ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಹಿ ಸುದ್ದಿ: ಮಂಗಗಳ ಮೇಲೆ ಪ್ರಯೋಗ ಯಶಸ್ವಿ, ಸೆಪ್ಟೆಂಬರ್ ನಲ್ಲಿ ಕೊರೊನಾ ಲಸಿಕೆ!

|
Google Oneindia Kannada News

ಬ್ರಿಟನ್, ಏಪ್ರಿಲ್ 28: ಕೊರೊನಾ ಅಟ್ಟಹಾಸಕ್ಕೆ ಕಡಿವಾಣ ಹಾಕಲು ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಮುಂದಾಗಿದೆ. ಮಾರಣಾಂತಿಕ ಕೋವಿಡ್-19ಗೆ ಲಸಿಕೆ ಕಂಡುಹಿಡಿಯುವ ಕಾಯಕದಲ್ಲಿ ಅಲ್ಲಿನ ವಿಜ್ಞಾನಿಗಳು ಮತ್ತು ಸಂಶೋಧಕರು ತೊಡಗಿದ್ದಾರೆ.

Recommended Video

ಪತ್ರಕರ್ತರ ಮೇಲೆ ಹಲ್ಲೆ ಮಾಡಿದ ಶಾಸಕ ಶ್ರೀಕಂಠೇಗೌಡ ಮತ್ತು ಅವರ ಪುತ್ರ,ದೂರು ದಾಖಲು

ಕಳೆದ ಗುರುವಾರವಷ್ಟೇ ಯು.ಕೆ ನಲ್ಲಿ ಲಸಿಕೆಯನ್ನು ಮನುಷ್ಯರ ಮೇಲೆ ಪ್ರಯೋಗ ಮಾಡಲಾಗಿತ್ತು. ಮೇ ಅಂತ್ಯದ ವೇಳೆಗೆ 6000 ಜನರ ಮೇಲೆ ಲಸಿಕೆಯ ಪ್ರಯೋಗ ನಡೆಯಲಿದ್ದು, ಲಸಿಕೆಗಾಗಿ ಯು.ಕೆ ಸರ್ಕಾರ 20 ಮಿಲಿಯನ್ ಪೌಂಡ್ ಆರ್ಥಿಕ ಸಹಾಯ ಒದಗಿಸಿದೆ.

ಯುಕೆಯಲ್ಲಿ ಕೊರೊನಾ ಲಸಿಕೆ ಮನುಷ್ಯರ ಮೇಲೆ ಪ್ರಯೋಗ ಯುಕೆಯಲ್ಲಿ ಕೊರೊನಾ ಲಸಿಕೆ ಮನುಷ್ಯರ ಮೇಲೆ ಪ್ರಯೋಗ

ಕೋವಿಡ್-19 ಲಸಿಕೆಗೆ ಸದ್ಯ 'ChAdOx1 nCoV-19' ಎಂದು ನಾಮಕರಣ ಮಾಡಲಾಗಿದ್ದು, ಇದು Rhesus Macaque Monkey ಗಳಲ್ಲಿ ರೋಗ ನಿರೋಧಕ ಶಕ್ತಿಯನ್ನು ನೀಡಿದೆ. ಆ ಮೂಲಕ ಮೊದಲ ಹಂತದಲ್ಲಿ ಆಕ್ಸ್ ಫರ್ಡ್ ನ ವಿಜ್ಞಾನಿಗಳು ಯಶಸ್ವಿಯಾಗಿದ್ದು, ಲಸಿಕೆ ಮೇಲೆ ಭರವಸೆ ಮೂಡಿಸಿದೆ.

ಆರು ಮಂಗಗಳ ಮೇಲೆ ಪ್ರಯೋಗ

ಆರು ಮಂಗಗಳ ಮೇಲೆ ಪ್ರಯೋಗ

ಮೊಂಟಾನಾದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ನ ರಾಕಿ ಮೌಂಟೇನ್ ಲ್ಯಾಬೊರೇಟರಿಯಲ್ಲಿ ಕಳೆದ ಮಾರ್ಚ್ ತಿಂಗಳಲ್ಲಿ ಆರು ಮಂಗಗಳ ಮೇಲೆ 'ChAdOx1 nCoV-19' ಲಸಿಕೆ ಪ್ರಯೋಗಿಸಲಾಗಿತ್ತು. ನಂತರ ಮಂಗಗಳನ್ನು ಹೆಚ್ಚಿನ ಪ್ರಮಾಣದ ಕೊರೊನಾ ವೈರಸ್ ಗೆ ಎಕ್ಸ್ ಪೋಸ್ ಮಾಡಲಾಗಿತ್ತು ಎಂದು ದಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ಕೊರೊನಾಗೆ ಮದ್ದು ಕಂಡುಹಿಡಿಯಿತೇ ಬ್ರಿಟನ್, ಮನುಷ್ಯನ ಮೇಲೆ ಪ್ರಯೋಗ!ಕೊರೊನಾಗೆ ಮದ್ದು ಕಂಡುಹಿಡಿಯಿತೇ ಬ್ರಿಟನ್, ಮನುಷ್ಯನ ಮೇಲೆ ಪ್ರಯೋಗ!

ಆರೋಗ್ಯವಾಗಿದ್ದ ಮಂಗಗಳು

ಆರೋಗ್ಯವಾಗಿದ್ದ ಮಂಗಗಳು

''ಕೊರೊನಾ ವೈರಸ್ ಗೆ ಎಕ್ಸ್ ಪೋಸ್ ಆಗಿದ್ದರೂ 'ChAdOx1 nCoV-19' ಲಸಿಕೆ ಪಡೆದಿದ್ದ ಮಂಗಗಳು 28 ದಿನಗಳ ಬಳಿಕವೂ ಆರೋಗ್ಯವಾಗಿದ್ದವು. ಆದರೆ, ಲಸಿಕೆ ಪಡೆಯದ ಮಂಗಗಳು ಅನಾರೋಗ್ಯಕ್ಕೀಡಾದವು'' ಎಂದು ಸಂಶೋಧಕ ವಿನ್ಸೆಂಟ್ ಮನ್ಸ್ಟರ್ ತಿಳಿಸಿದ್ದಾರೆ.

ಗುಡ್ ನ್ಯೂಸ್: ಕೊರೊನಾ ವೈರಸ್ ಗೆ ಲಸಿಕೆ, ಮನುಷ್ಯರ ಮೇಲೆ ಪ್ರಯೋಗ ಆರಂಭ!ಗುಡ್ ನ್ಯೂಸ್: ಕೊರೊನಾ ವೈರಸ್ ಗೆ ಲಸಿಕೆ, ಮನುಷ್ಯರ ಮೇಲೆ ಪ್ರಯೋಗ ಆರಂಭ!

ಮನುಷ್ಯರ ಮೇಲೂ ಪ್ರಭಾವ?

ಮನುಷ್ಯರ ಮೇಲೂ ಪ್ರಭಾವ?

Rhesus Macaque Monkey ಮನುಷ್ಯರ ಗುಣಲಕ್ಷಣಗಳಿಗೆ ತೀರಾ ಹತ್ತಿರವಾಗಿದ್ದು, ಅದರ ಮೇಲಿನ ಪ್ರಯೋಗ ಸಕ್ಸಸ್ ಆಗಿದೆ. ಆದರೆ, ಲಸಿಕೆಯಿಂದ ಮಂಗಗಳಲ್ಲಿ ಕಂಡುಬಂದಿರುವಂತೆ ಮನುಷ್ಯರ ಮೇಲೂ ಅಷ್ಟೇ ಪ್ರಭಾವ ಮೂಡುತ್ತಾ ಎಂಬುದು ಮುಂದಿನ ಪ್ರಯೋಗಗಳಲ್ಲಿ ತಿಳಿದುಬರಲಿದೆ.

ಸೆಪ್ಟೆಂಬರ್ ನಲ್ಲಿ ಲಸಿಕೆ

ಸೆಪ್ಟೆಂಬರ್ ನಲ್ಲಿ ಲಸಿಕೆ

ಆಕ್ಸ್ ಫರ್ಡ್ ವಿಶ್ವವಿದ್ಯಾಲಯದಲ್ಲಿ ಲಸಿಕೆಯ ಕ್ಲಿನಿಕಲ್ ಪ್ರಯೋಗಗಳು ಬಹುವೇಗವಾಗಿ ಸಾಗುತ್ತಿದೆ. ಮನುಷ್ಯರ ಮೇಲೆ ಲಸಿಕೆ ಯಶಸ್ವಿಯಾದರೆ, ಸೆಪ್ಟೆಂಬರ್ ನಲ್ಲಿ ಲಸಿಕೆ ಮಾರುಕಟ್ಟೆಗೆ ಲಭ್ಯವಾಗಲಿದೆ ಎಂದು ನ್ಯೂಯಾರ್ಕ್ ಟೈಮ್ಸ್ ತನ್ನ ವರದಿಯಲ್ಲಿ ತಿಳಿಸಿದೆ.

ಸಮಾಧಾನ ತಂದ ಹೊಸ ಸಂಶೋಧನೆ: ಸಕಲ ಜ್ವರಗಳಿಗೂ ಒಂದೇ ಲಸಿಕೆ!ಸಮಾಧಾನ ತಂದ ಹೊಸ ಸಂಶೋಧನೆ: ಸಕಲ ಜ್ವರಗಳಿಗೂ ಒಂದೇ ಲಸಿಕೆ!

ಕೈಜೋಡಿಸಿದ ಭಾರತದ ಸಂಸ್ಥೆ

ಕೈಜೋಡಿಸಿದ ಭಾರತದ ಸಂಸ್ಥೆ

ಕ್ಲಿನಿಕಲ್ ಪ್ರಯೋಗಗಳು ಪಾಸ್ ಆದರೆ, ಲಸಿಕೆ ತಯಾರಿಸಲು ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ಜೊತೆಗೆ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಕೈಜೋಡಿಸಿದೆ. ''ಮೊದಲ ಆರು ತಿಂಗಳಲ್ಲಿ 5 ಮಿಲಿಯನ್ ಡೋಸ್ ಗಳನ್ನು ಉತ್ಪಾದಿಸಬಹುದು. ಬಳಿಕ ತಿಂಗಳಿಗೆ 10 ಮಿಲಿಯನ್ ಡೋಸ್ ಗಳನ್ನು ಉತ್ಪಾದಿಸಬಹುದು'' ಎಂದು ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಸಿಇಒ ಆದರ್ ಪೂನವಾಲ್ಲಾ ಹೇಳಿದ್ದಾರೆ.

ಒಂದಕ್ಕಿಂತ ಹೆಚ್ಚು ಲಸಿಕೆ ಅಗತ್ಯ

ಒಂದಕ್ಕಿಂತ ಹೆಚ್ಚು ಲಸಿಕೆ ಅಗತ್ಯ

''ಕೊರೊನಾ ವೈರಸ್ ಗೆ ಒಂದಕ್ಕಿಂತ ಹೆಚ್ಚು ಲಸಿಕೆಗಳು ಅಗತ್ಯ. ಏಕೆಂದರೆ, ಬೇರೆ ಬೇರೆ ಲಸಿಕೆಗಳು ಬೇರೆ ಬೇರೆ ವಯೋಮಾನದವರ ಮೇಲೆ ಪರಿಣಾಮ ಬೀರುತ್ತವೆ. ಜೊತೆಗೆ ಉತ್ಪಾದನಾ ತೊಡಕುಗಳನ್ನು ಕಡಿಮೆ ಮಾಡಲು ಬಹು ಲಸಿಕೆಗಳು ಸಹಾಯ ಮಾಡುತ್ತವೆ'' ಎಂದು ವಿಜ್ಞಾನಿ ಎಮಿಲಿಯೋ ಎಮಿನಿ ತಿಳಿಸಿದ್ದಾರೆ.

ಲಸಿಕೆ ಅಭಿವೃದ್ಧಿ ಹೇಗೆ?

ಲಸಿಕೆ ಅಭಿವೃದ್ಧಿ ಹೇಗೆ?

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ದುರ್ಬಲಗೊಂಡ ವೈರಾಣುವಿನ ಆವೃತ್ತಿಯನ್ನು ಬಳಸುವ 'ಕ್ಲಾಸಿಕ್' ವಿಧಾನಕ್ಕಿಂತ ಭಿನ್ನವಾಗಿ ವೈರಾಣುವಿನ ಜೆನೆಟಿಕ್ ಕೋಡ್ ಅನ್ನು ಬದಲಾಯಿಸುವ ಮೂಲಕ ಆಕ್ಸ್ ಫರ್ಡ್ ವಿಜ್ಞಾನಿಗಳ ತಂಡ ಲಸಿಕೆಯನ್ನು ಅಭಿವೃದ್ಧಿ ಪಡಿಸುತ್ತಿದೆ.

ಲಸಿಕೆಗಾಗಿ ಹಲವು ಕಡೆ ಪ್ರಯೋಗ

ಲಸಿಕೆಗಾಗಿ ಹಲವು ಕಡೆ ಪ್ರಯೋಗ

ಆಕ್ಸ್ ಫರ್ಡ್ ತಂಡ ಮಾತ್ರ ಅಲ್ಲ.. ಎರಡು ಅಮೇರಿಕನ್ ಕಂಪನಿಗಳು (Moderna ಮತ್ತು Inovia) ಕೂಡ ಲಸಿಕೆ ಕಂಡುಹಿಡಿಯುವ ನಿಟ್ಟಿನಲ್ಲಿ ಹಲವು ಪ್ರಯೋಗಗಳನ್ನು ನಡೆಸುತ್ತಿವೆ. ಅತ್ತ ಚೀನಿ ಕಂಪನಿ Cansino ಕೂಡ ಕ್ಲಿನಿಕಲ್ ಪ್ರಯೋಗಗಳನ್ನು ನಡೆಸುತ್ತಿವೆ.

ಕೊರೊನಾ ಕಟ್ಟಿಹಾಕುವಲ್ಲಿ ಸಫಲವಾಯಿತೇ ಇಸ್ರೇಲ್: ಲಸಿಕೆ ತಯಾರು?ಕೊರೊನಾ ಕಟ್ಟಿಹಾಕುವಲ್ಲಿ ಸಫಲವಾಯಿತೇ ಇಸ್ರೇಲ್: ಲಸಿಕೆ ತಯಾರು?

English summary
Covid-19: Oxford Vaccine works on Monkeys, could be available in September.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X