ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೌದಿ ಅರೇಬಿಯಾದಲ್ಲಿ ಮೊದಲ ಜಿ20 ಶೃಂಗಸಭೆ

|
Google Oneindia Kannada News

ಕೊವಿಡ್ 19 ಅವಧಿಯಲ್ಲಿ ಮೊದಲ ಬಾರಿಗೆ ಜಿ20 ಶೃಂಗಸಭೆ ಆಯೋಜನೆ ಮಾಡಲಾಗಿದೆ. ಜಿ20 ಇತಿಹಾಸದಲ್ಲೇ ಪ್ರಥಮ ಬಾರಿಗೆ ಅರಬ್ ರಾಷ್ಟ್ರವು ಜಿ20 ಶೃಂಗಸಭೆಯನ್ನು ಆಯೋಜಿಸುತ್ತಿದೆ.

ಈ ಬಾರಿಯ ಜಿ20 ಸಭೆಯ ಆತಿಥ್ಯ ಸೌದಿ ಅರೇಬಿಯಾದ ಪಾಲಾಗಿದೆ. ಒಂದೆಡೆ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಸೋಲು ಒಪ್ಪಿಕೊಳ್ಳಲು ನಿರಾಕರಿಸುತ್ತಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇನ್ನೊಂದೆಡೆ ಕೊರೊನಾ ವೈರಸ್ ರಗಳೆ.ಆರ್ಥಿಕ ಹಿಂಜರಿತದ ಭಯ ಇದು ಈ ಶೃಂಗ ಸಭೆಯ ಪ್ರಮುಖ ವಿಚಾರವಾಗಿದೆ.

ಸೌದಿ ಅರೇಬಿಯಾ ಆಯೋಜಿಸುತ್ತಿರುವ ಈ ವರ್ಚ್ಯುವಲ್ ಸಭೆಯಲ್ಲಿ ಜಿ20 ಸದಸ್ಯ ರಾಷ್ಟ್ರಗಳ ನಾಯಕರು ಪರಸ್ಪರ ಆನ್‌ಲೈನ್ ಸಭೆಗಳನ್ನು ನಡೆಸಲಿದ್ದಾರೆ. ಸೌದಿ ಅರೇಬಿಯಾ ರಾಜ ಸಲ್ಮಾನ್ ಈ ಸಭೆಯ ಅಧ್ಯಕ್ಷತೆ ವಹಿಸಲಿದ್ದು, ಹವಾಮಾನ ಬದಲಾವಣೆ ಸಭೆಯ ಪ್ರಮುಖ ವಿಚಾರವಾಗಲಿದೆ.

COVID Deals Blow To Saudi Arabias G20 Summit Ambitions

ರಷ್ಯಾ ವ್ಲಾಡಿಮಿರ್ ಪುಟಿನ್, ಟ್ರಂಪ್ ಕೂಡ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ , ಎಂದು ಹೇಳಲಾಗುತ್ತಿದೆ. ಇದಲ್ಲದೆ ಕೊರೊನಾ ನಿಯಂತ್ರಣ ಹಾಗೂ ಲಸಿಕೆ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ.

Recommended Video

Corona ಲಸಿಕೆ ಪೂರೈಸಲು ಮಾಸ್ಟರ್ ಪ್ಲಾನ್ ಮಾಡಿದ Modi | Oneindia Kannada

ಈ ಹಿಂದಿನ ಜಿ 20ಶೃಂಗಸಭೆಯಲ್ಲಿ ಸದಸ್ಯ ರಾಷ್ಟ್ರಗಳ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಿಡಿಕಾರಿದ್ದರು. ಈಗ ಚುನಾವಣಾ ಸೋಲಿನ ಬಳಿಕ ಟ್ರಂಪ್ ಏನು ಮಾಡಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ.

English summary
A G20 gathering is usually a chance for the host nation to promote itself in the best possible light. But the leaders’ summit taking place this weekend is happening under the pall of a pandemic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X