ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊವಿಡ್ 19: ಒಂದು ನಾಯಿ ಗಂಟೆಗೆ ಎಷ್ಟು ಮಂದಿಯನ್ನು ಪರೀಕ್ಷಿಸಬಲ್ಲದು?

|
Google Oneindia Kannada News

ನವದೆಹಲಿ, ಮೇ 21: ನಾಯಿ ಪ್ರತಿ ಗಂಟೆಗೆ 250 ಮಂದಿಯನ್ನು ಪರೀಕ್ಷೆ ಮಾಡಬಹುದು ಎಂದು ಸಂಶೋಧನೆಯೊಂದು ತಿಳಿಸಿದೆ.

Recommended Video

ಜನ್ಮ ಕೊಟ್ಟವಳಿಗೆ ಕೊರೊನಾ ಸೋಂಕು ಆದ್ರೆ ಹುಟ್ಟಿದ ಮಗುವಿಗೆ ಸೋಂಕಿಲ್ಲ! | Vijaypura | karnataka

ನಾಯಿಗಳ ತರಬೇತಿಗಾಗಿ ತಂಡವನ್ನು ರಚಿಸಿ ಯುಕೆ ಸರ್ಕಾರವು 5 ಲಕ್ಷ ಪೌಂಡ್ ಹಣವನ್ನು ಮೀಸಲಿಟ್ಟಿದೆ. ನಾಯಿ ಮನುಷ್ಯನಲ್ಲಿ ಕೊರೊನಾ ಲಕ್ಷಣಗಳು ಕಾಣಿಸಿಕೊಳ್ಳುವ ಮುನ್ನವೇ ಪತ್ತೆಹಚ್ಚಲಿದೆ.

ಈಗಾಗಲೇ ಬಯೋ ಡಿಟೆನ್ಷನ್ ನಾಯಿಗಳು ಕ್ಯಾನ್ಸರ್‌ನ್ನು ಕೂಡ ಪತ್ತೆ ಹಚ್ಚುತ್ತಿವೆ.ಮುಂದೊಂದು ದಿನದಲ್ಲಿ ಕೊರೊನಾವೈರಸ್ ಪತ್ತೆಗೂ ಇದು ಸಹಕಾರಿಯಾಗಲಿದೆ ಎಂದು ಯುಕೆ ಸರ್ಕಾರ ಅಭಿಪ್ರಾಯಪಟ್ಟಿದೆ.

ಕೊನೆಗೂ ಕಾಡುಪ್ರಾಣಿಗಳ ಮಾಂಸ ಸೇವನೆ ನಿಷೇಧಿಸಿದ ವುಹಾನ್ ಕೊನೆಗೂ ಕಾಡುಪ್ರಾಣಿಗಳ ಮಾಂಸ ಸೇವನೆ ನಿಷೇಧಿಸಿದ ವುಹಾನ್

ನಾಯಿ ಕ್ಯಾನ್ಸರ್, ಮಧುಮೇಹ, ಎದೆ ಕ್ಯಾನ್ಸರ್, ಪಾರ್ಕಿನ್‌ಸನ್ ಸೇರಿದಂತೆ ಇತರೆ ರೋಗಗಳನ್ನು ಪತ್ತೆಹಚ್ಚಬಲ್ಲದು.

ಲಕ್ಷಣಗಳಿಲ್ಲದಿದ್ದರೂ ರೋಗವನ್ನು ನಾಯಿ ಪತ್ತೆ ಹಚ್ಚಬಲ್ಲದು

ಲಕ್ಷಣಗಳಿಲ್ಲದಿದ್ದರೂ ರೋಗವನ್ನು ನಾಯಿ ಪತ್ತೆ ಹಚ್ಚಬಲ್ಲದು

ಮೊದಲ ಹಂತದಲ್ಲಿ ಲಂಡನ್ ಸ್ಕೂಲ್ ಆಫ್ ಹೈಜಿನ್ ಆಂಡ್ ಟ್ರಾಪಿಕಲ್ ಮೆಡಿಸಿನ್ ಸಂಶೋಧನೆಯಲ್ಲಿ ನಾಯಿ ವಾಸನೆ ಮೂಲಕ ಲಕ್ಷಣಗಳಿಲ್ಲದಿದ್ದರೂ ರೋಗವನ್ನು ಮತ್ತೆಮಾಡಬಹುದು ಎಂಬುದನ್ನು ಕಂಡುಕೊಂಡಿದೆ.

ಯಾವ ಜಾತಿಯ ನಾಯಿಗಳ ಬಳಕೆ

ಯಾವ ಜಾತಿಯ ನಾಯಿಗಳ ಬಳಕೆ

ಲ್ಯಾಬ್ರಡೊರ್ಸ್ ಹಾಗೂ ಕಾಕರ್ ಸ್ಪ್ಯಾನಿಯಲ್ ಸೇರಿ ಒಟ್ಟು ಆರು ನಾಯಿಗಳನ್ನು ಬಳಕೆ ಮಾಡಿಕೊಳ್ಳಲಾಗಿದೆ. ಈ ತರಬೇತಿ ಪಡೆದ ನಾಯಿಗಳು ವಿದೇಶದಿಂದ ಬರುವ ಜನರಿಗೆ ಸ್ಕ್ರೀನಿಂಗ್ ಟೆಸ್ಟ್‌ಗಳನ್ನು ಮಾಡಿವೆ.

ನಾಯಿ ಬಳಕೆ ಏಕೆ?

ನಾಯಿ ಬಳಕೆ ಏಕೆ?

ನಾಯಿ ಈಗಾಗಲೇ ಬಾಂಬ್, ಡ್ರಗ್‌, ಸ್ಫೋಟಕ ವಸ್ತುಗಳು, ಕಳ್ಳರ ಪತ್ತೆಗೆ ಬಳಸಿಕೊಳ್ಳಲಾಗುತ್ತಿದೆ. ಹಾಗೆಯೇ ವಾಸನೆ ಮೂಲಕ ರೋಗವನ್ನು ಗುರುತು ಹಿಡಿಯುತ್ತವೆ ಮತ್ತು ನಂಬಿಕಸ್ಥ ಪ್ರಾಣಿಯಾಗಿದೆ. ನಾಯಿ ತನ್ನ ಮೆದುಳಿನ ಶೇ.30ರಷ್ಟು ಶಕ್ತಿಯನ್ನು ವಾಸನೆ ಗ್ರಹಿಸಲು ಬಳಸಿಕೊಳ್ಳುತ್ತವೆ.

ಪ್ರತಿ ರೋಗಕ್ಕೂ ಬೇರೆ ರೀತಿಯ ವಾಸನೆ ಇರಲಿದೆ

ಪ್ರತಿ ರೋಗಕ್ಕೂ ಬೇರೆ ರೀತಿಯ ವಾಸನೆ ಇರಲಿದೆ

ಪ್ರತಿ ರೋಗಕ್ಕೂ ಬೇರೆಯ ರೀತಿಯ ವಾಸನೆ ಇರಲಿದೆ. ಅದನ್ನು ಗುರುತು ಹಿಡಿಯುವಂತೆ ನಾಯಿಗೆ ತರಬೇತಿ ನೀಡಲಾಗುತ್ತದೆ. ಹತ್ತು ವರ್ಷಗಳ ಸಂಶೋಧನೆ ಬಳಿಕ ಒಂದು ನಾಯಿ ಪ್ರತಿ ಗಂಟೆಗೆ 250 ಮಂದಿಯ ಪರೀಕ್ಷೆ ಮಾಡಬಹುದು ಎನ್ನುವ ವಿಷಯ ತಿಳಿದುಬಂದಿದೆ. ರೋಗಕಾರಕಗಳಿಂದ ಸೋಂಕಿತವಾದ ಅಂಗಾಂಶಗಳು ವಿಶಿಷ್ಟ ಬಾಷ್ಪಶೀಲ ಬಯೋಮಾರ್ಕರ್‌ಗಳನ್ನು ಬಿಡುಗಡೆ ಮಾಡುತ್ತವೆ ಅದರ ಮೂಲಕ ತಿಳಿದುಬರಲಿದೆ.

English summary
Can dogs be trained to sniff out Covid-19?, Dogs can screen up to 250 people per hour and can be trained to detect disease odours, which is equivalent to the dilution of one teaspoon of sugar in two Olympic-sized swimming pools.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X