ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೆಂಟಿಲೇಟರ್‌ನಲ್ಲಿರುವ ಕೊರೊನಾ ಸೋಂಕಿತರಿಗೆ ಶಾಶ್ವತ ನರ ಹಾನಿ ಆತಂಕ

|
Google Oneindia Kannada News

ತೀವ್ರ ಅನಾರೋಗ್ಯದಿಂದಾಗಿ ವೆಂಟಿಲೇಟರ್‌ನಲ್ಲಿ ಇರಿಸಿರುವ ಕೊವಿಡ್19 ರೋಗಿಗಳಿಗೆ ಶಾಶ್ವತ ನರ ಹಾನಿ ಉಂಟಾಗಬಲ್ಲದು ಎಂದು ಅಧ್ಯಯನವೊಂದು ಹೇಳಿದೆ.

ಉಸಿರಾಟ ಸುಲಭವಾಗಲಿ ಎಂದು ಮುಖವನ್ನು ಮೇಲೆ ಮಾಡಿ ವೆಂಟಿಲೇಟರ್‌ನಲ್ಲಿ ರೋಗಿಗಳನ್ನು ಮಲಗಿಸಿರುತ್ತಾರೆ ಅದರಿಂದ ನರಹಾನಿ ಉಂಟಾಗುವ ಸಾಧ್ಯತೆ ಹೆಚ್ಚಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

 ಕೊರೊನಾ ಸೋಂಕು ಮೆದುಳಿನ ಮೇಲೂ ಪರಿಣಾಮ ಬೀರಬಲ್ಲದು ಕೊರೊನಾ ಸೋಂಕು ಮೆದುಳಿನ ಮೇಲೂ ಪರಿಣಾಮ ಬೀರಬಲ್ಲದು

ಅಮೆರಿಕ ನಾರ್ಥ್ ವೆಸ್ಟರ್ನ್ ಯೂನಿವರ್ಸಿಟಿ ಈ ಅಧ್ಯಯನ ಮಾಡಿದೆ. ನರಕ್ಕೆ ಹಾನಿಯಾಗುವುದರಿಂದ ರಕ್ತದ ಹರಿವಿನಲ್ಲೂ ವ್ಯತ್ಯಾಸ ಉಂಟಾಗಿ ಉರಿಯೂತ ಉಂಟಾಗುವ ಸಾಧ್ಯತೆ ಇದೆ.

Covid-19 Patients On Ventilator Face Nerve Damage

ಆದರೆ ಕೊವಿಡ್ 19 ರೋಗವಿಲ್ಲದ ಸಾಮಾನ್ಯ ರೋಗಿಯನ್ನು ವೆಂಟಿಲೇಟರ್‌ನಲ್ಲಿ ಮಲಗಿಸಿರುವಾಗ ಅವರಿಗೆ ಇಂತಹ ಯಾವುದೇ ತೊಂದರೆ ಉಂಟಾಗಿಲ್ಲ ಎಂಬುದು ಕೂಡ ಸಾಬೀತಾಗಿದೆ.

ವೆಂಟಿಲೇಟರ್‌ನಲ್ಲಿರುವ ಶೇ.12 ರಿಂದ 15ರಷ್ಟು ರೋಗಿಗಳಿಗೆ ಶಾಶ್ವತವಾಗಿ ನರದ ತೊಂದರೆ ಕಾಣಿಸಿಕೊಳ್ಳಲಿದೆ. ವಿಶ್ವದಾದ್ಯಂತ ಇರುವ ಕೊರೊನಾ ಸೋಂಕಿತರಲ್ಲಿ ಸಾವಿರಕ್ಕೂ ಹೆಚ್ಚು ರೋಗಿಗಳಿಗೆ ಈ ತೊಂದರೆ ಕಾಣಿಸಿಕೊಂಡಿದೆ.

ನರಕ್ಕೆ ಹಾನಿಯಾಗುವುರಿಂದ ದೇಹದ ಒಂದು ಭಾಗ ಸ್ವಾಧೀನ ಕಳೆದುಕೊಳ್ಳುವ ಸಾಧ್ಯತೆ ಇದೆ. ಕೈ ಮರಗಟ್ಟಿದಂತಾಗುವುದು, ಓಡಾಡಲು ತೊಂದರೆ, ಸೊಂಟ ನೋವು ಇನ್ನಿತರೆ ತೊಂದರೆಗಳು ಕಾಣಿಸಿಕೊಳ್ಳಲಿವೆ.

Recommended Video

DK Shivakumar ಹಾಗು Randeep Surjewala ಅವರಿಂದ ಬದಲಾಗಿದೆಯೇ ಕಾಂಗ್ರೆಸ್ ಹವಾ | Oneindia Kannada

ಕೆಲವು ಮಂದಿ ವ್ಹೀಲ್‌ಚೇರ್‌ನಲ್ಲಿ ಓಡಾಡುತ್ತಿದ್ದಾರೆ, ಮತ್ತಷ್ಟು ಮಂದಿ ಊರುಗೋಲುಗಳನ್ನು ಹಿಡಿದುಕೊಂಡು ಓಡಾಡುವಂತಾಗಿದೆ.

English summary
Severely ill Covid-19 patients on ventilators are made to lie face down because it’s easier for them to breathe. But that position can also cause permanent nerve damage, according to a new study.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X