ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾಗೆ ಹೋಗಬೇಕೇ: ಎರಡು ವರ್ಷಗಳ ನಂತರ ವೀಸಾಗೆ ಅನುಮತಿ

|
Google Oneindia Kannada News

ನವದೆಹಲಿ, ಜೂನ್ 14: ಕೊರೊನಾ ವೈರಸ್ ಸಾಂಕ್ರಾಮಿಕ ಪಿಡುಗಿಗೆೆ ಬೆದರಿ ಚೀನಾ ತೊರೆದ ಭಾರತೀಯ ಮೂಲದ ಪ್ರಜೆಗಳು ಮತ್ತೊಮ್ಮೆ ಚೀನಾಗೆ ವಾಪಸ್ಸಾಗುವ ಕಾಲ ಸನ್ನಿಹಿತವಾಗಿದೆ. ಎರಡು ವರ್ಷಗಳ ನಿರ್ಬಂಧದ ನಂತರ ಚೀನಾದಲ್ಲಿ ಕಾರ್ಯ ನಿರ್ವಹಿಸುವ ಭಾರತೀಯ ಉದ್ಯೋಗಿಗಳಿಗೆ ಬೀಜಿಂಗ್ ವೀಸಾ ನೀಡುವ ಯೋಜನೆೆಗಳನ್ನು ಪ್ರಕಟಿಸಿದೆ.

ಕೋವಿಡ್-19 ವೀಸಾ ನಿಷೇಧದಿಂದಾಗಿ ಎರಡು ವರ್ಷಗಳಿಂದ ಸ್ವದೇಶಕ್ಕೆ ಮರಳಿದ ಚೀನಾದ ವಿವಿಧ ನಗರಗಳಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ವೃತ್ತಿಪರರು ಮತ್ತು ಅವರ ಕುಟುಂಬಗಳಿಗೆ ವೀಸಾ ನೀಡುವ ಯೋಜನೆ ಪ್ರಾರಂಭಿಸಲಾಗಿದೆ.

ಬೆಂಗಳೂರು: ರಸ್ತೆ ಗುಂಡಿ ಮುಚ್ಚಲು ಚದರ ಮೀಟರ್ ಗೆ 551 ರೂ. ನೀಡಲು ಪಾಲಿಕೆ ಒಪ್ಪಿಗೆ ಬೆಂಗಳೂರು: ರಸ್ತೆ ಗುಂಡಿ ಮುಚ್ಚಲು ಚದರ ಮೀಟರ್ ಗೆ 551 ರೂ. ನೀಡಲು ಪಾಲಿಕೆ ಒಪ್ಪಿಗೆ

ಇದರ ಜೊತೆಗೆ ಚೀನಾ ವಿಶ್ವವಿದ್ಯಾನಿಲಯಗಳಲ್ಲಿ ಅಧ್ಯಯನ ಮಾಡುತ್ತಿರುವ ಸಾವಿರಾರು ಭಾರತೀಯ ವಿದ್ಯಾರ್ಥಿಗಳ ವಿನಂತಿಗಳಿಗೆ ಚೀನಾ ಸ್ಪಂದಿಸಿದೆ. ಅವರು ತಮ್ಮ ಚೀನೀ ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳಿಗೆ ಮರು-ಸೇರ್ಪಡೆಯಾಗುವುದರ ಕುರಿತು ತಮ್ಮ ಆಸಕ್ತಿಯ ಬಗ್ಗೆ ತಿಳಿಸಿದ್ದರು.

COVID-19 News: China Will Provide Visas for Indian Based Professionals, Families

ಎರಡು ವರ್ಷಗಳ ನಂತರ ವೀಸಾಗೆ ಅರ್ಜಿ ಸ್ವೀಕಾರ: ಕೊರೊನಾ ವೈರಸ್ ಸಾಂಕ್ರಾಮಿಕ ಪಿಡುಗಿನಲ್ಲಿ ಸಿಲುಕಿ ನಲುಕಿದ ಚೀನಾದಲ್ಲಿ ವಿದೇಶಿ ಪ್ರಜೆಗಳಿಗೆ ಎರಡು ವರ್ಷಗಳಿಂದ ನಿರ್ಬಂಧ ಹೇರಲಾಗಿತ್ತು. ಚೀನಾದಲ್ಲಿ ಉದ್ಯೋಗ ಮಾಡುವ ಮತ್ತು ವಿದ್ಯಾಭ್ಯಾಸ ಮಾಡುವವರಿಗೆ ವೀಸಾ ನೀಡುವುದಕ್ಕೆ ನಿರಾಕರಿಸಲಾಗುತ್ತಿತ್ತು. ಆದರೆ ಎರಡು ವರ್ಷಗಳ ನಂತರ ತನ್ನ ವಿದೇಶಾಂಗ ನೀತಿಯಲ್ಲಿ ಬದಲಾವಣೆ ಮಾಡಿಕೊಳ್ಳಲಾಗಿದೆ.

COVID-19 News: China Will Provide Visas for Indian Based Professionals, Families

ಭಾರತದಲ್ಲಿನ ಚೀನಾ ರಾಯಭಾರ ಕಚೇರಿಯು ತನ್ನ ಕೋವಿಡ್-19 ವೀಸಾ ನೀತಿಯನ್ನು ಪರಿಷ್ಕರಿಸಿದೆ. ಎರಡು ವರ್ಷಗಳ ನಂತರ ಎಲ್ಲಾ ಕ್ಷೇತ್ರಗಳಲ್ಲಿ ಕೆಲಸ ಪುನರಾರಂಭಿಸುವುದಕ್ಕಾಗಿ ಚೀನಾಗೆ ಹೋಗಲು ಬಯಸುವ ವಿದೇಶಿ ಪ್ರಜೆಗಳಿಗೆ ಅವಕಾಶವನ್ನು ತೆರೆದಿದೆ. ವೃತ್ತಿಪರರು ಮತ್ತು ಅವರ ಜೊತೆಯಲ್ಲಿನ ಕುಟುಂಬ ಸದಸ್ಯರ ವೀಸಾ ಅರ್ಜಿಗಳನ್ನು ಸಹ ಸ್ವೀಕರಿಸಲು ನವೀಕರಿಸಲಾಗುತ್ತಿದೆ.

English summary
China Will provide visas for Indian based professionals, families after two-year Covid visa ban. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X