ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Khosta 2 Virus: ಕೊರೊನಾ ವೈರಸ್ ರೀತಿಯಲ್ಲೇ ಭಯ ಹುಟ್ಟಿಸುವ ಖೋಸ್ಟ್-2 ವೈರಸ್!

|
Google Oneindia Kannada News

ಮಾಸ್ಕೋ, ಸೆಪ್ಟೆಂಬರ್ 27: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನಿಂದ ಜಗತ್ತು ಸುಧಾರಿಸಿಕೊಳ್ಳುತ್ತಿರುವ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯು ಇತ್ತೀಚಿಗಷ್ಟೇ ಸುಳಿವು ನೀಡಿತ್ತು. ಇದರ ಮಧ್ಯೆಯೇ ಕೋವಿಡ್-19 ಅನ್ನು ಹೋಲುವ ಮತ್ತೊಂದು ವೈರಸ್ ರಷ್ಯಾದಲ್ಲಿ ಪತ್ತೆಯಾಗಿದೆ.

ಖೋಸ್ಟಾ 2 ಎಂದು ಕರೆಯಲ್ಪಡುವ ಈ ವೈರಸ್ ಅನ್ನು ಪ್ರಸ್ತುತ ಕೊರೊನಾ ವೈರಸ್ ಲಸಿಕೆಯು ನಿಯಂತ್ರಿಸುತ್ತದೆ ಎಂದು ಹೇಳಲಾಗುತ್ತಿದೆ. ಅದಾಗ್ಯೂ, PLoS ರೋಗಕಾರಕಗಳು ಎಂಬ ಜರ್ನಲ್‌ನಲ್ಲಿ ಪ್ರಕಟವಾದ ಸಂಶೋಧನಾ ಲೇಖನವು ವೈರಸ್ ಬಗ್ಗೆ ಸ್ಪಷ್ಟಪಡಿಸಿದೆ.

ಓದಿ ತಿಳಿಯಿರಿ: ಹೃದಯಾಘಾತ V/s ಹೃದಯ ಸ್ತಂಭನ ಒಂದೇನಾ?; ಇದಕ್ಕೆ ಕೋವಿಡ್ ಕಾರಣನಾ?ಓದಿ ತಿಳಿಯಿರಿ: ಹೃದಯಾಘಾತ V/s ಹೃದಯ ಸ್ತಂಭನ ಒಂದೇನಾ?; ಇದಕ್ಕೆ ಕೋವಿಡ್ ಕಾರಣನಾ?

ಜಗತ್ತನ್ನು ಬೆಚ್ಚಿ ಬೀಳಿಸುವುದಕ್ಕೆ ಬರುತ್ತಿರುವ ಖೋಸ್ಟಾ ವೈರಸ್ ಎಂದರೇನು? ಖೋಸ್ಟಾ ವೈರಸ್ ರೋಗವು ಹೇಗೆ ಹರಡುವುದು?, ಖೋಸ್ಟಾ ವೈರಸ್ ಹರಡುವಿಕೆ ನಿಯಂತ್ರಣ ಹೇಗೆ ಸಾಧ್ಯ?, ಖೋಸ್ಟಾ ವೈರಸ್ ರೋಗದ ಲಕ್ಷಣಗಳೇನು? ಹಾಗೂ ಖೋಸ್ಟಾ ವೈರಸ್ ರೋಗಕ್ಕೆ ಚಿಕಿತ್ಸೆ ವಿಧಾನ ಹೇಗಿರುತ್ತದೆ ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳಿರಿ.

ಏನಿದು ಖೋಸ್ಟಾ 2 ವೈರಸ್?

ಏನಿದು ಖೋಸ್ಟಾ 2 ವೈರಸ್?

ಕಳೆದ 2020ರಲ್ಲಿ ಮೊದಲ ಬಾರಿಗೆ ಖೋಸ್ಟಾ 2 ವೈರಸ್ ಪತ್ತೆಯಾಗಿತ್ತು. ರಷ್ಯಾದ ರೈನೋಲೋಫಸ್ ಬಾವಲಿಗಳಲ್ಲಿ ಈ ರೀತಿ ಉಸಿರಾಟ ಸಂಬಂಧಿತ ಸಿಂಡ್ರೋಮ್ ಕಂಡು ಬಂದಿದೆ. ರೈನೋಲೋಫಸ್ ಫೆರುಮೆಕ್ವಿನಮ್‌ನಲ್ಲಿ ಖೋಸ್ಟಾ-1 ಮತ್ತು ಆರ್. ಹಿಪ್ಪೋಸಿಡೆರೋಸ್‌ನಲ್ಲಿ ಖೋಸ್ಟಾ 2 ಕಂಡುಬಂದಿದೆ" ಎಂದು ಸಂಶೋಧನಾ ವರದಿ ಹೇಳುತ್ತದೆ.

ಸೋಚಿ ರಾಷ್ಟ್ರೀಯ ಉದ್ಯಾನವನದ ಬಳಿ ಮಾರ್ಚ್-ಅಕ್ಟೋಬರ್ 2020ರ ನಡುವೆ ಸಂಗ್ರಹಿಸಿದ ಬಾವಲಿ ಮಾದರಿಗಳಲ್ಲಿ ವೈರಸ್ ಅನ್ನು ಅಲ್ಕೋವ್ಸ್ಕಿ ಗುರುತಿಸಿದ್ದಾರೆ. ಈ ಸಮಯದಲ್ಲಿ ಇಡೀ ಜಗತ್ತು ಕೋವಿಡ್-19 ಸೋಂಕಿಗೆ ಕಾರಣವಾದ ಕೊರೊನಾ ವೈರಸ್ ವಿರುದ್ಧ ಹೇಗೆ ಹೋರಾಡಬೇಕು ಎಂಬುದಕ್ಕೆ ಅಣಿಯಾಗುತ್ತಿತ್ತು. ಅಂದು ರಾಷ್ಟ್ರದಾದ್ಯಂತ ಲಾಕ್‌ಡೌನ್ ಅನ್ನು ಜಾರಿಗೊಳಿಸಲಾಗಿತ್ತು.

ಖೋಸ್ಟಾ ವೈರಸ್‌ಗಳಲ್ಲಿ ಎಷ್ಟು ವಿಧಗಳಿವೆ ಗೊತ್ತಾ?

ಖೋಸ್ಟಾ ವೈರಸ್‌ಗಳಲ್ಲಿ ಎಷ್ಟು ವಿಧಗಳಿವೆ ಗೊತ್ತಾ?

ಖೋಸ್ಟಾ ವೈರಸ್‌ಗಳಲ್ಲಿ ಖೋಸ್ಟಾ ವೈರಸ್ 1 ಮತ್ತು ಖೋಸ್ಟಾ ವೈರಸ್ 2 ಎಂಬ ಎರಡು ವಿಧಗಳಿವೆ ಎಂಬುದನ್ನು ಅಧ್ಯಯನ ಪತ್ತೆ ಮಾಡಿದೆ. "ಈ ಎರಡು ವೈರಸ್‌ಗಳು SARS-CoV-1 ಮತ್ತು -2 ನಿಂದ ಭಿನ್ನವಾಗಿರುವ ವೈರಲ್ ತಳಿಯಲ್ಲಿದ್ದರೆ, ಒಂದು ವೈರಸ್‌ನಿಂದ ರಿಸೆಪ್ಟರ್ ಬೈಂಡಿಂಗ್ ಡೊಮೇನ್(RBD), ಖೋಸ್ಟಾ 2, ಜೀವಕೋಶದ ಪ್ರವೇಶವನ್ನು ಸುಲಭಗೊಳಿಸಲು ACE2 ಅನ್ನು ಬಳಸುವ ಸಾಮರ್ಥ್ಯವನ್ನು ಹೊಂದಿದೆ," ಎಂದು ಅಧ್ಯಯನ ತಿಳಿಸುತ್ತದೆ.

ರಿಸೆಪ್ಟರ್ ಬೈಂಡಿಂಗ್ ಡೊಮೇನ್ ಎಂದರೆ ಸಾರ್ಬೆಕೊವೈರಸ್ ಎನ್ನುವುದು ಮಾನವ ಜೀವಕೋಶ ಮತ್ತು ಮಧ್ಯಸ್ಥಿಕ ಜೀವಕೋಶಗಳ ಮೇಲೆ ದಾಳಿ ಮಾಡಿ ಅದರೊಂದಿಗೆ ಬೆರೆತು ಹೋಗುತ್ತದೆ.

ಮನುಷ್ಯರ ಪಾಲಿಗೆ ಖೋಸ್ಟಾ-2 ಹಾನಿಕಾರಕವೇ?

ಮನುಷ್ಯರ ಪಾಲಿಗೆ ಖೋಸ್ಟಾ-2 ಹಾನಿಕಾರಕವೇ?

ಪ್ರಾರಂಭಿಕ ಹಂತದಲ್ಲಿ ಈ ವೈರಸ್ ಹಾನಿಕಾರಕವಲ್ಲ ಎಂದು ತಿಳಿದು ಬಂದಿದ್ದರೂ, ಈ ರೋಗವು ಮನುಷ್ಯರಿಗೆ ಅಂಟಿಕೊಳ್ಳುತ್ತದೆ ಎಂಬುದು ಸ್ಪಷ್ಟವಾಗಿದೆ. "ರಷ್ಯಾದಲ್ಲಿ ಪತ್ತೆಯಾದ ಖೋಸ್ಟಾ-2, ಸಾರ್ಬೆಕೊವೈರಸ್, SARS-CoV-2 ನಂತೆಯೇ ಅದೇ ರೀತಿಯಲ್ಲಿ ಮನುಷ್ಯನ ದೇಹವನ್ನು ಪ್ರವೇಶಿಸುತ್ತದೆ," ಎಂದು ವಿಜ್ಞಾನಿಗಳು ಹೇಳುತ್ತಾರೆ. " ಈ ಖೋಸ್ಟಾ -2 ವೈರಸ್‌ ಎನ್ನುವುದು ಮಾನವ ರೋಗಕಾರಕಗಳಂತೆ ಜೀವಕೋಶಗಳಿಗೆ ಸೋಂಕು ತಗುಲಿಸಬಹುದು ಎಂಬುದನ್ನು ಕಂಡುಕೊಂಡಿದ್ದೇವೆ," ಎಂದು ಹೇಳಿದ್ದಾರೆ.

ಖೋಸ್ಟಾ 2 ಎದುರಿಸಲು ಕೊರೊನಾವೈರಸ್ ಲಸಿಕೆ ಸಾಕಾ?

ಖೋಸ್ಟಾ 2 ಎದುರಿಸಲು ಕೊರೊನಾವೈರಸ್ ಲಸಿಕೆ ಸಾಕಾ?

ಖೋಸ್ಟಾ 2 ಬಾವಲಿಯ ಸಾರ್ಬೆಕೊ ವೈರಸ್ ಮಾನವನ SARS-CoV ತಳಿಗಿಂತ ಭಿನ್ನವಾಗಿವೆ. ಈ ರೋಗಾಣು ದೇಹದಲ್ಲಿನ ಪ್ರತಿರಕ್ಷಣಾ ವ್ಯವಸ್ಥೆ ಮೇಲೆ ದಾಳಿ ಮಾಡುತ್ತದೆ ಎಂದು ಹೇಳುವುದಕ್ಕೆ ಯಾವುದೇ ಮಾಹಿತಿ ಇಲ್ಲ. ಇನ್ನೂ ಸರಳವಾಗಿ ಹೇಳುವುದಾದರೆ, ಕೋವಿಡ್-19 ಸೋಂಕಿನ ರೀತಿಯಲ್ಲಿ ಖೋಸ್ಟಾ-2 ವೈರಸ್ ಮನುಷ್ಯರ ದೇಹದಲ್ಲಿ ಯಾವುದೇ ರೀತಿಯ ಗಂಭೀರ ಸಮಸ್ಯೆಯನ್ನು ಸೃಷ್ಟಿಸುವುದಿಲ್ಲ. ಅದಾಗ್ಯೂ, ಕೊರೊನಾವೈರಸ್ ಸೋಂಕಿಗೆ ಕಾರಣವಾಗುವ ತಳಿಯೊಂದಿಗೆ ಖೋಸ್ಟ್ 2 ಬೆರೆತುಕೊಂಡರೆ, ಜೀವಕ್ಕೆ ಅಪಾಯವನ್ನು ಉಂಟು ಮಾಡಬಹುದು.

ಕೊರೊನಾವೈರಸ್ ಲಸಿಕೆಯು ಸೇರಿದಂತೆ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಲು ಬಳಸುವ ಯಾವುದೇ ಲಸಿಕೆಯು ಖೋಸ್ಟ್ -2 ವೈರಸ್ ವಿರುದ್ಧ ಹೋರಾಡುವುದಕ್ಕೆ ಸಹಾಯಕಾರಿ ಆಗಿರುತ್ತದೆ. ಖೋಸ್ಟ್-2 ರೋಗಾಣುವಿನಿಂದ ರಕ್ಷಣೆ ಪಡೆದುಕೊಳ್ಳುವುದಕ್ಕೆ ಕೋವಿಡ್-19 ಲಸಿಕೆಯನ್ನೇ ಬಳಸಿಕೊಳ್ಳಬಹುದು.

English summary
COVID-like virus Khosta 2 found in Russian bats, could infect humans, resist vaccines: Study
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X