ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊವಿಡ್ 19 ರೋಗಿಗಳ ಸಾವಿಗೆ ವೈರಸ್ ಕಾರಣವಲ್ಲ: ಅಧ್ಯಯನ ವರದಿ

|
Google Oneindia Kannada News

ನವದೆಹಲಿ, ಜುಲೈ 8: ಕೊರೊನಾ ಸೋಂಕಿನಿಂದಾಗಿ ರೋಗಿಗಳು ಸಾವನ್ನಪ್ಪುತ್ತಿದ್ದಾರೆ ಎಂದು ಎಲ್ಲರೂ ತಿಳಿದಿದ್ದಾರೆ, ಆದರೆ ಕೊವಿಡ್ 19 ರೋಗಿಗಳ ಸಾವಿಗೆ ವೈರಸ್ ಕಾರಣವಲ್ಲ ಎಂದು ವರದಿಯೊಂದು ಹೇಳಿದೆ.

Recommended Video

Facebook , Instagram , tinder ಸೇರಿದಂತೆ ಬಾರತೀಯ ಸೇನೆಯು 89 ಆ್ಯಪ್‌ಗಳನ್ನು ನಿಷೇಧಿಸಿದೆ.| Oneindia Kannada

11 ಕೊರೊನಾ ಸೋಂಕಿತರ ರೋಗನಿರೋಧಕ ಶಕ್ತಿಯ ಕುರಿತು ಅಧ್ಯಯನ ಕೈಗೊಂಡಿದ್ದ ಈ ತಂಡವು ರೋಗ ನಿರೋಧಕ ಶಕ್ತಿ ಮತ್ತು ವೈರಸ್ ನಡುವೆ ಪರಸ್ಪರ ಸಂಬಂಧವಿದೆ ಎಂದು ಹೇಳಿದೆ.

ಕೊರೊನಾ ಸೋಂಕು ಗಾಳಿಯಿಂದಲೂ ಹರಡುತ್ತೆ ಎಂದು ಒಪ್ಪಿಕೊಂಡ WHOಕೊರೊನಾ ಸೋಂಕು ಗಾಳಿಯಿಂದಲೂ ಹರಡುತ್ತೆ ಎಂದು ಒಪ್ಪಿಕೊಂಡ WHO

ರೋಗನಿರೋಧಕ ಶಕ್ತಿ ಕಡಿಮೆ ಇರುವ ಕೊವಿಡ್ 19 ಸೋಂಕಿತರ ಅಂಗಾಂಗಗಳು ಹಾನಿಗೀಡಾಗುವ ಸಾಧ್ಯತೆ ಹೆಚ್ಚಿದೆ ಎಂದು ನೇಚರ್ ವಿಜ್ಞಾನ ಪತ್ರಿಕೆಯಲ್ಲಿ ಪ್ರಕರಣವಾದ ಲೇಖನದಲ್ಲಿ ಉಲ್ಲೇಖಿಸಲಾಗಿದೆ.

COVID 19 Patients Low Immunity Power Responsible For Death Not Virus

ದೇಹದಲ್ಲಿ ರೋಗವನ್ನು ಹಿಮ್ಮೆಟ್ಟಿಸಲು ಶಕ್ತಿ ಇಲ್ಲದವರು ಕೊರೊನಾ ಸೋಂಕಿನಿಂದ ಮೃತಪಡುತ್ತಾರೆ. ರೋಗನಿರೋಧಕ ಶಕ್ತಿ ಉತ್ತಮವಾಗಿದ್ದರೆ ಸೋಂಕಿಗೆ ಹೆದರುವ ಅಗತ್ಯವೇ ಇಲ್ಲ ಎಂದು ಹೇಳಲಾಗಿದೆ.

ಕೊರೊನಾ ವೈರಾಣುವಿನ ವಿರುದ್ಧ ಹೋರಾಡಲು ಮನುಷ್ಯನ ದೇಹದಲ್ಲಿರುವ ರೋಗನಿರೋಧಕ ಶಕ್ತಿಗಳು ಹೆಚ್ಚು ಕ್ರಿಯಾಶೀಲವಾಗುತ್ತವೆ. ಇದರಿಂದ ಅಂಗಾಂಗಗಳಿಗೆ ಭಾರಿ ಹಾನಿಯಾಗಿ ವ್ಯಕ್ತಿ ಸಾಯುತ್ತಾನೆ. ಸೋಂಕಿಗೆ ಒಳಗಾಗಿ ಗಂಭೀರಸ್ಥಿತಿಯಲ್ಲಿದ್ದವರ ಅಧ್ಯಯನದಿಂದ ಈ ಅಂಶ ಸಾಬೀತಾಗಿರುವುದಾಗಿ ತಜ್ಞರು ಹೇಳಿದ್ದಾರೆ.

ತಜ್ಞರು ಮತ್ತು ವಿಜ್ಞಾನಿಗಳು ಕರೊನಾ ಸೋಂಕಿಗೆ ಲಸಿಕೆ ಪತ್ತೆ ಮಾಡಲು ರಾತ್ರಿ-ಹಗಲು ಎನ್ನದೆ ಶ್ರಮಿಸುತ್ತಿದ್ದಾರೆ. ಈಗಾಗಲೆ 200ಕ್ಕೂ ಹೆಚ್ಚು ಲಸಿಕೆಗಳು ತಯಾರಾಗಿದ್ದು, ವಿವಿಧ ಹಂತದ ಪ್ರಯೋಗಗಳಿಗೆ ಒಳಪಟ್ಟಿವೆ.

ವರ್ಷಾಂತ್ಯದ ವೇಳೆಗೆ ಮೊದಲ ಲಸಿಕೆ ಬಳಕೆಗೆ ದೊರೆಯುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಬ್ರಿಟನ್​ ತಜ್ಞರ ಅಧ್ಯಯನ ಹೆಚ್ಚನ ಮಹತ್ವ ಪಡೆದುಕೊಳ್ಳುತ್ತದೆ.

ಬ್ರಿಟನ್​ನ ವಿಶ್ವವಿದ್ಯಾಲಯದ ತಜ್ಞರು ಈ ಅಧ್ಯಯನ ನಡೆಸಿದ್ದಾರೆ. ವೈರಾಣು ಮತ್ತು ಉರಿಯೂತದ ನಡುವೆ ನಗಣ್ಯ ಎನ್ನಬಹುದಾದ ಸಂಬಂಧ ಇರುವುದು ಅಧ್ಯಯನದಲ್ಲಿ ಕಂಡು ಬಂದಿದೆ.

ಕೊವಿಡ್​-19 ಸೋಂಕಿನಿಂದ ಮೃತಪಟ್ಟವರ ದೇಹದಲ್ಲಿನ ಉರಿಯೂತ ಮತ್ತು ಗಾಯವೂ ಒಳಗೊಂಡಂತೆ ಮರಣೋತ್ತರ ಪರೀಕ್ಷೆಯ ಮೂಲಕ ಕೊರೊನಾ ಸೋಂಕಿನ ಲಕ್ಷಣಗಳನ್ನು ಅರಿತುಕೊಳ್ಳಲು ತಜ್ಞರು ಪ್ರಯತ್ನಿಸಿದ್ದಾರೆ.

English summary
A latest study conducted on 11 Covid-19 patients, who succumbed to the virus, reveals a link between coronavirus and patients’ immune response to the disease. The study, an excerpt of which was published in science journal, ‘Nature’, suggests that immune responses, rather than the virus itself, are largely responsible for death in Covid-19 patients.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X