ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲ್ಲಾ ನಾಗರಿಕರಿಗೆ 3 ಬಾರಿ ಕಡ್ಡಾಯ ಕೋವಿಡ್‌ ಪರೀಕ್ಷೆಗೆ ಹಾಂಗ್‌ ಕಾಂಗ್‌ ಆದೇಶ

|
Google Oneindia Kannada News

ಹಾಂಗ್‌ ಕಾಂಗ್‌, ಫೆಬ್ರವರಿ 22: ಹಾಂಗ್ ಕಾಂಗ್‌ನ ಜನರೆಲ್ಲರೂ ಮೂರು ಸುತ್ತಿನ ಕಡ್ಡಾಯ ಕೊರೊನಾ ವೈರಸ್‌ ಸೋಂಕು ಪರೀಕ್ಷೆಗೆ ಒಳಗಾಗಬೇಕು ಎಂದು ನಗರದ ನಾಯಕ ಮಂಗಳವಾರ ಆದೇಶ ನೀಡಿದ್ದಾರೆ. ಆಸ್ಪತ್ರೆಗಳು ಮತ್ತು ಪ್ರತ್ಯೇಕ ಘಟಕಗಳು ಸ್ಥಳಾವಕಾಶವಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಜನನಿಬಿಡ ಮಹಾನಗರದಲ್ಲಿ ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಕೋವಿಡ್‌ ಪ್ರಕರಣಗಳು ದಾಖಲಾಗುತ್ತಿದೆ ಎಂದು ವರದಿಯು ಉಲ್ಲೇಖ ಮಾಡಿದೆ.

ಮಂಗಳವಾರ, ಮುಖ್ಯ ಕಾರ್ಯನಿರ್ವಾಹಕಿ ಕ್ಯಾರಿ ಲ್ಯಾಮ್ ನಗರದ ಕಟ್ಟುನಿಟ್ಟಾದ ಶೂನ್ಯ-ಕೋವಿಡ್ ವಿಧಾನವನ್ನು ಅನುಸರಿಸುವ ಉದ್ದೇಶವನ್ನು ಪ್ರಸ್ತಾಪ ಮಾಡಿದ್ದಾರೆ. "ಹದಗೆಡುತ್ತಿರುವ ಈ ಸಾಂಕ್ರಾಮಿಕವು ಅದನ್ನು ನಿಭಾಯಿಸುವ ಹಾಂಗ್ ಕಾಂಗ್ ಸರ್ಕಾರದ ಸಾಮರ್ಥ್ಯವನ್ನು ಮೀರಿದೆ, ಆದ್ದರಿಂದ ವೈರಸ್ ವಿರುದ್ಧ ಹೋರಾಡಲು ಕೇಂದ್ರ ಸರ್ಕಾರದ ಬೆಂಬಲದ ಹೆಚ್ಚಿನ ಅವಶ್ಯಕತೆಯಿದೆ," ಎಂದು ನಾಯಕಿ ಕ್ಯಾರಿ ಲ್ಯಾಮ್ ಸುದ್ದಿಗಾರರಿಗೆ ತಿಳಿಸಿದರು.

ಭಾರತ ಸೇರಿ 7 ದೇಶಗಳಿಂದ ವಿಮಾನ ಹಾರಾಟ ನಿಷೇಧಿಸಿದ ಹಾಂಗ್ ಕಾಂಗ್ ಭಾರತ ಸೇರಿ 7 ದೇಶಗಳಿಂದ ವಿಮಾನ ಹಾರಾಟ ನಿಷೇಧಿಸಿದ ಹಾಂಗ್ ಕಾಂಗ್

ಬೀಜಿಂಗ್‌ನ ಹಾಂಗ್ ಕಾಂಗ್ ಮತ್ತು ಮಕಾವು ವ್ಯವಹಾರಗಳ ಮುಖ್ಯಸ್ಥ ಕ್ಸಿಯಾ ಬಾಲೊಂಗ್ ಅವರು ಗಡಿ ನಗರವಾದ ಶೆನ್‌ಜೆನ್‌ನಿಂದ ಮುಖ್ಯ ಭೂಭಾಗದ ಪರಿಸ್ಥಿತಿಯನ್ನು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಕೂಡಾ ಉಲ್ಲೇಖ ಮಾಡಿದ್ದಾರೆ. ಹೊಸ ನಿಯಮಗಳ ಅಡಿಯಲ್ಲಿ, ಎಲ್ಲಾ 7.4 ಮಿಲಿಯನ್ ನಿವಾಸಿಗಳು ಮಾರ್ಚ್‌ನಲ್ಲಿ ಮೂರು ಸುತ್ತಿನ ಕಡ್ಡಾಯ ಪರೀಕ್ಷೆಗೆ ಒಳಗಾಗಬೇಕಾಗಿದೆ. ಆದರೆ ನಾಯಕಿ ಕ್ಯಾರಿ ಲ್ಯಾಮ್, ಈ ಪರೀಕ್ಷೆ ಯಾವಾಗ ಪ್ರಾರಂಭ ಆಗಲಿದೆ ಎಂಬ ಬಗ್ಗೆ ಮಾಹಿತಿ ನೀಡಿಲ್ಲ.

ಬಾವಲಿಯಲ್ಲಿ ಕೋವಿಡ್‌ ಹೊಸ ರೂಪಾಂತರ: WHO ಹೇಳುವುದೇನು?ಬಾವಲಿಯಲ್ಲಿ ಕೋವಿಡ್‌ ಹೊಸ ರೂಪಾಂತರ: WHO ಹೇಳುವುದೇನು?

 ಕೋವಿಡ್‌ ಪರೀಕ್ಷೆಗೆ ಒಳಗಾಗದಿದ್ದರೆ ಕ್ರಮದ ಎಚ್ಚರಿಕೆ

ಕೋವಿಡ್‌ ಪರೀಕ್ಷೆಗೆ ಒಳಗಾಗದಿದ್ದರೆ ಕ್ರಮದ ಎಚ್ಚರಿಕೆ

ಪರೀಕ್ಷೆಗಳು ಹಲವಾರು ದಿನಗಳವರೆಗೆ ನಡೆಯಲಿದೆ. ನಿವಾಸಿಗಳು ಪ್ರತಿ ದಿನ ಮನೆಯಲ್ಲಿಯೇ ರ್‍ಯಾಪಿಡ್‌ ಆಂಟಿಜೆನ್‌ ಪರೀಕ್ಷೆಗೆ ಒಳಗಾಗಲಿದ್ದಾರೆ. "ಯಾರು ಸಾರ್ವತ್ರಿಕ ಪರೀಕ್ಷೆಗೆ ಒಳಗಾಗುವುದಿಲ್ಲವೋ ಅವರ ವಿರುದ್ಧ ಕ್ರಮಕೈಗೊಳ್ಳಲಾಗುವುದು," ಎಂದು ಮುಖ್ಯ ಕಾರ್ಯನಿರ್ವಾಹಕಿ ಕ್ಯಾರಿ ಲ್ಯಾಮ್ ಎಚ್ಚರಿಸಿದ್ದಾರೆ. ಶಾಲೆಗಳು ಮತ್ತು ಜಿಮ್‌ಗಳು, ಬಾರ್‌ಗಳು ಮತ್ತು ಬ್ಯೂಟಿ ಸಲೂನ್‌ಗಳಂತಹ ಬಹು ವ್ಯವಹಾರಗಳು ಏಪ್ರಿಲ್ ಅಂತ್ಯದವರೆಗೆ ಮುಚ್ಚಲ್ಪಡುತ್ತವೆ. ಬ್ರಿಟನ್ ಮತ್ತು ಯುನೈಟೆಡ್ ಸ್ಟೇಟ್ಸ್ ಸೇರಿದಂತೆ ಒಂಬತ್ತು ದೇಶಗಳ ವಿಮಾನಗಳನ್ನು ನಿಷೇಧಿಸಲಾಗಿದೆ.

 ಚೀನಾ-ಶೈಲಿಯ ಶೂನ್ಯ-ಕೋವಿಡ್‌ ನೀತಿ

ಚೀನಾ-ಶೈಲಿಯ ಶೂನ್ಯ-ಕೋವಿಡ್‌ ನೀತಿ

ಲಕ್ಷಣರಹಿತ ಕೋವಿಡ್‌ ರೋಗಿಗಳು ಸೇರಿದಂತೆ ಎಲ್ಲಾ ಕೊರೊನಾ ವೈರಸ್ ರೋಗಿಗಳನ್ನು ಪ್ರತ್ಯೇಕಿಸಲು ಹಾಂಗ್ ಕಾಂಗ್ ನಡೆಸುತ್ತಿರುವ ಪ್ರಯತ್ನವನ್ನು ಮುಂದುವರಿಸಲಾಗುತ್ತದೆ ಎಂದು ಕೂಡಾ ಈ ವೇಳೆ ಸ್ಪಷ್ಟಪಡಿಸಿದ ಲ್ಯಾಮ್‌, "ಪ್ರತ್ಯೇಕತೆ ಇನ್ನೂ ನಮ್ಮ ಮುಖ್ಯ ಮಾರ್ಗಸೂಚಿ ಆಗಿದೆ ಎಂದು ನಾವು ಪುನರುಚ್ಚರಿಸುತ್ತೇವೆ," ಎಂದಿದ್ದಾರೆ. ಹಾಂಗ್ ಕಾಂಗ್‌ನ ಕಟ್ಟುನಿಟ್ಟಾದ, ಚೀನಾ-ಶೈಲಿಯ ಶೂನ್ಯ-ಕೋವಿಡ್‌ ನೀತಿಯು ಕಳೆದ ಎರಡು ವರ್ಷಗಳಿಂದ ನಗರವನ್ನು ಕೋವಿಡ್‌ ಸೋಂಕಿನಿಂದ ಪ್ರತ್ಯೇಕವಾಗಿ ಇರಿಸುವಲ್ಲಿ ಯಶಸ್ವಿಯಾಗಿದೆ. ಆದರೆ ಓಮಿಕ್ರಾನ್‌ ರೂಪಾಂತರವು ಕಾಣಿಸಿಕೊಂಡ ಬಳಿಕ ಕೋವಿಡ್‌ ನಿರ್ಬಂಧ ಸಡಿಲಿಕೆ ಆಗುತ್ತಿದ್ದಂತೆ ಇಲ್ಲಿ ಕೋವಿಡ್‌ ಪ್ರಕರಣಗಳು ಭಾರೀ ಏರಿಕೆ ಕಂಡಿದೆ. ಆಸ್ಪತ್ರೆಯ ವಾರ್ಡ್‌ಗಳು ತುಂಬಿಹೋಗಿವೆ. ಪ್ರತ್ಯೇಕ ಘಟಕಗಳಲ್ಲಿ ಭಾರಿ ಕೊರತೆ ಕಂಡುಬಂದಿದೆ.

 ಕೋವಿಡ್‌: ತುಂಬಿ ಹೋದ ಆಸ್ಪತ್ರೆಗಳು

ಕೋವಿಡ್‌: ತುಂಬಿ ಹೋದ ಆಸ್ಪತ್ರೆಗಳು

ಕೋವಿಡ್‌ ಸಾಂಕ್ರಾಮಿಕ ರೋಗದ ಆರಂಭಿಕ ಹಂತಗಳಲ್ಲಿ, ಬೀಜಿಂಗ್ ನಗರಾದ್ಯಂತ ಲಾಕ್‌ಡೌನ್‌ಗಳು ಹಾಗೂ ಸಾಮೂಹಿಕ ಕೋವಿಡ್‌ ಪರೀಕ್ಷೆಯನ್ನು ಆರಂಭ ಮಾಡಲಾಗಿತ್ತು. ಆದರೆ ಕೋವಿಡ್ ಮೊದಲು ಕಾಣಿಸಿಕೊಂಡ ವುಹಾನ್‌ನಲ್ಲಿ ಕೋವಿಡ್‌ ಪ್ರಕರಣ ಏರಿಕೆಯು ನಿಯಂತ್ರಣಕ್ಕೆ ಬಂದಿಲ್ಲ. ಹಾಂಗ್ ಕಾಂಗ್ ದೈನಂದಿನ ಪರೀಕ್ಷಾ ಸಾಮರ್ಥ್ಯವನ್ನು ದಿನಕ್ಕೆ ಒಂದು ಮಿಲಿಯನ್‌ಗೆ ಹೆಚ್ಚಿಸುವ ನಿರೀಕ್ಷೆಯಿದೆ ಎಂದು ಲ್ಯಾಮ್ ಹೇಳಿದರು. ಮುಂಬರುವ ವಾರಗಳಲ್ಲಿ ಹತ್ತಾರು ಪ್ರತ್ಯೇಕ ಘಟಕಗಳು ಮತ್ತು ಚಿಕಿತ್ಸಾ ಹಾಸಿಗೆಗಳನ್ನು ನಿರ್ಮಿಸಲಾಗುವುದು ಎಂದು ಅವರು ಹೇಳಿದರು. ಆದರೆ ಹಾಂಗ್ ಕಾಂಗ್‌ನಲ್ಲಿ ಪ್ರಕರಣಗಳು ಮಾತ್ರ ನಿರಂತರವಾಗಿ ಏರಿಕೆ ಕಾಣುತ್ತಿದೆ. ಸಾಮೂಹಿಕ ಪರೀಕ್ಷೆಯ ಸಮಯದಲ್ಲಿ ಹೆಚ್ಚಿನ ಪ್ರಕರಣಗಳು ಪತ್ತೆಯಾದಾಗ ಸಾಕಷ್ಟು ಘಟಕಗಳು ಲಭ್ಯವಿರುತ್ತವೆಯೇ ಎಂಬುದು ಸ್ಪಷ್ಟವಾಗಿಲ್ಲ.

 ಹಾಂಗ್‌ ಕಾಂಗ್‌ನಲ್ಲಿ ಕೋವಿಡ್‌

ಹಾಂಗ್‌ ಕಾಂಗ್‌ನಲ್ಲಿ ಕೋವಿಡ್‌

ಪ್ರಸ್ತುತ ಕೋವಿಡ್‌ ಪ್ರಕರಣಗಳು ಏರಿಕೆ ಆಗುವ ಮೊದಲು ಡಿಸೆಂಬರ್ ಅಂತ್ಯದಲ್ಲಿ ಹಾಂಗ್ ಕಾಂಗ್‌ನಲ್ಲಿ ಕೇವಲ 12,000 ಕೋವಿಡ್‌ ಪ್ರರಕಣಗಳು ಮತ್ತು ಸುಮಾರು 200 ಸಾವುಗಳು ದಾಖಲಾಗಿದ್ದವು. ಪ್ರಸ್ತುತ ಏಕಾಏಕಿ 54,000 ಪ್ರಕರಣಗಳು ಮತ್ತು 145 ಸಾವುಗಳನ್ನು ಕಾಣಿಸಿಕೊಂಡಿದೆ. ಹಾಂಗ್ ಕಾಂಗ್ ವಿಶ್ವವಿದ್ಯಾಲಯವು ಮಾರ್ಚ್‌ನಲ್ಲಿ ಸುಮಾರು 180,000 ದೈನಂದಿನ ಸೋಂಕುಗಳು ಮತ್ತು ದಿನಕ್ಕೆ ಸುಮಾರು 100 ಸಾವುಗಳು ದಾಖಲಾಗುವ ಮೂಲಕ ಹಾಂಗ್‌ ಕಾಂಗ್‌ನಲ್ಲಿ ಕೋವಿಡ್‌ ಉತ್ತುಂಗಕ್ಕೇರಲಿದೆ ಎಂದು ಅಂದಾಜಿಸಿದೆ. (ಒನ್‌ಇಂಡಿಯಾ ಸುದ್ದಿ)

English summary
Hong Kong's population must undergo three rounds of compulsory coronavirus testing, the city's leader said Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X