ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವ್ಯಕ್ತಿಯ ಸಾವಿನ ಬಳಿಕವೂ ಆಕ್ಸ್‌ಫರ್ಡ್ ಲಸಿಕೆ ಪ್ರಯೋಗ ಮುಂದುವರಿಕೆ

|
Google Oneindia Kannada News

ಫ್ರಾಂಕ್‌ಫರ್ಟ್, ಅಕ್ಟೋಬರ್ 22: ಕೊರೊನಾ ಲಸಿಕೆ ಪ್ರಯೋಗಕ್ಕೆ ಒಳಗಾಗಿದ್ದ ವ್ಯಕ್ತಿ ಮೃತಪಟ್ಟ ಬಳಿಕವೂ ಪ್ರಯೋಗವನ್ನು ಮುಂದುವರೆಸುವುದಾಗಿ ಆಕ್ಸ್‌ಫರ್ಡ್ ತಿಳಿಸಿದೆ.

ಆಸ್ಟ್ರಾಜೆನೆಕಾ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯಗಳು ಅಭಿವೃದ್ಧಿಪಡಿಸಿರುವ ಕೋವಿಡ್ 19ರ ಲಸಿಕೆಯ ಪ್ರಯೋಗಕ್ಕೆ ಒಳಗಾಗಿದ್ದ ಸ್ವಯಂ ಕಾರ್ಯಕರ್ತನೊಬ್ಬ ಸಾವಿಗೀಡಾಗಿದ್ದಾನೆ ಎಂದು ಬ್ರೆಜಿಲ್‌ನ ಆರೋಗ್ಯ ಪ್ರಾಧಿಕಾರ ಅನ್ವಿಸಾ ತಿಳಿಸಿತ್ತು.ಲಸಿಕೆಯಿಂದ ಯಾವುದೇ ತೊಂದರೆಯಿಲ್ಲ ನಾವು ಪ್ರಯೋಗವನ್ನು ಮುಂದುವರೆಸುತ್ತೇವೆ ಎಂದು ಹೇಳಿದೆ.

ಕೊರೊನಾ ವೈರಸ್ ಲಸಿಕೆ ಪ್ರಯೋಗಕ್ಕೆ ಒಳಗಾಗಿದ್ದ ವ್ಯಕ್ತಿ ಸಾವುಕೊರೊನಾ ವೈರಸ್ ಲಸಿಕೆ ಪ್ರಯೋಗಕ್ಕೆ ಒಳಗಾಗಿದ್ದ ವ್ಯಕ್ತಿ ಸಾವು

ವರದಿಯಲ್ಲಿರುವಂತೆ ಕ್ಲಿನಿಕಲ್‌ ಟ್ರಯಲ್‌ ವೇಳೆ ಸಂಭವಿಸಿದ ‌ಸಾವಿನ ಘಟನೆ ನಂತರವೂ ಲಸಿಕೆಯ ಪರೀಕ್ಷೆ ಮುಂದುವರಿಯುತ್ತಿರುವುದಾಗಿ ಪ್ರಾಧಿಕಾರ ತಿಳಿಸಿದೆ. ಟ್ರಯಲ್‌ನಲ್ಲಿ ಭಾಗವಹಿಸಿರುವ ಸ್ವಯಂಸೇವಕರ ಗೌಪ್ಯತೆ ಕಾಪಾಡಿರುವ ಪ್ರಾಧಿಕಾರ ಯಾರ ಮಾಹಿತಿಯನ್ನೂ ಈ ವರೆಗೂ ಹಂಚಿಕೊಂಡಿಲ್ಲ.

COVID-19 Vaccine Trial Will Continue, Says Oxford After Volunteer Dies

ಬ್ರೆಜಿಲ್‌ನಲ್ಲಿ ಲಸಿಕೆಯ 3ನೇ ಹಂತದ ಕ್ಲಿನಿಕಲ್ ಟ್ರಯಲ್‌ಗೆ ನೆರವಾಗಿರುವ ಸಾವೊ ಪಾಲೊನ ಫೆಡರಲ್ ವಿಶ್ವವಿದ್ಯಾಲಯ ಸಾವಿನ ಕುರಿತು ಪ್ರತಿಕ್ರಿಯಿಸಿದ್ದು, 'ಸ್ವಯಂಸೇವಕ ಬ್ರೆಜಿಲ್‌ನವರೇ. ಆದರೆ, ಆ ವ್ಯಕ್ತಿ ಎಲ್ಲಿಯವರು ಎಂದು ಹೇಳಲಾಗದು, ಅವರ ಮಾಹಿತಿ ಗೌಪ್ಯವಾಗಿಡಲಾಗುತ್ತದೆ ಎಂದಿದೆ.

ಇದೇ ವಿಚಾರವಾಗಿ ಹೇಳಿಕೆ ಬಿಡುಗಡೆ ಮಾಡಿರುವ ಆಕ್ಸ್ ಫರ್ಡ್ ವಿವಿ, ಸ್ವಯಂಸೇವಕರು ನಿಯಂತ್ರಣ ಗುಂಪಿನಲ್ಲಿರಲಿ ಅಥವಾ ಕೊವಿಡ್-19 ಲಸಿಕೆ ಗುಂಪಿನಲ್ಲಿರಲಿ, ಎಲ್ಲಾ ಮಹತ್ವದ ವೈದ್ಯಕೀಯ ಘಟನೆಗಳನ್ನು ಸ್ವತಂತ್ರವಾಗಿ ಪರಿಶೀಲಿಸಲಾಗುತ್ತದೆ.

ಬ್ರೆಜಿಲ್ ನಲ್ಲಿ ಈ ಪ್ರಕರಣವನ್ನು ಎಚ್ಚರಿಕೆಯಿಂದ ಮೌಲ್ಯಮಾಪನ ಮಾಡಿದ ನಂತರ, ಕ್ಲಿನಿಕಲ್ ಪ್ರಯೋಗದ ಸುರಕ್ಷತೆಯ ಬಗ್ಗೆ ಯಾವುದೇ ರೀತಿ ಆತಂಕ ಅಥವಾ ಭಯಪಡುವ ಅಗತ್ಯವಿಲ್ಲ. ಅಂತೆಯೇ ಹೆಚ್ಚುವರಿಯಾಗಿ ಸ್ವತಂತ್ರ ವಿಮರ್ಶೆಯ ವಿಚಾರಣೆಯನ್ನು ಮುಂದುವರಿಸಬೇಕೆಂದು ಶಿಫಾರಸು ಮಾಡಿದೆ.

ಇನ್ನು ಅಸ್ಟ್ರಾಜೆನೆಕಾ ಪ್ರಯೋಗದಲ್ಲಿ ಶೇ.1.7ರಷ್ಟು ಪ್ರತಿಕೂಲ ಮತ್ತು ಸಾವು ಸಂಭವಿಸಿದ ಪ್ರಕರಣಗಳು ಕಂಡು ಬಂದಿವೆ ಎಂದು ವರದಿಯಲ್ಲಿ ಹೇಳಲಾಗಿದೆ.

ಬ್ರಿಟನ್‌ನ ಈ ಲಸಿಕೆಯನ್ನು ಖರೀದಿಸಿ, ರಿಯೊ ಡಿ ಜನೈರೊದಲ್ಲಿನ ತನ್ನ ಸಂಶೋಧನಾ ಕೇಂದ್ರ 'ಫಿಯೋಕ್ರೂಜ್‌'ನಲ್ಲಿ ಉತ್ಪಾದಿಸುವ ಯೋಜನೆಯನ್ನು ಬ್ರೆಜಿಲ್‌ ಸರ್ಕಾರವು ಈಗಾಗಲೇ ಹೊಂದಿದೆ. ಇನ್ನೊಂದೆಡೆ, ಚೀನಾದ ಸಿನೋವಾಕ್‌ ಲಸಿಕೆಯನ್ನು ಸಾವೊ ಪಾಲೊದ ಸಂಶೋಧನಾ ಕೇಂದ್ರ 'ಬುಟಾಂಟನ್'ನಲ್ಲಿ ಪರೀಕ್ಷಿಸಲಾಗುತ್ತಿದೆ.

ಕೊರೊನಾ ವೈರಸ್‌ನಿಂದಾಗಿ ಹೆಚ್ಚುಜನ ಮೃತಪಟ್ಟ ರಾಷ್ಟ್ರಗಳ ಪಟ್ಟಿಯಲ್ಲಿ ಬ್ರೆಜಿಲ್‌ ಎರಡನೇ ಸ್ಥಾನದಲ್ಲಿದೆ. ಇಲ್ಲಿ 1,55,459 ಮಂದಿ ಈ ವರೆಗೆ ಸಾಂಕ್ರಾಮಿಕ ರೋಗಕ್ಕೆ ಪ್ರಾಣ ತೆತ್ತಿದ್ದಾರೆ. ಸದ್ಯ ಬ್ರೆಜಿಲ್‌ನಲ್ಲಿ 53,00,649 ಸೋಂಕು ಪ್ರಕರಣಗಳು ವರದಿಯಾಗಿದೆ. 47,56,489 ಮಂದಿ ಗುಣಮುಖರಾಗಿದ್ದಾರೆ ಎಂದು ಕೋವಿಡ್‌ ಟ್ರ್ಯಾಕರ್ ವೆಬ್‌ಸೈಟ್‌ ವರ್ಲ್ಡೋಮೀಟರ್‌ನಲ್ಲಿ ಉಲ್ಲೇಖಿಸಲಾಗಿದೆ.

Recommended Video

ಇದನ್ನು ಬಳಸಿ corona ಇಂದ ದೂರ ಇರಿ | Oneindia Kannada

English summary
Brazilian health authority Anvisa said on Wednesday that a volunteer in a clinical trial of the COVID-19 vaccine developed by AstraZeneca and Oxford University had died but added that the trial would continue.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X