ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಳಿಗಾಲದಲ್ಲಿ ಕೊರೊನಾ ವೈರಸ್‌ನ ಕಣಗಳು ಸಾಂಕ್ರಾಮಿಕವಾಗಿ ಬಹುಕಾಲ ಉಳಿಯಬಲ್ಲದು

|
Google Oneindia Kannada News

ಹ್ಯೂಸ್ಟನ್, ಡಿಸೆಂಬರ್ 19:ಚಳಿಗಾಲದಲ್ಲಿ ತಾಪಮಾನ ಕಡಿಮೆಯಾಗಿರುವುದರಿಂದ ಕೊರೊನಾ ವೈರಸ್ ಕಣಗಳು ಹೆಚ್ಚು ಸಮಯಗಳ ಕಾಲ ಸಾಂಕ್ರಾಮಿಕವಾಗಿ ಉಳಿಯಬಲ್ಲದು ಎಂದು ಅಧ್ಯಯನ ಹೇಳಿದೆ.

ಚಳಿಗಾಲ ಆರಂಭವಾಗಿದೆ, ಕೊವಿಡ್ 19ಗೆ ಕಾರಣವಾಗುವ ಸಾರ್ಸ್ ಕೋವ್ 2ನ ಹರಡುವಿಕೆ ಮೇಲೆ ಹೇಗೆ ಕಾಲೋಚಿತ ಬದಲಾವಣೆಗಳುಪರಿಣಾಂ ಬೀರುತ್ತವೆ ಎಂದು ಆರೋಗ್ಯಾಧಿಕಾರಿಗಳು ಪ್ರಶ್ನಿಸಿದ್ದಾರೆ.

ಹೊಸ ಅಧ್ಯಯನವು ತಾಪಮಾನ ಮತ್ತು ತೇವಾಂಶವು ಮೇಲ್ಮೈಗಳಲ್ಲಿನ ಪ್ರತ್ಯೇಕ ಸಾರ್ಸ್ ಕೋವ್ 2 ವೈರಸ್ ತರಹದ ರಚನೆಯ ಮೇಲೆ ಹೇಗೆ ಪರಿಣಾಮ ಬೀಡುತ್ತದೆ ಎಂಬುದನ್ನು ಪರೀಕ್ಷಿಸಿತು.

ಕೇವಲ ಮಧ್ಯಮ ತಾಪಮಾನ ಹೆಚ್ಚಳವು ವೈರಸ್‌ನ ರಚನೆಗಳನ್ನು ಒಡೆಯುತ್ತದೆ ಎಂದು ಅವರು ಕಂಡುಕೊಂಡಿದ್ದಾರೆ. ಆದರೆ ತೇವಾಂಶ ಕಡಿಮೆ ಪರಿಣಾಮ ಬೀರುತ್ತದೆ. ಸಾಂಕ್ರಾಮಿಕವಾಗಿ ಉಳಿಯಲು ಸಹಾಯವಾಗುತ್ತದೆ.

ಕೊರೊನಾ ಸೋಂಕು ಯಾವಾಗ ಹರಡುತ್ತದೆ ಎಂದರೆ ಈಗಾಗಲೇ ಸೋಂಕಿಗೆ ತುತ್ತಾಗಿರುವ ವ್ಯಕ್ತಿ ಸಾರ್ವಜನಿಕ ಪ್ರದೇಶದಲ್ಲಿ ಕೆಮ್ಮುವುದು, ಸೀನಿವುದು ಮಾಡುವುದರಿಂದ.
ಕೆಮ್ಮು ಅಥವಾ ಸೀನಿದಾಗ ಹೊರ ಬರುವ ಎಂಜಿಲು ಬೇಗ ಆವಿಯಾಗುತ್ತದೆ.

ಹೀಗಾಗಿ ವೈರಸ್‌ನ ಕಣಗಳು ಬಹುಬೇಗ ಬೇರೆಯವರ ಮೇಲೆ ಬಂದು ಅಂಟಿಕೊಳ್ಳುತ್ತದೆ ಅದರ ಅರಿವು ಕೂಡ ಇರುವುದಿಲ್ಲ. ಉನ್ನತ ಮಟ್ಟದ ಮೈಕ್ರೋಸ್ಕೋಪ್‌ ಸಹಾಯದಿಂದ ಕಣಗಳನ್ನು ವೀಕ್ಷಿಸಬಹುದಾಗಿದೆ.

ಅವರು ವಿಎಲ್‌ಪಿಯನ್ನು ಅತಿ ಹೆಚ್ಚು ತಾಪಮಾನದಲ್ಲಿ ಇರಿಸಿದರು, ಸಾಮಾನ್ಯ ತಾಪಮಾನ ಅಥವಾ ಶೀತ ವಾತಾವರಣದಲ್ಲಿ ಈ ಕಣಗಳು ಬಹಳ ದಿನಗಳ ಕಾಲ ಉಳಿಯುತ್ತದೆ. ಹಾಗೂ ಹೆಚ್ಚು ಉಷ್ಣಾಂಶವಿರುವ ಪ್ರದೇಶದಲ್ಲಿ ಸೋಂಕಿನ ಕಣಗಳು ಬೇಗ ಸಾಯುತ್ತದೆ ಎಂಬುದು ತಿಳಿದುಬಂದಿತ್ತು.

ವಿಎಲ್‌ಪಿ ವೈರಸ್ ರೀತಿಯ ಕಣ

ವಿಎಲ್‌ಪಿ ವೈರಸ್ ರೀತಿಯ ಕಣ

ಅಮೆರಿಕದ ಯೂಟಾಹ್ ವಿಶ್ವವಿದ್ಯಾಲಯವು ವಿಎಲ್‌ಪಿ(ವೈರಸ್‌ ರೀತಿಯ ಕಣ)ಯು ಮೂರು ಪ್ರಕಾರದ ಪ್ರೊಟಿನ್‌ನಿಂದ ತಯಾರಾದ ಕಣವಾಗಿರುತ್ತದೆ. ಹೇಗೆ ಕೊರೊನಾ ವೈರಸ್‌ನಲ್ಲಿ ಇರುತ್ತದೆ. ಆದರೆ ಅದರಲ್ಲಿ ಜಿನೋಮ್ ಇರುವುದಿಲ್ಲ.ವಿಎಲ್‌ಪಿಯಲ್ಲಿ ಸಾಂಕ್ರಾಮಿಕದ ಭಯ ಇರುವುದಿಲ್ಲ.
ಹೆಚ್ಚಿನ ಪ್ರಮಾಣದಲ್ಲಿ ಜನರು ರೋಗ ನಿರೋಧಕ ಶಕ್ತಿ ವೃದ್ದಿಸಿಕೊಳ್ಳುವುದರಿಂದ ಮಾತ್ರ ಕೊರೊನಾ ವೈರಸ್ ಹರಡುವುದನ್ನು ತಡೆಯಬಹುದು. ಹವಾಮಾನ ಬದಲಾವಣೆಯಿಂದ ಇದನ್ನು ನಿಯಂತ್ರಿಸಲಾಗದು .

ಉಷ್ಣಾಂಶ ಹಾಗೂ ಶೀತ ವಾತವಾರಣ

ಉಷ್ಣಾಂಶ ಹಾಗೂ ಶೀತ ವಾತವಾರಣ

ಕೊರೊನಾ ಸಾಂಕ್ರಾಮಿಕ ಹರಡುವಿಕೆಯ ಮೇಲೆ ಉಷ್ಣಾಂಶ ಹಾಗೂ ಶೀತ ವಾತಾವರಣ ಯಾವುದೇ ಪ್ರಭಾವ ಬೀರುವುದಿಲ್ಲ. ಕೊವಿಡ್ -19 ಸೋಂಕಿನ ಮೊದಲ ಹಂತ ಪ್ರಸಕ್ತ ಬೇಸಿಗೆ ಅವಧಿಯಲ್ಲಿ ಗಮನಾರ್ಹವಾಗಿ ತಡೆಯುತ್ತದೆ ಎಂಬ ಅಂಶ ತಮ್ಮ ಅಧ್ಯಯನದಲ್ಲಿ ದೃಢಪಟ್ಟಿಲ್ಲ ಎಂದು ಪ್ರಿನ್ಸ್ಟನ್ ವಿಶ್ವವಿದ್ಯಾಲಯ ಸಂಶೋಧಕರು ಹೇಳಿದ್ದಾರೆ.

ಕಡಿಮೆ ತಾಪಮಾನ ವೈರಸ್ ವೃದ್ಧಿ

ಕಡಿಮೆ ತಾಪಮಾನ ವೈರಸ್ ವೃದ್ಧಿ

ಕಠಿಣ ನಿಯಂತ್ರಣ ಕ್ರಮಗಳನ್ನು ತೆಗೆದುಕೊಳ್ಳದ ಹೊರತು ಹೆಚ್ಚಿನ ತಾಪಮಾನ ವೈರಸ್ ವೃದ್ಧಿಯನ್ನು ತಡೆಯುವುದಿಲ್ಲ ಎಂದು ಹೇಳುತ್ತದೆ. ಪ್ರಪಂಚದಾದ್ಯಂತ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಜನರು ವೈರಸ್‌ಗೆ ಪ್ರಭಾವಕ್ಕೆ ಒಳಗಾಗುವ ಅಪಾಯವಿದೆ ಎಂದು ಸಂಶೋಧಕರು ಎಚ್ಚರಿಸಿದ್ದಾರೆ.

ಹವಾಮಾನ ಬದಲಾವಣೆ

ಹವಾಮಾನ ಬದಲಾವಣೆ

ಹವಾಮಾನ ಬದಲಾವಣೆ ಸೋಂಕು ವೃದ್ಧಿಯ ಪ್ರಮಾಣದಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ ಎಂದು ನಾವು ಕಂಡುಕೊಂಡಿದ್ದೇವೆ. ವೈರಸ್ ವಿರುದ್ಧ ಹೆಚ್ಚಿನ ರೋಗನಿರೋಧಕ ಶಕ್ತಿ ಹೊಂದಿದರೆ ಮಾತ್ರ ಹವಾಮಾನದ ಪರಿಣಾಮ ಜನಸಾಮಾನ್ಯರ ಮೇಲೆ ಇರುತ್ತದೆ ಎಂಬುದು ಸ್ಪಷ್ಟವಾಗಿದೆ. ಹವಾಮಾನ ಪರಿಸ್ಥಿತಿಗಳನ್ನು ಲೆಕ್ಕಿಸದೆ ವೈರಸ್ ವೇಗವಾಗಿ ಹರಡುತ್ತಿದೆ ಎಂದು ಸಂಶೋಧಕ ಡಾ.ರಾಚೆಲ್ ಬೆಕರ್ ಹೇಳಿದ್ದಾರೆ. ಸೋಂಕಿಗೆ ಇನ್ನೂ ಲಸಿಕೆ ಕಂಡುಹಿಡಿಯದ ಕಾರಣ ದೈಹಿಕ ಅಂತರ ಕಾಪಾಡುವುದರಿಂದ ಮಾತ್ರವೇ ವೈರಾಣು ಹರಡುವುದನ್ನು ತಡೆಯಲು ಸಾಧ್ಯ ಎಂದು ತಜ್ಞರು ಹೇಳಿದ್ದಾರೆ.

English summary
Winter is coming in the northern hemisphere and public health officials are asking how the seasonal shift will impact the spread of SARS-CoV-2, the virus that causes COVID-19?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X