ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರಿಟನ್: ಮಾಸ್ಕ್ ಧರಿಸುವಿಕೆ ಸೇರಿ ಕೋವಿಡ್ ನಿರ್ಬಂಧ ರದ್ದು

|
Google Oneindia Kannada News

ಮಾಸ್ಕ್‌ ಧರಿಸುವಿಕೆ ಸೇರಿದಂತೆ ಹಲವು ಕೊರೊನಾ ನಿಯಮಗಳನ್ನು ಸಡಿಲಿಕೆ ಮಾಡಿ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಆದೇಶ ಹೊರಡಿಸಿದ್ದಾರೆ.

ಬ್ರಿಟನ್‌ನಲ್ಲಿ ಓಮಿಕ್ರಾನ್ ಪ್ರಕರಣಗಳು ಉತ್ತುಂಗಕ್ಕೇರಿರುವ ಸಂದರ್ಭದಲ್ಲಿ ಬೋರಿಸ್ ಜಾನ್ಸನ್ ಈ ನಿರ್ಧಾರ ಪ್ರಕಟಿಸಿದ್ದಾರೆ. ದೇಶದಲ್ಲಿ ಈಗಾಗಲೇ ಓಮಿಕ್ರಾನ್ ಅಲೆ ಉತ್ತುಂಗಕ್ಕೇರಿದೆ, ಇನ್ನು ಕಡಿಮೆಯಾಗಲಿದೆ, ಈ ಕೊರೊನಾ ನಿಯಮಗಳೆಲ್ಲವೂ ಬೇಡ ಎಂದು ಹೇಳಿದ್ದಾರೆ.

ಇನ್ನುಮುಂದೆ ಕೊರೊನಾ ಲಸಿಕೆ ಸರ್ಟಿಫಿಕೇಷನ್ ತೋರಿಸಬೇಕಿಲ್ಲ, ವರ್ಕ್ ಫ್ರಂ ಹೋಂ ಕೂಡ ಕೊನೆಯಾಗಲಿದೆ. ಬ್ರಿಟನ್‌ನಲ್ಲಿ ಓಮಿಕ್ರಾನ್ ಸೋಂಕು ನಿಯಂತ್ರಣಕ್ಕೆ ಬರುತ್ತಿದ್ದು, ನಿತ್ಯ 2 ಲಕ್ಷದಷ್ಟು ದಾಖಲಾಗುತ್ತಿದ್ದ ಪ್ರಕರಣಗಳು ಇದೀಗ 90 ಸಾವಿರದ ಆಸುಪಾಸಿಗೆ ಬಂದು ನಿಂತಿವೆ, ಹೀಗಾಗಿ ಇನ್ನುಮುಂದೆ ಜನರು ಮನೆಯಿಂದಲೇ ಕೆಲಸ ಮಾಡಬೇಕು, ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಲಸಿಕೆ ಪ್ರಮಾಣಪತ್ರವನ್ನು ಹೊಂದಿರಬೇಕು ಎಂಬಿತ್ಯಾದಿ ನಿಯಮ ಹಿಂಪಡೆಯಲಾಗುವುದು ಎಂದು ಬೋರಿಸ್ ಜಾನ್ಸನ್ ಹೇಳಿದ್ದಾರೆ.

Covid-19: UK Lifts Mandatory Mask Rule, Says Omicron Wave Has Peaked

ಸುತ್ತುವರೆದ ಅಥವಾ ಕಿಕ್ಕಿರಿದ ಸ್ಥಳಗಳಲ್ಲಿ ಸಾಮಾನ್ಯವಾಗಿ ಮಾಸ್ಕ್‌ಗಳನ್ನು ಧರಿಸಬೇಕು. ಮಾಸ್ಕ್ ಧರಿಸುವುದು ಅವರವರ ಆಯ್ಕೆ ಮಾಸ್ಕ್ ಧರಿಸದವರನ್ನು ಇನ್ನುಮುಂದೆ ಅಪರಾಧಿ ಎಂದು ಪರಿಗಣಿಸುವುದಿಲ್ಲ ಎಂದು ಜಾನ್ಸನ್ ತಿಳಿಸಿದ್ದಾರೆ.

ಬ್ರಿಟನ್‌ನಲ್ಲಿ ಮಂಗಳವಾರ 94,432 ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಈ ಹಿಂದೆ ಕೊರೊನಾ ಸೋಂಕು ಕಡಿಮೆ ಇದ್ದ ಸಂದರ್ಭದಲ್ಲಿ, ಕೊರೊನಾ ಕಡಿಮೆಯಾಯಿತು ಅಪ್ಪಿಕೊಳ್ಳಲು ಅನುಮತಿ ಕೊಡಿ ಎಂದು ಬ್ರಿಟನ್ ಪ್ರಜೆಗಳು ಮನವಿ ಮಾಡಿದ್ದರು.

ಕೆಮ್ಮು ಸಾಮಾನ್ಯವಾಗಿ ದೇಹದಲ್ಲಿ ಕಫ ಶೇಖರಗೊಂಡು ಕೆಮ್ಮು ಕಾಣಿಸಿಕೊಳ್ಳುತ್ತದೆ. ಅವರನ್ನು ಪರೀಕ್ಷಿಸಿದಾಗ ಓಮಿಕ್ರಾನ್​ ಇರುವುದು ದೃಢಪಟ್ಟಿದೆ. ಹೀಗಾಗಿ, ಕೆಮ್ಮು ಕೂಡ ಓಮಿಕ್ರಾನಿನ ಮೊದಲ ಲಕ್ಷಣವಾಗಿದೆ. ಆದ್ದರಿಂದ ಈ ನಿಮಗೆ 2 ದಿನಕ್ಕಿಂತ ಹೆಚ್ಚು ಕೆಮ್ಮು ಮುಂದುವರೆದರೆ ವೈದ್ಯರನ್ನು ಸಂಪರ್ಕಿಸುವುದು ಒಳಿತು ಎನ್ನುತ್ತಾರೆ ತಜ್ಞರು.

ಮೂಗಿನಲ್ಲಿ ಸೋರುವಿಕೆ ಉಸಿರು ಕಟ್ಟುವುದು ಅಥವಾ ನಿರಂತರವಾಗಿ ಮೂಗಿನಲ್ಲಿ ಸೋರಿಕೆಯಾಗುತ್ತಿದ್ದರೆ ಅದನ್ನು ನಿರ್ಲಕ್ಷಿಸಬೇಡಿ. ಏಕೆಂದರೆ ಯುಕೆಯ ಒಂದು ಅಧ್ಯಯನದ ಪ್ರಕಾರ ಶೀತ, ತಲೆನೋವು, ದಣಿವು ಕಾಣಿಸಿಕೊಂಡ ವ್ಯಕ್ತಿಗಳಲ್ಲಿ ಓಮಿಕ್ರಾನ್​ ಸೋಂಕು ದೃಢಪಡುತ್ತಿದೆ. ಈಗಂತೂ ಚಳಿಗಾಲ ಶೀತದಿಂದ ಬಳಲುವವರ ಸಂಖ್ಯೆಯೇ ಹೆಚ್ಚು. ಹೀಗಾಗಿ ನಿಮ್ಮನ್ನು ನೀವು ಬೆಚ್ಚಗಿರಿಸಿಕೊಳ್ಳಿ.

ಆಯಾಸ ಸಾಮಾನ್ಯವಾಗಿ ಶೀತ, ನೆಗಡಿಯಾದರೆ ಆಯಾಸ ಸಾಮಾನ್ಯ. ಆದರೆ ಓಮಿಕ್ರಾನ್​ ಲಕ್ಷಣವಾಗಿದ್ದರೆ ನಿಮಗೆ ಅತಿಯಾದ ಸುಸ್ತು ಕಾಣಿಸಿಕೊಳ್ಳುತ್ತದೆ. ಈ ರೀತಿಯ ಲಕ್ಷಣಗಳು ಕಂಡುಬಂದರೆ ವೈದ್ಯರನ್ನು ತಕ್ಷಣ ಸಂಪರ್ಕಿಸುವುದು ಒಳಿತು. ಮತ್ತು ಸರಿಯಾದ ಸಮಯ ಕೂಡ ಹೌದು.

ಅತಿಯಾದ ಗಂಟಲು ನೋವು ಕೆಲವರಿಗೆ ಹವಾಮಾನದ ಬದಲಾವಣೆ, ಅಹಾರದಲ್ಲಿ ವ್ಯತ್ಯಾಸವಾದರೂ ಗಂಟಲು ನೋವು ಕಾಣಿಸಕೊಳ್ಳುತ್ತದೆ. ಆದರೆ ನೆನಪಿಡಿ ಅತಿಯಾದ ಗಂಟಲು ನೋವು ಕೂಡ ಓಮಿಕ್ರಾನ್​ ಸೋಂಕಿನ ಒಂದು ಲಕ್ಷಣವಾಗಿದೆ. ಹೀಗಾಗಿ ಗಂಟಲು ನೋವು ಕಾಣಿಸಿಕೊಂಡ ತಕ್ಷಣ ಬಿಸಿ ನೀರಿನಿಂದ ಗಂಟಲು ಸ್ವಚ್ಛಗೊಳಿಸಿ.

ತಲೆನೋವು ತಲೆನೋವು ಹಲವು ಕಾರಣಗಳಿಗೆ ಬರುತ್ತದೆ. ಅದೇ ರೀತಿ ಓಮಿಕ್ರಾನ್​ ಸೋಂಕಿನ ಲಕ್ಷಣವೂ ಹೌದು . ಆದ್ದರಿಂದ ತೆಲೆನೋವಿಗೆ ಮಾತ್ರೆಗಳನ್ನು ತೆಗೆದುಕೊಳ್ಳುವ ಮೊದಲು ಎಚ್ಚರವಹಿಸಿರಿ.

ಸ್ನಾಯುಗಳಲ್ಲಿ ನೋವು ನಿಮಗೆ ಸ್ನಾಯುಗಳಲ್ಲಿ ಅತಿಯಾದ ನೋವು ಕಾಣಿಸಿಕೊಳ್ಳುತ್ತಿದ್ದರೆ ಅದರೆಡೆಗೆ ಹೆಚ್ಚು ಗಮನ ನೀಡಿ. ಚಳಿಗಾಲದಲ್ಲಿ ಸ್ನಾಯು, ಕೀಲು ನೋವು ಸಹಜ. ಆದರೆ ಓಮಿಕ್ರಾನ್​ ಕೂಡ ಅದೇ ಲಕ್ಷಣವನ್ನು ಹೊಂದಿದೆ. ಅಲ್ಲದೆ ಕೋರೋನಾ ಸೋಂಕಿನ ಲಕ್ಷಣವೂ ಆಗಿದೆ. ಕೊರೋನಾ ಸೋಂಕಿತರಲ್ಲಿ ಚೇತರಿಕೆಯ ಬಳಿಕವೂ ಸ್ನಾಯುಗಳಲ್ಲಿ ನೋವು ಕಾಣಿಸಿಕೊಳ್ಳುತ್ತಿದೆ.

Recommended Video

Legends League Cricket: Virender Singh ನೇತೃತ್ವದಲ್ಲಿ ಇಂಡಿಯಾ ಮಹಾರಾಜ ತಂಡ!! | Oneindia Kannada

ಜ್ವರ ಕೊರೊನಾ ಸೋಂಕು ಕಾಣಿಸಿಕೊಂಡಾಗಲೂ ದೇಹದ ತಾಪಮಾನ ಹೆಚ್ಚು. ಹೀಗಾಗಿ ಕೊರೊನಾ ಸೋಂಕಿತರಲ್ಲೂ ಜ್ವರ ಕಾಣಿಸಿಕೊಳ್ಳುತ್ತದೆ. ಇದು ಓಮಿಕ್ರಾನ್​ ಲಕ್ಷಣ ಕೂಡ ಹೌದು. ಲಸಿಕೆ ಪಡೆದವರಲ್ಲೂ ಈ ಮೇಲೆನ ಲಕ್ಷಣಗಳು ಕಂಡುಬಂದರೆ ಸೋಂಕು ತಗುಲಿದೆ ಎಂದರ್ಥ ಎಂದು ವೈದ್ಯರ ಮುನ್ಸೂಚನೆ ಉಲ್ಲೇಖಿಸಿ ವರದಿ ತಿಳಿಸಿದೆ.

English summary
British Prime Minister Boris Johnson on Wednesday announced his government's decision to lift all the additional restrictions imposed to contain the spread of the Omicron, including mandatory wearing of face masks anywhere, from next Thursday .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X