ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊವಿಡ್ 19 ಹಾಗೂ ಸಾಮಾನ್ಯ ಜ್ವರದ ನಡುವೆ ವ್ಯತ್ಯಾಸವಿದೆಯೇ?ವೈದ್ಯರು ಏನಂತಾರೆ?

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 21: ಈ ವರ್ಷ ಕೊರೊನಾ ಸೋಂಕು ಹಾಗೂ ಸಾಮಾನ್ಯ ಜ್ವರ ಎರಡೂ ಜನರಲ್ಲಿ ಕಾಣಿಸಿಕೊಳ್ಳುತ್ತಿದ್ದು ಆರೋಗ್ಯ ಇಲಾಖೆ ತಲೆಕೆಡಿಸಿಕೊಂಡಿದೆ.

ವರ್ಷವೂ ಚಳಿಗಾಲ, ಮಳೆಗಾಲ, ಬೇಸಿಗೆ ಕಾಲ ಬದಲಾವಣೆಯ ಸಂದರ್ಭದಲ್ಲಿ ಸಾಮಾನ್ಯವಾಗಿ ಎಲ್ಲರಿಗೂ ಜ್ವರ, ಶೀತ ಕಾಣಿಸಿಕೊಳ್ಳುತ್ತದೆ.

ಮಳೆಗಾಲದಲ್ಲಂತೂ ಒಂದು ಬಾರಿಯಾದರೂ ಶೀತ, ಜ್ವರ ಬಂದೇ ಬರುತ್ತದೆ. ಆದರೆ ಈ ಬಾರಿ ಕೊವಿಡ್ 19 ರೋಗದಿಂದಾಗಿ ಸಾಮಾನ್ಯ ಜ್ವರವೇ ಅಥವಾ ಕೊರೊನಾ ಸೋಂಕು ಎಂದು ಕಂಡು ಹಿಡಿಯುವುದು ಕಷ್ಟವಾಗಿದೆ.

 ಸ್ಪುಟ್ನಿಕ್ V ಕೊರೊನಾ ಲಸಿಕೆ: 7ರಲ್ಲಿ ಒಬ್ಬರ ಮೇಲೆ ಅಡ್ಡ ಪರಿಣಾಮ ಸ್ಪುಟ್ನಿಕ್ V ಕೊರೊನಾ ಲಸಿಕೆ: 7ರಲ್ಲಿ ಒಬ್ಬರ ಮೇಲೆ ಅಡ್ಡ ಪರಿಣಾಮ

ಸಣ್ಣ ನೆಗಡಿಯಾದರೂ ಕೊರೊನಾವೇ ಬಂದಿದೆ ಎಂದು ಭಯ ಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.ಹಾಗಾದರೆ ಕೊವಿಡ್ 19 ಹಾಗೂ ಸಾಮಾನ್ಯ ಜ್ವರ ಎರಡರ ಲಕ್ಷಣದಲ್ಲಿ ಏನು ಬದಲಾವಣೆ ಇದೆ ಎಂದುದನ್ನು ನೋಡಬೇಕಿದೆ. ವೈದ್ಯರು ಈ ಕುರಿತು ಏನು ಅಭಿಪ್ರಾಯ ವ್ಯಕ್ತೊಡಿಸಿದ್ದಾರೆ ಎಂಬುದನ್ನು ನೋಡೋಣ..

ಕೊವಿಡ್ ರೋಗದ ಯಾವುದಾದರೂ ಎರಡು ಲಕ್ಷಣಗಳು ಕಂಡು ಬಂದರೂ ಕೂಡ ವೈದ್ಯರ ಬಳಿ ಹೋಗಲೇಬೇಕು.

ಏಕಕಾಲಕ್ಕೆ ಎರಡೂ ವೈರಸ್‌ಗಳು ಉಲ್ಬಣ

ಏಕಕಾಲಕ್ಕೆ ಎರಡೂ ವೈರಸ್‌ಗಳು ಉಲ್ಬಣ

ಮಳೆಗಾಲ ಮುಗಿದು ಇನ್ನೇನು ಚಳಿಗಾಲ ಆರಂಭವಾಗಬೇಕಿತ್ತು, ಈ ಚಳಿಗಾಲದಲ್ಲಿ ಕೊರೊನಾ ವೈರಸ್ ಹಾಗೂ ಸಾಮಾನ್ಯ ಜ್ವರ ಎರಡೂ ಉಲ್ಬಣಗೊಂಡಿರುವುದರಿಂದ ಅನ್ನು ಟ್ವಿಂಡೆಮಿಕ್ ಎಂದು ಕರೆಯಲಾಗುತ್ತದೆ. ಇದು ಆರೋಗ್ಯಾಧಿಕಾರಿಗಳನ್ನು ತಲ್ಲಣಗೊಳಿಸಿದೆ.

ಜ್ವರದ ಲಸಿಕೆ ಪಡೆಯುವಂತೆ ಒತ್ತಾಯ

ಜ್ವರದ ಲಸಿಕೆ ಪಡೆಯುವಂತೆ ಒತ್ತಾಯ

ರೋಗಿಗಳು ಇನ್‌ಫ್ಲುಯೆನ್ಝಾ ವೈರಸ್‌ಗಳಿಗೆ ತುತ್ತಾಗುವ ಅಪಾಯವನ್ನು ಕಡಿಮೆ ಮಾಡಲು ಮತ್ತು ಹರಡುವುದನ್ನು ಕಡಿಮೆ ಮಾಡಲು ಜ್ವರದ ಇಂಜೆಕ್ಷ್ ಪಡೆಯುವಂತೆ ಜನರನ್ನು ಒತ್ತಾಯಿಸುತ್ತಿದ್ದಾರೆ. ಆದರೆ ಸಾಮಾನ್ಯ ಜ್ವರ ಹಾಗೂ ಕೊವಿಡ್ 19 ಜ್ವರದ ಲಕ್ಷಣಗಳು ಒಂದನ್ನೊಂದು ಹೋಲುತ್ತವೆ ಹೀಗಾಗಿ ವ್ಯತ್ಯಾಸವನ್ನು ಹೇಳುವುದು ಕಷ್ಟ ಎಂದಿದ್ದಾರೆ.

ಅನಾರೋಗ್ಯದ ಬಗ್ಗೆ ಸಾಮಾನ್ಯ ಪ್ರಶ್ನೆಗಳಿಗೆ ಉತ್ತರ

ಅನಾರೋಗ್ಯದ ಬಗ್ಗೆ ಸಾಮಾನ್ಯ ಪ್ರಶ್ನೆಗಳಿಗೆ ಉತ್ತರ

-ಜ್ವರದ ಲಕ್ಷಣ ಹಾಗೂ ಕೊವಿಡ್ 19 ರೋಗದ ಲಕ್ಷಣ ನಡುವೆ ವ್ಯತ್ಯಾಸವನ್ನು ಕಂಡುಹಿಡಿಯಲು ಮಾರ್ಗವಿದೆಯೇ?
ಸಾಂಕ್ರಾಮಿಕ ರೋಗದ ಬಗ್ಗೆ ವೈದ್ಯರು ಹೇಳುವ ಪ್ರಕಾರ ಹೆಚ್ಚಿನ ಜನರಿಗೆ ಯಾವ ಕಾಯಿಲೆ ಇದೆ ಎಂದು ಹೇಳಲು ಸಾಧ್ಯವಾಗುವುದಿಲ್ಲ. ಜ್ವರ, ಶೀತ ಮತ್ತು ಉಸಿರಾಟದ ತೊಂದರೆ ಎರಡೂ ರೋಗಕ್ಕೂ ಸಾಮಾನ್ಯ ಚಿಹ್ನೆಗಳಾಗಿವೆ.
ಕೊವಿಡ್ 19 ರೋಗದ ಒಂದು ಲಕ್ಷಣವೆಂದರೆ ವಾಸನ ಗ್ರಹಿಕೆ ಶಕ್ತಿ ಅಥವಾ ರುಚಿ ತಿಳಿಯುವುದಿಲ್ಲ. ಆದರೆ ಪ್ರತಿಯೊಬ್ಬರ ರೋಗಿಗೂ ಅಂಥದ್ದೇ ಲಕ್ಷಣಗಳಿರುವುದಿಲ್ಲ. ಆದರೆ ಶೀತವಿರುವವರೂ ಆ ಲಕ್ಷಣದಿಂದ ಬಳಲುತ್ತಾರೆ ಯಾಕೆಂದರೆ ನೆಗಡಿಯಾ ಕಾರಣ ಮೂಗು ಕಟ್ಟಿರುತ್ತದೆ. ಆದರೆ ಅದನ್ನು ಕೊವಿಡ್ ಎಂದು ಹೇಳಲು ಸಾಧ್ಯವಿಲ್ಲ.

Recommended Video

Corona ಲಸಿಕೆ ಭಾರತದಲ್ಲಿ ಉತ್ಪಾದನೆ ಆದ ಬಳಿಕ ಇರುವ ಸವಾಲುಗಳೇನು ? | Oneindia Kannada
ಕೊವಿಡ್ 19 ಅಥವಾ ಸಾಮಾನ್ಯ ಜ್ವರ ಎಷ್ಟು ದಿನ ಇರಬಲ್ಲದು?

ಕೊವಿಡ್ 19 ಅಥವಾ ಸಾಮಾನ್ಯ ಜ್ವರ ಎಷ್ಟು ದಿನ ಇರಬಲ್ಲದು?

ಕೊವಿಡ್ 19 ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕ ಸಾಧಿಸಿದ ತಕ್ಷಣವೇ ರೋಗಕ್ಕೆ ತುತ್ತಾಗುತ್ತಾರೆ. ಸಾಮಾನ್ಯ ಜ್ವರ 4 ದಿನಗಳಲ್ಲಿ ಕಡಿಮೆಯಾಗುತ್ತದೆ. ಆದರೆ ಕೊರೊನಾ ಸೋಂಕು ಕಡಿಮೆಯಾಗಲು ಕನಿಷ್ಠ 14 ದಿನಗಳು ಬೇಕಾಗುತ್ತದೆ. ಸಾಮಾನ್ಯ ಜ್ವರ ಹಾಗೂ ಕೊವಿಡ್ 19 ರೋಗ ಒಟ್ಟಿಗೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಆದರೆ ಸಾಮಾನ್ಯ ಜ್ವರಕ್ಕೆ ನೀಡುವ ಮಾತ್ರೆ ಅಥವಾ ಇಂಜೆಕ್ಷನ್‌ನಿಂದ ಕೊವಿಡ್ 19ರೋಗವನ್ನು ತಡೆಯಲು ಸಾಧ್ಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ.

English summary
The confluence of the coronavirus pandemic and the annual flu season this fall and winter has public-health officials nervous. Simultaneous surges of both respiratory viruses - sometimes called a "twindemic" - could overwhelm hospitals, straining resources and health-care workers' time.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X