' ಎಂದು ಅಡ್ಡ ಹೆಸರು ಇಟ್ಟಿದ್ದಾರೆ. ಮಕ್ಕಳಲ್ಲಿಯೇ ಈ ರೋಗ ಲಕ್ಷಣ ಕಂಡು ಬರುತ್ತಿದೆ.

ಕೊರೊನಾ ಸಾಂಕ್ರಾಮಿಕ ರೋಗವಾಗಿದ್ದು, ಒಬ್ಬರಿಂದ ಮತ್ತೊಬ್ಬರಿಗೆ ಸೋಂಕು ತಗುಲಿತ್ತಿದೆ. ಕೆಲವರಿಗೆ ರೋಗ ಲಕ್ಷಣ ಇಲ್ಲದೆ ಇದ್ದರೂ, ಪಾಸಿಟಿವ್ ವರದಿ ಬಂದಿದೆ. ಹೀಗಾಗಿ ಸೋಂಕು ಪತ್ತೆ ಮಾಡುವುದೇ ಸವಾಲಾಗಿದೆ.

ಕಾಲು ಉರಿಯೂತ ಹಾಗೂ ಕಾಲು ಬೆರಳುಗಳ ಬಣ್ಣ ಬದಲಾಗುವುದು ರೋಗದ ಮತ್ತೊಂದು ಲಕ್ಷಣವಾಗಿದೆ ಎಂದು ಅನುಮಾನಿಸಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಈ ವೈರಸ್ ಮಾನವರಲ್ಲಿ ದೀರ್ಘಕಾಲ ಉಳಿಯುತ್ತದೆ ಎಂದು ಎಚ್ಚರಿಸಿದೆ.

English summary
Covid Toes: A New symptom of novel coronavirus infection among kids surge in inflammation in toes feet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X