ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾಗ-1: ಕೊವಿಡ್-19 ಔಷಧಿ ಪತ್ತೆಯಾದರೂ ಸೋಂಕಿತರಿಗೆ ಸಿಗುವುದೇ ಅನುಮಾನ

|
Google Oneindia Kannada News

ನವದೆಹಲಿ, ಅಕ್ಟೋಬರ್.02: ಕೊರೊನಾವೈರಸ್ ಸೋಂಕು ನಿಯಂತ್ರಣ ಮತ್ತು ರೋಗ ನಿರೋಧಕ ಶಕ್ತಿ ವೃದ್ಧಿಗೆ ಲಸಿಕೆ ಅದ್ಯಾವಾಗ ಸಿದ್ಧವಾಗುತ್ತದೆಯೋ ಎಂಬ ಕಾತುರತೆ ಜಗತ್ತಿನಾದ್ಯಂತ ಮನೆ ಮಾಡಿದೆ. ವಿಶ್ವದ ಮೊದಲ ಕೊವಿಡ್-19 ಲಸಿಕೆಗೆ ಅನುಮೋದನೆ ಸಿಕ್ಕ ದಿನವೇ ಸಾಲು ಸಾಲು ಸವಾಲುಗಳು ಎದುರಾಗಲಿವೆ. ನೊವೆಲ್ ಕೊರೊನಾವೈರಸ್ ಸೋಂಕಿಗೆ ಲಸಿಕೆಯೇನೋ ಸಿದ್ಧವಾಗುತ್ತದೆ. ನಿಗದಿತ ಔಷಧಿ ತಯಾರಿಕಾ ಕೈಗಾರಿಕೆಗಳಲ್ಲಿ ಭಾರಿ ಪ್ರಮಾಣದ ಲಸಿಕೆಯ ಉತ್ಪಾದನೆಯೂ ಆಗುತ್ತದೆ. ಆದರೆ ಅಲ್ಲಿಂದ ಮುಂದೆ ಎದುರಾಗುವ ಸವಾಲುಗಳು ಒಂದು ಎರಡರಲ್ಲ.

ಜಗತ್ತಿನಾದ್ಯಂತ ಕೊವಿಡ್-19 ಸೋಂಕಿತ ಪ್ರಕರಣಗಳ ಸಂಖ್ಯೆಯು 34470778ರ ಗಡಿ ದಾಟಿದೆ. ಮಹಾಮಾರಿಗೆ ಬಲಿಯಾದವರ ಸಂಖ್ಯೆಯು 10,27,489ಕ್ಕೂ ಹೆಚ್ಚಾಗಿದೆ. ಇನ್ನೊಂದು ಕಡೆಯಲ್ಲಿ 25657479 ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದಾರೆ. ಇದರ ಮಧ್ಯೆ ಜಗತ್ತಿನ ಮೊದಲ ಕೊವಿಡ್-19 ಲಸಿಕೆ ಅನುಮೋದನೆ ಬಳಿಕ ಮುಂದೇನು ಎನ್ನುವ ಪ್ರಶ್ನೆಗಳು ಹುಟ್ಟಿಕೊಳ್ಳುತ್ತಿವೆ.

ಹಲೋ, ಕೊವಿಡ್-19 ಸೋಂಕಿತರೇ ಪ್ಲಾಸ್ಮಾ ಬೇಕಾದಲ್ಲಿ 7000 ರೂ. ಪಾವತಿಸಿ! ಹಲೋ, ಕೊವಿಡ್-19 ಸೋಂಕಿತರೇ ಪ್ಲಾಸ್ಮಾ ಬೇಕಾದಲ್ಲಿ 7000 ರೂ. ಪಾವತಿಸಿ!

ಮಿಲಿಯನ್ ಗಟ್ಟಲೇ ಪ್ರಮಾಣದಲ್ಲಿ ಉತ್ಪಾದನೆಯಾಗುವ ಕೊವಿಡ್-19 ಸೋಂಕಿನ ಲಸಿಕೆಗಳನ್ನು ನೂರಾರು ಮೈಲುಗಟ್ಟಲೇ ದೂರದಲ್ಲಿರುವ ಆಸ್ಪತ್ರೆಗಳಿಗೆ ಮತ್ತು ವಿದೇಶಗಳಿಗೆ ರವಾನೆ ಮಾಡುವುದೇ ದೊಡ್ಡ ಸಮಸ್ಯೆ ಆಗಿ ಕಾಡುವ ಮುನ್ಸೂಚನೆ ಸಿಕ್ಕಿವೆ. ಕೊರೊನಾವೈರಸ್ ಲಸಿಕೆಗೆ ಅನುಮೋದನೆಯೇ ಸಿಕ್ಕಿಲ್ಲ. ಅಷ್ಟರಲ್ಲೇ ಒಂದು ದೇಶದಲ್ಲಿ ಉತ್ಪಾದಿಸಿದ ಲಸಿಕೆ ಮತ್ತೊಂದು ದೇಶಕ್ಕೆ ರವಾನೆ ಆಗುತ್ತದೆಯೇ. ಹೀಗೆ ರವಾನಿಸಲ್ಪಟ್ಟ ಲಸಿಕೆ ಬಳಕೆಗೆ ಯೋಗ್ಯವಾಗಿರುತ್ತದೆಯೇ. ಕೊವಿಡ್-19 ಲಸಿಕೆ ಕೈಯಲ್ಲೇ ಇದ್ದರೂ ಬಳಸುವುದಕ್ಕೆ ಸಾಧ್ಯವಾಗದಂತಾ ಪರಿಸ್ಥಿತಿ ಎದುರಾಗುವುದೇಕೆ. ಅದರ ಹಿಂದಿನ ವೈಜ್ಞಾನಿಕ ಕಾರಣವಾದರೂ ಏನು ಎನ್ನುವ ಸಾಲು ಸಾಲು ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ನೋಡಿ.

ಕೊವಿಡ್-19 ಲಸಿಕೆ ವಿತರಣೆಯ ಪ್ರಕ್ರಿಯೆ ಹೇಗೆ?

ಕೊವಿಡ್-19 ಲಸಿಕೆ ವಿತರಣೆಯ ಪ್ರಕ್ರಿಯೆ ಹೇಗೆ?

ವಿಶ್ವದ ಮೊದಲ ಕೊವಿಡ್-19 ಲಸಿಕೆಗೆ ಅನುಮೋದನೆ ಸಿಕ್ಕ ಬಳಿಕ ವೈದ್ಯಕೀಯ ಲಸಿಕೆ ಮತ್ತು ಔಷಧಿ ತಯಾರಿಕಾ ಕಂಪನಿಗಳಲ್ಲಿ ಮಿಲಿಯನ್ ಗಟ್ಟಲೇ ಲಸಿಕೆ ಉತ್ಪಾದಿಸಲಾಗುತ್ತದೆ. ಅಲ್ಲಿಂದ ಲಸಿಕೆ ವಿತರಣೆ ಕಾರ್ಯಾಚರಣೆ ಶುರುವಾಗುತ್ತದೆ. ಸರ್ಕಾರಿ ಆಸ್ಪತ್ರೆ, ಖಾಸಗಿ ಆಸ್ಪತ್ರೆ, ವೈದ್ಯರ ಕಚೇರಿ, ಔಷಧಿ ಅಂಗಡಿ ಸೇರಿದಂತೆ ದೇಶಾದ್ಯಂತ ಜನರಿಗೆ ಲಸಿಕೆ ತಲುಪುವ ನಿಟ್ಟಿನಲ್ಲಿ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಸಾಂಕ್ರಾಮಿಕ ರೋಗ ನಿಯಂತ್ರಣ ಮತ್ತು ಮುನ್ನೆಚ್ಚರಿಕಾ ಕೇಂದ್ರದ ಸೂಚನೆ ಮೇರೆಗೆ ರಾಜ್ಯ ಮತ್ತು ಸ್ಥಳೀಯ ಆರೋಗ್ಯಾಧಿಕಾರಿ ಈ ಪ್ರಕ್ರಿಯೆಯಲ್ಲಿ ಸಹಕಾರ ನೀಡಲಿದ್ದಾರೆ.

ಹೆಚ್1ಎನ್1 ಲಸಿಕೆ ವಿತರಣೆಯ ಪ್ರಕ್ರಿಯೆ ಬಳಸಲು ಸಾಧ್ಯವಿಲ್ಲ

ಹೆಚ್1ಎನ್1 ಲಸಿಕೆ ವಿತರಣೆಯ ಪ್ರಕ್ರಿಯೆ ಬಳಸಲು ಸಾಧ್ಯವಿಲ್ಲ

ಕಳೆದ 2009ರಲ್ಲಿ ಹೆಚ್1ಎನ್1 ಸೋಂಕಿನ ಲಸಿಕೆ ಮತ್ತು ಮಾತ್ರೆಗಳನ್ನು ಮೊದಲಿನ ಪ್ರಕ್ರಿಯೆ ಮೂಲಕ ದೇಶಾದ್ಯಂತ ವಿತರಣೆ ಮಾಡಲಾಗಿತ್ತು. ಆದರೆ ಕೊವಿಡ್-19 ಸೋಂಕಿನ ಲಸಿಕೆಯ ವಿತರಣೆ ಹೀಗೆ ಅಂದುಕೊಂಡಷ್ಟು ಸುಲಭವಲ್ಲ. ಈ ಲಸಿಕೆ ವಿತರಣೆ ಮತ್ತು ಹಂಚಿಕೆ ಪ್ರಕ್ರಿಯೆಯಲ್ಲಿ ಹೊಸ ಸವಾಲುಗಳು ಎದುರಾಗಲಿವೆ. "ಕೊವಿಡ್-19 ಹರಡುವಿಕೆ ಈ ಪರಿಸ್ಥಿತಿಯಲ್ಲಿ ನಾವು ಹಿಂದಿಗಿಂತಲೂ ಎಚ್ಚರಿಕೆಯಿಂದ ವ್ಯವಹರಿಸಬೇಕಾಗಿದ್ದು, ಎಲ್ಲಕ್ಕಿಂತ ಗಮನಾರ್ಹ, ವಿಭಿನ್ನ, ಹಾಗೂ ಹೆಚ್ಚು ಸಂಕೀರ್ಣವಾಗಿದೆ" ಎಂದು ಮಿನಿಸೋಟಾ ಆರೋಗ್ಯ ಇಲಾಖೆಯ ಸಾಂಕ್ರಾಮಿಕ ರೋಗ ನಿಯಂತ್ರಣದ ನಿರ್ದೇಶಕರಾದ ಕ್ರಿಸ್ ಎರೆಸ್ ಮನ್ ತಿಳಿಸಿದ್ದಾರೆ.

ಆಯುರ್ವೇದ್ ಚಿಕಿತ್ಸೆಯಿಂದ 5 ದಿನಗಳಲ್ಲೇ ಕೊವಿಡ್-19 ನೆಗೆಟಿವ್!ಆಯುರ್ವೇದ್ ಚಿಕಿತ್ಸೆಯಿಂದ 5 ದಿನಗಳಲ್ಲೇ ಕೊವಿಡ್-19 ನೆಗೆಟಿವ್!

ಅಮೆರಿಕಾದಲ್ಲಿ 2 ಲಸಿಕೆ ಮಾದರಿ ಮೇಲೆ ಪ್ರಯೋಗ ಚಾಲ್ತಿ

ಅಮೆರಿಕಾದಲ್ಲಿ 2 ಲಸಿಕೆ ಮಾದರಿ ಮೇಲೆ ಪ್ರಯೋಗ ಚಾಲ್ತಿ

ವಿಶ್ವದಲ್ಲೇ ಅತಿಹೆಚ್ಚು ಕೊವಿಡ್-19 ಸೋಂಕಿಗೆ ತತ್ತರಿಸಿರುವ ಅಮೆರಿಕಾದಲ್ಲಿ ಲಸಿಕೆ ಯಾವಾಗ ಸಿದ್ಧಗೊಳ್ಳುತ್ತದೆಯೋ ಎಂಬ ಕಾತುರತೆ ಹೆಚ್ಚಾಗಿದೆ. ಅಮೆರಿಕಾದಲ್ಲಿ ಕೊರೊನಾವೈರಸ್ ಲಸಿಕೆಗೆ ಸಂಬಂಧಿಸಿದಂತೆ ಎರಡು ಮಾದರಿಗಳ ಮೇಲಿನ ಪ್ರಯೋಗ ಹೆಚ್ಚು ಚಾಲ್ತಿಯಲ್ಲಿದೆ. ಒಂದು ಮಾಡರ್ನ್ ಅಭಿವೃದ್ಧಿಪಡಿಸಿದ್ದು, ಮತ್ತೊಂದು ಪಿ-ಫಿಜರ್ ಮತ್ತು ಜರ್ಮನಿಯ ಬಯೋ-ಎನ್-ಟೆಕ್ ಸಹಯೋಗದೊೆಂದಿಗೆ ಅಭಿವೃದ್ಧಿಪಡಿಸಲಾಗುತ್ತಿದೆ. ತ್ವರಿತ ಗತಿಯಲ್ಲಿ 3ನೇ ಹಂತದ ವೈದ್ಯಕೀಯ ಪ್ರಯೋಗಕ್ಕೆ ಒಳಪಟ್ಟಿರುವ ಈ ಎರಡು ಮಾದರಿಗಳನ್ನು ಸಾಧ್ಯವಾದಷ್ಟು ಬೇಗ ಬಳಕೆಗೆ ತರುವುದಕ್ಕೆ ಶತಪ್ರಯತ್ನಗಳನ್ನು ನಡೆಸಲಾಗುತ್ತಿದೆ. ಅನುಮೋದನೆ ಸಿಕ್ಕ ಬೆನ್ನಲ್ಲೇ ಲಸಿಕೆ ಉತ್ಪಾದನೆಗೆ ಕೈಗಾರಿಕೆಗಳು ಕೂಡಾ ಉತ್ಸುಕವಾಗಿವೆ.

ಲಸಿಕೆ ಹೆಪ್ಪುಗಟ್ಟುವ ಸ್ಥಿತಿಯಲ್ಲೇ ಇರಬೇಕು

ಲಸಿಕೆ ಹೆಪ್ಪುಗಟ್ಟುವ ಸ್ಥಿತಿಯಲ್ಲೇ ಇರಬೇಕು

ಕೊರೊನಾವೈರಸ್ ಸೋಂಕಿಗೆ ಲಸಿಕೆಯನ್ನು ಅಭಿವೃದ್ಧಿಪಡಿಸುವ ಮಟ್ಟದಲ್ಲಿ ತಂತ್ರಜ್ಞಾನವನ್ನು ಹೆಚ್ಚಾಗಿ ಬಳಸಿಕೊಂಡು ವೇಗದ ಗತಿಯಲ್ಲಿ ಉತ್ಪಾದನೆ ಮತ್ತು ಸಂಶೋಧನೆ ಮೇಲೆ ಹೆಚ್ಚು ಗಮನ ಹರಿಸಿದ್ದಾರೆ. ಆದರೆ ಲಸಿಕೆಯ ಸ್ಥಿತಿಯ ಬಗ್ಗೆ ಲಕ್ಷ್ಯ ವಹಿಸಿಲ್ಲ. ಪರಿಣಾಮ ಕೊವಿಡ್-19 ಲಸಿಕೆಯು ಹೆಪ್ಪುಗಟ್ಟುವ ಸ್ಥಿತಿಯಲ್ಲೇ ಇರಿಸುವಂತಾ ಅನಿವಾರ್ಯತೆ ಎದುರಾಗಲಿವೆ. ಪಿ-ಫಿಜರ್ ಮತ್ತು ಬಯೋ-ಎನ್-ಟೆಕ್ ವಿಷಯದಲ್ಲಿ ಇದು ಸತ್ಯವಾಗಿದೆ. ಕೊರೊನಾವೈರಸ್ ಲಸಿಕೆಯನ್ನು -94 ಡಿಗ್ರಿ ಅಲ್ಟ್ರಾಕೋಲ್ಡ್ ವಾತಾವರಣದಲ್ಲಿಯೇ ಇರಿಸಬೇಕು. ಏಕೆಂದರೆ ಲಸಿಕೆಯು ಹೆಪ್ಪುಗಟ್ಟುವ ಸ್ಥಿತಿಯಲ್ಲೇ ಇರಬೇಕು.

ಮೈ ಮೇಲೆ ಸೂರ್ಯನ ಕಿರಣ ಬೀಳದಿದ್ದರೆ ಕೊರೊನಾವೈರಸ್ ಪಾಸಿಟಿವ್!ಮೈ ಮೇಲೆ ಸೂರ್ಯನ ಕಿರಣ ಬೀಳದಿದ್ದರೆ ಕೊರೊನಾವೈರಸ್ ಪಾಸಿಟಿವ್!

ಕೊರೊನಾವೈರಸ್ ಲಸಿಕೆ ಸ್ಥಳಾಂತರಿಸುವುದೇ ಸವಾಲು

ಕೊರೊನಾವೈರಸ್ ಲಸಿಕೆ ಸ್ಥಳಾಂತರಿಸುವುದೇ ಸವಾಲು

ಕೊರೊನಾವೈರಸ್ ಲಸಿಕೆ ಸಿದ್ಧಪಡಿಸುವ ಸಂದರ್ಭದಲ್ಲಿ ಸಂರಕ್ಷಕ ಮತ್ತು ಸ್ಥಳಾಂತರಗೊಳಿಸುವ ಉದ್ದೇಶವನ್ನೇ ಮರೆಯಲಾಗಿದೆ. ಲಸಿಕೆ ಉತ್ಪಾದನೆಯಲ್ಲಿ ವೇಗಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದ್ದು, ಇದೀಗ ಕೊವಿಡ್-19 ಲಸಿಕೆಯನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ರವಾನಿಸುವುದು ಹೇಗೆ ಎಂಬ ಸವಾಲು ಎದಾರಾಗಿದೆ. ಇದನ್ನು ಮತ್ತೊಂದು ರೀತಿಯಲ್ಲಿ ಹೇಳುವುದಾದರೆ, "ಮೊದಲ ತಲೆಮಾರಿನ ಮಾದರಿ ಲಸಿಕೆಯನ್ನು ನಾವು ವ್ಯಾಪಾರಕ್ಕಾಗಿ ಸಿದ್ಧಪಡಿಸುತ್ತಿಲ್ಲ. ಸುರಕ್ಷತೆ ಮತ್ತು ಪರಿಣಾಮಕಾರಿತ್ವದ ಜೊತೆಗೆ ವ್ಯಾಪಾರ ಮಾಡುವುದಕ್ಕೆ ನಾವು ಬಯಸುವುದಿಲ್ಲ" ಎಂದು ಇಮ್ಯುನೈಸೇಶನ್ ಆಕ್ಷನ್ ಒಕ್ಕೂಟದಲ್ಲಿ ರೋಗನಿರೋಧಕ ಶಿಕ್ಷಣದ ಸಹಾಯಕ ನಿರ್ದೇಶಕ ಕೆಲ್ಲಿ ಮೂರೆ ಹೇಳಿದ್ದಾರೆ.

ಲಸಿಕೆ ಸ್ಥಳಾಂತರಕ್ಕೆ ಅಗತ್ಯವಿರುವ ಯೋಜನೆ

ಲಸಿಕೆ ಸ್ಥಳಾಂತರಕ್ಕೆ ಅಗತ್ಯವಿರುವ ಯೋಜನೆ

ಅಮೆರಿಕಾದಲ್ಲಿ ಕೊರೊನಾವೈರಸ್ ಲಸಿಕೆ ಉತ್ಪಾದನೆ ಬಳಿಕವೂ ರಾಜ್ಯ, ಪ್ರಾಂತ್ಯ ಮತ್ತು ಪ್ರಮುಖ ನಗರಗಳಲ್ಲಿರುವ ಸಾರ್ವಜನಿಕ ಆರೋಗ್ಯ ಇಲಾಖೆಗಳಿಗೆ ಸ್ಥಳಾಂತರಿಸುವ ನಿಟ್ಟಿನಲ್ಲಿ ಅಗತ್ಯವಿರುವ ಯೋಜನೆ ರೂಪಿಸಲಾಗುತ್ತಿದೆ. ಅಕ್ಟೋಬರ್ ಅಂತ್ಯದ ವೇಳೆಗೆ ಯೋಜನೆ ಸಿದ್ಧಪಡಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲಾಗುತ್ತಿದೆ. ಆದರೆ ಇದುವರೆಗೂ ಯಾವ ಮಾದರಿಯು ಹೆಚ್ಚು ಸುರಕ್ಷಿತ ಮತ್ತು ಪರಿಣಾಮಕಾರಿ ಎನ್ನುವುದು ಸ್ಪಷ್ಟವಾಗಿ ತಿಳಿದು ಬಂದಿಲ್ಲ. ಅಕ್ಟೋಬರ್ ತಿಂಗಳಾಂತ್ಯದ ವೇಳೆಗೆ ಎಲ್ಲ ಅಂಕಿ-ಅಂಶಗಳು ಹೊರ ಬೀಳಲಿದ್ದು, ಅದಕ್ಕಾಗಿ ಆರೋಗ್ಯ ಇಲಾಖೆಗಳು ಎಲ್ಲ ರೀತಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿವೆ. "ಇತಿಹಾಸದಲ್ಲಿ ಇದುವರೆಗೆ ಪ್ರಯತ್ನಿಸಿದ ಅತಿದೊಡ್ಡ, ಸಂಕೀರ್ಣವಾದ ವ್ಯಾಕ್ಸಿನೇಷನ್ ಕಾರ್ಯಕ್ರಮ" ಇದಾಗಲಿದೆ ಎಂದು ಮೂರೆ ತಿಳಿಸಿದ್ದಾರೆ.

ಎಂಆರ್ಎನ್ಎ ಅನುವಂಶಿಕ ವಸ್ತುವಿನ ಪ್ರಯೋಜನ

ಎಂಆರ್ಎನ್ಎ ಅನುವಂಶಿಕ ವಸ್ತುವಿನ ಪ್ರಯೋಜನ

ಅಮೆರಿಕಾದಲ್ಲಿ ಚಾಲ್ತಿಯಲ್ಲಿರುವ ಎರಡು ಕೊವಿಡ್-19 ಲಸಿಕೆಯ ಮಾದರಿ ಪ್ರಯೋಗಗಳು ಮುಂದಿನ ವೈಜ್ಞಾನಿಕ ವಲಯದಲ್ಲಿ ದೀರ್ಘಾವಧಿ ಭರವಸೆಗಳನ್ನು ಮೂಡಿಸುತ್ತಿದೆ. ಎಂಆರ್ಎನ್ಎ ಅನುವಂಶಿಕ ವಸ್ತುವು ಮನುಷ್ಯನ ದೇಹದಲ್ಲಿರುವ ರೋಗನಿರೋಧಕ ಶಕ್ತಿಯನ್ನು ವೃದ್ಧಿಸುವ ಕಾರ್ಯವನ್ನು ಮಾಡುತ್ತದೆ. ಕೊರೊನಾವೈರಸ್ ದೇಹದ ಜೀವಕೋಶವನ್ನು ಪ್ರವೇಶಿಸದಂತೆ ತಡೆಯುತ್ತದೆ. ಅಲ್ಲದೇ ಕೊವಿಡ್-19 ವಿರುದ್ಧ ಹೋರಾಡಬಲ್ಲ ಪ್ರತಿಕಾಯ ಶಕ್ತಿಯನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದೆ.

ಲಸಿಕೆ ಪ್ರಯೋಗದಲ್ಲಿ ಎಂಆರ್ಎನ್ಎ ಬಳಸಿರುವುದು ಏಕೆ?

ಲಸಿಕೆ ಪ್ರಯೋಗದಲ್ಲಿ ಎಂಆರ್ಎನ್ಎ ಬಳಸಿರುವುದು ಏಕೆ?

ಕೊರೊನಾವೈರಸ್ ಲಸಿಕೆ ಮಾದರಿ ಸಿದ್ಧಪಡಿಸುವ ಸಂದರ್ಭದಲ್ಲಿ ಎಂಆರ್ಎನ್ಎ ಅನುವಂಶಿಕ ವಸ್ತುವನ್ನು ಬಳಕೆ ಮಾಡಿಕೊಳ್ಳಲಾಗಿದೆ. ಇದರಿಂದ ರೋಗ ನಿರೋಧಕ ಶಕ್ತಿ ವೃದ್ಧಿಸುವ ಔಷಧೀಯ ಅಂಶಗಳನ್ನು ಸೇರಿಸುವ ಅಥವಾ ಸಂಶೋಧಿಸುವ ಅಗತ್ಯ ಎದುರಾಗಲಿಲ್ಲ. ರೋಗನಿರೋಧಕ ಶಕ್ತಿಯನ್ನು ವೃದ್ಧಿಸುವ ಈ ವಸ್ತುವನ್ನು ಸಾಂಪ್ರದಾಯಕವಾಗಿ ಎಲ್ಲ ಲಸಿಕೆಗಳ ಪ್ರಯೋಗದಲ್ಲಿಯೂ ಬಳಸಲಾಗುತ್ತದೆ. ಹೀಗಾಗಿ ಮಾಡರ್ನ್ ಮತ್ತು ಪಿ-ಫಿಜರ್ ಹಾಗೂ ಬಯೋ-ಎನ್-ಟೆಕ್ ಮಾದರಿಯ ಲಸಿಕೆಗಳ ವೈದ್ಯಕೀಯ ಪ್ರಯೋಗವು ವೇಗ ಪಡೆದುಕೊಂಡಿದೆ.

ಕೊವಿಡ್-19 ಲಸಿಕೆ ಫ್ರಿಜ್ ನಲ್ಲಿರಿಸಿದರೂ 5 ದಿನ ವ್ಯಾಲಿಡಿಟಿ

ಕೊವಿಡ್-19 ಲಸಿಕೆ ಫ್ರಿಜ್ ನಲ್ಲಿರಿಸಿದರೂ 5 ದಿನ ವ್ಯಾಲಿಡಿಟಿ

ಕೊರೊನಾವೈರಸ್ ಲಸಿಕೆಗಳಿಗೆ ವ್ಯಾಲಿಡಿಟಿ ತೀರಾ ಕಡಿಮೆಯಾಗಿರುತ್ತದೆ. -4 ರಿಂದ -94 ಡಿಗ್ರಿ ತಾಪಮಾನದಲ್ಲಿ ಲಸಿಕೆಯನ್ನು ಹೆಪ್ಪುಗಟ್ಟುವ ಸ್ಥಿತಿಯಲ್ಲಿ ರವಾನೆ ಮಾಡಬೇಕಾಗಿದೆ. ಒಂದು ವೇಳೆ ಫ್ರಿಜ್ ನಲ್ಲಿರುವ ಸಾಮಾನ್ಯ ತಾಪಮಾನದಲ್ಲಿ ಇರಿಸಲು ಪ್ರಯತ್ನಿಸಿದರೂ ಒಮ್ಮೆ ಕರಗಿದ ಕೊವಿಡ್-19 ಲಸಿಕೆಗೆ ವ್ಯಾಲಿಟಿಡಿ ಹೆಚ್ಚು ದಿನ ಇರುವುದಿಲ್ಲ. ಒಮ್ಮ ಕರಗಿದ ಬಳಿಕ ಫ್ರಿಜ್ ನಲ್ಲಿ ಸಾಮಾನ್ಯ ತಾಪಮಾನದಲ್ಲಿ ಲಸಿಕೆಯನ್ನು ಇರಿಸಿದ್ದಲ್ಲಿ ಮಾಡರ್ನ್ ಮಾದರಿಯ ಲಸಿಕೆಯು 14 ದಿನಗಳವರೆಗೂ ಮಾತ್ರ ಬಳಕೆಗೆ ಯೋಗ್ಯವಾಗಿರುತ್ತದೆ. ಇನ್ನು, ಪಿ-ಫಿಜರ್ ಲಸಿಕೆಯ ಮಾದರಿಯು ಕೇವಲ ಐದು ದಿನಗಳವರೆಗೂ ಮಾತ್ರ ಬಳಕೆಗೆ ಯೋಗ್ಯ ಎನ್ನುವಂತಿರುತ್ತದೆ.

Recommended Video

ರಾಜ್ಯ ಸರ್ಕಾರ ಜಾರಿಗೊಳಿಸಿದ unlock 5.0 ಮಾರ್ಗಸೂಚಿಯಲ್ಲಿ ಏನಿದೆ | Oneindia Kannada
ಲಸಿಕೆಯ ಬಾಟಲಿ 1 ನಿಮಿಷದಲ್ಲೇ ಮುಚ್ಚಬೇಕು

ಲಸಿಕೆಯ ಬಾಟಲಿ 1 ನಿಮಿಷದಲ್ಲೇ ಮುಚ್ಚಬೇಕು

ಮಾಡರ್ನ್ ಲಸಿಕೆಯ ಮಾದರಿಯನ್ನು ಸ್ಥಳಾಂತರಿಸುವುದು ತೀರಾ ಕ್ಲಿಷ್ಟಕರ ಸವಾಲು ಎನಿಸಿದೆ. ಪಿ-ಫಿಜರ್ ಮತ್ತು ಬಯೋ-ಎನ್-ಟೆಕ್ ಲಸಿಕೆಯನ್ನು ಅಲ್ಟ್ರಾ ಕೋಲ್ಡ್ ವಾತಾವರಣದಲ್ಲಿಯೇ ಇರಿಸಬೇಕಾಗುತ್ತದೆ. ಸಾರ್ವಜನಿಕ ಆಸ್ಪತ್ರೆ ಮತ್ತು ವೈದ್ಯಕೀಯ ಕೇಂದ್ರಗಳಲ್ಲಿ ಈ ಲಸಿಕೆಯನ್ನು ಇರಿಸುವುದು ಅಸಾಧ್ಯದ ಸಂಗತಿಯಾಗಿದೆ. ಥರ್ಮಲ್ ಶಿಪ್ಪರ್ಸ್ ವ್ಯವಸ್ಥೆಯಲ್ಲಿ ಲಸಿಕೆಯವನ್ನು ರವಾನಿಸಲು ಚಿಂತಿಸಲಾಗುತ್ತಿದೆ. ಒಂದು ಶಿಪ್ಪರ್ ಗಳು ಒಂದು ಬಾರಿ 975 ಡೋಸ್ ಕೊವಿಡ್-19 ಲಸಿಕೆಯನ್ನು ರವಾನಿಸುವ ಸಾಮರ್ಥ್ಯವನ್ನು ಹೊಂದಿರುತ್ತವೆ. ಫ್ರಿಜರ್ ನಲ್ಲಿ 10 ದಿನಗಳವರೆಗೆ ತೆರೆಯದೇ ಲಸಿಕೆ ರವಾನಿಸಲಾಗುತ್ತದೆ. ಒಂದು ಬಾರಿ ಲಸಿಕೆಯನ್ನು ತೆರೆದಲ್ಲಿ 24 ಗಂಟೆಯೊಳಗೆ ಲಸಿಕೆಯನ್ನು ಡ್ರೈ ಐಸ್ ನ ಮಧ್ಯೆ ಇರಿಸಬೇಕು. ಬಾಟಲಿಯಲ್ಲಿ ಇರುವ ಲಸಿಕೆಯನ್ನು ದಿನಕ್ಕೆ ಎರಡಕ್ಕಿಂತ ಹೆಚ್ಚು ಬಾರಿ ತೆರೆಯುವಂತಿಲ್ಲ. ಅಲ್ಲದೇ ಲಸಿಕೆಯಿರುವ ಬಾಟಲಿಯನ್ನು ತೆರೆದು ಒಂದು ನಿಮಿಷದೊಳಗೆ ಮುಚ್ಚಬೇಕು.

English summary
The COVID-19 Vaccines Furthest Along In Clinical Trials Are The Fastest To Make, Alongside Vaccine Chaos In Increasing Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X