ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅತಿ ವೇಗವಾಗಿ ವಿಶ್ವವನ್ನು ಆಕ್ರಮಿಸುತ್ತಿರುವ ಡೆಲ್ಟಾ ರೂಪಾಂತರಿಯ ಸುತ್ತ...

|
Google Oneindia Kannada News

ಜಿನಿವಾ, ಜುಲೈ 1: ಕೋವಿಡ್ 19 ಡೆಲ್ಟಾ ರೂಪಾಂತರಿ ಒಟ್ಟು 96 ದೇಶಗಳಿಗೆ ವ್ಯಾಪಿಸಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ನೀಡಿದೆ. ಈ ಡೆಲ್ಟಾ ರೂಪಾಂತರಿಯಲ್ಲಿ ಎರಡು ರೂಪಾಂತರಿಗಳಿವೆ, ಅಲ್ಫಾಗಿಂತ ಸೋಂಕು ತಗುಲುವ ಪ್ರಮಾಣ ಶೇ.55ರಷ್ಟು ಹೆಚ್ಚಿರುತ್ತದೆ.

ಜುಲೈ 1 ರಂದು ಬಿಡುಗಡೆಯಾದ ಕೋವಿಡ್-19 ವೀಕ್ಲಿ ಎಪಿಡೆಮಿಯೋಲಾಜಿಕಲ್ ಅಪ್‌ಡೇಟ್‌ನಲ್ಲಿ ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ನೀಡಿದ್ದು, ಡೆಲ್ಟಾ ರೂಪಾಂತರಿ ಇದೀಗ ಜಗತ್ತಿನ 93 ದೇಶಗಳಿಗೆ ವ್ಯಾಪಿಸಿದ್ದು, ಕಳೆದೊಂದು ವಾರದ ಅವಧಿಯಲ್ಲಿ ಮತ್ತೆ 11 ದೇಶಗಳಿಗೆ ರೂಪಾಂತರಿ ಸೋಂಕು ವ್ಯಾಪಿಸಿದೆ.

ಕೊರೊನಾ ನಂತರ ರಕ್ತದಲ್ಲಿನ ಸಕ್ಕರೆ ಅಂಶದಲ್ಲಿ ಅಸಹಜ ಏರಿಕೆ; ಏಮ್ಸ್ಕೊರೊನಾ ನಂತರ ರಕ್ತದಲ್ಲಿನ ಸಕ್ಕರೆ ಅಂಶದಲ್ಲಿ ಅಸಹಜ ಏರಿಕೆ; ಏಮ್ಸ್

ಡಿಸೆಂಬರ್ 2020ರ ಮೊದಲು ಜಪಾನ್‌ನಲ್ಲಿ ಚಲಾವಣೆಯಲ್ಲಿರುವ ರೂಪಾಂತರಗಳೊಂದಿಗೆ ಹೋಲಿಸಿದಾಗ, ಅಲ್ಫಾ ರೂಪಾಂತರಿ ಸಂತಾನೋತ್ಪತ್ತಿ ಪ್ರಮಾಣ 1.56ರಷ್ಟಿದ್ದರೆ. ಇದೇ ಪ್ರಮಾಣ ಡೆಲ್ಟಾದಲ್ಲಿ 1.78ರಷ್ಟಿದೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ಈ ಡೆಲ್ಟಾ ರೂಪಾಂತರಿ ಕುರಿತ ಕೆಲವು ಮಾಹಿತಿ ಇಲ್ಲಿದೆ...

 ಆಫ್ರಿಕನ್ ದೇಶಗಳಲ್ಲಿ ವರದಿ

ಆಫ್ರಿಕನ್ ದೇಶಗಳಲ್ಲಿ ವರದಿ

ವಿಶ್ವ ಆರೋಗ್ಯ ಸಂಸ್ಥೆಯ ದತ್ತಾಂಶಗಳ ಪ್ರಕಾರ ಪ್ರಸ್ತುತ ಈ ರೂಪಾಂತರಿ ಸೋಂಕು ಟ್ಯುನೀಶಿಯಾ, ಮೊಜಾಂಬಿಕ್, ಉಗಾಂಡಾ, ನೈಜೀರಿಯಾ ಮತ್ತು ಮಲಾವಿ ಸೇರಿದಂತೆ 11 ಆಫ್ರಿಕಾ ದೇಶಗಳಲ್ಲಿ ವರದಿಯಾಗಿದೆ. ಅಲ್ಲದೇ ಇದೇ ವೈರಸ್ ಕಾರಣದಿಂದಾಗಿ ಆಫ್ರಿಕಾದಲ್ಲಿ ದಿನಕಳೆದಂತೆ ಸೋಂಕು ಪೀಡಿತರ ಸಾವುನೋವಿನ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತಿದೆ.

 ಡಬಲ್ ರೂಪಾಂತರಿ

ಡಬಲ್ ರೂಪಾಂತರಿ

ಡೆಲ್ಟಾ ರೂಪಾಂತರವನ್ನು 'ಡಬಲ್ ರೂಪಾಂತರಿ' ಎಂದೂ ಕರೆಯಲಾಗುತ್ತದೆ, ಏಕೆಂದರೆ ಇದು ಎರಡು ರೂಪಾಂತರಗಳನ್ನು ಹೊಂದಿದ್ದು, ಇದು ಆಲ್ಫಾ ರೂಪಾಂತರಕ್ಕಿಂತ ಶೇಕಡಾ 55 ರಷ್ಟು ಹೆಚ್ಚು ವೇಗವಾಗಿ ಹರಡಬಲ್ಲದು ಮತ್ತು ಇದು ಜಾಗತಿಕವಾಗಿ ಕೊರೊನಾವೈರಸ್‌ನ ಪ್ರಬಲ ಮತ್ತು ಕಳವಳಕಾರಿ ರೂಪಾಂತರವಾಗಿದೆ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

 ಈ ಸೋಂಕಿಗೆ ತುತ್ತಾದ ಹೆಚ್ಚಿನ ಮಂದಿ ಸಾವು

ಈ ಸೋಂಕಿಗೆ ತುತ್ತಾದ ಹೆಚ್ಚಿನ ಮಂದಿ ಸಾವು

ರೂಪಾಂತರಿ ಸೋಂಕು ಕಾಣಿಸಿಕೊಂಡ ಜನರು ಹೆಚ್ಚಿನ ಸಂಖ್ಯೆಯಲ್ಲಿ ಮೃತಪಡುತ್ತಿದ್ದಾರೆ. ಹೀಗಾಗಿ ರಾಜ್ಯಗಳು ಮತ್ತು ಕೇಂದ್ರ ಸರ್ಕಾರಗಳು ಎಚ್ಚರಿಕೆ ವಹಿಸುವ ತುರ್ತು ಅಗತ್ಯವಿದೆ. ಸ್ಕಾಟ್ಲೆಂಡ್ನಲ್ಲಿ ಇತ್ತೀಚೆಗೆ ನಡೆಸಿದ ಅಧ್ಯಯನ ಮತ್ತು ಅಂತಾರಾಷ್ಟ್ರೀಯ ವೈದ್ಯಕೀಯ ಜರ್ನಲ್ ಲ್ಯಾನ್ಸೆಟ್‌ನಲ್ಲಿ ಪ್ರಕಟವಾದ ವರದಿಯಲ್ಲಿ ಕೋವಿಡ್-19 ರ ಡೆಲ್ಟಾ ರೂಪಾಂತರದಿಂದ ಸೋಂಕಿತ ರೋಗಿಗಳಿಗೆ ಆಸ್ಪತ್ರೆಗೆ ದಾಖಲಾಗುವ ಪ್ರಮಾಣವು ಹೆಚ್ಚಾಗಿದ್ದು, ಆಲ್ಫಾ ರೂಪಾಂತರಕ್ಕೆ ಹೋಲಿಕೆ ಮಾಡಿದರೆ ಡೆಲ್ಟಾ ರೂಪಾಂತರದಿಂದ ಆಸ್ಪತ್ರೆಗೆ ದಾಖಲಾಗುತ್ತಿರುವ ಸೋಂಕಿತರ ಪ್ರಮಾಣ ಶೇ.85ರಷ್ಟು ಹೆಚ್ಚಾಗಿದೆ ಎಂದು ಹೇಳಿದೆ.

 ವೇಗವಾಗಿ ಹರಡುವ ರೂಪಾಂತರಿ

ವೇಗವಾಗಿ ಹರಡುವ ರೂಪಾಂತರಿ

ಈ ಹಿಂದೆ ಇದೇ ವಿಚಾರವಾಗಿ ಮಾತನಾಡಿದ್ದ ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಮೈಕ್ ರಿಹಾನ್ ಅವರು, 'ವಿಶ್ವದಲ್ಲಿ ಇದುವರೆಗೂ ಕಾಣಿಸಿಕೊಂಡಿರುವ ಕೊರೊನಾ ಸೋಂಕಿನ ವಿವಿಧ ಮಾದರಿಗಳಲ್ಲಿ ಡೆಲ್ಟಾ ಮಾದರಿ ಅತ್ಯಂತ ವೇಗವಾಗಿ ಹರಡುವ ಗುಣವನ್ನು ಹೊಂದಿದೆ. ಹೀಗಾಗಿ ಜನರು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮತ್ತು ಉದಾಸೀನ ಮನೋಭಾವ ತೋರಬಾರದು ಮತ್ತು ತೀವ್ರ ಎಚ್ಚರಿಕೆ ವಹಿಸಬೇಕು. ವಿವಿಧ ದೇಶಗಳು ಅದರಲ್ಲೂ ಡೆಲ್ಟಾ ಮಾದರಿಯ ರೂಪಾಂತರ ಕಾಣಿಸಿಕೊಂಡಿರುವ ದೇಶಗಳು ತಮ್ಮ ದೇಶಗಳಲ್ಲಿ ಸೋಂಕು ಹೆಚ್ಚು ಹರಡದಂತೆ ಜಾಗ್ರತೆ ವಹಿಸಬೇಕು ಎಂದು ಕೂಡ ಸಲಹೆ ನೀಡಿದ್ದರು.

 ಡೆಲ್ಟಾ ಪ್ರಬಲ ವಂಶಾವಳಿಯಾಗುವ ಆತಂಕ

ಡೆಲ್ಟಾ ಪ್ರಬಲ ವಂಶಾವಳಿಯಾಗುವ ಆತಂಕ

ಜೂನ್ 8 ರಂದು ಕೊನೆಯ ವರದಿಯಲ್ಲಿ, ಡೆಲ್ಟಾ ರೂಪಾಂತರದ ಫಿನೋಟೈಪಿಕ್ ಗುಣಲಕ್ಷಣಗಳ ಬಗ್ಗೆ ಹೊಸ ಪುರಾವೆಗಳನ್ನು ಪ್ರಕಟಿಸಲಾಗಿದೆ. ಸಿಂಗಾಪುರದ ಅಧ್ಯಯನವು ಡೆಲ್ಟಾ ರೂಪಾಂತರದ ಸೋಂಕು ಹೆಚ್ಚಿನ ಪ್ರಮಾಣದ ಆಕ್ಸಿಜನ್ ಅವಶ್ಯಕತೆ, ತೀವ್ರ ನಿಗಾ ಘಟಕ ಪ್ರವೇಶ ಅಥವಾ ಸಾವುಗಳ ಕುರಿತು ವರದಿ ಮಾಡಿತ್ತು.ಡೆಲ್ಟಾ ರೂಪಾಂತರವು ಆಲ್ಫಾ ರೂಪಾಂತರಕ್ಕಿಂತ ಗಮನಾರ್ಹವಾಗಿ ಹೆಚ್ಚು ಹರಡಬಲ್ಲದು ಮತ್ತು ಪ್ರಸ್ತುತ ಪ್ರವೃತ್ತಿಗಳು ಮುಂದುವರಿದರೆ ಪ್ರಬಲ ವಂಶಾವಳಿಯಾಗುವ ನಿರೀಕ್ಷೆಯಿದೆ.

Recommended Video

ಪಂತ್ ಕ್ಯಾಚ್ ಬಿಟ್ಟು ತಲೆಕೆಡಿಸಿಕೊಂಡಿದ್ದ ಟಿಮ್ ಸೌಥಿ | Oneindia Kannada
 ಕೊರೊನಾ ಎರಡನೇ ಅಲೆ

ಕೊರೊನಾ ಎರಡನೇ ಅಲೆ

ಜಗತ್ತಿನ ವಿವಿಧ ದೇಶಗಳಲ್ಲಿ ಈಗಾಗಲೇ ಡೆಲ್ಟಾ ರೂಪಾಂತರಿ ಸೋಂಕಿನ ಎರಡು-ಮೂರನೇ ಅಲೆಗಳು ಕಾಣಿಸಿಕೊಂಡು ಆಯಾ ದೇಶಗಳಲ್ಲಿ ಅನೇಕ ಸಾವು-ನೋವು ಆರ್ಥಿಕ ಹಾನಿ ಸಂಭವಿಸಿರುವ ನಡುವೆ ಡೆಲ್ಟಾ ರೂಪಾಂತರ ಸೋಂಕು ಮತ್ತಷ್ಟು ಹಾನಿ ಉಂಟು ಮಾಡಲಿದೆ ಎಂದು ಅವರು ಹೇಳಿದ್ದಾರೆ.

English summary
The Delta COVID-19 variant, first identified in India, has already been detected in 96 countries, 11 more than last week, the World Health Organisation (WHO) said in its weekly epidemiological update on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X