ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾವು ತಪ್ಪಿಸಲು ಹೊಸ ವ್ಯವಸ್ಥೆ; ಕೊವಿಡ್-19 ಸೋಂಕಿತರಿಗೆ ಪ್ರತಿಕಾಯ ಚಿಕಿತ್ಸೆ!

|
Google Oneindia Kannada News

ಕ್ಯಾಲಿಫೋರ್ನಿಯಾ, ನವೆಂಬರ್.22: ವಿಶ್ವದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆ ಸೋಂಕಿತರಿಗೆ ಪ್ರತಿಕಾಯ ಚಿಕಿತ್ಸೆ ನೀಡಲು ತುರ್ತು ಅನುಮೋದನೆ ನೀಡಲಾಗಿದೆ. ಜಿ-20 ರಾಷ್ಟ್ರಗಳಲ್ಲಿ ಕೊವಿಡ್-19 ಪ್ರಮಾಣವನ್ನು ತಗ್ಗಿಸುವ ನಿಟ್ಟಿನಲ್ಲಿ ವೈದ್ಯಕೀಯ ಪ್ರಯೋಗಕ್ಕೆ ಅನುಮತಿ ನೀಡಲಾಗಿದೆ.

ವಿಶ್ವದಲ್ಲೇ ಅತಿಹೆಚ್ಚು ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದಲ್ಲಿ ಪತ್ತೆಯಾಗಿವೆ. 1,24,50,666 ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಮಹಾಮಾರಿಗೆ 2,61,790 ಜನರು ಪ್ರಾಣ ಬಿಟ್ಟಿದ್ದಾರೆ. 74,03,847 ಸೋಂಕಿತರು ಗುಣಮುಖರಾಗಿದ್ದರೆ, ಅಮೆರಿಕಾಯದಲ್ಲಿ ಇನ್ನೂ 47,85,029 ಸಕ್ರಿಯ ಪ್ರಕರಣಗಳಿರುವುದು ವರದಿಯಾಗಿದೆ.

ಭಾರತದಲ್ಲಿ ಕೊರೊನಾಗೆ ಮೊದಲು ಸಿಗುವ ಲಸಿಕೆ ಯಾವುದು? ಭಾರತದಲ್ಲಿ ಕೊರೊನಾಗೆ ಮೊದಲು ಸಿಗುವ ಲಸಿಕೆ ಯಾವುದು?

ಕ್ಯಾಲಿಫೋರ್ನಿಯಾ ಸೇರಿದಂತೆ ಯುನೈಟೆಡ್ ಸ್ಟೇಟ್ಸ್ ನ ಕೆಲವು ರಾಜ್ಯಗಳಲ್ಲಿ ಹೊಸ ನಿರ್ಬಂಧ ಮತ್ತು ನಿಯಗಳನ್ನು ಜಾರಿಗೊಳಿಸಲಾಗಿದೆ. ಉದಾಹರಣೆಗೆ ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೂ ಕರ್ಫ್ಯೂ ಜಾರಿಗೊಳಿಸಲಾಗಿದೆ.

ಮೂಲಭೂತವಲ್ಲದ ಅಂಗಡಿ ಮುಂಗಟ್ಟು 2 ವಾರ ಬಂದ್

ಮೂಲಭೂತವಲ್ಲದ ಅಂಗಡಿ ಮುಂಗಟ್ಟು 2 ವಾರ ಬಂದ್

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹಿನ್ನೆಲೆ ಮಧ್ಯಪ್ರಾಚ್ಯ ಮತ್ತು ಇರಾನ್ ರಾಷ್ಟ್ರಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಅನಗತ್ಯವಾಗಿರುವ ವಹಿವಾಟುಗಳನ್ನು ಎರಡು ವಾರಗಳವರೆಗೂ ಬಂದ್ ಮಾಡುವುದಕ್ಕೆ ಸೂಚಿಸಲಾಗಿದೆ. ಇನ್ನೊಂದು ಕಡೆ ಇಂಗ್ಲೆಂಡ್ ನಲ್ಲಿ ಅಧ್ಯಕ್ಷ ಬೋರಿಸ್ ಜಾನ್ಸನ್ ಅವರು ಡಿಸೆಂಬರ್.02ರವರೆಗೂ ಚಾಲ್ತಿಯಲ್ಲಿ ಇರುವಂತೆ ಹೊಸ ನಿರ್ಬಂಧಗಳನ್ನು ಜಾರಿಗೊಳಿಸಲಾಗಿದೆ.

ಅಮೆರಿಕಾಯದಲ್ಲಿ ಪ್ರತಿಕಾಯ ಚಿಕಿತ್ಸಾ ವಿಧಾನಕ್ಕೆ ಅನುಮೋದನೆ

ಅಮೆರಿಕಾಯದಲ್ಲಿ ಪ್ರತಿಕಾಯ ಚಿಕಿತ್ಸಾ ವಿಧಾನಕ್ಕೆ ಅನುಮೋದನೆ

ಕೊರೊನಾವೈರಸ್ ಸೋಂಕಿತರಿಗೆ ಹಲವು ರೀತಿಯ ಪ್ರತಿಕಾಯ ಚಿಕಿತ್ಸೆ ವಿಧಾನಗಳನ್ನು ಬಳಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಪೈಕಿ ಕೆಲವು ಬಗೆಯ ಪ್ರತಿಕಾಯ ಚಿಕಿತ್ಸಾ ವಿಧಾನಗಳಿಗೆ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ಸರ್ಕಾರವೇ ಅನುಮೋದನೆ ನೀಡಿದೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಿಗೆ ಕೊವಿಡ್-19 ಸೋಂಕು ಕಾಣಿಸಿಕೊಂಡಾಗಲೂ ಇದೇ ಬಗೆಯ ಪ್ರತಿಕಾಯ ಚಿಕಿತ್ಸಾ ವಿಧಾನ(Antibody Therapy) ಬಳಸಿ ಚಿಕಿತ್ಸೆ ನೀಡಲಾಗಿತ್ತು.

ಲ್ಯಾಬ್ ನಲ್ಲಿ ಸಿದ್ಧಪಡಿಸಿದ REGEN-CoV2 ಎಂಬ ಎರಡು ಪ್ರತಿಕಾಯ ವಿಧಾನಗಳೊಂದಿಗೆ ಗ್ರೀನ್ ಲೈಟ್ ಡ್ರಗ್ ಮೇಕರ್ಸ್ ರೆಜೆನೆರಾನ್ ಹೊರ ಬಂದಿದೆ. ಕೊವಿಡ್-19 ಸೋಂಕಿನಿಂದ ಆಸ್ಪತ್ರೆಗಳಿಗೆ ದಾಖಲಾದ ಮತ್ತು ತುರ್ತು ಚಿಕಿತ್ಸೆ ಅಗತ್ಯವಿರುವ ರೋಗಿಗಳ ಮೇಲೆ ಇದನ್ನು ಪ್ರಯೋಗಿಸಲಾಗುತ್ತಿದೆ.

ಕೊವಿಡ್-19 ಸೋಂಕಿತರು ಆಸ್ಪತ್ರೆಗೆ ದಾಖಲಾಗದಿರಲು ಈ ಥೆರೆಪಿ

ಕೊವಿಡ್-19 ಸೋಂಕಿತರು ಆಸ್ಪತ್ರೆಗೆ ದಾಖಲಾಗದಿರಲು ಈ ಥೆರೆಪಿ

ಕೊರೊನಾವೈರಸ್ ಸೋಂಕಿನಿಂದ ಬಳಲುತ್ತಿರುವ ರೋಗಿಗಳಿಗೆ ಆರಂಭದ ಹಂತದಲ್ಲಿ ಮೊನೊಕ್ಲೊನಲ್ ಪ್ರತಿಕಾಯ ಚಿಕಿತ್ಸೆಯನ್ನು ನೀಡಲಾಗುತ್ತದೆ. ಇದರಿಂದಾಗಿ ರೋಗಿಗಳು ಆಸ್ಪತ್ರೆಗೆ ದಾಖಲಾಗುವ ಹಂತಕ್ಕೆ ತಲುಪುವ ಮೊದಲೇ ಚೇತರಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ ಎಂದು ಯುಎಸ್ ಆಹಾರ ಮತ್ತು ಔಷಧೀಯ ಆಡಳಿತ ಮಂಡಳಿಯ ಆಯುಕ್ತ ಸ್ಟಿಫನ್ ಹಾನ್ ತಿಳಿಸಿದ್ದಾರೆ.

ರಿಜೆನೆರಾನ್ ಪ್ರತಿಕಾಯ ಚಿಕಿತ್ಸೆ ತುರ್ತು ಬಳಕೆಗೆ ಎಫ್ ಡಿಓ ಒಪ್ಪಿಗೆ

ರಿಜೆನೆರಾನ್ ಪ್ರತಿಕಾಯ ಚಿಕಿತ್ಸೆ ತುರ್ತು ಬಳಕೆಗೆ ಎಫ್ ಡಿಓ ಒಪ್ಪಿಗೆ

ಅಮೆರಿಕಾದಲ್ಲಿ ಕೊರೊನಾವೈರಸ್ ಸೋಂಕಿತರಿಗೆ ಅಗತ್ಯ ಸಂದರ್ಭಗಳಲ್ಲಿ ರಿಜೆನೆರಾನ್ ಪ್ರತಿಕಾಯ ಚಿಕಿತ್ಸೆ ವಿಧಾನವನ್ನು ಬಳಸಿಕೊಳ್ಳುವುದಕ್ಕೆ ಅನುಮೋದನೆ ನೀಡಿದೆ. ಕಳೆದ ನವೆಂಬರ್.09ರಂದು ಇದೇ ರೀತಿ ಎಲಿ ಲಿಲ್ಲಿ ಅಭಿವೃದ್ಧಿಪಡಿಸಿರುವ ಚಿಕಿತ್ಸಾ ವಿಧಾನಕ್ಕೆ ಎಫ್ ಡಿಎ ಒಪ್ಪಿಗೆ ನೀಡಿದೆ. ನವೆಂಬರ್ ಅಂತ್ಯದ ವೇಳೆಗೆ 80,000 ರೋಗಿಗಳಿಗೆ ಕೊವಿಡ್-19 ಡೋಸ್ ಲಸಿಕೆಯನ್ನು ಸಿದ್ಧಪಡಿಸಲಾಗಿದೆ. 2021ರ ಜನವರಿ ವೇಳೆಗೆ 3,00,000 ಜನರಿಗೆ ಈ ಲಸಿಕೆಯು ಸಿಗಲಿದೆ ಎಂದು ಕಂಪನಿ ಹೇಳಿಕೊಂಡಿದೆ. ಈ ಚಿಕಿತ್ಸಾ ವಿಧಾನ ಮತ್ತು ಲಸಿಕೆಯು ಕೇವಲ ಅಮೆರಿಕಾದ ಪ್ರಜೆಗಳಿಗೆ ಮಾತ್ರ ಎಂಬ ಯೋಜನೆಯನ್ನು ಹಾಕಿಕೊಳ್ಳಲಾಗಿದೆ.

ಅಮೆರಿಕಾದಲ್ಲಿ ಶೇ.95ರಷ್ಟು ಯಶಸ್ವಿ ಲಸಿಕೆಯ ತುರ್ತು ಬಳಕೆ

ಅಮೆರಿಕಾದಲ್ಲಿ ಶೇ.95ರಷ್ಟು ಯಶಸ್ವಿ ಲಸಿಕೆಯ ತುರ್ತು ಬಳಕೆ

ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದಲ್ಲಿ ಪಿ-ಫಿಜರ್ ಮತ್ತು ಜರ್ಮನಿ ಸಹಭಾಗಿತ್ವದಲ್ಲಿ ಬಯೋ-ಎನ್-ಟೆಕ್ ಕಂಪನಿಯು ಪ್ರಯೋಗ ನಡೆಸಿದೆ. ಮಾಡರ್ನ ಸೇರಿದಂತೆ ಇತ್ತೀಚಿಗೆ ನಡೆಸಿದ ಕೊವಿಡ್-19 ಲಸಿಕೆಗಳ ಮೂರನೇ ಹಂತದ ಪ್ರಯೋಗದಲ್ಲಿ ಶೇ.95ರಷ್ಟು ಯಶಸ್ವಿ ಎನಿಸಿವೆ. ಹೀಗೆ ಶೇ.95ರಷ್ಟು ಸುರಕ್ಷಿತ ಮತ್ತು ಪರಿಣಾಮಕಾರಿ ಎನಿಸಿರುವ ಲಸಿಕೆಗಳನ್ನು ತುರ್ತು ಸಂದರ್ಭಗಳಲ್ಲಿ ಕೊರೊನಾವೈರಸ್ ರೋಗಿಗಳ ಮೇಲೆ ಪ್ರಯೋಗಿಸುವುದಕ್ಕೆ ಅಮೆರಿಕಾದಲ್ಲಿ ಅನುಮೋದನೆ ನೀಡಲಾಗಿದೆ.

ಕೊರೊನಾವೈರಸ್ ಲಸಿಕೆ ಕೊರತೆ ನಿವಾರಣೆಗೆ ಕ್ರಮ

ಕೊರೊನಾವೈರಸ್ ಲಸಿಕೆ ಕೊರತೆ ನಿವಾರಣೆಗೆ ಕ್ರಮ

ವಿಶ್ವದ ಬಹುತೇಕ ಕಂಪನಿಗಳು ಕೊವಿಡ್-19 ಲಸಿಕೆ ಉತ್ಪಾದನೆಯಲ್ಲಿ ಬ್ಯುಸಿ ಆಗಿವೆ. ಜನವರಿ ಆರಂಭ ಅಥವಾ ಅಂತ್ಯದ ವೇಳೆಗೆ ಹಲವು ಕಂಪನಿಗಳಿಂದ ಕೊವಿಡ್-19 ಲಸಿಕೆಯು ಬಿಡುಗಡೆಯಾಗುವ ನಿರೀಕ್ಷೆಯಿದೆ. ಇದರ ನಡುವೆಯೂ ಜಗತ್ತಿನಾದ್ಯಂತ ಎಲ್ಲರಿಗೂ ಲಸಿಕೆಯನ್ನು ಒದಗಿಸುವುದು ಸದ್ಯದ ಪರಿಸ್ಥಿತಿಯಲ್ಲಿ ಸಾಧ್ಯವಾಗುವುದಿಲ್ಲ. ಇದನ್ನು ಅರಿತುಕೊಂಡು ಜಿ-20 ರಾಷ್ಟ್ರಗಳು ಅಗತ್ಯವಿರುವ ರಾಷ್ಟ್ರಗಳಿಗೆ ಅಗತ್ಯಕ್ಕೆ ತಕ್ಕಂತೆ ಕೊವಿಡ್-19 ಲಸಿಕೆ ಪೂರೈಸುವ ಬಗ್ಗೆ ಯೋಜನೆಯನ್ನು ರೂಪಿಸುತ್ತಿವೆ.

English summary
Covid-19 Vaccine News: United States Of America Approves Coronavirus Antibody Therapy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X