ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಗತ್ತಿನಾದ್ಯಂತ 7 ಲಕ್ಷ ಕೊವಿಡ್ ಸಾವು, ಯಾವ ದೇಶದಲ್ಲಿ ಎಷ್ಟು?

|
Google Oneindia Kannada News

ದೆಹಲಿ, ಆಗಸ್ಟ್ 5: ಜಗತ್ತಿನಾದ್ಯಂತ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 7 ಲಕ್ಷ ಗಡಿ ದಾಟಿದೆ. ಇದುವರೆಗೂ ಎಲ್ಲ ದೇಶಗಳಲ್ಲಿ 1.8 ಕೋಟಿ (18,699,432) ಜನರಿಗೆ ಕೊರೊನಾ ವೈರಸ್ ತಗುಲಿದೆ. ಅದರಲ್ಲಿ 1.1 ಕೋಟಿ (11,914,788) ಜನರು ಅದಾಗಲೇ ಗುಣಮುಖರಾಗಿದ್ದಾರೆ.

Recommended Video

ರಸಗೊಬ್ಬರ ಮತ್ತು ಬಾಂಬ್ ಬಳಕೆಯಲ್ಲಿ ಬಳಸುವ ಅಮೋನಿಯಂ ನೈಟ್ರೇಟ್ ಸ್ಪೋ | Oneindia Kannada

ಈ ಕ್ಷಣದವರೆಗೂ ಒಟ್ಟು 704,324 ಮಂದಿಗೆ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ನಿನ್ನೆ ಒಂದೇ ದಿನ 6,291 ಜನರು ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಅಮಿತ್ ಶಾ ನಂತರ ಮತ್ತೊಬ್ಬ ಕೇಂದ್ರ ಸಚಿವನಿಗೆ ಕೊರೊನಾಅಮಿತ್ ಶಾ ನಂತರ ಮತ್ತೊಬ್ಬ ಕೇಂದ್ರ ಸಚಿವನಿಗೆ ಕೊರೊನಾ

ನಿನ್ನೆ ಅಮೆರಿಕದಲ್ಲಿ 1,362 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಬ್ರೆಜಿಲ್‌ನಲ್ಲಿ 1,394 ಜನರು ಸಾವನ್ನಪ್ಪಿದ್ದಾರೆ. ಭಾರತದಲ್ಲಿ 849 ಸತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ದಕ್ಷಿಣ ಆಫ್ರಿಕಾದಲ್ಲಿ 345 ಜನರು ಸೋಂಕಿಗೆ ಬಲಿಯಾಗಿದ್ದಾರೆ.

Covid Death Toll Crosses 7 Lakh In World

ಅತಿ ಹೆಚ್ಚು ಕೊವಿಡ್ ಸಾವು ವರದಿಯಾಗಿರುವ ದೇಶಗಳ ಪೈಕಿ ಅಮೆರಿಕ ಮೊದಲ ಸ್ಥಾನದಲ್ಲಿದೆ, ಬ್ರೆಜಿಲ್ ಎರಡನೇ ಸ್ಥಾನದಲ್ಲಿದೆ, ಮೆಕ್ಸಿಕೋ ಮೂರನೇ ಸ್ಥಾನ, ಯುಕೆ ನಾಲ್ಕನೇ ಸ್ಥಾನದಲ್ಲಿದೆ ಹಾಗೂ ಭಾರತ ಐದನೇ ಸ್ಥಾನದಲ್ಲಿದೆ.

ಅತಿ ಹೆಚ್ಚು ಕೊವಿಡ್ ಸಾವು ಹೊಂದಿರುವ 10 ದೇಶಗಳು

ಅಮೆರಿಕ - 160,290

ಬ್ರೆಜಿಲ್ - 96,096

ಮೆಕ್ಸಿಕೋ - 48,012

ಯುಕೆ - 46,299

ಭಾರತ - 39,820

ಫ್ರಾನ್ಸ್ - 30,296

ಇಟಲಿ - 35,171

ಸ್ಪೇನ್ - 28,498

ಪೆರು - 20,007

ಇರಾನ್ - 17,617

English summary
Coronavirus death toll crosses 7 lakh in worldwide. US reported highest number of death, brazil second and india stand in 5th place.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X