ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆ 5: ಕೊವಿಡ್19ನಿಂದ ಜಾಗತಿಕವಾಗಿ ಎಷ್ಟು ಮಂದಿ ಗುಣಮುಖ?

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 5: ಕೊವಿಡ್19 ಸಕ್ರಿಯ ಸೋಂಕಿತರು, ಮರಣ ಹೊಂದಿದವರು, ಗುಣಮುಖ ಹೊಂದಿದವರ ಅಂಕಿ ಅಂಶ ವಿವರ ಇಲ್ಲಿದೆ. ವಿಶ್ವದೆಲ್ಲೆಡೆ ಒಟ್ಟು 220,280,964ಗೂ ಅಧಿಕ ಸೋಂಕಿತ ಪ್ರಕರಣಗಳಿದ್ದು 196,910,700ಮಂದಿ ಚೇತರಿಕೆ ಹೊಂದಿದ್ದಾರೆ. ಜಾಗತಿಕವಾಗಿ 201,472,249 ಪ್ರಕರಣಗಳು ಮುಕ್ತಾಯಗೊಂಡಿವೆ.

2021ರ ಜೂನ್ 21ರಿಂದ ಸಾರ್ವತ್ರಿಕ ಕೋವಿಡ್-19 ಲಸಿಕೀಕರಣದ ಹೊಸ ಹಂತ ಆರಂಭವಾಗಿದೆ. ಭಾರತದಲ್ಲಿ ಕೊರೊನಾವೈರಸ್ ಸೋಂಕು ನಿಯಂತ್ರಿಸುವ ಉದ್ದೇಶದಿಂದ ಲಸಿಕೆ ವಿತರಣೆಯನ್ನು ಸಮರೋಪಾದಿಯಲ್ಲಿ ನಡೆಸಲಾಗುತ್ತಿದೆ. ಕಳೆದ ಜನವರಿ 16ರಂದು ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರು, ಮೊದಲ ಶ್ರೇಣಿ ಕಾರ್ಮಿಕರಿಗೆ ಲಸಿಕೆ ವಿತರಣೆ ಆರಂಭಿಸಲಾಯಿತು. ಮಾರ್ಚ್ 1ರಂದು ಎರಡನೇ ಹಂತದಲ್ಲಿ ಆರೋಗ್ಯ ಸಮಸ್ಯೆ ಹೊಂದಿರುವ 45 ವರ್ಷ ಮೇಲ್ಪಟ್ಟ ಹಾಗೂ 60 ವರ್ಷದ ಮೇಲ್ಪಟ್ಟ ಪ್ರತಿಯೊಬ್ಬರಿಗೆ ಲಸಿಕೆ ವಿತರಣೆ ಆರಂಭಿಸಲಾಯಿತು. ಏಪ್ರಿಲ್ 1ರಂದು ಮೂರನೇ ಹಂತದಲ್ಲಿ 45 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಕೊವಿಡ್-19 ಲಸಿಕೆ ವಿತರಣೆ ಶುರು ಮಾಡಲಾಗಿತ್ತು. ಜೂನ್ 21ರಿಂದ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಲಸಿಕೆ ವಿತರಣೆಯನ್ನು ಆರಂಭಿಸಲಾಗಿದೆ.

"ಕರ್ನಾಟಕವು ಒಂದು ದಿನದ ಲಸಿಕಾ ಅಭಿಯಾನದಲ್ಲಿ 12 ಲಕ್ಷಕ್ಕೂ ಹೆಚ್ಚು ಮಂದಿಗೆ ಕೊರೊನಾವೈರಸ್ ಲಸಿಕೆಯನ್ನು ವಿತರಿಸಿದೆ. ಕಳೆದ ಐದು ದಿನಗಳಲ್ಲಿ 35 ಲಕ್ಷಕ್ಕೂ ಅಧಿಕ ಮಂದಿಗೆ ಕೊವಿಡ್-19 ಲಸಿಕೆ ನೀಡಲಾಗಿದೆ," ಎಂದು ಸಚಿವ ಡಾ ಕೆ ಸುಧಾಕರ್ ಟ್ವೀಟ್ ಮಾಡಿದ್ದಾರೆ.

ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು, ಕೊರೊನಾವೈರಸ್‌ನಿಂದ ಅತಿ ಹೆಚ್ಚು ಮೃತಪಟ್ಟವರು, ಅತಿ ಹೆಚ್ಚು ಚೇತರಿಕೆಗೊಂಡವರನ್ನು ಹೊಂದಿರುವ ಟಾಪ್10 ದೇಶಗಳ ವಿವರ (ಸೆಪ್ಟೆಂಬರ್ 5) ಇಲ್ಲಿದೆ.

ಭಾರತದಲ್ಲಿ 24 ಗಂಟೆಗಳಲ್ಲಿ 38,459 ರೋಗಿಗಳು ಚೇತರಿಕೆ

ಭಾರತದಲ್ಲಿ 24 ಗಂಟೆಗಳಲ್ಲಿ 38,459 ರೋಗಿಗಳು ಚೇತರಿಕೆ

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 42,924 ಜನರಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ಪತ್ತೆಯಾಗಿದೆ. ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಒಟ್ಟಾರೆ ಸಂಖ್ಯೆಯು 32,998,017ಕ್ಕೇರಿದೆ. ದೇಶದಲ್ಲಿ ಮಹಾಮಾರಿಯಿಂದ ಪ್ರಾಣ ಬಿಟ್ಟವರ ಸಂಖ್ಯೆಯು 440,682ಕ್ಕೆ ಏರಿಕೆಯಾಗಿದೆ, 32,141,758ಮಂದಿ ಚೇತರಿಕೆ ಹೊಂದಿದ್ದಾರೆ, ಕಳೆದ 24 ತಾಸುಗಳಲ್ಲೇ 38,459 ರೋಗಿಗಳು ಚೇತರಿಸಿಕೊಂಡಿದ್ದಾರೆ. ಇದರ ಪರಿಣಾಮವಾಗಿ ಚೇತರಿಕೆ ದರ ಒಟ್ಟಾರೆ 97.68%ಗೆ ಸುಧಾರಣೆ ಕಂಡಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿ ತಿಳಿಸಿದೆ.

ವಿಶ್ವದೆಲ್ಲೆಡೆ ಕೊವಿಡ್19 ಪ್ರಕರಣಗಳು

ವಿಶ್ವದೆಲ್ಲೆಡೆ ಕೊವಿಡ್19 ಪ್ರಕರಣಗಳು

ಸೆಪ್ಟೆಂಬರ್ 5ರಂದು ಈ ಸಮಯಕ್ಕೆ ವಿಶ್ವದೆಲ್ಲೆಡೆ 221,313,746ಕೊವಿಡ್ 19 ಪ್ರಕರಣಗಳಿವೆ ಹಾಗೂ ಸಾವಿನ ಸಂಖ್ಯೆ 4,578,959ಕ್ಕೇರಿದೆ. ಒಟ್ಟಾರೆ, 197,809,745 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 18,925,042 ಸಕ್ರಿಯ ಪಾಸಿಟಿವ್ 105,540 ವಿಷಮ ಪರಿಸ್ಥಿತಿಯಲ್ಲಿರುವ ಸೋಂಕಿತರಿದ್ದಾರೆ. 202,388,704 ಪ್ರಕರಣಗಳು ಮುಕ್ತಾಯಗೊಂಡಿವೆ. ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ರಾಷ್ಟ್ರಗಳಲ್ಲಿ ಅತಿ ಹೆಚ್ಚು ಚೇತರಿಕೆಗೊಂಡವರು ಕೂಡಾ ಇದ್ದಾರೆ.

ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು

ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು

ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು
ಯುಎಸ್ಎ: 40,765,356ಪ್ರಕರಣಗಳು
ಭಾರತ: 32,998,017
ಬ್ರೆಜಿಲ್: 20,877,864
ರಷ್ಯಾ: 7,012,599
ಯುಕೆ: 6,941,611
ಫ್ರಾನ್ಸ್: 6,826,042
ಟರ್ಕಿ: 6,478,663
ಅರ್ಜೆಂಟೀನಾ: 5,202,405
ಇರಾನ್: 5,129,407
ಕೊಲಂಬಿಯಾ: 4,916,980

ಕೊವಿಡ್ 19ರಿಂದ ಮೃತಪಟ್ಟವರು

ಕೊವಿಡ್ 19ರಿಂದ ಮೃತಪಟ್ಟವರು

ಮೃತಪಟ್ಟವರನ್ನು ಹೊಂದಿರುವ ಟಾಪ್ 10 ದೇಶಗಳು
ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರನ್ನು ಹೊಂದಿರುವ ಟಾಪ್ 10 ದೇಶಗಳು:
ಯುಎಸ್ಎ: ಮೃತರ ಸಂಖ್ಯೆ 665,858
ಬ್ರೆಜಿಲ್: 583,362
ಭಾರತ: 440,682
ಮೆಕ್ಸಿಕೋ: 262,868
ರಷ್ಯಾ: 187,200
ಯುಕೆ: 133,161
ಇಟಲಿ: 129,466
ಕೊಲಂಬಿಯಾ: 125,230
ಫ್ರಾನ್ಸ್: 114,856
ಅರ್ಜೆಂಟೀನಾ: 112,444

ಅತಿ ಹೆಚ್ಚು ಗುಣಮುಖರಾದವರು ಟಾಪ್ 10 ದೇಶ

ಅತಿ ಹೆಚ್ಚು ಗುಣಮುಖರಾದವರು ಟಾಪ್ 10 ದೇಶ

ಕೊರೊನಾವೈರಸ್ ನಿಂದ ಅತಿ ಹೆಚ್ಚು ಗುಣಮುಖರಾದವರು ಟಾಪ್ 10 ದೇಶ:
ಭಾರತ: ಗುಣಮುಖರಾದವರ ಸಂಖ್ಯೆ: 32,141,758
ಯುಎಸ್ಎ: 31,299,924
ಬ್ರೆಜಿಲ್: 19,838,912
ಫ್ರಾನ್ಸ್: 6,356,179
ರಷ್ಯಾ: 6,270,731
ಟರ್ಕಿ: 5,906,376
ಯುಕೆ: 5,586,491
ಅರ್ಜೆಂಟೀನಾ: 4,895,988
ಕೊಲಂಬಿಯಾ: 4,746,546
ಸ್ಪೇನ್: 4,418,343
(ಮಾಹಿತಿ ಕೃಪೆ: ವರ್ಲ್ಡ್‌ಮೀಟರ್)

English summary
Covid 19: The world is seeing a surge in the number of coronavirus cases. As on September 3 the total cases are at 221,313,746 with death is 4,578,959.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X