ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಕ್ ಡೌನ್ ಎಫೆಕ್ಟ್: ಮುಂದಿನ 6 ತಿಂಗಳಲ್ಲಿ 7 ಮಿಲಿಯನ್ ಗರ್ಭಿಣಿಯರು?

|
Google Oneindia Kannada News

ಕೊರೊನಾ ವೈರಸ್ ಅನ್ನು ತಡೆಗಟ್ಟಲು ಹಲವು ದೇಶಗಳಲ್ಲಿ ಲಾಕ್ ಡೌನ್ ಘೋಷಿಸಲಾಗಿದೆ. ಲಾಕ್ ಡೌನ್ ನಿಂದಾಗಿ ಸಾಮಾನ್ಯ ಆರೋಗ್ಯ ಸೇವೆಗಳಿಗೆ ಅಡ್ಡಿಯುಂಟಾಗಿದ್ದು, ಇದು ಏಳು ಮಿಲಿಯನ್ (70 ಲಕ್ಷ) ಅನಪೇಕ್ಷಿತ ಗರ್ಭಧಾರಣೆಗೆ ಕಾರಣವಾಗಬಹುದು ಎಂದು ಅಂದಾಜಿಸಲಾಗಿದೆ.

Recommended Video

ಲಾಕ್ ಡೌನ್ ಸಡಿಲ ಪಡಿಸಲು ಸಿದ್ದರಾಮಯ್ಯ ಕೊಟ್ಟ ಮಾಸ್ಟರ್ ಪ್ಲಾನ್ ಇದು | Siddaramaiah | Oneindia Kannada

ಇನ್ನೂ ಆರು ತಿಂಗಳ ಕಾಲ ಲಾಕ್ ಡೌನ್ ಮುಂದುವರೆದರೆ, ವಿವಿಧ ದೇಶಗಳಲ್ಲಿ ಇರುವ ಸುಮಾರು 47 ಮಿಲಿಯನ್ ಜನರಿಗೆ ಆಧುನಿಕ ಗರ್ಭ ನಿರೋಧಕಗಳು ಲಭಿಸುವುದಿಲ್ಲ. ಪರಿಣಾಮ, ಅಂದಾಜು ಏಳು ಮಿಲಿಯನ್ ಮಹಿಳೆಯರು ಇಚ್ಛೆ ಇಲ್ಲದಿದ್ದರೂ ಗರ್ಭ ಧರಿಸುತ್ತಾರೆ ಎಂದು ಯು.ಎನ್ ಪಾಪ್ಯುಲೇಷನ್ ಫಂಡ್ (UNFPA) ನಡೆಸಿರುವ ಅಧ್ಯಯನದಿಂದ ತಿಳಿದುಬಂದಿದೆ.

ಗರ್ಭಿಣಿ ವೈದ್ಯೆಯನ್ನು ರಾತ್ರೋ ರಾತ್ರಿ ಮನೆಯಿಂದ ಹೊರಹಾಕಿದ ಟೆಕ್ಕಿ ಪತಿ ಗರ್ಭಿಣಿ ವೈದ್ಯೆಯನ್ನು ರಾತ್ರೋ ರಾತ್ರಿ ಮನೆಯಿಂದ ಹೊರಹಾಕಿದ ಟೆಕ್ಕಿ ಪತಿ

ಸಾಲದಕ್ಕೆ, ಲಾಕ್ ಡೌನ್ ಅವಧಿಯಲ್ಲಿ ಕೌಟುಂಬಿಕ ದೌರ್ಜನ್ಯ, ಲೈಂಗಿಕ ಹಿಂಸಾಚಾರ ಮತ್ತು ಇತರೆ ಗಂಭೀರ ಸಮಸ್ಯೆಗಳನ್ನು ಎದುರಿಸುವ ಮಹಿಳೆಯರ ಸಂಖ್ಯೆ ಗಗನಕೇರಬಹುದು ಎಂಬ ಆತಂಕಕಾರಿ ಅಂಶ ಕೂಡ ಇದೇ ಅಧ್ಯಯನದಲ್ಲಿ ಬಯಲಾಗಿದೆ.

ಇಷ್ಟವಿಲ್ಲದಿದ್ದರೂ ಗರ್ಭ ಧರಿಸುವ ಪರಿಸ್ಥಿತಿ

ಇಷ್ಟವಿಲ್ಲದಿದ್ದರೂ ಗರ್ಭ ಧರಿಸುವ ಪರಿಸ್ಥಿತಿ

ವಿಶ್ವದಾದ್ಯಂತ 114 ದೇಶಗಳಲ್ಲಿ ಸುಮಾರು 450 ಮಿಲಿಯನ್ ಮಹಿಳೆಯರು ಗರ್ಭ ನಿರೋಧಕಗಳನ್ನು ಬಳಸುತ್ತಾರೆ. ಆದ್ರೀಗ, ಲಾಕ್ ಡೌನ್ ನಿಂದಾಗಿ ಎಲ್ಲರಿಗೂ ಗರ್ಭ ನಿರೋಧಕಗಳು ಸಿಗುತ್ತಿಲ್ಲ. ಹೀಗಾಗಿ, ಇಷ್ಟವಿಲ್ಲದಿದ್ದರೂ ಲಕ್ಷಾಂತರ ಮಹಿಳೆಯರಿಗೆ ಗರ್ಭ ಧರಿಸುವ ಪರಿಸ್ಥಿತಿ ಎದುರಾಗಬಹುದು.

ಆತಂಕಕಾರಿ ಅಂಶ

ಆತಂಕಕಾರಿ ಅಂಶ

ಲಾಕ್ ಡೌನ್ ಮುಂದುವರೆದರೆ, ಮುಂದಿನ ಹತ್ತು ವರ್ಷಗಳಲ್ಲಿ 13 ಮಿಲಿಯನ್ ಬಾಲ್ಯ ವಿವಾಹಗಳು ಜರುಗಬಹುದು. ಹಾಗೇ, 2 ಮಿಲಿಯನ್ FGM (Female Genital Mutilation) ಪ್ರಕರಣಗಳು ಕೂಡ ದಾಖಲಾಗಬಹುದು ಎಂದು ಸಂಶೋಧಕರು ಆತಂಕ ವ್ಯಕ್ತಪಡಿಸಿದ್ದಾರೆ.

ಅಮೆರಿಕದಲ್ಲಿ ಗರ್ಭಿಣಿ ಪತ್ನಿ ಕೊಂದು ಆತ್ಮಹತ್ಯೆ ಮಾಡಿಕೊಂಡ ಭಾರತೀಯಅಮೆರಿಕದಲ್ಲಿ ಗರ್ಭಿಣಿ ಪತ್ನಿ ಕೊಂದು ಆತ್ಮಹತ್ಯೆ ಮಾಡಿಕೊಂಡ ಭಾರತೀಯ

ಮಹಿಳೆಯರ ಆರೋಗ್ಯಕ್ಕೆ ಅಪಾಯ

ಮಹಿಳೆಯರ ಆರೋಗ್ಯಕ್ಕೆ ಅಪಾಯ

''ಕೋವಿಡ್-19 ಲಾಕ್ ಡೌನ್ ನಿಂದ ಜಾಗತಿಕವಾಗಿ ಮಹಿಳೆಯರು ಮತ್ತು ಹುಡುಗಿಯರ ಮೇಲೆ ಬೀರುವ ಪರಿಣಾಮಗಳ ಕುರಿತು ಅಧ್ಯಯನ ನಡೆಸಲಾಗಿತ್ತು. ಇದರಲ್ಲಿ ಲಭ್ಯವಾಗಿರುವ ಡೇಟಾ ಪ್ರಕಾರ, ಲಕ್ಷಾಂತರ ಮಹಿಳೆಯರ ಆರೋಗ್ಯಕ್ಕೆ ಅಪಾಯವಿದೆ'' ಡಾ.ನಟಾಲಿಯಾ ಖನೆಮ್ ಹೇಳಿದ್ದಾರೆ.

ಮಹಿಳೆಯರ ಆರೋಗ್ಯ ಕಾಪಾಡಬೇಕಿದೆ

ಮಹಿಳೆಯರ ಆರೋಗ್ಯ ಕಾಪಾಡಬೇಕಿದೆ

ಕೋವಿಡ್-19 ಲಾಕ್ ಡೌನ್ ಸಮಯದಲ್ಲಿ ಸಂತಾನೋತ್ಪತ್ತಿ ವಯಸ್ಸಿನ ಯುವತಿಯರು ಮತ್ತು ಮಹಿಳೆಯರ ಅಗತ್ಯಗಳಿಗೆ ಆದ್ಯತೆ ನೀಡಲು UNFPA ವಿವಿಧ ಸರ್ಕಾರಗಳ ಜೊತೆಗೆ ಕೈ ಜೋಡಿಸಿದೆ. ''ಲಾಕ್ ಡೌನ್ ಸಂದರ್ಭದಲ್ಲಿ ದುರ್ಬಲರನ್ನು ರಕ್ಷಿಸಬೇಕು. ಮಹಿಳೆಯರು ಆರೋಗ್ಯ ಹಕ್ಕುಗಳನ್ನು ಕಾಪಾಡಬೇಕಿದೆ'' ಎಂದಿದ್ದಾರೆ ಡಾ.ಖನೆಮ್.

ಗರ್ಭಿಣಿಯಿಂದಲೇ ರಕ್ತ ಕ್ಲೀನ್ ಮಾಡಿಸಿದ ಆಸ್ಪತ್ರೆ ಸಿಬ್ಬಂದಿ: ಮಗು ಸಾವುಗರ್ಭಿಣಿಯಿಂದಲೇ ರಕ್ತ ಕ್ಲೀನ್ ಮಾಡಿಸಿದ ಆಸ್ಪತ್ರೆ ಸಿಬ್ಬಂದಿ: ಮಗು ಸಾವು

English summary
Covid 19 Lockdown to lead 7 Million unintended Pregnancies, According to data released by UNFPA.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X