ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎರಡನೇ ಬಾರಿಯ ಕೊರೊನಾ ಸೋಂಕು ತಂದೊಡ್ಡುವ ಅಪಾಯಗಳು

|
Google Oneindia Kannada News

ಪ್ಯಾರಿಸ್, ಅಕ್ಟೋಬರ್ 13: ಕೊವಿಡ್ 19 ರೋಗಿಗಳು ಎರಡನೇ ಬಾರಿ ಕೊರೊನಾ ಸೋಂಕಿಗೆ ಒಳಗಾದಾಗ ತೀವ್ರವಾದ ರೋಗ ಲಕ್ಷಣಗಳನ್ನು ಅನುಭವಿಸಬಹುದು ಎಂದು ಅಧ್ಯಯನವೊಂದು ತಿಳಿಸಿದೆ.

ಸಂಶೋಧನೆಯ ಪ್ರಕಾರ ಈ ರೋಗವು ಮನುಷ್ಯನಿಗೆ ಒಂದಕ್ಕಿಂತ ಹೆಚ್ಚು ಬಾರಿ ಬರಬಹುದು ಎಂದು ಅಂದಾಜಿಸಲಾಗಿದೆ.

ಜಾನ್ಸನ್&ಜಾನ್ಸನ್ ಕೊವಿಡ್ 19 ಲಸಿಕೆ ಪ್ರಯೋಗ ತಾತ್ಕಾಲಿಕ ಸ್ಥಗಿತ ಜಾನ್ಸನ್&ಜಾನ್ಸನ್ ಕೊವಿಡ್ 19 ಲಸಿಕೆ ಪ್ರಯೋಗ ತಾತ್ಕಾಲಿಕ ಸ್ಥಗಿತ

ದಿ ಲ್ಯಾನ್ಸೆಟ್ ಜರ್ನಲ್‌ನಲ್ಲಿ ಪ್ರಕಟವಾದ ವರದಿ ಪ್ರಕಾರ, ಅಮೆರಿಕದಲ್ಲಿ ಮೊದಲ ರಿ ಇನ್‌ಫೆಕ್ಷನ್ ಪ್ರಕರಣ ಬೆಳಕಿಗೆ ಬಂದಿದೆ, ಹಾಗಾದರೆ ಆ ಪ್ರದೇಶದಲ್ಲಿ ರೋಗ ನಿರೋಧಕ ಶಕ್ತಿ ಅಥವಾ ಪ್ರತಿಕಾಯಗಳಿರುವುದಿಲ್ಲ, ಮುಂದೆ ಪಡೆಯುವ ನಿರೀಕ್ಷೆಯೂ ಕೂಡ ಇಲ್ಲ ಎಂದು ಹೇಳಿದೆ.

COVID-19 Reinfection Casts Doubt On Virus Immunity

25 ವರ್ಷದ ರೋಗಿಗೆ 48 ದಿನಗಳ ಅವಧಿಯಲ್ಲಿ ಎರಡು ಬಾರಿ ಕೊರೊನಾ ಸೋಂಕಿಗೆ ತುತ್ತಾಗಿದ್ದ. ಮೊದಲ ಬಾರಿಯ ಸೋಂಕಿಗಿಂತ ಎರಡನೇ ಬಾರಿಗೆ ತಗುಲುವ ಸೋಂಕು ಹೆಚ್ಚು ಪರಿಣಾಮಕಾರಿಯಾದದ್ದು ಎಂಬುದು ತಿಳಿದುಬಂದಿತ್ತು.

ವಿಶ್ವದಾದ್ಯಂತ ಇನ್ನೂ ನಾಲ್ಕು ಪ್ರಕರಣಗಳ ಅಧ್ಯಯನ ನಡೆದಿದೆ. ಒಂದೊಮ್ಮೆ ಲಸಿಕೆ ಬರದಿದ್ದರೆ ಜನರ ಜೀವಕ್ಕೆ ಅಪಾಯವಾಗುವ ಸಾಧ್ಯತೆಯೂ ಇದೆ ಎಂದು ಹೇಳಿದೆ.

ಒಂದೊಮ್ಮೆ ಕೊರೊನಾ ಸೋಂಕಿಗೆ ತುತ್ತಾದ ರೋಗಿಗಳಲ್ಲಿ ಎಷ್ಟು ದಿನಕ್ಕೆ ರೋಗ ನಿರೋಧಕ ಶಕ್ತಿ ಉತ್ಪತ್ತಿಯಾಗುತ್ತದೆ ಎಂಬುದನ್ನು ಅಧ್ಯಯನ ಮಾಡಲಾಗುತ್ತಿದೆ.

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಕಾಪಾಡಲು ಯಾವ ಲಸಿಕೆ ಸಮರ್ಥವಾಗಿದೆ ಎಂದು ಕಾದು ನೋಡಬೇಕಿದೆ, ಒಟ್ಟಿನಲ್ಲಿ ಸಮುದಾಯದಲ್ಲಿಯೇ ರೋಗ ನಿರೋಧಕ ಶಕ್ತಿ ವೃದ್ಧಿಯಾದಾಗ ಸೋಂಕು ಒಬ್ಬರಿಂದೊಬ್ಬರಿಗೆ ಹರಡುವುದು ಕಡಿಮೆಯಾಗುತ್ತದೆ.

ಹಾಗೆಯೇ ಅನೇಕ ಪ್ರಕರಣಗಳು ಲಕ್ಷಣರಹಿತವಾಗಿರುತ್ತದೆ.ಹಾಗಾಗಿ ಆರಂಭದಲ್ಲಿಯೇ ಅವರಿಗೆ ಮೊದಲ ಬಾರಿ ಸೋಂಕು ತಗುಲಿದೆಯೇ ಅಥವಾ ಎರಡನೇ ಬಾರಿ ಎಂಬುದನ್ನು ಕಂಡು ಹಿಡಿಯಲು ಸಾಧ್ಯವಾಗುತ್ತಿಲ್ಲ.

Recommended Video

Muniratna ಅವರಿಗೆ Ticket ಸಿಗುವ ಮುನ್ನವೇ Supreme Court ಕ್ಲೀನ್ ಚಿಟ್ | Oneindia Kannada

ವಿಶ್ವದಲ್ಲಿರುವ ಒಟ್ಟು ಕೊರೊನಾ ಸೋಂಕಿತರ ಪೈಕಿ ಕೆಲವೇ ಕೆಲವು ಮಂದಿಗೆ ಎರಡನೇ ಬಾರಿ ಕೊರೊನಾ ಸೋಂಕು ತಗುಲಿದೆ.

English summary
Covid-19 patients may experience more severe symptoms the second time they are infected, according to research released Tuesday confirming it is possible to catch the potentially deadly disease more than once.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X