ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಡೀ ಜಗತ್ತನ್ನು ಕಾಡುತ್ತಾ ಕೊರೊನಾವೈರಸ್ ಹೊಸ ತಳಿ?

|
Google Oneindia Kannada News

ನವದೆಹಲಿ, ಸಪ್ಟೆಂಬರ್.24: ಕೊರೊನಾವೈರಸ್ ಸೋಂಕಿತರ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡು ಬರುತ್ತಿದೆ. ಇದರ ನಡುವೆ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದಲ್ಲಿ ನಡೆದ ವೈದ್ಯಕೀಯ ಸಂಶೋಧನೆಯಲ್ಲಿ ಕೊವಿಡ್-19 ಅಂಟುರೋಗದ ಹೊಸ ತಳಿಯ ಬಗ್ಗೆ ಗೊತ್ತಾಗಿದೆ.

ಅಮೆರಿಕಾದ ಹ್ಯೂಸ್ಟನ್ ಮೆಥೆಡಿಸ್ಟ್ ಆಸ್ಪತ್ರೆಯಲ್ಲಿ ಕೊರೊನಾವೈರಸ್ ಹೊಸ ತಳಿಯ ಬಗ್ಗೆ ಸಂಶೋಧನೆ ನಡೆಸಲಾಗಿದೆ. ನಗರ ಪ್ರದೇಶಗಳಲ್ಲಿ ಕೊರೊನಾವೈರಸ್ ಸೋಂಕಿನ ಸಂಖ್ಯೆ ಹೆಚ್ಚಾಗುವುದಕ್ಕೆ ಕೊರೊನಾವೈರಸ್ ಅಂಟುರೋಗದ ಹೊಸ ತಳಿ ಮುಖ್ಯ ಕಾರಣ ಎನ್ನಲಾಗಿದೆ.

ಕೊರೊನಾವೈರಸ್ ಪತ್ತೆಗೆ 'ಫೆಲುಡಾ' ಪರೀಕ್ಷೆ: 500 ರೂ. ಮಾತ್ರ!ಕೊರೊನಾವೈರಸ್ ಪತ್ತೆಗೆ 'ಫೆಲುಡಾ' ಪರೀಕ್ಷೆ: 500 ರೂ. ಮಾತ್ರ!

ಸಾಂಕ್ರಾಮಿಕ ಪಿಡುಗಿನ ಆರಂಭಿಕ ಹಂತದಲ್ಲಿ ಮತ್ತು ಇತ್ತೀಚಿನ ದಿನಗಳಲ್ಲಿ ಕೊರೊನಾವೈರಸ್ ಸೋಂಕಿತರ ಮಾದರಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿತ್ತು. 5000 ಜನರ ಮಾದರಿಯನ್ನು ತಪಾಸಣೆಗೆ ಒಳಪಡಿಸಿದ ಸಂದರ್ಭದಲ್ಲಿ ಕೊರೊನಾವೈರಸ್ ಹೊಸ ತಳಿಯ ಬಗ್ಗೆ ತಿಳಿದು ಬಂದಿದೆ.

ಕೊವಿಡ್-19 ಸೋಂಕಿತರಲ್ಲಿ ಹೊಸ ತಳಿ

ಕೊವಿಡ್-19 ಸೋಂಕಿತರಲ್ಲಿ ಹೊಸ ತಳಿ

ಕೊರೊನಾವೈರಸ್ ಸೋಂಕು ಹರಡುವಿಕೆಯ ಎರಡನೇ ಹಂತದಲ್ಲಿ ರೋಗಾಣುಗಳು ರೂಪಾಂತರಗೊಂಡಿವೆ ಎಂದು ಸಾಂಕ್ರಾಮಿಕ ರೋಗತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಇತ್ತೀಚಿನ ದಿನಗಳಲ್ಲಿ ಪತ್ತೆಯಾಗಿರುವ ಕೊರೊನಾವೈರಸ್ ಸೋಂಕಿತರಲ್ಲಿ D614G ತಳಿಯ ರೋಗಾಣು ಪತ್ತೆಯಾಗಿದೆ. ಇದೊಂದು ಕಿರೀಟ ಆಕಾರದಲ್ಲಿ ಗೋಚರಿಸುವ ವೈರಸ್ ಆಗಿದೆ. ಈ ವೈರಸ್ ಗಳ ಸಂಖ್ಯೆಯ ಹೆಚ್ಚಾದಂತೆ ಜೀವಕೋಶಕ್ಕೆ ವೈರಸ್ ಹರಡುತ್ತದೆ. ಇದರಿಂದ ಪ್ರಾಣಕ್ಕೆ ಕುತ್ತು ಬರುವ ಅಪಾಯವಿರುತ್ತದೆ ಎಂದು ತಿಳಿದು ಬಂದಿದೆ.

ಕೊರೊನಾವೈರಸ್ ಪ್ರಮಾಣದಲ್ಲಿ ಹೆಚ್ಚಳವಾಗುವ ಅಪಾಯ

ಕೊರೊನಾವೈರಸ್ ಪ್ರಮಾಣದಲ್ಲಿ ಹೆಚ್ಚಳವಾಗುವ ಅಪಾಯ

ಈ ಮೊದಲಿಗಿಂತಲೂ ಇತ್ತೀಚಿನ ಕೊರೊನಾವೈರಸ್ ತಳಿಗಳು ಹೆಚ್ಚು ಪ್ರಾಬಲ್ಯವನ್ನು ಹೊಂದಿವೆ. ಎರಡನೇ ಅಲೆಯಲ್ಲಿ ರೂಪಾಂತರಗೊಂಡಿರುವ ರೋಗಾಣುಗಳು ಕಡಿಮೆ ಅವಧಿಯಲ್ಲಿ ತಮ್ಮ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತವೆ. ರೋಗಾಣುಗಳ ಸಂಖ್ಯೆ ಹೆಚ್ಚಾದಂತೆ ಸೋಂಕಿತರ ಪ್ರಾಣಕ್ಕೆ ಅಪಾಯವಿರುತ್ತದೆ ಎಂದು ಯುಎಸ್ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಕೊವಿಡ್-19 ರೋಗಾಣು ರೂಪಾಂತರವೇ ಅಪಾಯಕಾರಿ

ಕೊವಿಡ್-19 ರೋಗಾಣು ರೂಪಾಂತರವೇ ಅಪಾಯಕಾರಿ

ಜಗತ್ತಿನಾದ್ಯಂತ ಕೊರೊನಾವೈರಸ್ ಎರಡನೇ ಅಲೆಯಲ್ಲಿ ರೋಗಾಣುಗಳು ರೂಪಾಂತರಗೊಂಡಿವೆ. ಬದಲಾದ ಕೊವಿಡ್-19 ವೈರಸ್ ಹೆಚ್ಚು ಪ್ರಭಾವಶಾಲಿ ಮತ್ತು ಅಪಾಯಕಾರಿ ಎನ್ನುವುದನ್ನು ಕಂಡುಕೊಳ್ಳುವುದಕ್ಕೆ ಸಾಂಕ್ರಾಮಿಕ ರೋಗತಜ್ಞರಿಗೆ ಪುರಾವೆಗಳು ಸಿಕ್ಕಿವೆ. ಅನುವಂಶೀಯ ಆರೋಗ್ಯ ಸಮಸ್ಯೆಯನ್ನು ಹೊಂದಿರುವ ಸೋಂಕಿತರಿಗೆ ಇದೀಗ ಬದಲಾದ ವೈರಸ್ ನಿಂದಾಗಿ ಹೆಚ್ಚು ಮಾರಕವಾಗಿದೆ ಎಂದು ಅವರು ತಿಳಿಸಿದ್ದಾರೆ.

Recommended Video

ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಕೊಡ್ಲಿ | Oneindia Kannada
ಪ್ರತಿಕಾಯ ವ್ಯವಸ್ಥೆ ವೃದ್ಧಿಸುವುದೇ ಲಸಿಕೆಯ ಮೊದಲ ಗುರಿ

ಪ್ರತಿಕಾಯ ವ್ಯವಸ್ಥೆ ವೃದ್ಧಿಸುವುದೇ ಲಸಿಕೆಯ ಮೊದಲ ಗುರಿ

ಜಗತ್ತಿನಾದ್ಯಂತ ಕೊರೊನಾವೈರಸ್ ಸೋಂಕಿಗೆ ಲಸಿಕೆ ಸಂಶೋಧಿಸುವ ಕಾರ್ಯ ನಡೆಸಲಾಗುತ್ತಿದೆ. ಕೊವಿಡ್-19 ಸೋಂಕಿನ ವಿರುದ್ಧ ಹೋರಾಡುವ ರೋಗನಿರೋಧಕ ಶಕ್ತಿಯನ್ನು ವೃದ್ಧಿಸುವುದೇ ಲಸಿಕೆಯ ಮೊದಲ ಗುರಿಯಾಗಿದೆ. ಇದರ ನಡುವೆ ದೇಹದ ಪ್ರತಿರಕ್ಷಣಾ ಪ್ರಕ್ರಿಯೆ ತಪ್ಪಿಸುವ ಉದ್ದೇಶದಿಂದ ರೋಗಾಣುಗಳು ರೂಪಾಂತರಗೊಳ್ಳುತ್ತಿವೆ ಎಂದು ಹೇಳಲಾಗುತ್ತಿದೆ. ಈ ಹಿಂದಿನ ಅಧ್ಯಯನದಲ್ಲಿ ಮಾನವನ ದೇಹಕ್ಕೆ ಹೊಂದಿಕೊಳ್ಳುವಂತೆ ಕೊರೊನಾವೈರಸ್ ತಳಿಗಳು ರೂಪಾಂತರ ಮತ್ತು ವಿಕಸನ ಹೊಂದುತ್ತದೆ ಎಂದು ತಿಳಿದು ಬಂದಿತ್ತು.

English summary
Coronavirus Strain Is Now More Dominates; US Study.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X